ದಿನಾ ಮೌತ್ ವಾಶ್ ಬಳಸೋದ್ರಿಂದ ಕ್ಯಾನ್ಸರ್ ಅಪಾಯ ಹೆಚ್ಚು
ಬಾಯಿಯ ನೈಮರ್ಲ್ಯದ ದೃಷ್ಟಿಯಿಂದ ನೋಡಿದಾಗ ಮೌತ್‌ವಾಶ್ ಉತ್ತಮ ಅಭ್ಯಾಸವಾಗಿದೆ. ಆದರೆ ಮೌತ್ ವಾಶ್ ನಲ್ಲಿ ಹಲವು ಬಗೆಯ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಇವುಗಳಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವ ಅಪಾಯವಿದೆ. ಆ ಬಗ್ಗೆ ತಿಳಿಯೋಣ.
ಸೂಕ್ಷ್ಮಜೀವಿಗಳು ಬಾಯಿಯಲ್ಲಿ ಶೇಖರಣೆಗೊಂಡರೆ ಬಾಯಿಯಿಂದ ವಾಸನೆ ಬರುತ್ತದೆ. ಬಾಯಿಯ ದುರ್ವಾಸನೆ (Bad Breath) ಹೋಗಲಾಡಿಸುವುದು ಸುಲಭವಲ್ಲ. ಕೆಲವರು ದಿನಕ್ಕೆರಡು ಬಾರಿ ಬ್ರಷ್ ಮಾಡಿದರೂ ಬಾಯಿಯಿಂದ ದುರ್ವಾಸನೆ ಬರುತ್ತದೆ. ವಾಸ್ತವವಾಗಿ, ಕೆಟ್ಟ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣುಜೀವಿಗಳು ಬಾಯಿಯಲ್ಲಿ ಸಂಗ್ರಹವಾದರೆ, ಅದು ಕೆಟ್ಟ ವಾಸನೆಗೆ ಕಾರಣವಾಗುತ್ತದೆ.
ಮಾತ್ರವಲ್ಲ, ವಸಡು ಉರಿಯೂತ ಮತ್ತು ಹಲ್ಲುನೋವು (Teeth pain) ಸೇರಿದಂತೆ ಅನೇಕ ಹಲ್ಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದಕ್ಕಾಗಿಯೇ ಈ ದಿನಗಳಲ್ಲಿ ಅನೇಕ ಜನರು ಮೌಖಿಕ ನೈರ್ಮಲ್ಯವನ್ನು ಅಭ್ಯಾಸ ಮಾಡುತ್ತಾರೆ. ಹೀಗಿದ್ದೂ, ಹಲ್ಲು ಮತ್ತು ಒಸಡುಗಳನ್ನು ಬಲವಾಗಿಡಲು ಬಾಯಿ ತೊಳೆಯುವುದು ತುಂಬಾ ಉಪಯುಕ್ತವಾಗಿದೆ. ಆದರೆ ಕೆಲವೊಬ್ಬರು ಹೀಗೆ ಮಾಡದೆ ಬಾಯಿಯ ಆರೋಗ್ಯಕ್ಕೆ ಮೌತ್‌ವಾಶ್ ಬಳಸುತ್ತಾರೆ. ಆದ್ರೆ ಇದು ಆರೋಗ್ಯಕ್ಕೆ (Health) ಒಳ್ಳೆಯದಾ ಅಥವಾ ಇದನ್ನು ಬಳಸೋದ್ರಿಂದ ತೊಂದ್ರೆಯಾಗುತ್ತಾ ತಿಳ್ಕೊಳ್ಳೋಣ.
ಮೌತ್‌ವಾಶ್ ಎಷ್ಟು ಉಪಯುಕ್ತವಾಗಿದೆ
ಮೌತ್‌ವಾಶ್ ಬಾಯಿಯಿಂದ ಹಾನಿಕಾರಕ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಹೀಗಾಗಿಯೇ ಬಾಯಿಯನ್ನು ಸ್ವಚ್ಛಗೊಳಿಸಲು ಇದನ್ನು ಬಳಸಲಾಗುತ್ತದೆ. ಮೌತ್‌ವಾಶ್ ಬಳಸುವುದರಿಂದ, ಅನೇಕ ಬಾಯಿಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಬಾಯಿಯಲ್ಲಿ ಬ್ಯಾಕ್ಟೀರಿಯಾಗಳು ದುರ್ವಾಸನೆ ಮತ್ತು ಹಲ್ಲಿನ ಕೊಳೆತವನ್ನು ಉಂಟುಮಾಡಬಹುದು. ಈ ಸಮಸ್ಯೆಗಳು ಮೌತ್‌ವಾಶ್ ಬಳಸುವುದರಿಂದ ಕಡಿಮೆಯಾಗುತ್ತವೆ. ಬ್ಯಾಕ್ಟಿರೀಯಾಗಳು ನಿವಾರಣೆಯಾಗಿ ಬಾಯಿ ರಿಫ್ರೆಶ್ ಅನಿಸುತ್ತದೆ. ಆದರೆ ಇವುಗಳನ್ನು ದಿನನಿತ್ಯ ಬಳಸುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಕ್ಯಾನ್ಸರ್
ಮೌತ್ ವಾಶ್‌ಗಳನ್ನು ಅತಿಯಾಗಿ ಬಳಸಿದರೆ ಕ್ಯಾನ್ಸರ್ ಬರುವ ಸಾಧ್ಯತೆ ತುಂಬಾ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು. ಏಕೆಂದರೆ ಮೌತ್ ವಾಶ್ ಗಳಲ್ಲಿ ಕ್ಯಾನ್ಸರ್ ಗೆ ಕಾರಣವಾಗುವ ಸಿಂಥೆಟಿಕ್ ಪದಾರ್ಥಗಳಿವೆ. ಬಾಯಿ ಸ್ವಚ್ಛಗೊಳಿಸುವ ಮೌತ್ ವಾಶ್ ಬಳಕೆಯಿಂದ ತಲೆ (Head) ಮತ್ತು ಕುತ್ತಿಗೆ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಒಣ ಬಾಯಿ
ಮೌತ್‌ವಾಶ್‌ನಲ್ಲಿರುವ ಅಂಶಗಳು ಕೆಟ್ಟ ಬ್ಯಾಕ್ಟೀರಿಯಾವನ್ನು ತೆಗೆದು ಹಾಕುತ್ತದೆ. ಇದಲ್ಲದೆ ಬಾಯಿಯ ಚರ್ಮವನ್ನು (Skin) ಹಾನಿಗೊಳಿಸುತ್ತದೆ. ಮೌತ್ ವಾಶ್ ಬಳಸುವುದರಿಂದ ಬಾಯಿಯ ಚರ್ಮ ಒರಟಾಗಬಹುದು. ಒಣ ಬಾಯಿ ಸಮಸ್ಯೆ ಕೂಡಾ ಎದುರಾಗಬಹುದು. ಅದಕ್ಕಾಗಿಯೇ ಅವುಗಳನ್ನು ಅತಿಯಾಗಿ ಬಳಸಬಾರದು.
ಬಾಯಿಯಲ್ಲಿ ತುರಿಕೆ
ಅನೇಕ ಮೌತ್‌ವಾಶ್‌ಗಳನ್ನು ತಯಾರಿಸಲು ಅಲ್ಕೋಹಾಲ್ ಅನ್ನು ಸಹ ಬಳಸಲಾಗುತ್ತದೆ. ಅಂತಹ ವಸ್ತುಗಳ ಬಳಕೆಯು ಬಾಯಿಯಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ಇದಲ್ಲದೆ, ಬಾಯಿ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಆದ್ದರಿಂದ ಅವುಗಳನ್ನು ಪ್ರತಿದಿನ ಬಳಸಬೇಡಿ. ಇದರಿಂದ ಆರೋಗ್ಯ ಸಮಸ್ಯೆ ಕಾಡಬಹುದು.
ಹಲ್ಲಿನ ಸಮಸ್ಯೆಗಳು
ನಿಯಮಿತವಾಗಿ ಮೌತ್ ವಾಶ್ ಬಳಸುವುದರಿಂದ ಹಲ್ಲಿನ ಸಮಸ್ಯೆಗಳು ಬರಬಹುದು ಎನ್ನುತ್ತಾರೆ ತಜ್ಞರು. ಮೌತ್ ವಾಶ್‌ಗಳು ಹಲ್ಲುಗಳ ಮೇಲೆ ಕಲೆ (Mark)ಗಳನ್ನು ಉಂಟುಮಾಡುತ್ತವೆ. ಹಲ್ಲುಗಳು ಒರಟಾಗುತ್ತವೆ ಮತ್ತು ದುರ್ಬಲವಾಗುತ್ತವೆ. ಇದು ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ನೈಸರ್ಗಿಕ ಮೌತ್‌ವಾಶ್ ಬಳಸಬಹುದು
ಮಾರುಕಟ್ಟೆಯಲ್ಲಿ ದೊರಕುವ ರಾಸಾಯನಿಕ ಮಿಶ್ರಿತ ಮೌತ್ ವಾಶ್ ಗಳು ಹಲವು ಕಾಯಿಲೆಗಳಿಗೆ (Disease) ಕಾರಣವಾಗುತ್ತವೆ. ಅದಕ್ಕಾಗಿಯೇ ಅವುಗಳನ್ನು ಪ್ರತಿದಿನ ಬಳಸಬಾರದು. ಆರೋಗ್ಯ ತಜ್ಞರ ಪ್ರಕಾರ.. ಇವುಗಳನ್ನು ಎರಡು ದಿನಕ್ಕೊಮ್ಮೆ ಮಾತ್ರ ಬಳಸಬೇಕು. ನೀವು ಮನೆಯಲ್ಲಿಯೇ ಪುದೀನಾ ಅಥವಾ ಬೇವಿನೊಂದಿಗೆ ನೈಸರ್ಗಿಕ ಮೌತ್‌ವಾಶ್‌ನ್ನು ತಯಾರಿಸಬಹುದು ಮತ್ತು ಅದನ್ನು ಪ್ರತಿದಿನ ಬಳಸಬಹುದು. ಇದರಿಂದ ಆರೋಗ್ಯದ ಮೇಲೆ ಯಾವುದೇ ರೀತಿಯಲ್ಲಿ ಅಡ್ಡ ಪರಿಣಾಮ ಉಂಟಾಗುವುದಿಲ್ಲ.