ಪಿತೃ ದೋಷ ಎಷ್ಟು ತಲೆಮಾರಿನವರೆಗೂ ಇರುತ್ತೆ? ಪಿತೃ ದೋಷ ಇರೋದನ್ನು ತಿಳಿಯೋದು ಹೇಗೆ?
ಪಿತೃ ದೋಷವು ತಲೆಮಾರುಗಳಿಂದ ಬರುವ ಶಾಪವಾಗಿದ್ದು, ಕುಟುಂಬದಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಗರುಡ ಪುರಾಣದಲ್ಲಿ ಪಿತೃ ದೋಷ ನಿವಾರಣೆಗೆ ಪರಿಹಾರಗಳನ್ನು ಸೂಚಿಸಲಾಗಿದೆ. ಜ್ಯೋತಿಷ್ಯದಲ್ಲಿ ಜಾತಕದಲ್ಲಿ ನಿರ್ದಿಷ್ಟ ಗ್ರಹ ಸ್ಥಾನಗಳು ಪಿತೃದೋಷವನ್ನು ಸೂಚಿಸುತ್ತವೆ.

ಪಿತೃ ದೋಷ
ಪಿತೃ ದೋಷ ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಾಗಿರಲ್ಲ. ಈ ದೋಷ ತಲೆಮಾರುಗಳಿಂದ ತಲೆಮಾರಿಗೆ ಬರುತ್ತಿರುತ್ತದೆ. ಅದಕ್ಕಾಗಿ ಪಿತೃದೋಷ ನಿವಾರಣೆಗಾಗಿ ಪೂಜೆಗಳನ್ನು ಸಲ್ಲಿಕೆ ಮಾಡಲಾಗುತ್ತದೆ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಲೆಂದು ಪಿತೃಪಕ್ಷದಲ್ಲಿ ಪೂಜೆ ಮಾಡಲಾಗುತ್ತದೆ.
ಪಿತೃ ದೋಷ ಹೇಗೆ ಬರುತ್ತೆ?
ಪಿತೃ ದೋಷಕ್ಕೆ ಸಿಲುಕಿದ ವ್ಯಕ್ತಿ ಅಥವಾ ಕುಟುಂಬ ಸಾಲು ಸಾಲು ಸಮಸ್ಯೆಗಳನ್ನು ಎದುರಿಸುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಪಿತೃ ದೋಷಕ್ಕೆ ಒಳಗಾಗ್ತಾರೆ ಅಂತ ಹೇಳಲು ಆಗಲ್ಲ. ಕುಟುಂಬದ ಯಾವುದೋ ಒಬ್ಬ ಸದಸ್ಯ ಅಥವಾ ಇಬ್ಬರು ಈ ದೋಷಕ್ಕೆ ಒಳಗಾಗಬಹುದು. ಈ ದೋಷ ತಲೆಮಾರುಗಳಿಂದ ಬಂದಿರುವ ಸಾಧ್ಯತೆಗಳಿರುತ್ತವೆ ಎಂದು ಶಾಸ್ತ್ರಗಳು ಹೇಳುತ್ತಾರೆ.
ಎಷ್ಟು ತಲೆಮಾರು ಇರುತ್ತೆ ಪಿತೃ ದೋಷ?
ಸಾಮಾನ್ಯವಾಗಿ ಏಳು ತಲೆಮಾರು ಪಿತೃ ದೋಷ ಇರುತ್ತೆ ಎಂದು ಹೇಳಲಾಗುತ್ತದೆ. ಪೂರ್ವಜನ್ಮದಲ್ಲಿನ ಕರ್ಮ ಪ್ರಬಲವಾಗಿರದ ವ್ಯಕ್ತಿಯ ಜಾತಕದಲ್ಲಿ ಪಿತೃ ದೋಷವಿರದ್ರೆ, ಆತ ಈ ದೋಷದಿಂದ ಪ್ರಭಾವಕ್ಕೆ ಒಳಗಾಗುತ್ತಾನೆ. ಪಿತೃ ದೋಷ ಎಷ್ಟು ಕಾಲ ಇರುತ್ತೆ? ಪಿತೃದೋಷ ಪರಿಹಾರದ ಬಗ್ಗೆ ಗರುಡು ಪುರಾಣದಲ್ಲಿ ಹೇಳಲಾಗಿದೆ.
ಗರುಡ ಪುರಾಣದಲ್ಲಿ ಪಿತೃ ದೋಷದ ಪರಿಹಾರ
1. ಪಿತೃ ಪಕ್ಷದ ವೇಳೆ ಪೂರ್ವಜರ ಆತ್ಮ ಶಾಂತಿಗಾಗಿ ಹವನ ಪೂಜೆ, ಶ್ರಾದ್ಧ (ಎಳ್ಳುನೀರು ಬಿಡುವ ಪ್ರಕ್ರಿಯೆ) ಮಾಡಬೇಕು. ಬ್ರಾಹ್ಮಣರು ಮತ್ತು ನಿರ್ಗತಕರಿಗೆ ಅನ್ನದಾನ ಮಾಡಬೇಕು.
2.ಕುಲದೇವತೆ ಕೋಪಗೊಂಡಿದ್ರೂ ಪಿತೃ ದೋಷ ಕುಟುಂಬದ ಮೇಲಿರುತ್ತದೆ. ಈ ಸಮಯದಲ್ಲಿ ಕುಲದೇವತೆಯನ್ನು ಪೂಜಿಸಬೇಕು .
3.ಮಹಾಮೃತ್ಯುಂಜಯ ಮಂತ್ರ ಪಠಿಸುತ್ತಾ ಹವನ ಮಾಡಿ. ಮನೆಯಲ್ಲಿಯೇ ಮಣ್ಣಿನ ಶಿವಲಿಂಗ ಮಾಡಿ. ಕನಿಷ್ಠ 1.25 ಲಕ್ಷ ಶಿವಲಿಂಗಗಳನ್ನು ಪೂಜಿಸಿ.
4.ಬ್ರಾಹ್ಮಣರಿಸಿ ಸಿಹಿ ತಿನ್ನಿಸಿ ಆಶೀರ್ವಾದ ಪಡೆದುಕೊಳ್ಳಿ. ಕುಲದೇವತೆಗೆ ಪೂಜಿಸಿ ಬಟ್ಟೆ ದಾನ ಮಾಡಿ.
ಪಿತೃ ದೋಷದ ಲಕ್ಷಣಗಳು
- ಪಿತೃ ದೋಷಕ್ಕೆ ತುತ್ತಾದವರು ಕೋಪ, ಹತಾಶೆ ಮತ್ತು ಖಿನ್ನತೆಯನ್ನು ಹೊಂದಿರುತ್ತಾರೆ. ವಂಶವೃದ್ಧಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.
- ಕುಟುಂಬದಲ್ಲಿ ಅಪಘಾತ ಸಂಭವಿಸುತ್ತಿರುತ್ತವೆ.
- ಕುಟುಂಬದಲ್ಲಿ ನಿರಂತರ ಸಂಘರ್ಷ, ಕಲಹ, ಮನಸ್ತಾಪ ಉಂಟಾಗುತ್ತಿರುತ್ತದೆ.
ಪಿತೃ ದೋಷ ಹೇಗೆ ಬರುತ್ತೆ?
ಗರುಡ ಪುರಾಣದ ಪ್ರಕಾರ, ಕುಟುಂಬದ ಮುಖ್ಯಸ್ಥ ಯಾವುದೇ ಪ್ರಾಣಿ, ಹಾವು ಅಥವಾ ಅಸಹಾಯಕ ವ್ಯಕ್ತಿಯನ್ನು ಕೊಂದರೆ ಅಥವಾ ಹಿಂಸಿಸಿದರೆ ಪಿತೃದೋಷಕ್ಕೆ ಒಳಗಾಗುತ್ತಾರೆ.
ಇದನ್ನೂ ಓದಿ: ಗಂಡನ ಮೇಲೆ ಹಿಡಿತ ಸಾಧಿಸುವ ಹೆಂಡತಿಯರು ಯಾವ ತಿಂಗಳಲ್ಲಿ ಹುಟ್ಟಿರುತ್ತಾರೆ?
ಜ್ಯೋತಿಷ್ಯ
ಜ್ಯೋತಿಷ್ಯದ ಪ್ರಕಾರ, ಜಾತಕದ ಎರಡನೇ, ಎಂಟನೇ ಮತ್ತು ಹತ್ತನೇ ಮನೆಗಳಲ್ಲಿ ಸೂರ್ಯನ ಜೊತೆಗೆ ಕೇತು ಅಥವಾ ರಾಹು ಇದ್ದರೆ, ಪಿತೃ ದೋಷ ಉಂಟಾಗುತ್ತದೆ.
ಇದನ್ನೂ ಓದಿ: ಪರಮ ಸುಂದರಿ ಅಂದ್ರೆ ಯಾರು? ಶಾಸ್ತ್ರಗಳಲ್ಲಿರೋ ಅಡಗಿರೋ ಸತ್ಯ ಕೇಳಿದ್ರೆ ಖುಷಿಯಾಗುತ್ತೆ!