ಈ ಖಾಯಿಲೆ ಇದ್ರೆ ನಿಂತಲ್ಲೇ, ಕೂತಲ್ಲೆ ಬಿದ್ದು ಬಿಡ್ತಾರೆ ಜನ; ಏನಿದು ಸಮಸ್ಯೆ?
ಹೈಪೊಗ್ಲೈಸೀಮಿಯಾವನ್ನು 'ಕಡಿಮೆ ರಕ್ತದ ಗ್ಲೂಕೋಸ್' ಅಥವಾ 'ಲೋ ಬ್ಲಡ್ ಶುಗರ್ ಎಂದೂ ಕರೆಯಲಾಗುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟದ ಕೊರತೆಯಿಂದಾಗಿ ಇಂತಹ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಇದು ಗಂಭೀರ ಸ್ಥಿತಿಯಾಗಿದ್ದು, ಇದರಲ್ಲಿ ವ್ಯಕ್ತಿಯು ನಿಂತುಕೊಂಡಿರುವಾಗಲೇ ಬೀಳುವಂತಹ ಸ್ಥಿತಿ ಬರುತ್ತದೆ.
ರಕ್ತದಲ್ಲಿ ಕಡಿಮೆ ಶುಗರ್ (blood sugar level) ಇರುವ ಸ್ಥಿತಿಯನ್ನು, ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಹೈಪೊಗ್ಲೈಸೀಮಿಯಾ ಎಂದು ಕರೆಯಲಾಗುತ್ತೆ. ಈ ಪರಿಸ್ಥಿತಿಯಲ್ಲಿ, ರಕ್ತದಲ್ಲಿನ ಸಕ್ಕರೆಯ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆಯಾಗುತ್ತದೆ, ಇದರಿಂದಾಗಿ ರೋಗಿಯಲ್ಲಿ ವೀಕ್ ನೆಸ್, ತಲೆತಿರುಗುವಿಕೆ, ಹಸಿವು ಮತ್ತು ಬೆವರುವಿಕೆಯಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳಲಿವೆ. ಈ ರೋಗಲಕ್ಷಣಗಳು ಹೈಪೊಗ್ಲೈಸೀಮಿಯಾ ಹೊರತುಪಡಿಸಿ ಇತರ ಕಾಯಿಲೆಗಳಲ್ಲಿಯೂ ಕಂಡು ಬರುತ್ತೆ. ಆದರೆ ನೀವು ಕಡಿಮೆ ಸಕ್ಕರೆಯನ್ನು ಹೊಂದಿದ್ದರೆ ಈ ಲಕ್ಷಣಗಳೊಂದಿಗೆ ಹಲವು ಸಮಸ್ಯೆಗಳು ನಿಮ್ಮನ್ನ ಕಾಡೊದಕ್ಕೆ ಆರಂಭವಾಗುತ್ತೆ.
ನೀವು ಕಡಿಮೆ ಬ್ಲಡ್ ಶುಗರ್ ಸಮಸ್ಯೆ (Hypoglycemia) ಹೊಂದಿದ್ದರೆ, ನಿಮ್ಮ ಆಹಾರದ ಬಗ್ಗೆ ನೀವು ವಿಶೇಷ ಕಾಳಜಿ ವಹಿಸಬೇಕು. ನೈಸರ್ಗಿಕವಾಗಿ ಕಂಡುಬರುವ ಗ್ಲುಕೋಸ್ ಹೊಂದಿರುವ ಆಹಾರಗಳನ್ನು ಆಯ್ಕೆ ಮಾಡಬೇಕು. ಈ ಸಮಸ್ಯೆಯ ವಿರುದ್ಧ ಹೋರಾಡಲು ಸಹಾಯ ಮಾಡುವ ಕೆಲವು ಆಹಾರಗಳ ಬಗ್ಗೆ ಇಲ್ಲಿವೆ ಒಂದಿಷ್ಟು ಮಾಹಿತಿ, ಈ ಆಹಾರಗಳನ್ನು ಸೇವಿಸಿ.
ಫೈಬರ್ ಭರಿತ ಹಣ್ಣುಗಳು ಮತ್ತು ತರಕಾರಿಗಳು: ಫೈಬರ್ ಭರಿತ ಆಹಾರಗಳು ರಕ್ತದಲ್ಲಿನ ಸಕ್ಕರೆಯನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಸರಿಯಾದ ಪ್ರಮಾಣದ ಫೈಬರ್ ತೆಗೆದುಕೊಳ್ಳುವುದು ನಿಮ್ಮ ಜೀರ್ಣಕಾರಿ ಸಮಸ್ಯೆಗಳನ್ನು (digestion system) ನಿವಾರಿಸುತ್ತದೆ. ಸೇಬು, ಮಾವಿನಹಣ್ಣು, ಬೆರ್ರಿ, ಬ್ರೊಕೋಲಿ ಮತ್ತು ಹಸಿರು ಎಲೆಗಳ ತರಕಾರಿಗಳನ್ನು ತಿನ್ನಬೇಕು.
ಅನ್ನ: ನಿಮಗೆ ಬೊಜ್ಜು ಸಮಸ್ಯೆ ಇಲ್ಲದಿದ್ದರೆ, ನಿಮ್ಮ ಆಹಾರದಲ್ಲಿ ಪಿಷ್ಟವನ್ನು ಹೊರತೆಗೆಯದೆ ಬಿಳಿ ಅನ್ನ (white rice) ಸೇವಿಸಬಹುದು. ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವುದಿಲ್ಲ. ಇದರಲ್ಲಿ, ನೀವು ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಎರಡನ್ನೂ ಪಡೆಯುತ್ತೀರಿ, ಇದು ಸಕ್ಕರೆ ಬ್ಯಾಲೆನ್ಸ್ ಆಗಿರಲು ಸಹಾಯ ಮಾಡುತ್ತೆ.
ಗ್ಲೂಕೋಸ್ ಹಣ್ಣುಗಳು: ನೀವು ಕಡಿಮೆ ಸಕ್ಕರೆ ಸಮಸ್ಯೆಗಳನ್ನು ಹೊಂದಿದ್ದರೆ, ನೈಸರ್ಗಿಕವಾಗಿ ಹೆಚ್ಚಿನ ಗ್ಲೂಕೋಸ್ ಹೊಂದಿರುವ ಹಣ್ಣುಗಳನ್ನು ಸೇವಿಸಬೇಕು. ಇದರಲ್ಲಿರುವ ನೈಸರ್ಗಿಕ ಸಕ್ಕರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ. ಇದಕ್ಕಾಗಿ, ನೀವು ದ್ರಾಕ್ಷಿ, ಸೇಬು, ಬಾಳೆಹಣ್ಣು ಮತ್ತು ಮಾವಿನಹಣ್ಣುಗಳಂತಹ ಹಣ್ಣುಗಳನ್ನು ತಿನ್ನಬೇಕು.
ನಟ್ಸ್ ಮತ್ತು ಸೀಡ್ಸ್ (Nuts and seeds): ನಟ್ಸ್ ಮತ್ತು ಸೀಡ್ಸ್ ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಇದಕ್ಕಾಗಿ, ನೀವು ಬಾದಾಮಿ, ವಾಲ್ನಟ್, ಚಿಯಾ ಸೀಡ್ಸ್ ಮತ್ತು ಅಗಸೆ ಬೀಜಗಳು ಇತ್ಯಾದಿಗಳನ್ನು ತಿನ್ನಬೇಕು. ಇದರಿಂದ ಬ್ಲಡ್ ಶುಗರ್ ಲೆವೆಲ್ ಸರಿಯಾಗಿರುತ್ತೆ.
ಪ್ರೋಟೀನ್ ಭರಿತ ಆಹಾರ: ನೀವು ಕಡಿಮೆ ಸಕ್ಕರೆ ಸಮಸ್ಯೆಗಳನ್ನು ಹೊಂದಿದ್ದರೆ, ಹೆಚ್ಚಿನ ಪ್ರೋಟೀನ್ ಆಹಾರವನ್ನು ತೆಗೆದುಕೊಳ್ಳಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತೆ. ಮೊಟ್ಟೆ, ಚಿಕನ್, ಮೀನು, ಬೇಳೆಕಾಳುಗಳು ಮತ್ತು ಬೀನ್ಸ್ ಇದಕ್ಕೆ ಉತ್ತಮ ಮೂಲಗಳಾಗಿವೆ.