Navaratri Day 6: ನವರಾತ್ರಿಯ 6ನೇ ದಿನ ಕಾತ್ಯಾಯನಿ ದೇವಿ… ಪೂಜೆಯ ಮಹತ್ವವೇನು?
ನವರಾತ್ರಿ 2025 ದಿನ 6: ನವರಾತ್ರಿಯ ಆರನೇ ದಿನ ಅಥವಾ ಷಷ್ಠಿಯ ದಿನ ತಾಯಿ ಕಾತ್ಯಾಯನಿಯನ್ನು ಪೂಜಿಸಲಾಗುತ್ತದೆ. ಈ ತಾಯಿಯ ಬಗ್ಗೆ, ತಾಯಿಗೆ ಯಾವ ನೈವೇದ್ಯ ನೀಡಬೇಕು, ಯಾವ ಬಣ್ಣದ ಬಟ್ಟೆ ಧರಿಸಬೇಕು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

ನವರಾತ್ರಿ 2025 ದಿನ 6
ಈ ವರ್ಷ ನವರಾತ್ರಿಯ ಆರನೇ ದಿನ ಸೆಪ್ಟೆಂಬರ್ 27 ರಂದು ಬರುತ್ತದೆ. ಒಂಬತ್ತು ದಿನಗಳ ಹಬ್ಬವು ಸೆಪ್ಟೆಂಬರ್ 22 ರಂದು ಪ್ರಾರಂಭವಾಗಿ ಅಕ್ಟೋಬರ್ 2 ರಂದು ಮುಕ್ತಾಯಗೊಳ್ಳುತ್ತದೆ. ಈ ಸಮಯದಲ್ಲಿ ಭಕ್ತರು ಮಾತೆ ದುರ್ಗಾ ಮತ್ತು ಆಕೆಯ ಒಂಬತ್ತು ದೈವಿಕ ಅವತಾರಗಳಾದ ನವದುರ್ಗೆಯರನ್ನು ಪೂಜಿಸುತ್ತಾರೆ.
ಕಾತ್ಯಾಯಿನಿ ದೇವಿ
ಈ ಆರನೇ ದಿನ ಅಥವಾ ಷಷ್ಠಿ ತಿಥಿಯಂದು ಕಾತ್ಯಾಯನಿ ದೇವಿಯನ್ನು ಪೂಜಿಸುತ್ತಾರೆ. ದೇವಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಇಲ್ಲಿದೆ. ತಾಯಿಯನ್ನು ಪೂಜಿಸುವುದರ ಮಹತ್ವ, ನೆನಪಿಡುವ ಆಚರಣೆಗಳು, ಯಾವ ಬಣ್ಣವನ್ನು ಧರಿಸಬೇಕು, ಪೂಜಾ ಮುಹೂರ್ತ ಮತ್ತು ಇನ್ನೂ ಹೆಚ್ಚಿನವುಗಳು ಇಲ್ಲಿವೆ.
ಕಾತ್ಯಾಯನಿ ಯಾರು? ಅವಳನ್ನು ಪೂಜಿಸುವುದರ ಮಹತ್ವವೇನು?
ಹಿಂದೂ ನಂಬಿಕೆಗಳ ಪ್ರಕಾರ, ರಾಕ್ಷಸ ಮಹಿಷಾಸುರನನ್ನು ನಾಶಮಾಡಲು, ಪಾರ್ವತಿ ದೇವಿಯು ಕಾತ್ಯಾಯನಿ ರೂಪವನ್ನು ಧರಿಸಿದಳು. ಇದು ಮಾ ಪಾರ್ವತಿಯ ಅತ್ಯಂತ ಹಿಂಸಾತ್ಮಕ ರೂಪವೆಂದು ನಂಬಲಾಗಿದೆ, ಏಕೆಂದರೆ ಈ ರೂಪದಲ್ಲಿ ಅವಳನ್ನು ಯೋಧ ದೇವತೆ ಎಂದು ಕರೆಯಲಾಗುತ್ತದೆ. ಅವಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ:
ದುಷ್ಟ ಶಕ್ತಿಯ ವಿರುದ್ಧದ ವಿಜಯ
ಪಾರ್ವತಿ ಮಾತೆಯ ಈ ರೂಪವು ಧೈರ್ಯ ಮತ್ತು ನಕಾರಾತ್ಮಕತೆಯ ವಿರುದ್ಧದ ವಿಜಯದೊಂದಿಗೆ ಸಂಬಂಧಿಸಿದೆ, ಅವಳನ್ನು ಪೂಜಿಸುವುದರಿಂದ ಭಕ್ತರಿಗೆ ಸಾಮರಸ್ಯ ಮತ್ತು ವಿವಾಹದ ನಿರೀಕ್ಷೆಗಳು ದೊರೆಯುತ್ತವೆ.
ಪಾರ್ವತಿ ದೇವಿಯ ಈ ರೂಪ ಕಾತ್ಯಾಯನಿ
ಕಾತ್ಯಾಯನಿ ಭವ್ಯವಾದ ಸಿಂಹದ ಮೇಲೆ ಸವಾರಿ ಮಾಡುತ್ತಾಳೆ ಮತ್ತು ನಾಲ್ಕು ಕೈಗಳಿಂದ ಚಿತ್ರಿಸಲಾಗಿದೆ, ಎಡಗೈಯಲ್ಲಿ ಕಮಲದ ಹೂವು ಮತ್ತು ಕತ್ತಿಯನ್ನು ಹಿಡಿದು, ತನ್ನ ಬಲಗೈಗಳಲ್ಲಿ ಒಂದನ್ನು ಅಭಯ ಮುದ್ರೆಯಲ್ಲಿ ಮತ್ತು ಇನ್ನೊಂದು ವರದ ಮುದ್ರೆಯಲ್ಲಿ ಹಿಡಿದಿದ್ದಾಳೆ. ಪಾರ್ವತಿ ದೇವಿ ಋಷಿ ಕಾತ್ಯನ ಮನೆಯಲ್ಲಿ ಜನಿಸಿದಳು, ಅದಕ್ಕಾಗಿಯೇ ಪಾರ್ವತಿ ದೇವಿಯ ಈ ರೂಪವನ್ನು ಕಾತ್ಯಾಯನಿ ಎಂದು ಕರೆಯಲಾಗುತ್ತದೆ.
ಪೂಜಾ ಸಮಯಗಳು, ಶುಭ ಮುಹೂರ್ತ
ದೃಕ್ ಪಂಚಾಂಗದ ಪ್ರಕಾರ, ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಶುಭ ಸಮಯಗಳು ಇಲ್ಲಿವೆ:
ಶುಕ್ಲ ಷಷ್ಠಿ ಪ್ರಾರಂಭ: ಮದ್ಯಾಹ್ನ 12:03, ಸೆಪ್ಟೆಂಬರ್ 27
ಶುಕ್ಲ ಷಷ್ಠಿ ಕೊನೆ: ಸೆಪ್ಟೆಂಬರ್ 28ರ ಮದ್ಯಾಹ್ನ 2:27 ವರೆಗೂ ಇರುತ್ತೆ
ಅನುರಾಧಾ ನಕ್ಷತ್ರವು ಸೆಪ್ಟೆಂಬರ್ 28 ರ ಮುಂಜಾನೆ 1:08 ವರೆಗೆ
ಬ್ರಹ್ಮ ಮುಹೂರ್ತ: ಬೆಳಗ್ಗೆ 4:36 ರಿಂದ 5:24 ರವರೆಗೆ
ಅಭಿಜಿತ್ ಮುಹೂರ್ತ: ಬೆಳಗ್ಗೆ 11:48 ನಿಂದ ಮದ್ಯಾಹ್ನ 12:36 ವರೆಗೆ
ವಿಜಯ ಮುಹೂರ್ತ: ಮಧ್ಯಾಹ್ನ 2:12 ರಿಂದ 3:00 ರವರೆಗೆ
ಅಮೃತ್ ಕಲಾಂ: ಮದ್ಯಾಹ್ನ 1:26 ರಿಂದ 3:14 ರವರೆಗೆ
ನವರಾತ್ರಿ 2025 ದಿನ 6 ಬಣ್ಣ
ಆರನೇ ದಿನದಂದು, ಶುಭ ಬಣ್ಣವು ಬೂದು ಬಣ್ಣದ್ದಾಗಿದೆ. ಇದು ಸಮತೋಲಿತ ಭಾವನೆಗಳನ್ನು ಪ್ರತಿನಿಧಿಸುತ್ತದೆ ಮತ್ತು ವ್ಯಕ್ತಿಯನ್ನು ಡೌನ್ ಟು ಅರ್ಥ್ ಇರುವಂತೆ ನೋಡಿಕೊಳ್ಳುತ್ತದೆ. ಕಾತ್ಯಾಯಿನಿಯನ್ನು ಪೂಜಿಸಲು ಈ ಶೇಡ್ ಧರಿಸುವುದರಿಂದ ಭಕ್ತರಿಗೆ ಆಧಾರಸ್ಥಂಭದ ಶಕ್ತಿ ಮತ್ತು ಸಮತೋಲನ ದೊರೆಯುತ್ತದೆ.
ನೈವೇದ್ಯ, ಪೂಜಾ ವಿಧಿಗಳು
ಷಷ್ಠಿಯಂದು, ಭಕ್ತರು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಬೇಕು, ಮನೆಯಲ್ಲಿ ಪೂಜಾ ಪ್ರದೇಶವನ್ನು ಸ್ವಚ್ಛಗೊಳಿಸಬೇಕು, ಹೊಸ ಬಟ್ಟೆಗಳನ್ನು ಧರಿಸಬೇಕು ಮತ್ತು ಕಾತ್ಯಾಯನಿಯನ್ನು ಪೂಜಿಸಬೇಕು. ನಂತರ ದೀಪ ಬೆಳಗಿಸಿ ದೇವಿಯನ್ನು ಮೆಚ್ಚಿಸಲು ಮತ್ತು ಆಶೀರ್ವಾದ ಪಡೆಯಲು ಶೃಂಗಾರ ವಸ್ತುಗಳು, ಹಾರ ಮತ್ತು ಸಿಂಧೂರವನ್ನು ಅರ್ಪಿಸಬೇಕು. ಪೂಜೆಯ ಸಮಯದಲ್ಲಿ ಪಾನ್, ಐದು ವಿಭಿನ್ನ ಸೀಸನಲ್ ಹಣ್ಣುಗಳು ಮತ್ತು ಜೇನುತುಪ್ಪ ಅಥವಾ ಇತರ ಸಿಹಿತಿಂಡಿಗಳನ್ನು ದೇವಿಗೆ ಅರ್ಪಿಸಿ. ದುರ್ಗಾ ಸಪ್ತಶತಿ ಪಠಣವನ್ನು ಪಠಿಸಿ ಮತ್ತು ಹವನ ಮಾಡಿ.
ಮಂತ್ರ, ಸ್ತುತಿ, ಪ್ರಾರ್ಥನೆ
ಮಂತ್ರ: ಓಂ ದೇವಿ ಕಾತ್ಯಾಯನಿ ನಮಃ
ಪ್ರಾರ್ಥನೆ: ಚಂದ್ರಹಾಸೋ ಜ್ವಲಕರ, ಶಾರ್ದೂಲವರವಾಹನ, ಕಾತ್ಯಾಯಿನಿ ಶುಭಂ ದದ್ಯಾತ್,ದೇವಿ ದಾನವಾಘತಿನಿ
ಪ್ರಾರ್ಥನೆ: ಯಾ ದೇವಿ ಸರ್ವ ಭೂತೇಶು, ಮಾ ಕಾತ್ಯಾಯಿನಿ ರೂಪೇನ ಸಂಸ್ಥಿತಾ, ನಮಸ್ಥಸ್ಥೈ ನಮಸ್ಥಸ್ಥೈ ನಮಸ್ಥಸ್ಥೈ ನಮೋ ನಮಃ