ಹೈಯರ್ ಸ್ಟಡೀಸ್ ಮಾಡುವವರು ದೀರ್ಘಕಾಲ ಬದುಕ್ತಾರಂತೆ ಹೌದಾ?
ಓದುವುದು ಮತ್ತು ಬರೆಯುವುದು ನಮಗೆ ತುಂಬಾನೆ ಮುಖ್ಯ ಅಲ್ವಾ? ಬಾಲ್ಯದಲ್ಲಿಯೂ, ಅನೇಕ ಬಾರಿ ನಮ್ಮ ಪೋಷಕರು ಸಹ ಚೆನ್ನಾಗಿ ಓದು ಅಂಥ ಬೈತಿದ್ರು ಅಲ್ವಾ?. ನಾವು ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೂ, ಸದ್ಯಕ್ಕೆ ಈ ಅಧ್ಯಯನದಲ್ಲಿ ಕಂಡು ಬಂದ ಒಂದು ಹೊಸ ವಿಷ್ಯದ ಬಗ್ಗೆ ತಿಳಿಯೋಣ.
ಶಿಕ್ಷಣ (education) ಎಷ್ಟು ಮುಖ್ಯ ಎಂದು ನಮ್ಮ ಪೋಷಕರು ಮತ್ತು ಹಿರಿಯರು ಬಾಲ್ಯದಿಂದಲೂ ನಮಗೆ ಹೇಳುತ್ತಿದ್ದಾರೆ.ನಾವಂತೂ ಬಾಲ್ಯದಲ್ಲಿ ಅವರ ಬುದ್ಧಿಮಾತನ್ನು ತಲೆಗೆ ಹಾಕುತ್ತಲೆ ಇರಲಿಲ್ಲ ಅಲ್ವಾ? ಆದರೆ ಜೀವನದಲ್ಲಿ ಶಿಕ್ಷಣ ತುಂಬಾನೆ ಮುಖ್ಯ ನಿಜಾ, ಇದರಿಂದ ನಮ್ಮ ಜೀವನವನ್ನು ರೂಪಿಸಬಹುದು. ಅಷ್ಟೇ ಅಲ್ಲ ಯೌವ್ವನ (young) ದೀರ್ಘವಾಗಿರುತ್ತೆ ಅಂತೆ.
ವಿಷ್ಯ ಎನಂದ್ರೆ ನೀವು ಚೆನ್ನಾಗಿ ವಿದ್ಯಾಭ್ಯಾಸ ಮಾಡಿದ್ರೆ, ಉತ್ತಮ ಕೆಲಸ ಗಿಟ್ಟಿಸಿಕೊಳ್ತೀರಿ, ಉತ್ತಮ ಕೆಲಸವನ್ನು ಪಡೆದರೆ, ಹೆಚ್ಚು ಹಣವನ್ನು ಗಳಿಸುತ್ತೀರಿ, ಇದರಿಂದ ಉತ್ತಮ ಜೀವನ ಮತ್ತು ಉತ್ತಮ ಆಹಾರ (Good Food) ಪಡೆಯಲು ಸಾಧ್ಯವಾಗುತ್ತದೆ. ಆದರೆ ಹೆಚ್ಚಿನ ಶಿಕ್ಷಣವನ್ನು ಪಡೆಯೋದ್ರಿಂದ ನೀವು ದೀರ್ಘಕಾಲ ಯಂಗ್ (long live) ಆಗಿರೋದು ಸಾಧ್ಯ ಅಂತ ಅಧ್ಯಯನವೊಂದರಲ್ಲಿ ತಿಳಿದು ಬಂದಿದೆ.
ಈ ಅಧ್ಯಯನ ಏನು ಹೇಳುತ್ತೆ?
ಇತ್ತೀಚೆಗೆ, ನ್ಯೂಯಾರ್ಕ್ನ ಕೊಲಂಬಿಯಾ ವಿಶ್ವವಿದ್ಯಾಲಯದ ಮೇಲ್ಮನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಒಂದು ಅಧ್ಯಯನವನ್ನು ಮಾಡಿದೆ, ಇದು ಉನ್ನತ ಶಿಕ್ಷಣವು ನಮ್ಮ ವಯಸ್ಸಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿದೆ. ಈ ಅಧ್ಯಯನವನ್ನು ನಡೆಸಲು, ಅವರು 1948 ರಿಂದ ಮೂರು ತಲೆಮಾರುಗಳಿಂದ ಸಾವಿರಾರು ಜನರ ಡೇಟಾವನ್ನು ಸಂಗ್ರಹಿಸಿದರು. ಈ ಡೇಟಾವನ್ನು ಪಡೆಯಲು, ಆ ಭಾಗವಹಿಸುವವರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಯಿತು. ಆ ಜನರ ಜೀನೋಮಿಕ್ ಡೇಟಾವನ್ನು ರಕ್ತದ ಸಹಾಯದಿಂದ ವಿಶ್ಲೇಷಿಸಲಾಯಿತು.
ಈ ಡೇಟಾವನ್ನು ವಿಶ್ಲೇಷಿಸಲು, ವಿಜ್ಞಾನಿಗಳು ಕೊಲಂಬಿಯಾ ಸಂಶೋಧಕರು ರಚಿಸಿದ ಡ್ಯುನೆಡಿನ್ಪೇಸ್ ಅಲ್ಗಾರಿದಮ್ ಸಾಧನವನ್ನು ಬಳಸಿದರು. ಅವರು ಈ ಉಪಕರಣದ ಸಹಾಯದಿಂದ ಬಿಳಿ ರಕ್ತ ಕಣಗಳಲ್ಲಿ ಡಿಎನ್ಎ ಮೂಲಕ ವಯಸ್ಸಾದ ವೇಗವನ್ನು ಅಳೆಯುತ್ತಾರೆ. ಈ ಉಪಕರಣದ ಸಹಾಯದಿಂದ, ಆನುವಂಶಿಕ ಮಟ್ಟದಲ್ಲಿ ವ್ಯಕ್ತಿಯು ಎಷ್ಟು ವೇಗವಾಗಿ ವಯಸ್ಸಾಗುತ್ತಿದ್ದಾನೆ ಎಂಬುದನ್ನು ಕಂಡುಹಿಡಿಯಬಹುದು.
ಅಧ್ಯಯನದ ಫಲಿತಾಂಶವೇನು?
ಭಾಗವಹಿಸಿದ ಜನರ ರಕ್ತದ ಮಾದರಿಗಳನ್ನು ವಿಶ್ಲೇಷಿಸಿದ ನಂತರ, ಉನ್ನತ ಶಿಕ್ಷಣವನ್ನು ತೆಗೆದುಕೊಂಡವರು ಹೆಚ್ಚು ಕಾಲ ಬದುಕುತ್ತಾರೆ ಮತ್ತು ಹೆಚ್ಚು ಸಮಯದವರೆಗೆ ಯಂಗ್ ಆಗಿ ಉಳಿಯುತ್ತಾರೆ ಎಂದು ಕಂಡುಬಂದಿದೆ. ಈ ಅಧ್ಯಯನವನ್ನು ಜಾಮಾ ನೆಟ್ವರ್ಕ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಉನ್ನತ ಶಿಕ್ಷಣವು ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಆದಾಗ್ಯೂ, ಉನ್ನತ ಶಿಕ್ಷಣವು ದೀರ್ಘಾಯುಷ್ಯಕ್ಕೆ ಹೇಗೆ ಸಂಬಂಧಿಸಿದೆ ಎಂಬುದು ಇನ್ನೂ ಅರ್ಥವಾಗಿಲ್ಲ. ಉನ್ನತ ಶಿಕ್ಷಣವು ಸಾವಿನ ಅಪಾಯವನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬುದಕ್ಕೆ ಯಾವುದೇ ದೃಢವಾದ ಕಾರಣಗಳಿಲ್ಲ. ಈ ಬಗ್ಗೆ ಮೇಲ್ಮನ್ ಶಾಲೆಯ ಸಾಂಕ್ರಾಮಿಕ ರೋಗಶಾಸ್ತ್ರದ ಪ್ರಾಧ್ಯಾಪಕ ಪ್ರೊ. ಡೇನಿಯಲ್ ಬೆಲ್ಸ್ಕಿ "ಉನ್ನತ ಶಿಕ್ಷಣವನ್ನು ಹೊಂದಿರುವ ಜನರು ಹೆಚ್ಚು ಕಾಲ ಬದುಕುತ್ತಾರೆ ಅನ್ನೋದು ಬಹಳ ಹಿಂದೆಯೇ ತಿಳಿದು ಬಂದಿದೆ, ಆದರೆ ಅದು ಏಕೆ ಎಂದು ಸಂಪೂರ್ಣವಾಗಿ ತಿಳಿದುಕೊಳ್ಳುವಲ್ಲಿ ಇನ್ನೂ ಸಾಕಷ್ಟು ಸವಾಲುಗಳಿವೆ" ಎಂದು ಹೇಳಿದರು.