ಸ್ವಾಭಿಮಾನದ ನಾಲ್ಕು ರಾಶಿಗಳು: ಇವರನ್ನು ಯಾರೂ ಮೆಟ್ಟಿ ನಿಲ್ಲೋಕೆ ಆಗಲ್ಲ!
ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಯವರು ತುಂಬಾ ಸ್ವಾಭಿಮಾನಿಗಳು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಹಿಸಿಕೊಳ್ಳುವುದಿಲ್ಲ. ಯಾವ ನಾಲ್ಕು ರಾಶಿಗಳು ಎಂದು ತಿಳಿಯಿರಿ.

ಸ್ವಾಭಿಮಾನದ ರಾಶಿಗಳು
ಸ್ವಾಭಿಮಾನ ಅನ್ನೋದು ಮನುಷ್ಯನಿಗೆ ಮುಖ್ಯವಾದ ಗುಣ. ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ತುಂಬಾ ಸ್ವಾಭಿಮಾನಿಗಳಾಗಿರುತ್ತಾರೆ. ಈ ರಾಶಿಯವರು ಯಾವಾಗಲೂ ತಮ್ಮ ಸ್ವಾಭಿಮಾನವನ್ನು ಕಾಪಾಡಿಕೊಳ್ಳುತ್ತಾರೆ. 12ರಲ್ಲಿ 4 ರಾಶಿಗಳು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದ್ರೆ ಕೊಂಚವೂ ಸಹಿಸಿಕೊಳ್ಳಲ್ಲ. ಆ ನಾಲ್ಕು ರಾಶಿ ಯಾವವು ಎಂದು ಈ ಲೇಖನದಲ್ಲಿ ನೋಡೋಣ ಬನ್ನಿ.
ಸಿಂಹ ರಾಶಿ
ಸಿಂಹ ರಾಶಿಯವರು ನೈಸರ್ಗಿಕವಾಗಿಯೇ ಲೀಡರ್‌ಗಳು. ಹುಟ್ಟಿನಿಂದಲೇ ನಾಯಕತ್ವದ ಗುಣ ಹೊಂದಿರುತ್ತಾರೆ. ತಮ್ಮ ಪ್ರತಿಭೆ, ಯೋಗ್ಯತೆಗಳ ಬಗ್ಗೆ ಹೆಮ್ಮೆಯನ್ನು ಹೊಂದಿರುತ್ತಾರೆ. ಹಾಗಾಗಿ ತಮ್ಮ ವಿರುದ್ಧದ ಯಾರ ಟೀಕೆ ಟಿಪ್ಪಣಿಗಳನ್ನು ಸಿಂಹ ರಾಶಿಯವರು ಲೆಕ್ಕಿಸಲ್ಲ. ಇವರಿಗೆ ಸ್ವಾಭಿಮಾನ ಅನ್ನೋದು ಅವರ ಪರ್ಸನಾಲಿಟಿಯ ಒಂದು ಭಾಗವಾಗಿರುತ್ತದೆ. ಯಾರಾದ್ರೂ ಅವರ ಸ್ವಾಭಿಮಾನಕ್ಕೆ ಧಕ್ಕೆ ತಂದ್ರೆ ಸುಮ್ಮನಿರಲ್ಲ. ಆದ್ದರಿಂದ ಸಿಂಹರಾಶಿಯವರ ಜೊತೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಬೇಕು
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ತಮ್ಮ ಭಾವನೆಗಳಿಗೆ, ನಿರ್ಧಾರಗಳಿಗೆ ತುಂಬಾ ಬೆಲೆ ಕೊಡ್ತಾರೆ. ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ತಂದವರನ್ನ ಎಂದಿಗೂ ಮರೆಯಲ್ಲ. ಈ ರಾಶಿಯವರ ಜೊತೆಗಿನ ಶತೃತ್ವ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯವರ ದೃಢವಾದ ಮನಸ್ಥಿತಿ, ಆತ್ಮವಿಶ್ವಾಸ ಎಲ್ಲರಿಗಿಂತ ಭಿನ್ನವಾಗಿಸುತ್ತದೆ. ನೂರು ಜನರ ನಡುವೆ ಈ ರಾಶಿಯವರಿದ್ರೂ ಗುರುತಿಸಿಕೊಳ್ಳುವ ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ.
ಮಕರ ರಾಶಿ
ಮಕರ ರಾಶಿಯವರು ತುಂಬಾ ಶಿಸ್ತಿನ ಜನ. ತಮ್ಮ ಗುರಿ, ಜವಾಬ್ದಾರಿಗಳಿಗೆ ಬೆಲೆ ಕೊಡ್ತಾರೆ. ಕಷ್ಟಪಟ್ಟು ದುಡಿದು ಸ್ವಾಭಿಮಾನ ಗಳಿಸ್ಕೊಳ್ತಾರೆ. ಸ್ವಾಭಿಮಾನಕ್ಕೆ ಧಕ್ಕೆ ತಂದವರನ್ನ ನಿರ್ಲಕ್ಷಿಸಿ ದೂರ ಇರ್ತಾರೆ. ಅಶಿಸ್ತು ಕಂಡ್ರೆ ಇವರು ದೂರ ಉಳಿಯುತ್ತಾರೆ. ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯನ್ನುಂಟು ಮಾಡುವ ಜನರಿಂದ ಮಕರ ರಾಶಿಯವರು ತುಂಬಾನೇ ಅಂತರ ಕಾಯ್ದುಕೊಳ್ಳುತ್ತಾರೆ. ವ್ಯಕ್ತಿತ್ವಕ್ಕೆ ಮೊದಲ ಆದ್ಯತೆ ನೀಡುತ್ತಾರೆ.
ಇದನ್ನೂ ಓದಿ: ಪರಮ ಸುಂದರಿ ಅಂದ್ರೆ ಯಾರು? ಶಾಸ್ತ್ರಗಳಲ್ಲಿರೋ ಅಡಗಿರೋ ಸತ್ಯ ಕೇಳಿದ್ರೆ ಖುಷಿಯಾಗುತ್ತೆ!
ಕುಂಭ ರಾಶಿ
ಕುಂಭ ರಾಶಿಯವರು ಧೈರ್ಯವಂತರು, ಉತ್ಸಾಹಿಗಳು. ತಮ್ಮ ಪ್ರತಿಭೆ, ಶಕ್ತಿಯ ಬಗ್ಗೆ ಹೆಮ್ಮೆ ಪಡ್ತಾರೆ. ಯಾವ ಸವಾಲನ್ನೂ ಎದುರಿಸೋಕೆ ಹೆದರಲ್ಲ. ಸ್ವಾಭಿಮಾನಕ್ಕೆ ಧಕ್ಕೆ ತಂದ್ರೆ ಒಬ್ಬಂಟಿಯಾಗೇ ಹೋರಾಡ್ತಾರೆ. ನ್ಯಾಯಕ್ಕಾಗಿ ಏನು ಬೇಕಾದ್ರೂ ಮಾಡ್ತಾರೆ. ಧೈರ್ಯಶಾಲಿಗಳಾಗಿರುವ ಕುಂಭ ರಾಶಿಯವರು ಎಂಥಾ ಸವಾಲು ಆದರೂ ಮೆಟ್ಟಿ ನಿಲ್ಲುವ ಗುಣವನ್ನು ಹೊಂದಿರುತ್ತಾರೆ.
ಇದನ್ನೂ ಓದಿ: ಗಂಡನ ಮೇಲೆ ಹಿಡಿತ ಸಾಧಿಸುವ ಹೆಂಡತಿಯರು ಯಾವ ತಿಂಗಳಲ್ಲಿ ಹುಟ್ಟಿರುತ್ತಾರೆ?