ಫಸ್ಟ್‌ನೈಟ್‌ನಲ್ಲಿ ಜೊತೆಯಾಗಿ ಮಲಗುವಂತಿಲ್ಲ: ವಿಚಿತ್ರ ಸಂಪ್ರದಾಯ ಹೇಳಿದ ವಧು
Bride dupes groom on wedding night: ಅದ್ದೂರಿ ಮದುವೆಯ ನಂತರ ವಧುವೊಬ್ಬಳು ವಿಚಿತ್ರ ಸಂಪ್ರದಾಯದ ನೆಪ ಹೇಳಿ ಗಂಡನಿಂದ ದೂರ ಮಲಗಿದ್ದಾಳೆ. ಮಧ್ಯರಾತ್ರಿ, ಆಕೆ ಚಿನ್ನಾಭರಣ ಮತ್ತು ಹಣದೊಂದಿಗೆ ಬ್ರೋಕರ್ ಜೊತೆ ಪರಾರಿಯಾಗಿದ್ದು, ವಂಚನೆಗೊಳಗಾದ ವರ ಪೊಲೀಸರಿಗೆ ದೂರು ನೀಡಿದ್ದಾನೆ.

ವಧು ಹೇಳಿದ ಸಂಪ್ರದಾಯ
ಅದ್ದೂರಿ ಮದುವೆಯ ನಂತರ ಗಂಡನ ಮನೆಗೆ ಬಂದ ವಧು ಒಂದು ವಿಷಯ ಕೇಳಿದಳು. ಸಂಪ್ರದಾಯ ಮುರಿಯಬಾರದು ಎಂದು ವರ ವಧುವಿನ ಕೋರಿಕೆಯನ್ನು ಒಪ್ಪಿಕೊಳ್ಳುತ್ತಾನೆ. ವರ ನಿದ್ದೆಗೆ ಹೋಗುತ್ತಿದ್ದಂತೆ ಮಧ್ಯರಾತ್ರಿಯೇ ವಧು ನಾಪತ್ತೆಯಾಗಿದ್ದಾಳೆ.
ರಾಜಸ್ಥಾನದ ಕಿಶನ್‌ಗಢ
ರಾಜಸ್ಥಾನದ ಕಿಶನ್‌ಗಢದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮದುವೆಯಾಗಿ ಕಿಶನ್‌ಗಢದಲ್ಲಿರುವ ಗಂಡನ ಮನೆಗೆ ವಧು ಬಂದಿದ್ದಾಳೆ. ಅಲ್ಲಿಗೆ ಬರುತ್ತಿದ್ದಂತೆ ತಮ್ಮ ಕುಟುಂಬದಲ್ಲಿಯ ಒಂದು ವಿಚಿತ್ರ ಆಚರಣೆ ಹೇಳಿಕೊಂಡಿದ್ದಾಳೆ. ಮೊದಲ ರಾತ್ರಿಯಲ್ಲಿ ಗಂಡ-ಹೆಂಡತಿ ಜೊತೆಯಾಗಿ ಮಲಗುವಂತಿಲ್ಲ ಎಂದಿದ್ದಾಳೆ. ವಧು ಮಾತು ನಂಬಿದ ಗಂಡ ಮೊದಲ ರಾತ್ರಿ ನೆಲದ ಮೇಲೆಯೇ ಒಂಟಿಯಾಗಿ ಮಲಗಿದ್ದಾನೆ.
ಬ್ರೋಕರ್ ಜೊತೆ ಪರಾರಿ
ವರ ಬೆಳಗ್ಗೆ ಎಚ್ಚರಗೊಂಡ ಮನೆಯಲ್ಲಿ ಪತ್ನಿ ಇರಲಿಲ್ಲ. ವಧು ಕಾಣೆಯಾಗಿದ್ದನ್ನು ಕಂಡು ಯುವಕ ಮನೆಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ವಧುವಿನ ಬಗ್ಗೆ ವಿಚಾರಿಸಿದಾಗ ಬ್ರೋಕರ್ ಜೊತೆ ಚಿನ್ನ ಮತ್ತು ಹಣದೊಂದಿಗೆ ಪರಾರಿಯಾಗಿರುವುದು ತಿಳಿದುಬಂದಿದೆ. ಬ್ರೋಕರ್ ಮಧ್ಯವರ್ತಿಯಾಗಿ ಜಿತೇಶ್ ಮದುವೆಯನ್ನು ಆಗ್ರಾ ಮೂಲದ ಯುವತಿಯೊಂದಿಗೆ ಮಾಡಿಸಿದ್ದನು.
ಜೈಪುರದಲ್ಲಿ ಅದ್ದೂರಿ ಮದುವೆ
ಮದುವೆ ನಿಶ್ಚಯವಾದ ಬಳಿಕ ಬ್ರೋಕರ್‌ಗೆ ಜಿತೇಶ್ 2 ಲಕ್ಷ ರೂಪಾಯಿ ಕಮಿಷನ್ ನೀಡಿದ್ದನು. ಜೈಪುರದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಕಿಶನ್‌ಗಢದ ಮನೆಗೆ ಬರುತ್ತಿದ್ದಂತೆ ವಿಚಿತ್ರ ಸಂಪ್ರದಾಯದ ಬಗ್ಗೆ ಹೇಳಿದ್ದಳು. ಈ ಸಮಯದಲ್ಲಿ ಜಿತೇಶ್‌ಗೆ ಯಾವುದೇ ಅನುಮಾನ ಬಂದಿರಲಿಲ್ಲ. ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ವಧು ಮನೆಯಿಂದ ಎಸ್ಕೇಪ್ ಆಗಿರೋದು ಯುವಕನ ಗಮನಕ್ಕೆ ಬಂದಿದೆ.
ಇದನ್ನೂ ಓದಿ: 72ರ ವೃದ್ಧನ ಕೈ ಹಿಡಿದ 27ರ ಯುವತಿ: ಹಿಂದೂ ಸಂಪ್ರದಾಯದಂತೆ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ
ಚಿನ್ನಾಭರಣಗಳ ಸಮೇತ ಯುವತಿ ಪರಾರಿ
ಉಡುಗೊರೆಯಾಗಿ ನೀಡಿದ್ದ ಚಿನ್ನಾಭರಣಗಳ ಸಮೇತ ಯುವತಿ ಪರಾರಿಯಾಗಿದ್ದಾಳೆ. ಇದಲ್ಲದೆ ಮನೆಯಲ್ಲಿದ್ದ ಹಣವನ್ನೂ ಕದ್ದಿದ್ದಾಳೆ. ರೈಲ್ವೆ ನಿಲ್ದಾಣ ಸೇರಿದಂತೆ ಎಲ್ಲೆಡೆ ಹುಡುಕಿದರೂ ಯಾವುದೇ ಸುಳಿವು ಸಿಗದಿದ್ದಾಗ, ಯುವಕ ಮದನ್‌ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದಾಗ, ಯುವತಿಯ ಜೊತೆ ಜಿತೇಂದ್ರ ಕೂಡ ನಾಪತ್ತೆಯಾಗಿರುವುದು ಸ್ಪಷ್ಟವಾಯಿತು.
ಇದನ್ನೂ ಓದಿ: Viral Video: ಮದುವೆಗೆ ಗಿಫ್ಟ್ ಆಗಿ ಬಂದ ಮಂಚದ ಒಳಗಿನಿಂದ ಬರ್ತಿತ್ತು ವಿಚಿತ್ರ ಶಬ್ದ, ತೆಗೆದು ನೋಡಿದ್ರೆ ಗಂಡನಿಗೆ ಶಾಕ್!