ಮನೆ ಸುತ್ತಮುತ್ತ ಈ ಹಕ್ಕಿ ಬರ್ತಿದ್ರೆ, ಇದು ಮಾಟ-ಮಂತ್ರದ ಸುಳಿವು ಆಗಿರಬಹುದು!
ಮನೆ ಸುತ್ತಮುತ್ತ ಈ ಪಕ್ಷಿ ಕಾಣಿಸಿಕೊಂಡರೆ ಅದನ್ನು ಶುಭ ಶಕುನವೆಂದು ಪರಿಗಣಿಸಲಾಗುವುದಿಲ್ಲ. ಈ ಪಕ್ಷಿ ಮಾಟ-ಮಂತ್ರಗಳಿಗೆ ಬಳಸುವುದರಿಂದ, ಇದು ಅಶುಭ ಘಟನೆಗಳ ಸಂಕೇತವಾಗಿರಬಹುದು.

5G ಯುಗದಲ್ಲಿ ಬದುಕುತ್ತಿದ್ದರೂ ಜನರು ಇಂದು ಮಾಟ-ಮಂತ್ರಗಳ ಭಯವನ್ನು ಹೊಂದಿರುತ್ತಾರೆ. ತಮಗೆ ಆಗದವರು ಅಂದ್ರೆ ಶತ್ರುಗಳ ತಮ್ಮ ವಿರುದ್ಧ ಮಾಟ-ಮಂತ್ರ ಮಾಡಿಸಿರುತ್ತಾರೆ ಎಂಬ ಮಾತುಗಳನ್ನು ಕೇಳಿರುತ್ತೇವೆ. ರಸ್ತೆಯಲ್ಲಿ ನಿಂಬೆ ಹಣ್ಣು ಕಂಡ್ರೆ ಅದರ ಪಕ್ಕದಿಂದ ಹೋಗುವ ರೂಢಿ ಇನ್ನು ನಮ್ಮಲ್ಲಿದೆ. ನಿಮ್ಮ ಮನೆ ಸುತ್ತಮುತ್ತ ಪದೇ ಪದೇ ಹಕ್ಕಿಯೊಂದು ಬರುತ್ತಿದ್ರೆ, ಅದು ನಿಮಗೆ ಮಾಟ-ಮಂತ್ರ ಮಾಡಿಸಿರುವ ಸುಳಿವು ಆಗಿರಬಹುದು ಎಂದು ಕೆಲವರು ಹೇಳುತ್ತಾರೆ.
ತಾಂತ್ರಿಕರು ಅಥವಾ ಮೋಡಿಕೋರರು ಪಕ್ಷಿಗಳ ಮೂಲಕ ತಮ್ಮ ದುಷ್ಟ ಮಂತ್ರಗಳನ್ನು ನಿಮ್ಮ ಮೇಲೆ ಪ್ರಯೋಗಿಸುವ ಸಾಧ್ಯತೆ ಇರುತ್ತದೆ. ಒಂದು ವೇಳೆ ನೀವು ವಾಸಿಸುವ ಪ್ರದೇಶದಲ್ಲಿ ಈ ಪಕ್ಷಿ ಕಂಡ್ರೆ ಎಚ್ಚರವಾಗಿರಬೇಕು ಎಂದು ಜೋತಿಷ್ಯ ತಜ್ಞರು ಸಲಹೆ ನೀಡುತ್ತಾರೆ. ಹಾಗಾದ್ರೆ ಆ ಪಕ್ಷಿ ಯಾವುದು ಎಂದ ನೋಡೋಣ ಬನ್ನಿ
ಗೂಬೆ
ಗೂಬೆಯನ್ನು ಸಂಪತ್ತು ಮತ್ತು ಸಮೃದ್ಧಿಯ ಸಂಕೇತ ಎಂದು ಕರೆಯಲಾಗುತ್ತದೆ. ತಾಂತ್ರಿಕ ಆಚರಣೆಗಳಲ್ಲಿ ಅತ್ಯಧಿಕವಾಗಿ ಗೂಬೆಯನ್ನು ಬಳಕೆ ಮಾಡಲಾಗುತ್ತದೆ. ಶತ್ರುಗಳು ನಿಮ್ಮನ್ನು ಗೂಬೆ ಮೂಲಕ ವಶೀಕರಣ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಎಂದು ನಂಬಲಾಗಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಗೂಬೆ ಪದೇ ಪದೇ ನೀವು ವಾಸಿಸುವ ಪ್ರದೇಶದಲ್ಲಿ ಬರುತ್ತಿದ್ರೆ ಜಾಗರೂಕರಾಗಿರಬೇಕು. ವಿಶೇಷವಾಗಿ ಮನೆ ಬಾಗಿಲ ಮುಂದೆ ಅಥವಾ ಹೊಸ್ತಿಲ ಮೇಲೆ ಗೂಬೆ ಕುಳಿತರೆ ಅದು ಶುಭಕರವಲ್ಲ. ಈ ರೀತಿ ಗೂಬೆ ಕಾಣಿಸಿಕೊಂಡ್ರೆ ಅಹಿತಕರ ಘಟನೆಗಳು ನಡೆಯುವ ಸಂಕೇತ ಎಂದು ನಂಬಲಾಗಿದೆ.
ಪರಿಹಾರ ಏನು?
ಈ ರೀತಿಯಾಗಿ ಗೂಬೆ ಕಾಣಿಸಿಕೊಳ್ಳುತ್ತಿದ್ರೆ ಮನೆಯನ್ನು ಸ್ವಚ್ಛಗೊಳಿಸಿ, ಗಂಗಾಜಲ ಸಿಂಪಡಿಸಬೇಕು. ಹಾಗೆ ಮನೆಯಲ್ಲಿ ಧೂಪ ಹಾಕಿ, ಹನುಮಾನ್ ಚಾಲೀಸಾ ಮಂತ್ರವನ್ನು ಪಠಿಸಬೇಕು. ಈ ಮಂತ್ರವನ್ನು ಜೋರಾಗಿ ಪಠಿಸಲು ಸಲಹೆ ನೀಡಲಾಗುತ್ತದೆ. ಹಾಗೆಯೇ ಮನೆ ಸುತ್ತಮುತ್ತ ಕಾಣಿಸುವ ಅನುಮಾನಸ್ಪದ ವಸ್ತುಗಳಿಗೆ ಬೆಂಕಿ ಹಚ್ಚಬೇಕು.
ಬಿಳಿ ಗೂಬೆ
ಮನೆ ಅಥವಾ ಮನೆ ಸುತ್ತಮುತ್ತ ಬಿಳಿ ಗೂಬೆ ಕಾಣಿಸಿಕೊಂಡರೆ ಅದನ್ನು ಶುಭಕರದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇತ್ತೀಚೆಗಷ್ಟೇ ಕಾಶಿ ವಿಶ್ವನಾಥ ದೇವಾಲಯದ ಮೇಲ್ಭಾಗದಲ್ಲಿ ಬಿಳಿ ಗೂಬೆ ಕಾಣಿಸಿಕೊಂಡಿತ್ತು. ಇದು ದೇಶದ ಆರ್ಥಿಕ ಬೆಳವಣಿಗೆ ಶುಭ ಸೂಚನೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ನಂಬಿಕೆಗಳ ಪ್ರಕಾರ, ಗೂಬೆ ಮಹಾಲಕ್ಷ್ಮಿಯ ವಾಹನವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಗೂಬೆ ಕಾಣಿಸಿಕೊಂಡರೆ, ಅದನ್ನು ಸಂಪತ್ತು, ಅದೃಷ್ಟ ಮತ್ತು ಸಮೃದ್ಧಿಯನ್ನು ಪಡೆಯುವ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂದು ಗೂಬೆಗಳ ಸಂಖ್ಯೆಯೇ ಕಡಿಮೆಯಾಗುತ್ತಿದೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.