ಈ ತಿಂಗಳ 2ನೇ ವಾರದಲ್ಲಿ ಕಾಲ ಯೋಗ ರಚನೆ; 5 ರಾಶಿಯವರ ಜೀವನದಲ್ಲಿ ಅದೃಷ್ಟದ ಬೆಳಕು
Kala Yog 2025: ಅಕ್ಟೋಬರ್ 6 ರಿಂದ 12 ರ ನಡುವೆ ಶುಕ್ರ ಮತ್ತು ಚಂದ್ರರ ಸಂಚಾರದಿಂದ ಕಾಲ ಯೋಗವು ರೂಪುಗೊಳ್ಳುತ್ತಿದೆ. ಈ ಯೋಗವು ಜೀವನದಲ್ಲಿ ಅನಿರೀಕ್ಷಿತ ಯಶಸ್ಸು, ಆರ್ಥಿಕ ಲಾಭ ಮತ್ತು ವೃತ್ತಿಪರ ಪ್ರಗತಿಯನ್ನು ತರಲಿದೆ.

ಕಾಲ ಯೋಗ
ಅಕ್ಟೋಬರ್‌ನಲ್ಲಿ ಹಲವು ಗ್ರಹಗಳು ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತಿವೆ. ಇದರಿಂದ ಹಲವು ಸಂಯೋಗಗಳು ರೂಪುಗೊಳ್ಳುತ್ತಿವೆ. ಅಕ್ಟೋಬರ್ 6 ರಿಂದ 12 ರ ನಡುವೆ ಶುಕ್ರನು ಸಿಂಹ ರಾಶಿ ಮತ್ತು ಚಂದ್ರನು ಕುಂಭ ರಾಶಿಗ ಬರಲಿದ್ದಾರೆ. ಇದರಿಂದ ಕಾಲ ಯೋಗ ರಚನೆಯಾಗುತ್ತಿದೆ. ಈ ಕಾಲಯೋಗ ಕೆಲವು ರಾಶಿಚಕ್ರದವರ ಜೀವನದಲ್ಲಿ ಅದೃಷ್ಟದ ದೀಪವನ್ನು ಬೆಳಗಲಿದೆ. ಈ ಕಾಲಯೋಗ ರಚನೆಯಿಂದ ಅನಿರೀಕ್ಷಿತ ಯಶಸ್ಸು, ಬಡ್ತಿ ಮತ್ತು ಗೌರವ ಸಿಗಲಿದೆ. ಆ ರಾಶಿಚಕ್ರಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ.
ಮೇಷ ರಾಶಿ
- ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಪ್ರಗತಿ ಸಿಗಲಿದೆ.
- ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ, ಹೊಸ ಸ್ಥಳದಲ್ಲಿ ಹೊಸ ಉದ್ಯೋಗ ಸಿಗುವ ಸಾಧ್ಯತೆ
- ವ್ಯಾಪಾರ ಒಪ್ಪಂದಗಳಿಂದ ಅತ್ಯಧಿಕ ಲಾಭದ ಸಾಧ್ಯತೆ
- ಭೂಮಿ, ಕಟ್ಟಡಗಳು ಮತ್ತು ಆಸ್ತಿಗಳಲ್ಲಿ ಹೂಡಿಕೆ ಮಾಡಲು ಒಳ್ಳೆಯ ಸಮಯ
ಸಿಂಹ ರಾಶಿ
- ನ್ಯಾಯಾಲದಲ್ಲಿರುವ ವ್ಯಾಜ್ಯಗಳಿಂದ ಮುಕ್ತಿ, ನಿಮ್ಮ ಪರವಾಗಿ ತೀರ್ಪು ಬರುವ ಸಾಧ್ಯತೆ.
- ವಿದೇಶದಲ್ಲಿ ಕೆಲಸ ಅಥವಾ ಅಧ್ಯಯನಕ್ಕೆ ತಯಾರಿ ನಡೆಸುತ್ತಿರುವವರಿಗೆ ಶುಭ ಸುದ್ದಿ ಕೇಳುವಿರಿ
- ವ್ಯವಹಾರ/ವೃತ್ತಿ ಜೀವನದಲ್ಲಿರುವ ಶತ್ರುಗಳಿಗೆ ಸೋಲು ಆಗಲಿದೆ.
- ಕುಟುಂಬ ಜೀವನ ಮತ್ತು ವೃತ್ತಿಪರ ಜೀವನದಲ್ಲಿ ನೆಮ್ಮದಿ ಮತ್ತು ಸಂತೋಷ.
- ಹೊಸ ಕೆಲಸ ಅಥವಾ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಎಚ್ಚರಿಕೆಯಿಂದಿರಿ.
ತುಲಾ ರಾಶಿ
- ಉದ್ಯೋಗದಲ್ಲಿ ಬಡ್ತಿ ಮತ್ತು ಹೆಚ್ಚಿನ ಜವಾಬ್ದಾರಿಗಳು ನಿಮ್ಮದಾಗುತ್ತವೆ.
- ನಿರೀಕ್ಷಿಸಿದ ಲಾಭ ಸರಿಯಾದ ಸಮಯಕ್ಕೆ ಸಿಗಲಿದೆ.
- ಹಲವೆಡೆ ಸಿಲುಕಿದ ನಿಮ್ಮ ಹಣ ಹಿಂದಿರುಗಿ ಬರಲಿದೆ. ಆರ್ಥಿಕ ಸಮಸ್ಯೆಗಳು ದೂರವಾಗಲಿವೆ
- ಪಿತ್ರಾರ್ಜಿತ ಆಸ್ತಿಗಳ ಮೂಲಕ ನಿಮಗೆ ಹಣ ಸಿಗಬಹುದು.
- ವಿದೇಶ ಅಥವಾ ದೀರ್ಘ ಪ್ರಯಾಣ ಸಾಧ್ಯತೆ
ಇದನ್ನೂ ಓದಿ: ಶತ್ರು ಗ್ರಹ ಮಂಗಳ-ಶನಿಯ ಪಂಚಮ ದೃಷ್ಟಿ, ಈ ರಾಶಿಗೆ ಬ್ಯಾಂಕ್ ಬ್ಯಾಲೆನ್ಸ್ ಡಬಲ್
ವೃಶ್ಚಿಕ ರಾಶಿ
- ಮಹಿಳೆಯರು ಕೆಲಸದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸುತ್ತಾರೆ.
- ವ್ಯಾಪಾರ ಮಾಡುತ್ತಿರುವವರಿಗೆ ಉತ್ತಮ ಲಾಭ, ಸಣ್ಣ ಸಾಲಗಳಿಂದ ಮುಕ್ತಿ
- ದೈಹಿಕ ಆರೋಗ್ಯದಲ್ಲಿ ಸುಧಾರಣೆ, ಮನಸ್ಸಿಗೆ ಶಾಂತಿ ಸಿಗುತ್ತದೆ. ಕಂಕಣ ಭಾಗ್ಯ ಬರಲಿದೆ.
- ಮಕ್ಕಳಿಂದ ಸಂತೋಷದ ಸುದ್ದಿ ಕೇಳುವಿರಿ
- ಸಂಗಾತಿ ಜೊತೆಗಿನ ಸಂಬಂಧ ಗಾಢವಾಗಲಿದೆ.
ಇದನ್ನೂ ಓದಿ: 12 ವರ್ಷದ ನಂತರ ಕನ್ಯಾದಲ್ಲಿ ಶುಕ್ರಾದಿತ್ಯ ರಾಜಯೋಗ, ಈ ರಾಶಿಗೆ ಭರ್ಜರಿ ಲಾಟರಿ, ಅಪಾರ ಯಶಸ್ಸು
ಧನು ರಾಶಿ
- ವೃತ್ತಿ ಜೀವನದ ಸ್ಪರ್ಧೆಯಲ್ಲಿ ಗೆಲುವು ನಿಮ್ಮದಾಗಲಿದ್ದು, ಶತ್ರುಗಳಿಗೆ ಸೋಲು
- ಎಲ್ಲವನ್ನೂ ಜಯಿಸಿ ಯಶಸ್ಸನ್ನು ಸಾಧಿಸುವಿರಿ.
- ಕುಟುಂಬದ ಅಗತ್ಯಗಳು ಒಂದೊಂದಾಗಿ ಪೂರ್ಣಗೊಳ್ಳಲಿವೆ
- ಅನಗತ್ಯವಾಗಿ ಹಣ ಖರ್ಚು ಮಾಡೋದು ತಪ್ಪಲಿದೆ.
- ಸಂಗಾತಿಯಿಂದ ನಿಮಗೆ ಸಂಪೂರ್ಣ ಬೆಂಬಲ
- ಉತ್ತಮ ಯೋಜನೆಗಳಲ್ಲಿ ಹೂಡಿಕೆ
ವಿಶೇಷ ಮನವಿ: ಜ್ಯೋತಿಷ್ಯ ಲೇಖನದಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥಗಳು ಮತ್ತು ನಂಬಿಕೆಗಳನ್ನು ಆಧರಿಸಿದೆ. ಈ ಮಾಹಿತಿಯನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.