ಗಣೇಶ ಚತುರ್ಥಿ ಯಾವಾಗ? ಆಗಸ್ಟ್ 26 ಅಥವಾ 27.... ಇಲ್ಲಿದೆ ಸಂಪೂರ್ಣ ಮಾಹಿತಿ
ಭಕ್ತರು ಗಣೇಶನ ಆಗಮನಕ್ಕೆ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಗಣಪತಿ 10 ದಿನಗಳ ಕಾಲ ತನ್ನ ಭಕ್ತರ ಜೊತೆ ಇದ್ದು, ಸಂಕಷ್ಟ ನಿವಾರಿಸುತ್ತಾನೆ. ಈ ಬಾರಿ ಚತುರ್ಥಿ ಯಾವಾಗ? ಆಗಸ್ಟ್ 26 ಅಥವಾ 27 ತಿಳಿಯಿರಿ.

ವರ್ಷದ ಎಲ್ಲಾ ಗಣೇಶ ಚತುರ್ಥಿಗಳಲ್ಲಿ, (Ganesh Chaturthi)ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ಅತ್ಯಂತ ಮುಖ್ಯವಾಗಿದೆ. ಗಣೇಶನು ಈ ದಿನದಂದು ಜನಿಸಿದನು. ಈ ಗಣೇಶ ಚತುರ್ಥಿಯಿಂದ 10 ದಿನಗಳ ಗಣೇಶ ಹಬ್ಬವು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ, ಭಕ್ತರು ತಮ್ಮ ಮನೆಗಳು, ಕಚೇರಿಗಳು, ವ್ಯಾಪಾರ ಸಂಸ್ಥೆಗಳು, ಬೀದಿಗಳು,, ದೇವಾಲಯಗಳು ಇತ್ಯಾದಿಗಳಲ್ಲಿ ಗಣಪತಿ ವಿಗ್ರಹವನ್ನು ಸ್ಥಾಪಿಸುತ್ತಾರೆ. ಗಣೇಶ ಹಬ್ಬ ಅಂದರೇನೇ ಊರಿಗೆ ಊರೇ ಸಂಭ್ರಮ ಪಡುತ್ತದೆ. ಆದರೆ ಈ ಬಾರಿ ಗಣೇಶ ಚತುರ್ಥಿ ಯಾವ ದಿನ ಬರುತ್ತದೆ ಎನ್ನುವ ಬಗ್ಗೆ ಎಲ್ಲರಿಗೂ ಸಂಶಯವಿದೆ. ಇಲ್ಲಿದೆ ನೋಡಿ ಆ ಕುರಿತಾದ ಸರಿಯಾದ ಮಾಹಿತಿ.
ಈ ವರ್ಷ ಗಣೇಶ ಚತುರ್ಥಿ ತಿಥಿ ಅಂದರೆ ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿ ಆಗಸ್ಟ್ 26 ರಂದು ಮಧ್ಯಾಹ್ನ 1.54 ಕ್ಕೆ ಪ್ರಾರಂಭವಾಗುತ್ತದೆ. ಗಣೇಶ ಚತುರ್ಥಿ ತಿಥಿ ಆಗಸ್ಟ್ 27 ರಂದು ಮಧ್ಯಾಹ್ನ 3.44 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯ ಪ್ರಕಾರ, ಗಣೇಶ ಚತುರ್ಥಿ ಹಬ್ಬವನ್ನು ಆಗಸ್ಟ್ 27 ರಂದು ಆಚರಿಸಲಾಗುತ್ತದೆ.
ಗಣೇಶ ಸ್ಥಾಪನೆ ಮತ್ತು ಪೂಜಾ ಮುಹೂರ್ತ
ಗಣೇಶ ಸ್ಥಾಪನೆಗೆ ಅತ್ಯಂತ ಶುಭ ಸಮಯವೆಂದರೆ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಗಣೇಶ ಜನಿಸಿದನು ಎನ್ನಲಾಗುತ್ತದೆ. 2025 ರಲ್ಲಿ, ಗಣೇಶ ಸ್ಥಾಪನೆಗೆ ಮುಹೂರ್ತವು ಆಗಸ್ಟ್ 27 ರಂದು ಬೆಳಿಗ್ಗೆ 11.05 ರಿಂದ ಮಧ್ಯಾಹ್ನ 01.40 ರವರೆಗೆ ಇರುತ್ತದೆ. ಒಟ್ಟಲ್ಲಿ ಗಣೇಶ ಸ್ಥಾಪನೆಗೆ ಸುಮಾರು ಎರಡೂವರೆ ಗಂಟೆಗಳ ಸಮಯ ಲಭ್ಯವಿರುತ್ತದೆ.
ಗಣೇಶ ಪೂಜೆ ಏನೇನು ಬೇಕು?
ಗಣೇಶನ ಪೂಜೆಗೆ, ಗಣೇಶನ ಮೂರ್ತಿಯನ್ನು ಜೇಡಿಮಣ್ಣು, ಚಿನ್ನ, ಬೆಳ್ಳಿ, ಹಿತ್ತಾಳೆ ಇತ್ಯಾದಿಗಳಿಂದ ತಯಾರಿಸಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್, ಗಾಜು, ಪ್ಲಾಸ್ಟಿಕ್ ಇತ್ಯಾದಿಗಳಿಂದ ಮಾಡಿದ ಮೂರ್ತಿಗಳನ್ನು ಸ್ಥಾಪಿಸಬೇಡಿ. ಸಾಧ್ಯವಾದಷ್ತು ಪರಿಸರ ಸ್ನೇಹಿ ಗಣೇಶನ ಮೂರ್ತಿ ಬಳಸಿ.
ಗಣೇಶನ ಆಸನ, ಆಸನದ ಮೇಲೆ ಹರಡಲು ಹಳದಿ ಅಥವಾ ಕೆಂಪು ಬಟ್ಟೆ, ಅರಿಶಿನ, ಕುಂಕುಮ, ವೀಳ್ಯದೆಲೆ, ಸಿಂಧೂರ, ಲವಂಗ, ಕೆಂಪು ಬಣ್ಣದ ಬಟ್ಟೆ, ಪವಿತ್ರ ದಾರ, ದೂರ್ವ, ಕರ್ಪೂರ, ದೀಪ, ಧೂಪದ್ರವ್ಯ, ಪಂಚಾಮೃತ, ಮೌಲಿ, ಹಣ್ಣುಗಳು, ಪಂಚಮೇವ, ಗಂಗಾಜಲ, ಕಲಶ, ಹಣ್ಣುಗಳು, ತೆಂಗಿನಕಾಯಿ, ಕೆಂಪು ಚಂದನ, ಮೋದಕ. ಅಷ್ಟಗಂಧ, ಮೊಸರು, ಜೇನುತುಪ್ಪ, ಹಸುವಿನ ತುಪ್ಪ, ಸಕ್ಕರೆ, ಗಣೇಶನಿಗೆ ಹೂವಿನ ಹಾರ, ಬಾಳೆ ಎಲೆಗಳು, ರೋಸ್ ವಾಟರ್, ದೀಪದ ಬತ್ತಿ, ಬೆಳ್ಳಿ ನಾಣ್ಯ ಎಲ್ಲವೂ ಇರಲಿ. ಇನ್ನು ಗಣೇಶನ ವಿಶೇಷ ಆಶೀರ್ವಾದ ಪಡೆಯಲು, ಮೋದಕ, ಮೋತಿಚೂರ್ ಲಡ್ಡು, ಖೀರ್ ಮತ್ತು ಮೊದಲಾದ ಸಿಹಿ ತಿನಿಸುಗಳು ಸಹ ಇರಲಿ.