MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • Natural Hair-dye: ಟೀ ಪೌಡರ್​, ಮೊಟ್ಟೆ ಇದ್ರೆ ಸಾಕು- ಕೆಮಿಕಲ್​ ಹೇರ್​ಡೈಗೆ ಬೈಬೈ- ನಟಿಯ ಕಪ್ಪು ಕೂದಲ ರಹಸ್ಯ

Natural Hair-dye: ಟೀ ಪೌಡರ್​, ಮೊಟ್ಟೆ ಇದ್ರೆ ಸಾಕು- ಕೆಮಿಕಲ್​ ಹೇರ್​ಡೈಗೆ ಬೈಬೈ- ನಟಿಯ ಕಪ್ಪು ಕೂದಲ ರಹಸ್ಯ

ರಾಸಾಯನಿಕಯುಕ್ತ ಹೇರ್​ಡೈ ಬಳಸಿ ಕ್ಯಾನ್ಸರ್​ನಂಥ ಮಾರಕ ರೋಗಗಳಿಗೆ ತುತ್ತಾಗೊ ಬದಲು ಮನೆಯಲ್ಲಿ ಈಸಿಯಾಗಿ ತಯಾರಿಸಿ ಈ ಹೇರ್​ಡೈ. ನಟಿ ಭಾರ್ತಿ ಸಿಂಗ್​ ಸಲಹೆ ಕೇಳಿ... 

2 Min read
Suchethana D
Published : Aug 11 2025, 10:16 PM IST
Share this Photo Gallery
  • FB
  • TW
  • Linkdin
  • Whatsapp
18
ಚಿಕ್ಕ ವಯಸ್ಸಿನಲ್ಲಿಯೇ ನೆರೆ ಕೂದಲು
Image Credit : Istock

ಚಿಕ್ಕ ವಯಸ್ಸಿನಲ್ಲಿಯೇ ನೆರೆ ಕೂದಲು

ಮುಂಚೆಲ್ಲಾ ಒಂದು ವಯಸ್ಸು ದಾಟಿದ ಮೇಲೆ ಕೂದಲು ಬೆಳ್ಳಗಾಗುತ್ತಿತ್ತು. ಅದು ವಯಸ್ಸಾಗಿರುವ ಲಕ್ಷಣವಾಗಿತ್ತು. ಆದರೆ ಇಂದು ಚಿಕ್ಕಮಕ್ಕಳ ಕೂದಲೂ ಬೆಳ್ಳಗಾಗುತ್ತಿವೆ. ಇವತ್ತಿನ ಜೀವನ ಕ್ರಮ, ಆಹಾರ ಪದ್ಧತಿ, ಪ್ರದೂಷಣೆ, ಮೇಲಾಗಿ ಒತ್ತಡ... ಇನ್ನು ಏನೇನೋ ಕಾರಣಗಳು ಇವುಗಳಿಗೆ ಇವೆ. 20-25 ವಯಸ್ಸು ದಾಟುತ್ತಿದ್ದಂತೆಯೇ ಕೂದಲು ಬೆಳ್ಳಗಾಗುವುದು ಮಾಮೂಲಾಗಿಬಿಟ್ಟಿದೆ. ಇದೇ ಕಾರಣಕ್ಕೆ ಹಲವರಿಗೆ ಮದುವೆ ಕೂಡ ಆಗುತ್ತಿಲ್ಲವಾದರೆ, ಮತ್ತೆ ಕೆಲವರು ಖಿನ್ನತೆಗೆ ಜಾರುವುದು ಇದೆ. ಇದೇ ಕಾರಣಕ್ಕೆ ಹೇರ್​ಡೈ ಮೊರೆ ಹೋಗುವುದು ಸರ್ವೇ ಸಾಮಾನ್ಯ. ಪ್ರತಿ ಮನೆಯಲ್ಲಿ ಒಬ್ಬರಾದರೂ ವ್ಯಕ್ತಿ ಹೇರ್​ಡೈ ಬಳಸಿಯೇ ಬಳಸುತ್ತಾರೆ ಎನ್ನುತ್ತದೆ ಅಧ್ಯಯನ. ಆದರೆ ನಿಮಗೆ ಗೊತ್ತೆ? ಹೇರ್​ಡೈ ಅತಿಯಾದ ಬಳಕೆಯಿಂದ ಪ್ರಾಣಕ್ಕೂ ಅಪಾಯ ಆಗಬಹುದು ಎಂದು ಇದಾಗಲೇ ಹಲವು ಅಧ್ಯಯನಗಳಿಂದ ಸಾಬೀತಾಗಿವೆ.

28
ಬಿಳಿ ಕೂದಲಿನಿಂದ ಹಿಂಸೆ
Image Credit : Istock

ಬಿಳಿ ಕೂದಲಿನಿಂದ ಹಿಂಸೆ

ಕೂದಲು ಬಿಳಿಯಾದರೆ ಅದೇನೋ ಹಿಂಸೆ ಎನ್ನುವ ರೀತಿ ಹಲವರಿಗೆ ಅನ್ನಿಸುವುದು ಉಂಟು. ಇದು ನಮ್ಮ ಜೀನ್ಸ್​, ಆಹಾರ, ವಾತಾವರಣ, ಲೈಫ್​ಸ್ಟೈಲ್​, ಬಳಸುವ ಕಲುಷಿತ ನೀರು ಎಲ್ಲದಕ್ಕೂ ಸೇರಿದ್ದರೂ ಕೂದಲು ಬಿಳಿ ಎನ್ನುವುದು ಹಲವರಿಗೆ ನುಂಗಲಾಗದ ತುತ್ತು. ಇದೇ ಕಾರಣಕ್ಕೆ ಹೇರ್​ಡೈ ಇಂದು ಲಕ್ಷಾಂತರ ಕೋಟಿ ವ್ಯವಹಾರವನ್ನು ಕುದುರಿಸಿಕೊಳ್ಳುತ್ತಿದೆ. ಇದರ ಜಾಹೀರಾತಿಗಾಗಿ ಕೋಟಿ ಕೋಟಿ ಪಡೆದು ಸ್ಟಾರ್​ ನಟರೇ ಬರುತ್ತಾರೆ.

Related Articles

Related image1
BP- Heart Attack ಕಡಿಮೆ ಮಾಡಲು ಸುಲಭದ ಜ್ಯೂಸ್​ ಹೇಳಿದ ಖ್ಯಾತ ಆಯುರ್ವೇದ ವೈದ್ಯ
Related image2
ಪ್ರಶ್ನೆಗಳಿಗೆ ಉತ್ತರಿಸಲು ಕೃತಕ ಬುದ್ಧಿಮತ್ತೆಗೆ ನೀರೇ ಆಹಾರ! ಭೀಕರ ಜಲಕ್ಷಾಮದತ್ತ ಜಗತ್ತು...
38
ಜನರನ್ನು ಮರುಳು ಮಾಡುವ ಜಾಹೀರಾತುಗಳು
Image Credit : freepik

ಜನರನ್ನು ಮರುಳು ಮಾಡುವ ಜಾಹೀರಾತುಗಳು

ಹೇರ್​ ಕಲರ್​ನಿಂದ ಕ್ಯಾನ್ಸರ್​ ಬರುತ್ತಿವೆ. ಬ್ಲಡ್​ ಕ್ಯಾನ್ಸರ್ ಹೆಚ್ಚುತ್ತಿದೆ ಎನ್ನಲಾಗಿದೆ. ಚರ್ಮದ ಕ್ಯಾನ್ಸರ್​, ಗರ್ಭಾಶಯದ ಕ್ಯಾನ್ಸರ್​, ಸ್ತನ ಕ್ಯಾನ್ಸರ್​ಗಳಿಗೂ ಇದು ಕಾರಣವಾಗಬಲ್ಲುದು ಎಂದು ತಜ್ಞರು ಇದಾಗಲೇ ಹೇಳಿದ್ದಾರೆ. ಚರ್ಮದ ಸಮಸ್ಯೆ ಮಾತ್ರವಲ್ಲದೇ ಹೇರ್​ ಡೈಯಲ್ಲಿ ಇರುವ ರಾಸಾಯನಿಕಗಳಿಂದ ಮಾನಸಿಕ ರೋಗಗಳೂ ಬರುತ್ತಿವೆ ಎನ್ನಲಾಗಿದೆ.

48
ಜನರನ್ನು ಮರುಳು ಮಾಡುವ ಜಾಹೀರಾತುಗಳು
Image Credit : stockPhoto

ಜನರನ್ನು ಮರುಳು ಮಾಡುವ ಜಾಹೀರಾತುಗಳು

ನ್ಯಾಚುಲರ್​, ಅಲೋವಿರಾ... ಅದೂ ಇದೂ ಎಂದೆಲ್ಲಾ ಲೇಬಲ್​ ಕೊಟ್ಟು ಸ್ಟಾರ್​ ನಟ-ನಟಿಯರನ್ನು ಬಳಸಿಕೊಂಡು ಜನರನ್ನು ಮರುಳು ಮಾಡಲಾಗುತ್ತಿದೆ. ಆದರೆ ಇಂದು ವಿಪರೀತವಾಗಿ ಹೆಚ್ಚುತ್ತಿರುವ ಕ್ಯಾನ್ಸರ್​ಗೆ ಈ ಕೆಮಿಕಲ್​ ಹೇರ್​ಡೈ ಕೂಡ ಕಾರಣ ಎನ್ನುವುದು ಆಘಾತಕರಾಗಿ ಅಂಶವನ್ನು ಸಂಶೋಧಕರೇ ಸಾರಿ ಸಾರಿ ಹೇಳಿದ್ದಾರೆ. ಅದರಲ್ಲಿಯೂ ಮಹಿಳೆಯರಿಗೆ ಬ್ರೆಸ್ಟ್​ ಕ್ಯಾನ್ಸರ್​ ಹೆಚ್ಚುವುದಕ್ಕೆ ಇದರ ಪಾಲು ಕೂಡ ಬಹು ದೊಡ್ಡದಿದೆ ಎನ್ನಲಾಗುತ್ತಿದೆ. ಆದರೆ ಹೇರ್​ಡೈ ಅಂತೂ ಬೇಕೇ ಬೇಕು, ಅದು ಇಲ್ಲದಿದ್ದರೂ ಜೀವನ ಅಸಾಧ್ಯ ಎನ್ನುವಂತಾಗಿದೆ. ಈ ಬಗ್ಗೆ ಇದಾಗಲೇ ಕೆಲವು ಆಯುರ್ವೇದ ತಜ್ಞರು ಸುಲಭದ ಮಾರ್ಗಗಳನ್ನು ತಿಳಿಸಿದ್ದಾರೆ.

58
ನಟಿ ಭಾರ್ತಿ ಸಿಂಗ್​ ಕೂದಲ ರಹಸ್ಯ
Image Credit : stockPhoto

ನಟಿ ಭಾರ್ತಿ ಸಿಂಗ್​ ಕೂದಲ ರಹಸ್ಯ

ಇದೀಗ, ಕಮೀಡಿಯನ್​ ಭಾರತಿ ಸಿಂಗ್​ ಅವರು ತಾವು ಮನೆಯಲ್ಲಿಯೇ ಬಳಸುವ ಅದರಲ್ಲಿಯೂ ಹೆಚ್ಚಾಗಿ ತಮ್ಮ ರಾಜ್ಯ ಪಂಜಾಬಿಗರು ಮನೆಯಲ್ಲಿಯೇ ತಯಾರಿಸುವ ಹೇರ್​ಡೈ ಬಗ್ಗೆ ಮಾಹಿತಿ ನೀಡಿದ್ದಾರೆ. ಜಬ್ಲೇ ನೂರ್ ಎನ್ನುವ ಪುಟದಲ್ಲಿ ಇದನ್ನು ಶೇರ್​ ಮಾಡಲಾಗಿದೆ. ತಾವು ಯಾವುದೇ ಕೆಮಿಕಲ್​ ಇರುವ ಹೇರ್​ಡೈ ಬಳಸುವುದಿಲ್ಲ ಎಂದಿರುವ ನಟಿ ಅದೇ ರೀತಿ ಹಲವರು ಮನೆಯಲ್ಲಿಯೇ ತಯಾರಿಸುವ ಹೇರ್​ಡೈ ಬಗ್ಗೆ ವಿವರಣೆ ನೀಡಿದ್ದಾರೆ.

68
ಹೆನ್ನಾ ಮಿಕ್ಸ್ ನಿಂದ ಕಪ್ಪು ಕೂದಲು
Image Credit : stockPhoto

ಹೆನ್ನಾ ಮಿಕ್ಸ್ ನಿಂದ ಕಪ್ಪು ಕೂದಲು

ತಮ್ಮ ಮನೆ ಸೇರಿದಂತೆ ಪಂಜಾಬ್​ನಲ್ಲಿ ಮೊದಲಿನಿಂದಲೂ ಎಲ್ಲರೂ ಹೆನ್ನಾ ಮಿಕ್ಸ್ ಬಳಸುತ್ತಾರೆ. ತಾವೂ ಇದನ್ನೇ ಬಳಸುವುದು. ಇದರಿಂದಾಗಿ ಹೇರ್ ಡೈ ಮಾಡುವ ಅಗತ್ಯವೇ ಬಂದಿಲ್ಲ ಎಂದಿರುವ ನಟಿ, ಇದರ ಹೇರ್ ಪ್ಯಾಕ್ ತಯಾರಿಸುವ ಬಗ್ಗೆ ಹಾಗೂ ಮಿಕ್ಸಿಂಗ್​ ಬಗ್ಗೆ ವಿವರಣೆ ನೀಡಿದ್ದಾರೆ.

78
ಕಪ್ಪು ಕೂದಲಿನ ರಹಸ್ಯ
Image Credit : stockPhoto

ಕಪ್ಪು ಕೂದಲಿನ ರಹಸ್ಯ

ಹೆನ್ನಾ ಮಿಕ್ಸ್ ತಯಾರಿಸಲು ರಾತ್ರಿ ಮಲಗುವ ಮೊದಲು ಕಬ್ಬಿಣದ ಬಾಣಲಿಯಲ್ಲಿ ಮೆಹಂದಿ ಪುಡಿ ಹಾಕಿ ಅದನ್ನು ಟೀ ಡಿಕಾಕ್ಷನ್ ಜೊತೆ ಬೆರೆಸಿ ಅಲೋವೇರಾ ಜೆಲ್, ಮೊಟ್ಟೆಯ ಬಿಳಿ ಭಾಗವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಇಡಬೇಕು. ಮರುದಿನ ಇದನ್ನು ಕೂದಲಿಗೆ ಹಚ್ಚಿ 2 ಗಂಟೆ ಬಳಿಕ ಹೇರ್ ವಾಶ್ ಮಾಡಬೇಕು ಎಂದಿದ್ದಾರೆ. 

88
ಕಪ್ಪು ಕೂದಲಿನ ರಹಸ್ಯ
Image Credit : stockPhoto

ಕಪ್ಪು ಕೂದಲಿನ ರಹಸ್ಯ

ಇದೇ ತಮ್ಮ ಕಪ್ಪು ಕೂದಲಿನ ರಹಸ್ಯ ಎಂದೂ ಹೇಳಿದ್ದಾರೆ ನಟಿ. ಅಂದಹಾಗೆ ಹೆನ್ನಾ ಪೌಡರ್​ನಲ್ಲಿಯೂ ಈಗ ಕೆಮಿಕಲ್​ ಮಿಕ್ಸ್ ಮಾಡುವುದು ಮಾಮೂಲಾಗಿದೆ. ಆದ್ದರಿಂದ ಗಂಥಿಗೆ ಅಂಗಡಿಯಲ್ಲಿ ಇದನ್ನು ಕೊಂಡು ತಂದರೆ ಒಳಿತು.

 
 
 
 
View this post on Instagram
 
 
 
 
 
 
 
 
 
 
 

A post shared by Fitness bestie (@fitnessbestie1412)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕೇಶವಿನ್ಯಾಸ
ಆರೋಗ್ಯ
ಫ್ಯಾಷನ್
ಮಹಿಳೆಯರು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved