ಜಾತಕದಲ್ಲಿ ಕಾಳ ಸರ್ಪ ದೋಷ ಇದ್ರೆ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತೆ
ಜ್ಯೋತಿಷ್ಯದಲ್ಲಿ, ಕಾಳ ಸರ್ಪ ದೋಷವನ್ನು ಬಹಳ ಹಾನಿಕಾರಕ ಯೋಗವೆಂದು ಪರಿಗಣಿಸಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಈ ಕಾಳ ಸರ್ಪ ದೋಷವು ರೂಪುಗೊಂಡರೆ, ಆ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಹೆಣಗಾಡಬೇಕಾಗುತ್ತೆ. ಆದ್ದರಿಂದ ಕಾಳ ಸರ್ಪ ದೋಷದ ಪೂಜಾ ವಿಧಾನ, ಪ್ರಯೋಜನ ಮತ್ತು ಲಕ್ಷಣಗಳ ಬಗ್ಗೆ ತಿಳಿದುಕೊಳ್ಳೋಣ.
ಜ್ಯೋತಿಷ್ಯದಲ್ಲಿ, ಕಾಳ ಸರ್ಪ ದೋಷವನ್ನು(Kaal Sarp Dosh) ಬಹಳ ಅಶುಭವೆಂದು ಪರಿಗಣಿಸಲಾಗಿದೆ. ಒಬ್ಬ ವ್ಯಕ್ತಿ ತನ್ನ ಜಾತಕದಲ್ಲಿ ಕಾಳ ಸರ್ಪ ದೋಷವನ್ನು ಹೊಂದಿದ್ದರೆ, ಆ ವ್ಯಕ್ತಿ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ. ಜಾತಕದಲ್ಲಿ ಕಾಳ ಸರ್ಪ ದೋಷವನ್ನು ಹೊಂದಿರುವುದು ವ್ಯಕ್ತಿಯ ಮೇಲೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಪರಿಣಾಮ ಬೀರುತ್ತೆ. ಆದ್ದರಿಂದ, ಕಾಳ ಸರ್ಪ ದೋಷವನ್ನು ಪೂರ್ಣ ಆಚರಣೆಗಳೊಂದಿಗೆ ಪೂಜಿಸೋದು ಬಹಳ ಮುಖ್ಯ. ಕಾಳ ಸರ್ಪ ದೋಷ ಎಂದರೇನು, ಪೂಜಾ ವಿಧಾನ ಮತ್ತು ಕಾಳ ಸರ್ಪ ದೋಷದ ಪ್ರಯೋಜನ ಮತ್ತು ಲಕ್ಷಣಗಳು ಯಾವುವು ಎಂದು ತಿಳಿದುಕೊಳ್ಳೋಣ.
ಕಾಳ ಸರ್ಪ ದೋಷದ ಲಕ್ಷಣಗಳು ಹೀಗಿವೆ
ತನ್ನ ಜಾತಕದಲ್ಲಿ ಕಾಳ ಸರ್ಪ ದೋಷವನ್ನು ಹೊಂದಿರುವ ವ್ಯಕ್ತಿಯು ಆಗಾಗ್ಗೆ ತನ್ನ ಕನಸಿನಲ್ಲಿ(Dreams) ಸತ್ತ ಜನರನ್ನು ನೋಡುತ್ತಾನೆ.
ಜೊತೆಗೆ ಯಾರೋ ತಮ್ಮನ್ನು ಕತ್ತು ಹಿಸುಕುತ್ತಿರೋ ಹಾಗೆ ಕೆಲವರು ನೋಡುತ್ತಾರೆ.
ಆ ಯಕ್ತಿ ಜೀವನದಲ್ಲಿ ಸಾಕಷ್ಟು ಹೆಣಗಾಡಬೇಕಾಗುತ್ತೆ ಮತ್ತು ಅಗತ್ಯವಿರುವಾಗ ಒಂಟಿತನವನ್ನು ಅನುಭವಿಸುತ್ತಾನೆ.
ಅಷ್ಟೇ ಅಲ್ಲದೇ ಕಾಳ ಸರ್ಪದಿಂದ ಬಳಲುತ್ತಿರುವ ವ್ಯಕ್ತಿಯ ವ್ಯವಹಾರದ ಮೇಲೆ ಸಾಕಷ್ಟು ನಕಾರಾತ್ಮಕ ಪರಿಣಾಮ ಬೀರುತ್ತೆ. ವ್ಯವಹಾರದಲ್ಲಿ ಪದೇ ಪದೇ ನಷ್ಟವನ್ನು ಎದುರಿಸಬೇಕಾಗುವಂತೆ ಮಾಡುತ್ತೆ.
ನಿದ್ರೆಯಲ್ಲಿ ಹಾವು(Snake) ದೇಹದ ಮೇಲೆ ತೆವಳುವುದನ್ನು ನೋಡುವುದು, ಹಾವು ಕಚ್ಚುವುದನ್ನು ನೋಡುವುದು ಹೀಗೆ ಹಲವು ತೊಂದರೆ ಅನುಭವಿಸಬೇಕಾಗುತ್ತೆ.
ಸುಮ್ಮನೆ ಸಂಗಾತಿಯೊಂದಿಗೆ ವಾಗ್ವಾದ ನಡೆಸೋದು. ನೀವು ರಾತ್ರಿಯಲ್ಲಿ ಪದೇ ಪದೇ ಎಚ್ಚರಗೊಂಡರೆ, ಇದು ಕಾಳ ಸರ್ಪ ದೋಷದ ಲಕ್ಷಣವಾಗಿದೆ.
ಜೊತೆಗೆ, ಕನಸಿನಲ್ಲಿ ಆಗಾಗ್ಗೆ ಜಗಳಗಳನ್ನು ನೋಡುತ್ತಾನೆ. ವ್ಯಕ್ತಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆಗೀಡಾಗುವುದು. ಅಲ್ಲದೆ, ತಲೆನೋವು, ಚರ್ಮರೋಗ ಇತ್ಯಾದಿಗಳು ಸಹ ಕಾಳ ಸರ್ಪ ದೋಷದ ಲಕ್ಷಣಗಳಾಗಿವೆ.
ಜಾತಕದಲ್ಲಿ(Jataka) ಕಾಲ ಸರ್ಪ ದೋಷವು ಯಾವಾಗ ರೂಪುಗೊಳ್ಳುತ್ತೆ ಗೊತ್ತಾ?
ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಎಲ್ಲಾ ಗ್ರಹಗಳು ರಾಹು ಮತ್ತು ಕೇತುವಿನ ನಡುವೆ ಬಂದಾಗ, ಕಾಳ ಸರ್ಪ ದೋಷ ಎಂಬ ಯೋಗ ರೂಪುಗೊಳ್ಳುತ್ತೆ.
ಕಾಳ ಸರ್ಪ ದೋಷಕ್ಕೆ ಪರಿಹಾರಗಳು ಹೀಗಿವೆ
ಕಾಳ ಸರ್ಪ ದೋಷದಿಂದಾಗಿ, ಒಬ್ಬ ವ್ಯಕ್ತಿ ಜೀವನದಲ್ಲಿ ಸಾಕಷ್ಟು ಹೆಣಗಾಡಬೇಕಾಗುತ್ತೆ, ಆದ್ದರಿಂದ ಸಾಧ್ಯವಾದಷ್ಟು ಬೇಗ ಅದನ್ನು ತೊಡೆದುಹಾಕೋದು ಬಹಳ ಮುಖ್ಯ. ಕಾಳ ಸರ್ಪ ದೋಷಕ್ಕೆ ಪರಿಹಾರಗಳನ್ನು ತಿಳಿದುಕೊಳ್ಳೋಣ.
ಈ ಪರಿಹಾರಗಳನ್ನು ಪಾಲಿಸಿ
ಕಾಲ ಸರ್ಪ ದೋಷದಿಂದ ಬಳಲುತ್ತಿರುವ ವ್ಯಕ್ತಿಯು ಪ್ರತಿದಿನ ಮನೆ ಅಥವಾ ದೇವಾಲಯಕ್ಕೆ ಹೋಗಿ ಶಿವಲಿಂಗಕ್ಕೆ(Shivling) ಅಭಿಷೇಕ ಮಾಡಬೇಕು.
ಪ್ರದೋಷ ತಿಥಿಯ ದಿನದಂದು ಶಿವ ದೇವಾಲಯದಲ್ಲಿ ರುದ್ರಾಭಿಷೇಕ ಮಾಡುವುದು ಸಹ ಪ್ರಯೋಜನಕಾರಿಯಾಗಿದೆ.
ಜೊತೆಗೆ, ಆ ವ್ಯಕ್ತಿಯು ಪ್ರತಿದಿನ ಕುಲದೇವತೆಯನ್ನು ಪೂಜಿಸಬೇಕು.
ಮಹಾಮೃತ್ಯುಂಜಯ ಮಂತ್ರವನ್ನು ಪ್ರತಿದಿನ ಕನಿಷ್ಠ 108 ಬಾರಿ ಪಠಿಸಬೇಕು.
ಇದಲ್ಲದೆ, ಹನುಮಾನ್ ಚಾಲೀಸಾವನ್ನು ದಿನಕ್ಕೆ 11 ಬಾರಿ ಪಠಿಸಬೇಕು.
ಕಾಳ ಸರ್ಪ ದೋಷದಿಂದ ಬಳಲುತ್ತಿರುವ ವ್ಯಕ್ತಿ ನವಿಲಿನ ಗರಿಗಳನ್ನು ತನ್ನ ಮನೆಯಲ್ಲಿ ಇಟ್ಟುಕೊಳ್ಳಬೇಕು.
ಕಾಳ ಸರ್ಪ ದೋಷ ಪೂಜೆಯ ಪ್ರಯೋಜನಗಳು ಹೀಗಿವೆ
ಒಬ್ಬ ವ್ಯಕ್ತಿ ಕಾಳ ಸರ್ಪ ದೋಷ ತಡೆಗಟ್ಟುವಿಕೆಗಾಗಿ ಪೂಜಿಸಿದರೆ ಆ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಪರಿಹಾರವನ್ನು ಪಡೆಯುತ್ತಾನೆ.
ಕಾಳ ಸರ್ಪ ದೋಷ ಪೂಜೆಯ ನಂತರ, ವ್ಯಕ್ತಿಯ ವೈವಾಹಿಕ ಜೀವನವು(Marriage life) ಸಾಕಷ್ಟು ಉತ್ತಮವಾಗಿರುತ್ತೆ. ಗಂಡ ಮತ್ತು ಹೆಂಡತಿಯ ನಡುವೆ ಸಂತೋಷದ ವಾತಾವರಣ ಉಂಟಾಗುತ್ತೆ.ಹಾಗೆಯೇ ಸಾಮಾಜಿಕ ಖ್ಯಾತಿಯು ಹೆಚ್ಚಾಗುತ್ತೆ.
ಕಾಳ ಸರ್ಪ ದೋಷ ಪೂಜೆಯಿಂದ ಮನೆಯಲ್ಲಿಯೂ ಶಾಂತಿಯ ವಾತಾವರಣ ನಿರ್ಮಾಣವಾಗುತ್ತೆ.
ವ್ಯವಹಾರದಲ್ಲಿನ ಸಮಸ್ಯೆಗಳನ್ನು ತೆಗೆದುಹಾಕಲಾಗುತ್ತೆ ಮತ್ತು ವ್ಯವಹಾರವು ಬೆಳೆಯಲು ಪ್ರಾರಂಭಿಸುತ್ತೆ.
ಉದ್ಯೋಗಿಗಳು ಸ್ಥಾನ ಮತ್ತು ಪ್ರತಿಷ್ಠೆಯನ್ನು ಪಡೆಯುತ್ತಾರೆ ಮತ್ತು ಅವರ ಸ್ಥಾನವು ಇನ್ನೂ ಹೆಚ್ಚಾಗುತ್ತೆ
ಹಣಕಾಸಿನ ಸಮಸ್ಯೆಗಳನ್ನು(Money problem) ಸಹ ಪರಿಹಾರವಾಗುತ್ತೆ.
ಕಾಳ ಸರ್ಪ ದೋಷ ಪೂಜಾ ವಿಧಿ
ಕಾಳ ಸರ್ಪ ದೋಷವನ್ನು ತಡೆಗಟ್ಟಲು ಪೂಜಾ ದಿನದಂದು ಉಪವಾಸ ಇರಿ. ಹಾಗೆಯೇ, ಬ್ರಹ್ಮಚಾರ್ಯವನ್ನು ಕಾಪಾಡಿಕೊಳ್ಳಿ.
ಮೊದಲಿಗೆ ಶಿವಲಿಂಗದ ರುದ್ರಾಭಿಷೇಕವನ್ನು(Rudrabhishek) ಮಾಡಿ.
ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ.
ಸರ್ಪಗಳ ದೇವರನ್ನು ಪೂಜಿಸಿ ಮತ್ತು ಹಾವಿನ ವಿಗ್ರಹಕ್ಕೆ ಹಾಲನ್ನು ಅರ್ಪಿಸಿ.
ನಾಗರ ಪಂಚಮಿಯ ದಿನದಂದು ಶಿವ ಮತ್ತು ವಿಷ್ಣುವನ್ನು ಪೂಜಿಸೋದರಿಂದ ಕಾಳ ಸರ್ಪ ದೋಷದ ಪರಿಣಾಮವನ್ನು ಕಡಿಮೆ ಮಾಡಬಹುದು.