Black Water: ಸೆಲೆಬ್ರಿಟಿಗಳು ಕುಡಿಯೋ ಈ ನೀರಿನ ವಿಶೇಷತೆ ತಿಳಿದ್ರೆ ನೀವೂ ಇದನ್ನೇ ಬಳಸ್ತೀರಿ
ಕಪ್ಪು ನೀರಿನ ಬಗ್ಗೆ ನೀವು ಎಲ್ಲಾದರೂ ಕೇಳಿದ್ದೀರಾ? ಇಲ್ವಾ? ಕಪ್ಪು ನೀರು ಎಂದರೆ ಕೆಸರು ನೀರು ಅಲ್ಲ, ಇದು ಕಪ್ಪಾದ ಆರೋಗ್ಯಯುತ ನೀರು. ಕಪ್ಪು ನೀರು ಈಗ ಕೆಲವು ಸಮಯದಿಂದ ಜನರಲ್ಲಿ ಭಾರಿ ಚರ್ಚೆಯ ವಿಷಯವಾಗಿದೆ. ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ತಾರೆಯರು ಕಪ್ಪು ನೀರನ್ನು ಕುಡಿಯುತ್ತಾರೆ, ಇದರಿಂದಾಗಿ ಅದರ ಜನಪ್ರಿಯತೆ ವೇಗವಾಗಿ ಹೆಚ್ಚುತ್ತಿದೆ. ಏನಿದು ಕಪ್ಪು ನೀರು? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ? ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ಕ್ರಿಕೆಟ್ ಮತ್ತು ಬಾಲಿವುಡ್ ಪ್ರಪಂಚದ ಎಲ್ಲಾ ತಾರೆಯರು ತಮ್ಮ ಆರೋಗ್ಯ ಮತ್ತು ಫಿಟ್ನೆಸ್ (health and fitness) ನಿಂದಾಗಿ ಯಾವಾಗಲೂ ಸದ್ದು ಮಾಡುತ್ತಲೇ ಇರುತ್ತಾರೆ. ಜನರು ಆಗಾಗ್ಗೆ ಸೆಲೆಬ್ರಿಟಿಗಳ ಆರೋಗ್ಯ ರಹಸ್ಯಗಳನ್ನು ಚರ್ಚಿಸುತ್ತಾರೆ, ಅಲ್ಲದೇ ಅವುಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಅವುಗಳನ್ನು ಫಾಲೋ ಮಾಡಲು ಇಷ್ಟಪಡ್ತಾರೆ. ನೀವು ಸಹ ಸೆಲೆಬ್ರಿಟಿಗಳ ಆಹಾರ ಕ್ರಮದ ಬಗ್ಗೆ ತಿಳಿಯಲು ಬಯಸಿದ್ದರೆ, ಇಲ್ಲಿದೆ ನಿಮ್ಮ ಫೆವರಿಟ್ ಸೆಲೆಬ್ರಿಟಿಗಳು ಕುಡಿಯುವಂತಹ ಕಪ್ಪು ನೀರಿನ ಬಗ್ಗೆ ಒಂದಿಷ್ಟು ಮಾಹಿತಿ.
ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಮನೆಯಲ್ಲಿಯೂ 'ಕಪ್ಪು ನೀರು' (black water) ಕುಡಿಯುತ್ತಾರೆ ಅನ್ನೋ ಮಾಹಿತಿ ಲಭ್ಯವಿದೆ ಅವರಷ್ಟೇ ಅಲ್ಲ ನಟಿಯರಾದ ಅನುಷ್ಕಾ ಶರ್ಮಾ, ಮಲೈಕಾ ಅರೋರಾ, ಶ್ರುತಿ ಹಾಸನ್ ಮತ್ತು ಚಲನಚಿತ್ರ ನಿರ್ದೇಶಕ ಕರಣ್ ಜೋಹರ್ ಕೂಡ 'ಕಪ್ಪು ನೀರು' ಕುಡಿಯೋದಾಗಿ ಹೇಳಿಕೊಂಡಿದ್ದಾರೆ.
ಸೆಲೆಬ್ರಿಟಿಗಳು ಇದನ್ನು ಹೆಚ್ಚಾಗಿ ಕುಡಿಯೋದ್ರಿಂದ, ಕಳೆದ ಕೆಲವು ಸಮಯದಿಂದ, ಜನರು ಕಪ್ಪು ನೀರಿನ ಬಗ್ಗೆ ಸಾಕಷ್ಟು ಹುಡುಕುತ್ತಿದ್ದಾರೆ. ಕಪ್ಪು ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು (health benefits) ಎಂದು ಹೆಚ್ಚಿನ ಜನ ತಿಳಿಯಲು ಬಯಸ್ತಾರೆ. ಇಂದು ನಾವು ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿಸುತ್ತೇವೆ.
ಕಪ್ಪು ನೀರು ಎಂದರೇನು?
ಮೊದಲನೆಯದಾಗಿ, ಕಪ್ಪು ನೀರು ಎಂದರೇನು ಎಂದು ಅರ್ಥಮಾಡಿಕೊಳ್ಳಬೇಕು. ವರದಿಯ ಪ್ರಕಾರ, ಕಪ್ಪು ನೀರು ಕ್ಷಾರೀಯ ಆಧಾರಿತ (Alkaline Based Water) ನೀರಾಗಿದ್ದು, ಇದರ ಪಿಎಚ್ ಮಟ್ಟವು ಸಾಮಾನ್ಯ ಕುಡಿಯುವ ನೀರಿಗಿಂತ ಹೆಚ್ಚಾಗಿದೆ. ಇದನ್ನು ಕುಡಿಯುವುದರಿಂದ ದೇಹದ ಆಮ್ಲವನ್ನು ತಟಸ್ಥಗೊಳಿಸುತ್ತದೆ ಮತ್ತು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ನಂಬಲಾಗಿದೆ.
ಸಾಮಾನ್ಯ ಕುಡಿಯುವ ನೀರಿನ ಪಿಎಚ್ ಮಟ್ಟವು 7 ಆಗಿದ್ದರೆ, ಕಪ್ಪು ನೀರಿನ ಪಿಎಚ್ ಮಟ್ಟವು 8-9 ಆಗಿದೆ. ಇದು ಅನೇಕ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತದೆ, ಸಾದಾ ನೀರಿಗೆ ಹೋಲಿಸಿದರೆ ಇದು ಬೆಸ್ಟ್ ಆಗಿದೆ. ಇದು ನೈಸರ್ಗಿಕವಾಗಿದೆ ಮತ್ತು ಇಲೆಕ್ಟ್ರೋಲಿಸೀಸ್ ಪ್ರೋಸೆಸ್ ನಿಂದ ಸಹ ತಯಾರಿಸಲಾಗುತ್ತದೆ.
ಕಪ್ಪು ನೀರಿನ 5 ಆರೋಗ್ಯ ಪ್ರಯೋಜನಗಳು
ವರದಿಯ ಪ್ರಕಾರ, ಕಪ್ಪು ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಈ ನೀರು ಗುಡ್ ಗಟ್ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಕ್ಷಾರೀಯ ನೀರಿನ pH ಮಟ್ಟವು ಹೆಚ್ಚಾಗಿರುತ್ತದೆ, ಇದು ದೇಹದಲ್ಲಿ ಉಂಟಾಗುವ ಹೆಚ್ಚುವರಿ ಆಮ್ಲವನ್ನು ತಟಸ್ಥಗೊಳಿಸುತ್ತದೆ ಮತ್ತು ಆಮ್ಲೀಯತೆಯ ಸಮಸ್ಯೆಯನ್ನು ನಿವಾರಿಸುತ್ತದೆ.
ಚರ್ಮವನ್ನು ಸುಂದರವಾಗಿಸುತ್ತದೆ: ಕಪ್ಪು ನೀರನ್ನು ಕುಡಿಯೋದ್ರಿಂದ ಚರ್ಮದಲ್ಲಿ ಮೆಲನಿನ್ ನ ಸಾಂದ್ರತೆ ಕಡಿಮೆಯಾಗುತ್ತದೆ ಮತ್ತು ಚರ್ಮದ ಬಣ್ಣ (skin color) ಹಗುರವಾಗುತ್ತದೆ. ಕಪ್ಪು ನೀರನ್ನು ಕುಡಿಯೋದ್ರಿಂದ ಮೊಡವೆ ಮತ್ತು ವರ್ಣದ್ರವ್ಯದ ಸಮಸ್ಯೆಯನ್ನು ನಿವಾರಿಸಬಹುದು. ಇದನ್ನು ಸೇವಿಸೋದ್ರಿಂದ, ಚರ್ಮವು ಹೊಳೆಯುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ರೋಗಗಳ ವಿರುದ್ಧ ಹೋರಾಡಲು ನಮ್ಮ ದೇಹಕ್ಕೆ ಬಲವಾದ ರೋಗನಿರೋಧಕ ಶಕ್ತಿಯ ಅಗತ್ಯವಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿಯೂ ರೋಗನಿರೋಧಕ ಶಕ್ತಿಯು ಅತಿದೊಡ್ಡ ಅಸ್ತ್ರವೆಂದು ಸಾಬೀತಾಗಿದೆ. ಕಪ್ಪು ನೀರು ನಮ್ಮ ರೋಗನಿರೋಧಕ ಶಕ್ತಿಯನ್ನು (immunity power) ಹೆಚ್ಚಿಸುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಅನೇಕ ಸಮಸ್ಯೆಗಳಿಂದ ರಕ್ಷಿಸುತ್ತವೆ.
ಫರ್ಟಿಲಿಟಿ ಸಮಸ್ಯೆಗೆ ಪರಿಹಾರ: ಕಪ್ಪು ನೀರಿನಲ್ಲಿ ಹೆಚ್ಚಿನ ಪಿಎಚ್ ಮಟ್ಟ ಇರುತ್ತದೆ, ಇದು ದೇಹದಲ್ಲಿ ರೂಪುಗೊಂಡ ಆಮ್ಲವನ್ನು ತಟಸ್ಥಗೊಳಿಸುತ್ತದೆ. ಅಲ್ಲದೇ ಫಲವತ್ತತೆಯನ್ನು (fertility level) ಸುಧಾರಿಸುತ್ತದೆ ಮತ್ತು ಮಹಿಳೆಯರಿಗೆ ಗರ್ಭಧಾರಣೆಯನ್ನು ಸುಲಭಗೊಳಿಸುತ್ತೆ. ಕ್ಷಾರೀಯ ನೀರು ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸುತ್ತದೆ.
ಆಂಟಿ ಏಜಿಂಗ್: ಕಪ್ಪು ನೀರಿನಲ್ಲಿ ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟ್ ಅಂಶಗಳಿವೆ. ಇದನ್ನು ಸೇವಿಸುವುದರಿಂದ, ವೃದ್ಧಾಪ್ಯದ ಪರಿಣಾಮವು ಮಧ್ಯವಯಸ್ಕ ಮತ್ತು ವಯಸ್ಸಾದ ಜನರ ಮೇಲೆ ಕಡಿಮೆ ಗೋಚರಿಸುತ್ತದೆ. ಅದರ ಆಂಟಿ-ಏಜಿಂಗ್ (anti aging) ಗುಣಲಕ್ಷಣದಿಂದಾಗಿ, ಅನೇಕ ಸೆಲೆಬ್ರಿಟಿಗಳು ಈ ನೀರನ್ನು ಕುಡಿಯಲು ಇಷ್ಟಪಡುತ್ತಾರೆ. ಇದನ್ನು ಕುಡಿಯುವುದರಿಂದ ದೀರ್ಘಕಾಲ ನೀವು ಯಂಗ್ ಆಗಿರಬಹುದು.