- Home
- Karnataka Districts
- ಬೆಂಗಳೂರಲ್ಲಿ ಮನೆ ಭೋಗ್ಯಕ್ಕೆ ಕೊಡೋದಾಗಿ ನೂರಾರು ಜನರಿಗೆ ₹60 ಕೋಟಿ ವಂಚನೆ; ಬೀದಿಗೆ ಬಿದ್ದ ಸಂತ್ರಸ್ತರು!
ಬೆಂಗಳೂರಲ್ಲಿ ಮನೆ ಭೋಗ್ಯಕ್ಕೆ ಕೊಡೋದಾಗಿ ನೂರಾರು ಜನರಿಗೆ ₹60 ಕೋಟಿ ವಂಚನೆ; ಬೀದಿಗೆ ಬಿದ್ದ ಸಂತ್ರಸ್ತರು!
ಬೆಂಗಳೂರಿನ 'ಕೆಟಿನಾ ಹೋಮ್ಸ್' ಕಂಪನಿಯು ಮನೆ ಬಾಡಿಗೆ ಮತ್ತು ಲೀಸ್ ಹೆಸರಿನಲ್ಲಿ ನೂರಾರು ಕುಟುಂಬಗಳಿಗೆ ಸುಮಾರು ₹60 ಕೋಟಿ ವಂಚಿಸಿದೆ. ಕಂಪನಿಯ ಮುಖ್ಯಸ್ಥ ವಿವೇಕ್ ಕೇಶವನ್‌ನಿಂದ ವಂಚನೆಗೊಳಗಾದ ಸಂತ್ರಸ್ತ ಕುಟುಂಬಗಳು ಹಣ ಕಳೆದುಕೊಂಡು ಬೀದಿಪಾಲಾಗಿವೆ.

ನೂರಾರು ಕುಟುಂನಗಳಿಗೆ ₹60 ಕೋಟಿ ವಂಚನೆ
ಬೆಂಗಳೂರಿನಲ್ಲಿ 'ಕೆಟಿನಾ ಹೋಮ್ಸ್' ಎಂಬ ಕಂಪನಿಯು ಮನೆ ಬಾಡಿಗೆ ಮತ್ತು ಲೀಸ್ ಹೆಸರಿನಲ್ಲಿ ನೂರಾರು ಕುಟುಂಬಗಳಿಗೆ ಸುಮಾರು ₹60 ಕೋಟಿ ವಂಚಿಸಿದೆ. ಕಂಪನಿಯ ಮುಖ್ಯಸ್ಥ ವಿವೇಕ್ ಕೇಶವನ್, ಮನೆ ಮಾಲೀಕರಿಗೆ ಬಾಡಿಗೆ ನೀಡದೆ ಮತ್ತು ಬಾಡಿಗೆದಾರರಿಂದ ಪಡೆದ ಹಣದೊಂದಿಗೆ ಪರಾರಿಯಾಗಿದ್ದು, ಸಂತ್ರಸ್ತರು ಬೀದಿಪಾಲಾಗಿದ್ದಾರೆ.
ಪೊಲೀಸರಿಗೆ ಸಿಕ್ಕಿಬಿದ್ದ ಗ್ಯಾಂಗ್, ಕಿಂಗ್‌ಪಿನ್ ಪರಾರಿ
ರಾಜಧಾನಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ಅಥವಾ ಲೀಸ್‌ಗೆ ಮನೆ ಹುಡುಕುತ್ತಿರುವವರನ್ನು ಲಕ್ಷಾಂತರ ರೂಪಾಯಿ ವಂಚಿಸಿರುವ ಜಾಲವೊಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಸಿಕ್ಕಿಬಿದ್ದಿದೆ.
ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್
'ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್' ಎಂಬ ಖಾಸಗಿ ಕಂಪನಿಯ ಮುಖ್ಯಸ್ಥ ವಿವೇಕ್ ಕೇಶವನ್ ಎಂಬಾತ ನೂರಾರು ಕುಟುಂಬಗಳಿಗೆ ಸುಮಾರು ₹60 ಕೋಟಿಗೂ ಅಧಿಕ ವಂಚನೆ ಎಸಗಿರುವ ಆರೋಪ ಕೇಳಿಬಂದಿದೆ.
ಮನೆ ಬಾಡಿಗೆ ಪಡೆದು ಸಬ್‌ಲೀಸ್‌ಗೆ ಕೊಡುತ್ತಿದ್ದ
ವಂಚನೆಯ ಜಾಲ ಹೇಗೆ ಕಾರ್ಯನಿರ್ವಹಿಸುತ್ತದೆ?
ವಿವೇಕ್ ಕೇಶವನ್ 'ಕೆಟಿನಾ' ಎಂಬ ಬ್ರೋಕರ್ ಕಂಪನಿಯೊಂದನ್ನು ಸ್ಥಾಪಿಸಿ, ವೆಬ್‌ಸೈಟ್ ಮೂಲಕ ಕಾರ್ಯನಿರ್ವಹಿಸುತ್ತಿದ್ದನು. ಮೊದಲು, ವಿವೇಕ್ ಮತ್ತು ಅವನ ತಂಡ ಬೆಂಗಳೂರಿನ ವಿವಿಧ ಪ್ರದೇಶಗಳಾದ ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ಮನೆ ಮಾಲೀಕರಿಂದ ಮನೆಗಳನ್ನು ಬಾಡಿಗೆಗೆ ಅಥವಾ ಲೀಸ್‌ಗೆ ಪಡೆಯುತ್ತಿದ್ದ. ನಂತರ, ವೆಬ್‌ಸೈಟ್ ಮೂಲಕ ಲೀಸ್‌ಗೆ ಮನೆ ಹುಡುಕುತ್ತಿದ್ದ ಜನರನ್ನು ಆಕರ್ಷಿಸಿ, ಅವರಿಂದ ಲಕ್ಷಾಂತರ ರೂಪಾಯಿಗಳನ್ನು ಮುಂಗಡವಾಗಿ ಪಡೆಯುತ್ತಿದ್ದ.
ರಾತ್ರೋ ರಾತ್ರಿ ಪರಾರಿ
ಹೀಗೆ ಹಣ ಪಡೆದ ನಂತರ, ವಿವೇಕ್ ಕೇಶವನ್ ಮತ್ತು ಆತನ ಸಹಚರರು ಮೊದಲ ಒಂದೆರಡು ತಿಂಗಳು ಮನೆ ಮಾಲೀಕರಿಗೆ ಬಾಡಿಗೆಯನ್ನು ಪಾವತಿಸುತ್ತಿದ್ದರು. ಆದರೆ, ಕಳೆದ 6 ತಿಂಗಳಿಂದ ಇವರು ಮನೆ ಮಾಲೀಕರಿಗೆ ಬಾಡಿಗೆ ಕಟ್ಟದೆ, ರಾತ್ರೋರಾತ್ರಿ ತಮ್ಮ ಕಚೇರಿಯನ್ನು ಖಾಲಿ ಮಾಡಿ ಪರಾರಿಯಾಗಿದ್ದಾರೆ.
ಹಣ ಕಳೆದುಕೊಂಡು ಪರದಾಡುತ್ತಿರುವ ಕುಟುಂಬಗಳು
ಸಾಲದಲ್ಲಿ ಸಿಲುಕಿರುವ ಕುಟುಂಬಗಳು
ಮನೆಗೆ ಹಣ ನೀಡಿದ ನಂತರವೂ ವಂಚನೆಗೆ ಒಳಗಾದ ನೂರಾರು ಕುಟುಂಬಗಳು ಈಗ ಅತಂತ್ರ ಪರಿಸ್ಥಿತಿಯಲ್ಲಿ ಸಿಲುಕಿವೆ. ಒಂದು ಕಡೆ, ಲೀಸ್‌ಗೆ ಹಣ ಕೊಟ್ಟ ಕುಟುಂಬಗಳಿಗೆ ಅಸಲಿ ಮನೆ ಮಾಲೀಕರು ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಮತ್ತೊಂದೆಡೆ, ತಾವು ಕಷ್ಟಪಟ್ಟು ಸಂಪಾದಿಸಿದ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡ ಕುಟುಂಬಗಳು ಬೀದಿಪಾಲಾಗಿವೆ. ಮನೆ ಬಾಡಿಗೆ ಅಥವಾ ಲೀಸ್‌ಗೆಂದು ಕೊಟ್ಟ ಹಣವೂ ಇಲ್ಲ, ಉಳಿದುಕೊಳ್ಳಲು ಮನೆಯೂ ಇಲ್ಲದಂತಾಗಿದೆ
ದೊಡ್ಡವರ ಜೊತೆಗೆ ಫೋಟೋ
ಪೊಲೀಸ್ ಠಾಣೆಗೆ ದೂರು ಮತ್ತು ಮುಂದಿನ ಕ್ರಮ
ಈ ವಂಚನೆಯ ಕುರಿತು ದೂರು ದಾಖಲಿಸಲು ಮುಂದಾದಾಗ, ವಿವೇಕ್ ಕೇಶವನ್ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರ ಜೊತೆ ತೆಗೆದುಕೊಂಡಿರುವ ಪೋಟೋಗಳನ್ನು ತೋರಿಸಿ ನಂಬಿಕೆ ಹುಟ್ಟಿಸಿರುವ ವಿಚಾರ ಬೆಳಕಿಗೆ ಬಂದಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ವಿವೇಕ್ ಕೇಶವನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವಂಚಕನ ವಿರುದ್ಧ ಕಠಿಣ ಕ್ರಮ ಹಾಗೂ ಹಣ ಕೊಡಿಸಲು ಮನವಿ
ಪರಾರಿಯಾಗಿರುವ ಈ ವಂಚಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತರು ಪೊಲೀಸರನ್ನು ಆಗ್ರಹಿಸಿದ್ದಾರೆ. ಈ ಘಟನೆ ಬೆಂಗಳೂರಿನಲ್ಲಿ ಮನೆ ಬಾಡಿಗೆಗೆ ಅಥವಾ ಲೀಸ್‌ಗೆ ಮನೆ ಹುಡುಕುವವರು ಎಚ್ಚರ ವಹಿಸಬೇಕಾದ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.