Garlic for Heart: ಹೃದಯದ ಗೆಳೆಯ ಬೆಳ್ಳುಳ್ಳಿ! ಖ್ಯಾತ ಆಯುರ್ವೇದ ವೈದ್ಯರ ಮಾತು ಕೇಳಿ...
ಹೈ ಬಿಪಿ ಮತ್ತು ಹೃದಯಾಘಾತ ಇತ್ತೀಚಿನ ದಿನಗಳಲ್ಲಿ ಮಾಮೂಲು ಆಗಿಬಿಟ್ಟಿದೆ. ಹೃದಯ ಸಂಬಂಧಿ ಸಮಸ್ಯೆಗಳಿಗೆ ಬೆಳ್ಳುಳ್ಳಿ ಹೇಗೆ ಸಹಕಾರಿಯಾಗಿದೆ ಎನ್ನುವ ಬಗ್ಗೆ ವೈದ್ಯರು ಹೇಳಿದ್ದೇನು ಕೇಳಿ...

ಹೈ ಬಿಪಿ ಮತ್ತು ಹೃದಯಾಘಾತ ಹೆಚ್ಚಳ
ಹೈ ಬಿಪಿ ಮತ್ತು ಹೃದಯಾಘಾತ ಇತ್ತೀಚಿನ ದಿನಗಳಲ್ಲಿ ಮಾಮೂಲು ಆಗಿಬಿಟ್ಟಿದೆ. ಅದರಲ್ಲಿಯೂ ಬಿಪಿ ಇಲ್ಲದ ಮನೆಯೇ ಇರುವುದು ಕಡಿಮೆ ಎನ್ನಿಸುವಷ್ಟರ ಮಟ್ಟಿಗೆ ಸ್ಥಿತಿ ಇದೆ. ಇದೇ ಕಾರಣಕ್ಕೆ ಬಿಪಿ ಮಾತ್ರೆಯ ದೊಡ್ಡ ಮಾರುಕಟ್ಟೆಯೇ ಕಾರ್ಯ ನಿರ್ವಹಿಸುತ್ತಿದೆ. ಆದರೆ ಈ ಮಾತ್ರೆಗಳನ್ನು ವರ್ಷಾನುಗಟ್ಟಲೆ ತೆಗೆದುಕೊಂಡರೆ ಅದು ಖಂಡಿತವಾಗಿಯೂ ನಮ್ಮ ಹೃದಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇನ್ನು ಬಿಪಿ ಹೆಚ್ಚಾದರೆ ಅದರಿಂದಲೂ ಸಮಸ್ಯೆ ಇದೆ.
ಬಿಪಿ ಮತ್ತು ಹೃದಯ ಸಂಬಂಧಿ ಸಮಸ್ಯೆ ಒಂದಕ್ಕೊಂದು ಪೂರಕ
ಅಷ್ಟಕ್ಕೂ ಬಿಪಿ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಒಂದಕ್ಕೊಂದು ಪೂರಕವಾಗಿಯೇ ಇವೆ. ಅಧಿಕ ರಕ್ತದೊತ್ತಡವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಹೈಬಿಪಿಯಿಂದ ಪ್ರಾಣ ಕಳೆದುಕೊಳ್ಳುವ ಸಂಭವ ಕೂಡಾ ಇರುತ್ತದೆ. ಹೈ ಬಿಪಿ , ಲೋ ಬಿಪಿ ಎರಡೂ ಹೃದಯಾಘಾತಕ್ಕೆ ಕಾರಣವಾಗುತ್ತೆ ಎನ್ನುವುದು ಕೂಡ ಸತ್ಯ.
ಚಿಕ್ಕ ವಯಸ್ಸಿನಲ್ಲಿಯೇ ಮುತ್ತಿಕ್ಕುವ ಸಮಸ್ಯೆ
ಇವು ಇಂದು-ನಿನ್ನೆಯ ಸಮಸ್ಯೆಗಳಲ್ಲ. ಆದರೆ ಒಂದು ಹಂತದ ವಯಸ್ಸಾದ ಮೇಲೆ ಇವೆಲ್ಲಾ ಅನಾರೋಗ್ಯಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಇದೀಗ, ಒತ್ತಡದ ಜೀವನಶೈಲಿ, ಕೆಟ್ಟ ಆಹಾರಪದ್ಧತಿ, ಹೆಚ್ಚುತ್ತಿರುವ ಮಾನಸಿಕ ಒತ್ತಡ ದಿಂದಾಗಿ ಬಿಪಿ ಮತ್ತು ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳು ಜಾಸ್ತಿಯಾಗುತ್ತಿದೆ. ಚಿಕ್ಕವಯಸ್ಸಿನಲ್ಲಿಯೇ ಜನರು ಜೀವ ಕಳೆದುಕೊಳ್ಳುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಹೃದಯ ಸಂಬಂಧಿ ಕಾಯಿಲೆ ತಡೆಗೆ ಬೆಳ್ಳುಳ್ಳಿ
ಹೃದಯ ಸಂಬಂಧಿ ಕಾಯಿಲೆ ತಡೆಗೆ ಮಾತ್ರೆಗಳು ಲಭ್ಯವಿದ್ದರೂ ಅದರಿಂದ ಸೈಡ್ ಎಫೆಕ್ಟ್ಗಳೇ ಹೆಚ್ಚು. ಆದ್ದರಿಂದ ಇದಕ್ಕೆ ಪರ್ಯಾಯವಾಗಿ ದಿನವೂ ಬೆಳ್ಳುಳ್ಳಿಯನ್ನು ಆಹಾರದಲ್ಲಿ ಸೇರಿಸಿಕೊಂಡು ಸೇವನೆ ಮಾಡಿದರೆ, ರಕ್ತವನ್ನು ಬೆಳ್ಳುಳ್ಳಿ ತೆಳುಗೊಳಿಸುವ ಹಿನ್ನೆಲೆಯಲ್ಲಿ ಹೃದಯದ ಸಮಸ್ಯೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತಾರೆ ವೈದ್ಯರು. Rapid Rashmi youtube ಚಾನೆಲ್ಗೆ ವೈದ್ಯರು ನೀಡಿರುವ ಸಂದರ್ಶನದಲ್ಲಿ ಇದರ ಬಗ್ಗೆ ವಿವರಣೆ ನೀಡಲಾಗಿದೆ. ಹಸಿ ಬೆಳ್ಳುಳ್ಳಿ ಅಥವಾ ಫ್ರೈ ಮಾಡಿದ ಬಳ್ಳುಳ್ಳಿ ಸೇವನೆಯಿಂದ ಹೃದಯಕ್ಕೆ ಸಾಕಷ್ಟು ಪ್ರಯೋಜನ ಇದೆ ಎನ್ನುವುದು ಅವರ ಮಾತು. (ಅದರ ಲಿಂಕ್ ಲೇಖನದ ಕೆಳಗೆ ನೀಡಲಾಗಿದೆ.)
ಬೆಳ್ಳುಳ್ಳಿಯ ಮಹತ್ವ
ಇದಾಗಲೇ ಹಲವು ವೈದ್ಯರು ಬೆಳ್ಳುಳ್ಳಿಯ ಮಹತ್ವದ ಬಗ್ಗೆ ಹೇಳಿದ್ದಾರೆ. ಬೆಳ್ಳುಳ್ಳಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಇದು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಕೆಲವು ಸಂಯುಕ್ತಗಳು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ ವೈದ್ಯರು.
ರಕ್ತದೊತ್ತಡ,ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ:
ಬೆಳ್ಳುಳ್ಳಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಇದು ರಕ್ತನಾಳಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ. ಬೆಳ್ಳುಳ್ಳಿ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸುತ್ತದೆ.
ರಕ್ತ ಹೆಪ್ಪುಗಟ್ಟುವಿಕೆ ತಡೆಗೆ..
ಬೆಳ್ಳುಳ್ಳಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ, ಇದು ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ಈ ಮಾತೂ ನೆನಪಿರಲಿ...
ಹಾಗೆಯೇ ಒಂದು ಮಾತು ನೆನಪಿಡಿ. ಅತಿಯಾದರೆ ಅಮೃತವೂ ವಿಷ. ಬೆಳ್ಳುಳ್ಳಿ ಒಳ್ಳೆಯದು ಎಂದು ಸಿಕ್ಕಾಪಟ್ಟೆ ತಿಂದರೆ ಸಮಸ್ಯೆ ಆಗಬಹುದು. ಬೆಳ್ಳುಳ್ಳಿಯನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಮೂಲಕ ಅಥವಾ ಬೆಳ್ಳುಳ್ಳಿ ಪೂರಕಗಳನ್ನು ತೆಗೆದುಕೊಳ್ಳುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸಲು ಪ್ರಯತ್ನಿಸಬಹುದು. ಆದರೆ, ಬೆಳ್ಳುಳ್ಳಿಯನ್ನು ಮಾತ್ರ ಅವಲಂಬಿಸದೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಮುಖ್ಯ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಒತ್ತಡ ನಿರ್ವಹಣೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಖ್ಯವಾಗಿದೆ.