MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ಸಿಎಂ ತವರು ಜಿಲ್ಲೆಯಲ್ಲಿಯೇ ಏಕಚಕ್ರಾಧಿಪತ್ಯ ಮುಂದುವರಿಸಿದ ಜೆಡಿಎಸ್; ಕಾಂಗ್ರೆಸ್‌ ತಂತ್ರಗಳೆಲ್ಲಾ ಫೇಲ್, ಸೋಲು

ಸಿಎಂ ತವರು ಜಿಲ್ಲೆಯಲ್ಲಿಯೇ ಏಕಚಕ್ರಾಧಿಪತ್ಯ ಮುಂದುವರಿಸಿದ ಜೆಡಿಎಸ್; ಕಾಂಗ್ರೆಸ್‌ ತಂತ್ರಗಳೆಲ್ಲಾ ಫೇಲ್, ಸೋಲು

ಹುಣಸೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಯಲ್ಲಿ, ಶಾಸಕ ಜಿ.ಡಿ. ಹರೀಶ್‌ ಗೌಡರ ನೇತೃತ್ವದಲ್ಲಿ ಜೆಡಿಎಸ್ ಎಲ್ಲಾ 12 ಸ್ಥಾನಗಳನ್ನು ಗೆದ್ದು ತನ್ನ ದಶಕಗಳ ಏಕಚಕ್ರಾಧಿಪತ್ಯವನ್ನು ಮುಂದುವರಿಸಿದೆ. 

2 Min read
Kannadaprabha News
Published : Oct 27 2025, 10:10 AM IST
Share this Photo Gallery
  • FB
  • TW
  • Linkdin
  • Whatsapp
18
ಏಕಚಕ್ರಾಧಿಪತ್ಯ ಮುಂದುವರಿಸಿದ ಜೆಡಿಎಸ್
Image Credit : GD Harish Gowda Facebok

ಏಕಚಕ್ರಾಧಿಪತ್ಯ ಮುಂದುವರಿಸಿದ ಜೆಡಿಎಸ್

ಮೈಸೂರು ಜಿಲ್ಲೆ ಹುಣಸೂರು ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಆಡಳಿತ ಮಂಡಳಿಯ 8 ಕ್ಷೇತ್ರಗಳಿಗೆ (ಬಿ.ತರಗತಿ) ನಡೆದ ಚುನಾವಣೆಯಲ್ಲಿ ಶಾಸಕ ಜಿ.ಡಿ. ಹರೀಶ್‌ ಗೌಡ ನೇತೃತ್ವದ ಜೆಡಿಎಸ್ ಬೆಂಬಲಿತ ಎಂಟೂ ಅಭ್ಯರ್ಥಿಗಳು ಗೆಲುವಿನ ನಗೆ ಬೀರುವ ಮೂಲಕ ಜೆಡಿಎಸ್ ತನ್ನ ದಶಕಗಳ ಏಕಚಕ್ರಾಧಿಪತ್ಯವನ್ನು ಮುಂದುವರೆಸಿತು.

28
ನಾಲ್ವರು ಅವಿರೋಧ ಆಯ್ಕೆ
Image Credit : GD Harish Gowda Facebok

ನಾಲ್ವರು ಅವಿರೋಧ ಆಯ್ಕೆ

ವಾರದ ಹಿಂದೆ ನಡೆದ ಸಂಘದ ಎ ತರಗತಿ (ಸೊಸೈಟಿಗಳನ್ನು ಪ್ರತಿನಿಧಿಸುವ ವಿಭಾಗ) ದಲ್ಲಿ ನಾಲ್ಕು ಕ್ಷೇತ್ರಗಳ ಪೈಕಿ ನಾಲ್ಕನ್ನೂ ಜೆಡಿಎಸ್ ಬೆಂಬಲಿತರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪ್ರಾಬಲ್ಯ ಮೆರೆದರು. ತೀವ್ರ ಪೈಪೋಟಿ ನೀಡಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೀನಾಯ ಸೋಲು ಅನುಭವಿಸಿದರು. ಒಟ್ಟು 12 ಸ್ಥಾನಗಳ ಪೈಕಿ 12 ಸ್ಥಾನಗಳನ್ನೂ ಜೆಡಿಎಸ್ ತನ್ನ ಮಡಿಲಿಗೆ ಹಾಕಿಕೊಳ್ಳುವ ಮೂಲಕ ಪಾರಮ್ಯ ಮೆರೆಯಿತು.

Related Articles

Related image1
5 ವರ್ಷ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ : ಯತೀಂದ್ರ
Related image2
ಸಿಎಂ ಬದಲಾವಣೆ ವಿಚಾರ ಹರಿಬಿಟ್ಟಿರೋದು ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳೊಕೆ: ಪಿ ರಾಜೀವ್ ಆಕ್ರೋಶ
38
ಗೆಲುವು-ಸೋಲು ಯಾರು ಯಾರಿಗೆ?
Image Credit : GD Harish Gowda Facebok

ಗೆಲುವು-ಸೋಲು ಯಾರು ಯಾರಿಗೆ?

ಮಹಿಳಾ ಕ್ಷೇತ್ರದ ವಿಜಯಶಾಲಿಗಳು: ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿನ ಅಭ್ಯರ್ಥಿಗಳಾದ ಇಂದುಕಲಾ ಶ್ರೀಗೌಡ 1213 ಮತಗಳು ಮತ್ತು ಮಂಗಳಗೌರಿ 1103 ಮತಗಳನ್ನು ಗಳಿಸಿ ಗೆಲುವಿನ ನಗೆ ಬೀರಿದರು. ಕಾಂಗ್ರೆಸ್ ಬೆಂಬಲಿತ ಕೆ.ಎನ್. ಕಲ್ಪನಾ 303 ಮತ್ತು ಎನ್.ಎಸ್. ಕಾವ್ಯ 255 ಮತಗಳನ್ನು ಗಳಿಸಲಷ್ಟೇ ಶಕ್ತರಾದರು.

48
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಸೋಲು
Image Credit : GD Harish Gowda Facebok

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಸೋಲು

ಹಿಂದುಳಿದ ವರ್ಗ (ಪ್ರವರ್ಗ ಬಿ) ಮೀಸಲು ಕ್ಷೇತ್ರದಿಂದ ಜೆಡಿಎಸ್ ಬೆಂಬಲಿತ ಎ.ಸಿ. ಕೆಂಪೇಗೌಡ 1129 ಮತಗಳನ್ನು ಗಳಿಸಿದರೆ ಕಾಂಗ್ರೆಸ್ ಬೆಂಬಲಿತ ಎಂ. ವೈಶಾಖ್ 320 ಮತಗಳನ್ನು ಗಳಿಸಿ ಸೋಲನುಭವಿಸಿದರು. ಹಿಂದುಳಿದ ವರ್ಗ (ಪ್ರವರ್ಗ ಎ) ಮೀಸಲು ಕ್ಷೇತ್ರದಿಂದ ಜೆಡಿಎಸ್‌ ನ ಎಚ್.ಟಿ. ಬಾಬು 1057 ಮತಗಳಿಸಿ ವಿಜಯಿಯಾದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ. ಶಂಕರ್ ಕೇವಲ 139 ಮತಗಳನ್ನು ಗಳಿಸಿ ಸೋಲುಂಡರು.

58
ಕಾಂಗ್ರೆಸ್‌ಗೆ ಕಡಿಮೆ ಮತ
Image Credit : GD Harish Gowda Facebok

ಕಾಂಗ್ರೆಸ್‌ಗೆ ಕಡಿಮೆ ಮತ

ಪ.ಜಾತಿ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್‌ ನ ಬಸವಲಿಂಗಯ್ಯ 1112 ಮತಗಳನ್ನು ಗಳಿಸಿ ವಿಜಯದ ನಗೆ ಬೀರಿದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚಿನ್ನವೀರಯ್ಯ 255 ಮತಗಳನ್ನು ಗಳಿಸಿ ಸೋತರು. ಪ.ಪಂಗಡ ಮೀಸಲು ಕ್ಷೇತ್ರದಿಂದ ಜೆಡಿಎಸ್‌ ನ ಎಂ. ಸೋಮಶೇಖರ್ 1016 ಮತಗಳನ್ನು ಗಳಿಸಿ ವಿಜಯಿಯಾದರೆ, ಕಾಂಗ್ರೆಸ್‌ ಜವರನಾಯಕ 155 ಮತಗಳನ್ನು ಗಳಿಸಿ ಸೋಲು ಅನುಭವಿಸಿದರು. 

ಎರಡು ಸಾಮಾನ್ಯ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಎಚ್.ಆರ್. ಮಹೇಶ್ 1099 ಮತಗಳು ಮತ್ತು ಜಿ.ಎನ್. ವೆಂಕಟೇಶ್ 1083 ಮತಗಳನ್ನು ಗಳಿಸಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಬೆಂಬಲಿನ ಅಭ್ಯರ್ಥಿಗಳಾದ ಎಚ್.ಎಸ್. ಮಹೇಶ್ 335 ಮತಗಳು ಹಾಗೂ ಎಂ. ಕುಮಾರ್ 356 ಮತಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು.

68
ಸಂಭ್ರಮಾಚರಣೆ
Image Credit : GD Harish Gowda Facebok

ಸಂಭ್ರಮಾಚರಣೆ

ಜೆಡಿಎಸ್ ತನ್ನ ಪಾರಮ್ಯ ಮೆರೆಯುತ್ತಿದೆ ಎಂದು ಅರಿತ ಪಕ್ಷದ ಕಾರ್ಯಕರ್ತರು ಮತ್ತು ಶಾಸಕ ಜಿ.ಡಿ. ಹರೀಶ್‌ ಗೌಡರ ಅಭಿಮಾನಿಗಳು ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಮ್ಮ ನೆಚ್ಚಿನ ನಾಯಕ ಜಿ.ಡಿ. ಹರೀಶ್‌ ಗೌಡರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿ ಸಂಭ್ರಮಿಸಿದರು. ಸಿಹಿ ಹಂಚಿ ಸಂತಸಪಟ್ಟರು. ಜೈಕಾರಗಳನ್ನು ಮೊಳಗಿಸಿದರು.

78
ಕಾಂಗ್ರೆಸ್ ತಂತ್ರಗಳೆಲ್ಲಾ ವಿಫಲ
Image Credit : GD Harish Gowda Facebok

ಕಾಂಗ್ರೆಸ್ ತಂತ್ರಗಳೆಲ್ಲಾ ವಿಫಲ

ತೀವ್ರ ಮುಖಭಂಗ ಟಿಎಪಿಸಿಎಂಎಸ್ ಆಡಳಿತ ಮಂಡಳಿ ಚುನಾವಣೆಯ ಆರಂಭದಿಂದಲೂ ಕಾಂಗ್ರಸ್ ಪಕ್ಷ ತನ್ನ ಸಾಮರ್ಥ್ಯ ಪ್ರದರ್ಶಿಸಲು ತುರುಸಿನ ಕ್ರಮವಹಿಸಿತ್ತು. ಸಹಕಾರ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳೂ ಅಸ್ತಿತ್ವ ಕಾಣಬೇಕೆಂದು ಹರಸಾಹಸ ಪಟ್ಟರೂ ಪ್ರಯೋಜನವಾಗಲಿಲ್ಲ. 1:10ರ ಪ್ರಮಾಣದಲ್ಲಿ ಮತಗಳಿಸುವ ಮೂಲಕ ಕಾಂಗ್ರೆಸ್ ತೀವ್ರ ಮುಖಭಂಗಕ್ಕೆ ಒಳಗಾಯಿತು.

ಇದನ್ನೂ ಓದಿ: ರಾಜಣ್ಣ ಹೇಳಿರೋದು ನನಗೆ ಗೊತ್ತಿಲ್ಲ, ಪಕ್ಷದ ಆಂತರಿಕ ವಿಚಾರ ಸಾರ್ವಜನಿಕವಾಗಿ ಚರ್ಚಿಸುವಂತಿಲ್ಲ: ಸಚಿವ ಗುಂಡೂರಾವ್

88
ಶಾಸಕರು ಹೇಳಿದ್ದೇನು?
Image Credit : GD Harish Gowda Facebok

ಶಾಸಕರು ಹೇಳಿದ್ದೇನು?

ಟಿಎಪಿಸಿಎಂಎಸ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಮತ್ತೊಮ್ಮೆ ಸಹಕಾರಿಗಳು ಜೆಡಿಎಸ್ ಪರ ಮತ್ತು ನನ್ನನ್ನು ಬೆಂಬಲಿಸಿ ಅಭೂತಪೂರ್ವ ಗೆಲುವು ದೊರಕಿಸಿಕೊಟ್ಟಿದ್ದಾರೆ. ಅವರೆಲ್ಲರಿಗೂ ನನ್ನ ಧನ್ಯವಾದಗಳು. ಸಹಕಾರಿಗಳ ಈ ಬೆಂಬಲ ನನಗೆ ಆನೆಬಲ ತಂದಿದೆ. ರೈತರು ಮತ್ತು ಸಹಕಾರಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನನ್ನ ಹೋರಾಟಕ್ಕೆ ಇನ್ನಷ್ಟು ಬಲ ಬಂದಂತಾಗಿದೆ. ಜನರ ವಿಶ್ವಾಸಕ್ಕೆ ಕುಂದು ಬಾರದಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಶಾಸಕ ಜಿ.ಡಿ. ಹರೀಶ್‌ ಗೌಡ ಹೇಳಿದ್ದಾರೆ..

ಇದನ್ನೂ ಓದಿ: ಬೆಳಗಾವಿ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಜಾರಕಿಹೊಳಿ ಬ್ರದರ್ಸ್‌ಗೆ ಸೋಲು; ಖದರ್ ತೋರಿಸಿದ ಸವದಿ ಸಹೋದರರು!

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಜನತಾದಳ (ಜಾತ್ಯತೀತ)
ಮೈಸೂರು
ಕರ್ನಾಟಕ ಸುದ್ದಿ
ಕರ್ನಾಟಕ ರಾಜಕೀಯ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved