ಪಿರಿಯಡ್ಸ್ ಕುರಿತು ಗರುಡ ಪುರಾಣದಲ್ಲೂ ಇವೆ ಮಹತ್ವದ ಮಾಹಿತಿ… ಏನದು?
ಗರುಡ ಪುರಾಣವು ಜೀವನದಿಂದ ಸಾವಿನವರೆಗೆ ಅನೇಕ ಪ್ರಮುಖ ವಿಷಯಗಳನ್ನು ಹೇಳುತ್ತದೆ. ಇದು ಧಾರ್ಮಿಕ ಜ್ಞಾನವನ್ನು ಮಾತ್ರವಲ್ಲದೆ ಮಾನಸಿಕ ಮತ್ತು ಸಾಮಾಜಿಕ ಜ್ಞಾನವನ್ನೂ ನೀಡುತ್ತದೆ.

ಗರುಡ ಪುರಾಣ
ಗರುಡ ಪುರಾಣವು ಹಿಂದೂ ಧರ್ಮದ ಪ್ರಮುಖ ಗ್ರಂಥವಾಗಿದ್ದು, ಇದು ಧರ್ಮಕ್ಕೆ ಮಾತ್ರವಲ್ಲದೆ ಆಧ್ಯಾತ್ಮಿಕ, ಸಾಮಾಜಿಕ ಮತ್ತು ದೈಹಿಕ ಆರೋಗ್ಯಕ್ಕೂ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ಹೇಳುತ್ತದೆ. ಈ ವಿಷಯಗಳನ್ನು ಅನುಸರಿಸಿದರೆ, ಒಬ್ಬ ವ್ಯಕ್ತಿಯು ಮಾನಸಿಕ ಮತ್ತು ದೈಹಿಕ ತೊಂದರೆಗಳಿಂದ ಪರಿಹಾರ ಪಡೆಯಬಹುದು.
ಮಹಿಳೆಯರ ಋತುಚಕ್ರದ ಬಗ್ಗೆ ಉಲ್ಲೇಖ
ಗರುಡ ಪುರಾಣವು ಮಹಿಳೆಯರ ಋತುಚಕ್ರದ ಬಗ್ಗೆ ಅಂದರೆ ಪಿರಿಯಡ್ಸ್ ಬಗ್ಗೆ ಹಲವು ಪ್ರಮುಖ ವಿಷಯಗಳನ್ನು ಹೇಳಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಅವುಗಳನ್ನು ಅನುಸರಿಸುವುದರಿಂದ ಮಹಿಳೆಯರು ದೈಹಿಕ ಆಯಾಸ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೆಚ್ಚು ಕೆಲಸ ಮಾಡಬಾರದು
ಗರುಡ ಪುರಾಣವು ಮುಟ್ಟಿನ ಸಮಯದಲ್ಲಿ ಮಹಿಳೆಯರು ಹೆಚ್ಚು ಕೆಲಸ ಮಾಡಬಾರದು ಎಂದು ಹೇಳುತ್ತದೆ. ಏಕೆಂದರೆ ಈ ಸಮಯದಲ್ಲಿ ಮಹಿಳೆಯರ ದೇಹ ಮತ್ತು ಮನಸ್ಸಿನ ಮೇಲೆ ಹೆಚ್ಚಿನ ಒತ್ತಡವಿರುತ್ತದೆ.
ಪೂಜೆ ಮತ್ತು ಧಾರ್ಮಿಕ ಆಚರಣೆಗಳಿಂದ ದೂರವಿರಿ
ಮುಟ್ಟಿನ ಸಮಯದಲ್ಲಿ, ಪೂಜೆ ಮತ್ತು ಧಾರ್ಮಿಕ ಆಚರಣೆಗಳಂತಹ ಚಟುವಟಿಕೆಗಳಿಂದ ದೂರವಿರಬೇಕು. ಗರುಡ ಪುರಾಣದ ಪ್ರಕಾರ, ಈ ಅವಧಿಯಲ್ಲಿ ಮಹಿಳೆಯರು ಶುದ್ಧತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದಿದೆ. ರಕ್ತಸ್ರಾವವಾಗೋದರಿಂದ ಪೂಜೆಗೆ ಕುಳಿತುಕೊಳ್ಳೋದು ಕಷ್ಟವಾಗುತ್ತದೆ. ಹಾಗಾಗಿ ಈ ನಿಯಮವನ್ನು ತಿಳಿಸಿದೆ.
ಮಾನಸಿಕ ಶಾಂತಿ ಮುಖ್ಯ
ಗರುಡ ಪುರಾಣದ ಪ್ರಕಾರ, ಮುಟ್ಟಿನ ಸಮಯದಲ್ಲಿ ಮಹಿಳೆಯರನ್ನು ಕುಟುಂಬ ಮತ್ತು ಸಮಾಜದಿಂದ ಸ್ವಲ್ಪ ಸಮಯದವರೆಗೆ ದೂರವಿಡಲಾಗುತ್ತದೆ ಮತ್ತು ಇದಕ್ಕೆ ಮುಖ್ಯ ಕಾರಣವೆಂದರೆ ಅದು ಮಹಿಳೆಯರಿಗೆ ದೈಹಿಕ ಮತ್ತು ಮಾನಸಿಕ ವಿಶ್ರಾಂತಿಯನ್ನು ನೀಡಲು ಈ ನಿಯಮವನ್ನು ಪಾಲಿಸಲಾಯಿತು.