ಸಿಬಿಐ ದಾಳಿ, ಡಿಐಜಿ ಮನೆಯಲ್ಲಿ ಸಿಕ್ತು7.5 ಕೋಟಿ ಕ್ಯಾಶ್, 2.5 ಕೆಜಿ ಚಿನ್ನ, 26 ಐಷಾರಾಮಿ ವಾಚ್
ಡಿಐಜಿ ಹರ್ಚರಣ್ ಸಿಂಗ್ ಭುಲ್ಲರ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿದೆ. ದಾಳಿಯ ವೇಳೆ ಕೋಟ್ಯಂತರ ರೂಪಾಯಿ ನಗದು, ಚಿನ್ನ, ಆಸ್ತಿ ಪತ್ರಗಳು ಸೇರಿದಂತೆ ಅಪಾರ ಪ್ರಮಾಣದ ಸಂಪತ್ತು ಪತ್ತೆಯಾಗಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸರ್ಕಾರಿ ನೌಕರ, ಆದರೂ ಕೋಟಿ ಕೋಟಿ ಆಸ್ತಿ
ಅಕ್ರಮ ಆಸ್ತಿ ಸಂಪಾದನೆ, ಲಂಚ ಸ್ವೀಕಾರ ಆರೋಪದಡಿ ಪಂಜಾಬ್ ಪೊಲೀಸ್ ಡಿಐಜಿ ಹರ್ಚರಣ್ ಸಿಂಗ್ ಭುಲ್ಲರ್ ನಿವಾಸ ಸೇರಿದಂತೆ ಅವರ ಒಡೆತನದ ಆಸ್ತಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. ಈ ದಾಳಿ ವೇಳೆ ಹರ್ಚರಣ್ ಸಿಂಗ್ ಭುಲ್ಲರ್ ನಿವಾಸದಲ್ಲಿ ಸಿಕ್ಕ ನಗದು ಮತ್ತು ಚಿನ್ನಾಭರಣಗಳ್ನು ನೋಡಿ ಸಿಬಿಐ ಅಧಿಕಾರಿಗಳೇ ದಂಗಾಗಿದ್ದಾರೆ.
14 ದಿನದ ನ್ಯಾಯಾಂಗ ಬಂಧನ
ದಾಳಿ ಬಳಿಕ ಹರ್ಚರಣ್ ಸಿಂಗ್ ಭುಲ್ಲರ್ ಅವರನ್ನು 14 ದಿನದ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ನಗದು, ಚಿನ್ನ ಸೇರಿದಂತೆ ಕೋಟ್ಯಂತರ ಮೌಲ್ಯದ ಆಸ್ತಿಯ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಾಳಿ ವೇಳೆ ಕುಟುಂಬಸ್ಥರ ಹೆಸರಿನಲ್ಲಿ 50ಕ್ಕೂ ಅಧಿಕ ಆಸ್ತಿಗಳಿರೋದು ತಿಳಿದು ಬಂದಿದೆ. ಹರ್ಚರಣ್ ಸಿಂಗ್ ಭುಲ್ಲರ್ ಮನೆಯಲ್ಲಿ ಸಿಕ್ಕಿದ್ದೇನು?
- ₹7.5 ಕೋಟಿ ನಗದು
- 2.5 ಕೆಜಿ ಚಿನ್ನಾಭರಣ
- 26 ಐಷಾರಾಮಿ ಕೈಗಡಿಯಾರಗಳು
- 12ಕ್ಕೂ ಅಧಿಕ ಆಸ್ತಿ ಪತ್ರಗಳು
- 108 ಮದ್ಯದ ಬಾಟಲಿ
- 4 ಗನ್, 100ಕ್ಕೂ ಅಧಿಕ ಜೀವಂತ ಗುಂಡುಗಳು
8 ಲಕ್ಷ ಲಂಚಕ್ಕೆ ಬೇಡಿಕೆ
ಉದ್ಯಮಿಯೊಬ್ಬರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಇತ್ಯರ್ಥಗೊಳಿಸಲು ಮತ್ತು ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳದಿರಲು ಡಿಐಜಿ ಹರ್ಚರಣ್ ಸಿಂಗ್ ಭುಲ್ಲರ್ 8 ಲಕ್ಷ ರೂ. ಲಂಚಕ್ಕೆ ಬೇಡಿಕೆಯನ್ನಿಟ್ಟಿದ್ದರು. ಈ ಸಂಬಂಧ ಸಿಬಿಐನಲ್ಲಿ ಅಕ್ಟೋಬರ್ 16ರಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ದಾಖಲಾದ ಬೆನ್ನಲ್ಲೇ ಭುಲ್ಲರ್ ಅವರಿಗೆ ಸಂಬಂಧಿಸಿದ ನ ಚಂಡೀಗಢ, ಜಲಂಧರ್ ಮತ್ತು ಸಮ್ರಾಲಾದಲ್ಲಿ ದಾಳಿ ನಡೆದಿದೆ.
ತೋಟದ ಮನೆಯಲ್ಲಿಯೂ ಝಣ ಝಣ ಕಾಂಚಾಣ
ನಾಲ್ಕು ಬ್ಯಾಂಕ್ ಲಾಕರ್ ಕೀಗಳು, ಲೈಸೆನ್ಸ್ ಹೊಂದಿರುವ ನಾಲ್ಕು ಗನ್ ಮತ್ತು 100 ಕ್ಕೂ ಹೆಚ್ಚು ಜೀವಂತ ಗುಂಡುಗಳನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಮ್ರಾಲಾದ ತೋಟದ ಮನೆಯಲ್ಲಿ ₹5.7 ಲಕ್ಷ ನಗದು, 108 ಮದ್ಯದ ಬಾಟಲಿಗಳು ಮತ್ತು 17 ಜೀವಂತ ಗುಂಡುಗಳು ಪತ್ತೆಯಾಗಿವೆ. ಹರ್ಚರಣ್ ಸಿಂಗ್ ಭುಲ್ಲರ್ ಆಪ್ತನ ನಿವಾಸದಲ್ಲಿ 21 ಲಕ್ಷ ರೂ. ನಗದು ಮತ್ತು ಅಪರಾಧಕ್ಕೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಶಬರಿಮಲೆ ಚಿನ್ನಕ್ಕೆ ಕನ್ನ: ಬೆಂಗಳೂರು ಆರೋಪಿ ಬಂಧನ
ಲಂಚ ದಂಧೆಯೇ ಅಕ್ರಮ ಆಸ್ತಿಯ ಮೂಲ
ಸರ್ಕಾರಿ ಸೇವೆಯಲ್ಲಿರುವ ನೌಕರನ ಬಳಿ ಇಷ್ಟು ದೊಡ್ಡಪ್ರಮಾಣದ ಆಸ್ತಿಯ ಮೂಲ ಯಾವುದು ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಲಂಚ ದಂಧೆಯೇ ಅಕ್ರಮ ಆಸ್ತಿಯ ಮೂಲ ಎಂದು ತಿಳಿದು ಬಂದಿದೆ. ಡಿಐಜಿ ಹರ್ಚರಣ್ ಸಿಂಗ್ ಭುಲ್ಲರ್ ಜೊತೆ ಹಲವು ಅಧಿಕಾರಿಗಳು ಸೇರ್ಪಡೆಯಾಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: ರಾಜಕೀಯ ಹೋರಾಟಗಳಿಗೆ ನ್ಯಾಯ ಪೀಠ ವೇದಿಕೆ ಮಾಡಬೇಡಿ: ಎಚ್‌ಡಿಕೆ ಬೇಲ್ ರದ್ದತಿಗೆ ಸುಪ್ರೀಂ ನಕಾರ
एक और दिन एक और सरकारी बाबू के भ्रष्टाचार की खबर!!
पंजाब पुलिस के डीआईजी हरचरण सिंह भुल्लर को भ्रष्टाचार के आरोप में सीबीआई ने गिरफ्तार किया है।
सीबीआई ने हरचरण भुल्लर के ठिकानों पर छापेमारी के दौरान करीब 5 करोड़ रुपये नकद, 1.5 किलो सोना, कई लक्ज़री गाड़ियाँ और अन्य संपत्तियाँ… pic.twitter.com/vOJZJrTQVp— Ankit Kumar Avasthi (@kaankit) October 17, 2025