MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಅಂದು 1.5 ಗಂಟೆಯೊಳಗಡೆ ಮುಗಿದಿದ್ದ ಇಂದಿರಾ ಗಾಂಧಿ ಮದುವೆ! 83 ವರ್ಷದ ಹಿಂದಿನ ವಿಡಿಯೋ‌ ಈಗ ವೈರಲ್

ಅಂದು 1.5 ಗಂಟೆಯೊಳಗಡೆ ಮುಗಿದಿದ್ದ ಇಂದಿರಾ ಗಾಂಧಿ ಮದುವೆ! 83 ವರ್ಷದ ಹಿಂದಿನ ವಿಡಿಯೋ‌ ಈಗ ವೈರಲ್

Indira Gandhi And Feroze Gandhi Marriage Video: ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಹಾಗೂ ಫಿರೋಜ್‌ ಗಾಂಧಿ ಅವರು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರ ಮದುವೆಗೆ ವಿರೋಧವಿತ್ತು. ಆ ನಂತರ ಕುಟುಂಬದ ಒಪ್ಪಿಗೆ ಪಡೆದು ಮದುವೆಯಾಗಿದ್ದ ಇವರ ಮದುವೆ ವಿಡಿಯೋ ಈಗ ವೈರಲ್‌ ಆಗ್ತಿದೆ.  

2 Min read
Author : Padmashree Bhat
Published : Oct 19 2025, 02:37 PM IST
Share this Photo Gallery
  • FB
  • TW
  • Linkdin
  • Whatsapp
17
ಆಗಿನ ಕಾಲದಲ್ಲಿ ಅಚ್ಚರಿ ಮೂಡಿಸಿದ ಮದುವೆ
Image Credit : indira gandhi instagram

ಆಗಿನ ಕಾಲದಲ್ಲಿ ಅಚ್ಚರಿ ಮೂಡಿಸಿದ ಮದುವೆ

ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರು ರಾಜಕೀಯ ವಿಚಾರವಾಗಿ ಎಷ್ಟು ಹೆಸರು ಮಾಡಿದ್ದರೋ ಹಾಗೆ ಅವರ ಮದುವೆ ಕೂಡ ಸಿಕ್ಕಾಪಟ್ಟೆ ಚರ್ಚೆ ಆಗಿತ್ತು. ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ ಫಿರೋಜ್‌ ಗಾಂಧಿ ಅವರನ್ನು ಮದುವೆಯಾಗಿದ್ದರು. ಆಗಿನ ಕಾಲದಲ್ಲಿ ಈ ಮದುವೆಯು ಅನೇಕರಿಗೆ ಅಚ್ಚರಿ ಮೂಡಿಸಿತ್ತು.

27
 ಪರಿಚಯ ಆಗಿದ್ದೆಲ್ಲಿ?
Image Credit : indira gandhi instagram

ಪರಿಚಯ ಆಗಿದ್ದೆಲ್ಲಿ?

ಇಂಗ್ಲೆಂಡ್‌ನಲ್ಲಿ ಇಂದಿರಾ ಮತ್ತು ಫಿರೋಜ್ ಪರಿಚಯ ಆಗಿತ್ತು. ಇಂದಿರಾ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ, ಫಿರೋಜ್ ಅವರು ಕೂಡ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಓದುತ್ತಿದ್ದರು. ಇಬ್ಬರೂ ಭಾರತದ ಸ್ವಾತಂತ್ರ್ಯ ಚಳುವಳಿಯ ಬೆಂಬಲಿಗರಾಗಿದ್ದರು. ಈ ಸಾಮಾನ್ಯ ಆಸಕ್ತಿಯಿಂದಲೇ ಇಬ್ಬರು ಫ್ರೆಂಡ್ಸ್‌ ಆದರು. ಆಮೇಲೆ ಈ ಸ್ನೇಹ ಪ್ರೀತಿಗೆ ತಿರುಗಿತು.

Related Articles

Related image1
1971ರಲ್ಲಿ ಅಮೆರಿಕದ ನಿಕ್ಸನ್‌ಗೆ ಇಂದಿರಾ ಗಾಂಧಿ ಬರೆದ ಪತ್ರ ಬಯಲು
Related image2
ಅನಂತ್‌ ನಾಗ್ ಅವರಿಗೆ ಇಂದಿರಾ ಗಾಂಧಿ ಸ್ಪೂರ್ತಿ ಆಗಿದ್ದೇಗೆ? ಮದುವೆಗೆ ಕಂಡೀಷನ್ ಹಾಕಿದ್ರು ಗಾಯಿತ್ರಿ!
37
ಫಿರೋಜ್‌ಗೆ ಗಾಂಧಿ ಹೆಸರು ಕೊಟ್ಟಿದ್ದ ಗಾಂಧೀಜಿ
Image Credit : indira gandhi instagram

ಫಿರೋಜ್‌ಗೆ ಗಾಂಧಿ ಹೆಸರು ಕೊಟ್ಟಿದ್ದ ಗಾಂಧೀಜಿ

ಇಂದಿರಾ ಗಾಂಧಿ ಅವರು ನೆಹರು ಕುಟುಂಬಕ್ಕೆ ಸೇರಿದ್ದರು. ಫಿರೋಜ್ ಅವರು ಪಾರ್ಸಿ ಸಮುದಾಯಕ್ಕೆ ಸೇರಿದ್ದರು. ಸಾಮಾಜಿಕ, ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ಮೀರಿ ಈ ಮದುವೆ ನಡೆದಿತ್ತು. ಇಂದಿರಾ ಅವರ ತಂದೆ ಜವಾಹರಲಾಲ್ ನೆಹರು ಅವರು ಆರಂಭದಲ್ಲಿ ಈ ಮದುವೆಗೆ ಒಪ್ಪಿರಲಿಲ್ಲ ಎನ್ನಲಾಗುತ್ತದೆ. ಆಮೇಲೆ ಇವರು ಮಗಳ ಪ್ರೀತಿಯನ್ನು ಒಪ್ಪಿದರಂತೆ. ಮಹಾತ್ಮಾ ಗಾಂಧಿ ಅವರು ಈ ಮದುವೆಗೆ ಬೆಂಬಲ ನೀಡಿದ್ದರು, ಫಿರೋಜ್‌ಗೆ "ಗಾಂಧಿ" ಎಂಬ ಉಪನಾಮ ನೀಡಿದ್ದರಂತೆ. ಫಿರೋಜ್ ಅವರ ಮೂಲ ಉಪನಾಮ ಘಂಡಿ ಎನ್ನಲಾಗಿದೆ.

47
ಬಹಳ ಸರಳ ಮದುವೆ
Image Credit : indira gandhi instagram

ಬಹಳ ಸರಳ ಮದುವೆ

ಇಂದಿರಾ ಗಾಂಧಿ ಅವರು ಬಹಳ ಸಿಂಪಲ್‌ ಆದ ಸೀರೆಯುಟ್ಟಿದ್ದರು. ಅದು ಸರಳವಾದ ಗುಲಾಬಿ ಬಣ್ಣದ ಹತ್ತಿ ಸೀರೆಯಾಗಿತ್ತು. ಅವರು ಯಾವುದೇ ಆಭರಣಗಳನ್ನು ಧರಿಸಿರಲಿಲ್ಲ, ಕೇವಲ ಹೂವಿನ ಮಾಲೆಗಳನ್ನು ಹಾಕಿಕೊಂಡಿದ್ದರು. ಇಷ್ಟು ಶ್ರೀಮಂತರಾದರೂ ಕೂಡ ಅವರು ಸಿಂಪಲ್‌ ಆಗಿ ಮದುವೆಯಾಗಿದ್ದರು.

57
ಎಲ್ಲಿ ಮದುವೆ ನಡೆಯಿತು?
Image Credit : indira gandhi instagram

ಎಲ್ಲಿ ಮದುವೆ ನಡೆಯಿತು?

ಅಲಹಾಬಾದ್‌ನಲ್ಲಿ ಸಾಂಪ್ರದಾಯಿಕ ಹಿಂದೂ ಧರ್ಮದ ಪ್ರಕಾರ 1942ರಲ್ಲಿ, ಇಂದಿರಾ ಮತ್ತು ಫಿರೋಜ್ ಗಾಂಧಿ ಮದುವೆಯಾದರು. ಒಂದೂವರೆ ಗಂಟೆಯಲ್ಲಿ ಈ ಮದುವೆ ಮುಗಿದಿತ್ತು. ಈ ಮದುವೆಯು ರಾಷ್ಟ್ರೀಯವಾಗಿ ಗಮನ ಸೆಳೆದಿತ್ತು. ಅವರ ದಾಂಪತ್ಯ ಜೀವನದ ಜೊತೆ ಜೊತೆಗೆ ರಾಜಕೀಯ ಚಟುವಟಿಕೆಗಳು, ಸ್ವಾತಂತ್ರ್ಯ ಹೋರಾಟವು ನಡೆಯುತ್ತಿತ್ತು. ಆಮೇಲೆ ಇವರಿಗೆ ರಾಜೀವ್ ಗಾಂಧಿ, ಸಂಜಯ್ ಗಾಂಧಿ ಎಂಬ ಎಂಬ ಮಕ್ಕಳು ಜನಿಸಿದರು.

67
ಹೃದಯಾಘಾತದಿಂದ ನಿಧನ
Image Credit : indira gandhi instagram

ಹೃದಯಾಘಾತದಿಂದ ನಿಧನ

ಫಿರೋಜ್ ಗಾಂಧಿ ಅವರು ರಾಜಕೀಯದಲ್ಲಿ ಆಕ್ಟಿವ್‌ ಆಗಿದ್ದರು, ಸಂಸತ್ ಸದಸ್ಯರಾಗಿದ್ದರು. ಅವರು ಪ್ರಾಮಾಣಿಕತೆ, ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಹೆಸರು ಮಾಡಿದ್ದರು. ಇಂದಿರಾ ಗಾಂಧಿ ಪ್ರಧಾನಿ ಆಗುವ ಮುನ್ನ, 1960 ರಲ್ಲಿ ಫಿರೋಜ್ ಗಾಂಧಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.

77
ದೇಶಕ್ಕೆ ಸಂದೇಶ
Image Credit : indira gandhi instagram

ದೇಶಕ್ಕೆ ಸಂದೇಶ

ಎರಡು ವಿಭಿನ್ನವಾದ ಹಿನ್ನೆಲೆಯ ವ್ಯಕ್ತಿಗಳು ಹೇಗೆ ಪ್ರೀತಿಯಲ್ಲಿ ಒಂದಾಗಿ, ದೇಶಕ್ಕಾಗಿ ಒಟ್ಟಿಗೆ ಕೆಲಸ ಮಾಡಬಹುದು ಎಂದು ಇಂದಿರಾ ಮತ್ತು ಫಿರೋಜ್ ಮದುವೆ ಸಂದೇಶ ನೀಡಿತು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸಂಬಂಧಗಳು
ಭಾರತ
ಭಾರತ ಸುದ್ದಿ

Latest Videos
Recommended Stories
Recommended image1
ವಿದ್ಯಾರ್ಥಿಗಳಿಗೆ ಲೈ0ಗಿಕ ಕಿರುಕುಳ, ಅವಿಮುಕ್ತೇಶ್ವರಾನಂದ ಸ್ವಾಮಿ ವಿರುದ್ಧ ಕೇಸ್‌ಗೆ ಕೋರ್ಟ್ ಸೂಚನೆ
Recommended image2
CBSE Exam: ಮ್ಯಾಥ್ಸ್ ಪೇಪರ್ ಟಫ್ ಇತ್ತು, ಸಿಬಿಎಸ್‌ನಿಂದ ಮೋಸ ಎಂದು ವಿದ್ಯಾರ್ಥಿಗಳ ಆಕ್ರೋಶ
Recommended image3
ಮುಂಬೈ ಬೀದಿಗಳಲ್ಲಿ 'ಟಾಕ್ಸಿಕ್' ನಟ ಯಶ್ ಹೆಂಡ್ತಿ ಹವಾ! ಕುತೂಹಲ ಮೂಡಿಸಿದ ರಾಧಿಕಾ ಪಂಡಿತ್ 'ಮುಂಬೈ ಡೈರೀಸ್' ಪೋಸ್ಟ್!
Related Stories
Recommended image1
1971ರಲ್ಲಿ ಅಮೆರಿಕದ ನಿಕ್ಸನ್‌ಗೆ ಇಂದಿರಾ ಗಾಂಧಿ ಬರೆದ ಪತ್ರ ಬಯಲು
Recommended image2
ಅನಂತ್‌ ನಾಗ್ ಅವರಿಗೆ ಇಂದಿರಾ ಗಾಂಧಿ ಸ್ಪೂರ್ತಿ ಆಗಿದ್ದೇಗೆ? ಮದುವೆಗೆ ಕಂಡೀಷನ್ ಹಾಕಿದ್ರು ಗಾಯಿತ್ರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved