ಚಾಣಕ್ಯ ನೀತಿ: ಗಂಡನನ್ನು ಯಾವಾಗಲೂ ಖಷಿ ಮಾಡುವ ಹೆಂಡ್ತಿಯ ಪ್ರಮುಖ ಗುಣಗಳು
ಆಚಾರ್ಯ ಚಾಣಕ್ಯರ ನೀತಿಯ ಪ್ರಕಾರ, ಸುಖ ಸಂಸಾರಕ್ಕಾಗಿ ಮಹಿಳೆಯರು ಕೆಲವು ನಿಯಮಗಳನ್ನು ಪಾಲಿಸಬೇಕು. ಮೂರು ಪ್ರಮುಖ ಗುಣಗಳನ್ನು ಹೊಂದಿರಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಈ ಗುಣಗಳು ಕುಟುಂಬದಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ.

ಅತ್ಯಂತ ಜ್ಞಾನವುಳ್ಳ ಮತ್ತು ಬುದ್ಧಿವಂತ ವ್ಯಕ್ತಿ
ಆಚಾರ್ಯ ಚಾಣಕ್ಯ ಅವರನ್ನು ಅತ್ಯಂತ ಜ್ಞಾನವುಳ್ಳ ಮತ್ತು ಬುದ್ಧಿವಂತ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ಹೇಳಿದ ಮಾತುಗಳು ಇಂದಿಗೂ ಜೀವಂತವಾಗಿದ್ದು, ಜನರಿಗೆ ಮಾರ್ಗದರ್ಶನ ನೀಡುತ್ತವೆ. ಸುಖ ಸಂಸಾರಕ್ಕೆ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕು. ಮಹಿಳೆ ಗಂಡನನ್ನು ಸಂತೋಷವಾಗಿಡಲು ಮೂರು ಕೆಲಸಗಳನ್ನು ಮಾಡಬೇಕು ಎಂದು ಚಾಣಕ್ಯ ಹೇಳುತ್ತಾರೆ.
ಸಂಸಾರ
ಸಂಸಾರದಲ್ಲಿ ಸಂತೋಷ ನೆಲೆಸಲು ಮಹಿಳೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಉಲ್ಲೇಖಿಸುತ್ತಾರೆ. ಮಹಿಳೆಯರು ಈ ಅಭ್ಯಾಸಗಳನ್ನು ರೂಢಿಸಿಕೊಂಡ್ರೆ ಮನೆಯಲ್ಲಿ ಶಾಂತಿ ಮತ್ತು ಸಂತೋಷ ನೆಲೆಸುತ್ತದೆ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ.
1.ವಿಧೇಯಳಾಗಿರುವುದು
ಮಹಿಳೆಯರು ಸಭ್ಯ ಮತ್ತು ದಯೆಯನ್ನು ಹೊಂದಿರಬೇಕು. ಈ ಅಭ್ಯಾಸ ಹೊಂದಿರುವವರು ಇಡೀ ಕುಟುಂಬವನ್ನು ಜೊತೆಯಾಗಿಟ್ಟುಕೊಳ್ಳುವ ಮತ್ತು ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಾಳೆ. ಪತ್ನಿಯಲ್ಲಿ ಸಭ್ಯ, ದಯೆ ಮತ್ತು ವಿದೇಯಕ ಗುಣಗಳಿದ್ರೆ ಆ ಕುಟುಂಬವನ್ನು ಸಮಾಜ ಗೌರವಿಸುತ್ತದೆ. ಮಹಿಳೆಯರು ಯಾವಾಗಲೂ ಕುಟುಂಬದ ಹಿತವನ್ನು ಬಯಸುತ್ತಾರೆ. ಮಹಿಳೆಯಿಂದಲೇ ಕುಟುಂಬದಲ್ಲಿ ಸಕಾರಾತ್ಮಕ ವಾತಾವರಣ ಹೊಂದಿರುತ್ತದೆ. ಮನೆಯಲ್ಲಿ ನೆಮ್ಮದಿ ಇದ್ರೆ ಗಂಡ ಸಂತೋಷವಾಗಿರುತ್ತಾನೆ.
2.ಧರ್ಮ ಪಾಲನೆ
ಮಹಿಳೆ ಧರ್ಮ ಹೇಗೆ ಪಾಲನೆ ಮಾಡಬೇಕು ಮತ್ತು ಯಾವ ರೀತಿಯಲ್ಲಿ ಆಚರಿಸಬೇಕು ಅಂತಾ ತಿಳಿದುಕೊಂಡಿರಬೇಕೆಂದುಕೊಂಡು ಚಾಣಕ್ಯ ಹೇಳುತ್ತಾರೆ. ಧರ್ಮವನ್ನು ತಿಳಿದಿರುವ ಮಹಿಳೆಯಿಂದಲೇ ಮಾತ್ರ ಗಂಡನಿಂದ ಸಂತೋಷವಾಗಿಡಲು ಸಾಧ್ಯವಾಗುತ್ತದೆ. ಮಹಿಳೆ ಧರ್ಮ ಮತ್ತು ಸಂಪ್ರದಾಯ ಅರ್ಥ ಮಾಡಿಕೊಂಡ್ರೆ ಮಾತ್ರ ಕುಟುಂಬದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ.
ಇದನ್ನೂ ಓದಿ: Chanakya Niti: ಯಶಸ್ಸನ್ನು ತಡೆಯುವ ಆ ಮೂರು ಭಯಗಳು! ಇದು ಚಾಣಕ್ಯ ನೀತಿ
3.ಹಣ ಉಳಿತಾಯ
ಮಹಿಳೆಯರು ಅನಗತ್ಯ ಖರ್ಚುಗಳನ್ನು ತಡೆಯುತ್ತಿದ್ರೆ ಗಂಡ ಖುಷಿಯಾಗಿರುತ್ತಾನೆ. ಮಹಿಳೆಯಲ್ಲಿನ ಉಳಿತಾಯದ ಗುಣ ಕುಟುಂಬವನ್ನು ರಕ್ಷಿಸುತ್ತದೆ. ಆರ್ಥಿಕ ಸಂಕಷ್ಟದಲ್ಲಿದ್ದಾಗ ಮಹಿಳೆಯ ಉಳಿತಾಯ ಗುಣ ಕುಟುಂಬದ ರಕ್ಷಣೆಗೆ ಕಾರಣವಾಗುತ್ತದೆ. ಈ ಗುಣವನ್ನು ಹೊಂದಿರುವ ಮಹಿಳೆ ಯಾವಾಗಲೂ ಸಂತೋಷದ ಗಂಡನನ್ನು ಹೊಂದಿರುತ್ತಾಳೆ.
ಇದನ್ನೂ ಓದಿ: ಆರೋಗ್ಯದ ರಹಸ್ಯ: Chanakya Niti ತಿಳಿಸಿದ ಆ ಮೂರು ಪದಗಳು!