ಸ್ನಾನ ಆದ ತಕ್ಷಣ ಮಹಿಳೆಯರು ಈ ಕೆಲಸ ಮಾಡಿದ್ರೆ ತೊಂದರೆ ತಪ್ಪಿದ್ದಲ್ಲ
ಮಹಿಳೆಯರು ಸ್ನಾನ ಮಾಡಿದ ತಕ್ಷಣ ಕೆಲವೊಂದು ಕೆಲಸಗಳನ್ನು ಮಾಡಬಾರದು ಎಂದು ಶಾಸ್ತ್ರಗಳು ತಿಳಿಸಿವೆ. ಆ ಕೆಲಸಗಳು ಯಾವುವು? ಅವುಗಳನ್ನು ಮಾಡೋದರಿಂದ ಏನಾಗುತ್ತದೆ ಅನ್ನೋದನ್ನು ತಿಳಿಯೋಣ.

ವಾಸ್ತು ಶಾಸ್ತ್ರದಲ್ಲಿ ಹಲವಾರು ನಿಯಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಯಾವ ಕೆಲಸಗಳನ್ನು ಮಾಡಬಾರದು. ಯಾವ ಕೆಲಸಗಳನ್ನು ಮಾಡಬೇಕು? ಮಹಿಳೆಯರು ಪಾಲಿಸಬೇಕಾದ ನಿಯಮಗಳು, ಪುರುಷರು ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇವತ್ತು ನಿಮಗೆ ಸ್ನಾನ ಮಾಡಿದ ಬಳಿಕ ಮಹಿಳೆಯರು ಯಾವ ತಪ್ಪು ಮಾಡಬಾರದು ಅನ್ನೋದನ್ನು ನೋಡೋಣ.
ವಾಸ್ತು ಶಾಸ್ತ್ರದ ಪ್ರಕಾರ, ಮಹಿಳೆಯರು ಸ್ನಾನ ಮಾಡಿದ ತಕ್ಷಣ ಅಡುಗೆಮನೆಗೆ ಹೋಗಬಾರದು. ಸ್ನಾನ ಮಾಡಿದ ನಂತರ ಸ್ವಲ್ಪ ಸಮಯ ಹೊರಗೆ ಕುಳಿತುಕೊಂಡು ಅಥವಾ ದೇವರ ಪೂಜೆ ಮಾಡಿ, ಸ್ವಲ್ಪ ಸಮಯದ ನಂತರವಷ್ಟೇ ಅಡುಗೆ ಕೋಣೆಗೆ ಹೋಗಬೇಕು.
ಸ್ನಾನ ಮಾಡಿದ ತಕ್ಷಣ ಮನೆಯನ್ನು ಸ್ವಚ್ಛಗೊಳಿಸುವ ಅಥವಾ ಗುಡಿಸುವಂತಹ ಕೆಲಸಗಳನ್ನು ಮಾಡಬೇಡಿ. ಇಂತಹ ಕೆಲಸಗಳನ್ನೆಲ್ಲಾ ಸ್ನಾನ ಮಾಡುವ ಮುನ್ನ ಮಾಡೋದು ಉತ್ತಮ. ಸ್ನಾನ ಮಾಡಿದ ಬಳಿಕ ದೇವರ ಪೂಜೆ ಮೊದಲಾದ ಕೆಲಸಗಳನ್ನು ಮಾಡಿ.
ಮಹಿಳೆಯರು ಸ್ನಾನ ಮಾಡಿದ ತಕ್ಷಣ ಕನ್ನಡಿಯ ಮುಂದೆ ನಿಂತುಕೊಳ್ಳುವುದು ಸಹ ಸರಿಯಲ್ಲ. ಅದು ತಪ್ಪು. ಯಾಕಂದ್ರೆ ಇದರಿಂದ ಮಾನಸಿಕ ಅಶಾಂತಿ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಮನಸ್ಸಿನಲ್ಲಿ ತೊಳಲಾಟ ಹೆಚ್ಚಾಗಿ ನೆಮ್ಮದಿ ಇರದಂತೆ ಆಗುತ್ತೆ. ಹಾಗಾಗಿ ಸ್ನಾನ ಮಾಡಿದ ತಕ್ಷಣ ಕನ್ನಡಿ ಮುಂದೆ ನಿಲ್ಲಬೇಡಿ.
ಸ್ನಾನ ಮಾಡಿದ ತಕ್ಷಣ ಮಾಂಸ, ಮೀನು ಮತ್ತು ಮಾಂಸಾಹಾರ ಸೇವಿಸಬಾರದು. ತಲೆಗೆ ಮೈಗೆ ಸ್ನಾನ ಮಾಡಿ ಬಂದ ತಕ್ಷಣ ಮಾಂಸಾಹಾರ ಸೇವನೆ ಮಾಡೋದರಿಂದ ಆರೋಗ್ಯದ ಮೇಲೆ ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿಯೇ ಶಾಸ್ತ್ರಗಳಲ್ಲಿ ಸ್ನಾನದ ತಕ್ಷಣ ಅವುಗಳನ್ನು ತಿನ್ನಬೇಡಿ ಎನ್ನುತ್ತೆ.
ಸ್ನಾನ ಮಾಡಿದ ತಕ್ಷಣ ಉತ್ತರಕ್ಕೆ ತಲೆ ಹಾಕಿ ಮಲಗಬಾರದು. ಇದನ್ನು ನೀವು ನೆನಪಿಟ್ಟುಕೊಳ್ಳಬೇಕು. ಕೆಲವರಿಗೆ ಸ್ನಾನ ಮಾಡಿ ಬಂದ ತಕ್ಷಣ ನಿದ್ರೆ ಮಾಡುವ ಅಭ್ಯಾಸ ಇದೆ. ಆದರೆ ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬೇಡಿ. ಇದರಿಂದ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಸ್ನಾನದ ನಂತರ ಜಗಳವಾಡುವುದು ಅಥವಾ ಕೋಪಗೊಳ್ಳುವಂತಹ ನಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಬೇಡಿ. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸ್ನಾನದ ನಂತರ ಸಾಧ್ಯವಾದಷ್ಟು ಖುಷಿಯಿಂದ ಇರೋದಕ್ಕೆ ಪ್ರಯತ್ನಿಸಿ.