MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Bigg Bossನಲ್ಲಿ ಅವಕಾಶ ಸಿಗಬೇಕೆಂದ್ರೆ ಏನೇನು ಪ್ರೊಸೆಸ್​ ಇರತ್ತೆ? ತುಕಾಲಿ ಮಾನಸಾ ಏನಂದ್ರು ಕೇಳಿ...

Bigg Bossನಲ್ಲಿ ಅವಕಾಶ ಸಿಗಬೇಕೆಂದ್ರೆ ಏನೇನು ಪ್ರೊಸೆಸ್​ ಇರತ್ತೆ? ತುಕಾಲಿ ಮಾನಸಾ ಏನಂದ್ರು ಕೇಳಿ...

ಬಿಗ್​ಬಾಸ್​ನ 12ನೇ ಸೀಸನ್​ ಇನ್ನೇನು ಶುರುವಾಗಲಿದೆ. ಹಲವರಿಗೆ ಈ ಷೋನಲ್ಲಿ ಭಾಗವಹಿಸಬೇಕು ಎನ್ನುವ ಹಂಬಲ ಇರುತ್ತದೆ. ಆದರೆ ಬಹುತೇಕರಿಗೆ ಇದು ಕನಸಿನ ಮಾತೇ. ಇದೀಗ ತುಕಾಲಿ ಮಾನಸಾ ಅವರು ಏನಂದಿದ್ದಾರೆ ಕೇಳಿ... 

2 Min read
Suchethana D
Published : Sep 01 2025, 08:53 PM IST
Share this Photo Gallery
  • FB
  • TW
  • Linkdin
  • Whatsapp
18
ಫೇಮಸ್​ ಆದ ತುಕಾಲಿ ದಂಪತಿ
Image Credit : our own

ಫೇಮಸ್​ ಆದ ತುಕಾಲಿ ದಂಪತಿ

 Colors Kannadaದ 'ಬಿಗ್ ಬಾಸ್' (Bigg Boss) ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ತುಕಾಲಿ ಸಂತೋಷ್​ ಸಾಕಷ್ಟು ಫೇಮಸ್​ ಆಗಿದ್ರು, ಜೊತೆಗೆ ಒಂದಿಷ್ಟು ಒಳ್ಳೆಯ ಹೆಸರುಗಳನ್ನೂ ಗಳಿಸಿದ್ದಾರೆ. ಫೈನಲ್​ ತನಕ ಹೋಗಿದ್ದರು.

28
ಐದನೇ ವಾರದಲ್ಲಿ ಎಲಿಮಿನೇಟ್​
Image Credit : our own

ಐದನೇ ವಾರದಲ್ಲಿ ಎಲಿಮಿನೇಟ್​

ಆದರೆ ಅವರ ಪತ್ನಿ ಮಾನಸಾ (Tukali Manasa) ಐದೇ ವಾರದಲ್ಲಿ ವಾಪಸ್​ ಆಗಿದ್ದರು. ಮಾನಸಾ ಅವರು ಪತಿ ಸಂತೋಷ್​ ರೀತಿಯಲ್ಲಿಯೇ ಅಂತಿಮ ಕ್ಷಣದವರೆಗೂ ಇರುತ್ತಾರೆ ಎಂದೇ ಅವರ ಅಭಿಮಾನಿಗಳು ಆರಂಭದಲ್ಲಿ ಅಂದುಕೊಂಡದ್ದು ಇದೆ. ಆದರೆ ಅವರು ಎಲಿಮಿನೇಟ್​ ಆಗಿ ಬಂದರು.

Related Articles

Related image1
ಪತ್ನಿಗೆ ತುಕಾಲಿ ಸಂತೋಷ್ ಭಾರಿ ಗಾತ್ರದ ಮಾಂಗಲ್ಯ ಗಿಫ್ಟ್​! ರೇಟ್​ ಕೇಳಿದೋರೇ ಸುಸ್ತಾಗೋದ್ರು!
Related image2
Bigg Boss ನಮ್ರತಾ ಗೌಡ ಜೊತೆ ಈಗ ಸಂಬಂಧ ಹೇಗಿದೆ? ಎರಡು ವರ್ಷಗಳ ಬಳಿಕ ಮೌನ ಮುರಿದ ಸ್ನೇಹಿತ್​
38
ಮಾತುಗಳೇ ಮುಳುವಾಯ್ತು
Image Credit : others

ಮಾತುಗಳೇ ಮುಳುವಾಯ್ತು

ಅವರ ಮಾತುಗಳೇ ಅವರಿಗೆ ಮುಳುವಾಗಿದ್ದವು. ಇದೇ ಕಾರಣಕ್ಕೆ ಸೋಷಿಯಲ್​ ಮೀಡಿಯಾಗಳಲ್ಲಿಯೂ ಮಾನಸ ಅವರು ಆದಷ್ಟು ಟ್ರೋಲ್​ ಇನ್ಯಾರೂ ಆಗಿಲ್ಲ ಎನ್ನಬಹುದೇನೋ. ಅದೇನೇ ಇದ್ದರೂ ಬಿಗ್​ಬಾಸ್​ ಮನೆಯೊಳಕ್ಕೆ ಕಾಲಿಟ್ಟು ಹೊರಕ್ಕೆ ಬಂದರು ಎಂದರೆ ಅವರಿಗೆ ಸಿಗುವಷ್ಟು ರಾಜಮರ್ಯಾದೆಯೇ ಬೇರೆ. ಬಿಗ್​ಬಾಸ್​ಗೆ ಹೋಗುವ ಮೊದಲೇ ಟಿವಿ ಷೋಗಳಿಂದಾಗಿ ತುಕಾಲಿ ಸಂತೋಷ್​ ಫೇಮಸ್​ ಆಗಿದ್ದರು, ಈಗ ಅವರ ಪತ್ನಿ ಮಾನಸ ಅವರೂ ಈಗ ಜೊತೆಯಾಗಿದ್ದಾರೆ.

48
ಪ್ರೊಸೀಜರ್​ ಬಗ್ಗೆ ಏನಂದ್ರು?
Image Credit : our own

ಪ್ರೊಸೀಜರ್​ ಬಗ್ಗೆ ಏನಂದ್ರು?

ಇದೀಗ ಅವರಿಗೆ ನ್ಯೂಸ್​ಬೀಟ್​ ಕನ್ನಡ ಚಾನೆಲ್​ನವರು ಬಿಗ್​ಬಾಸ್​ಗೆ ಹೋಗುವ ಪ್ರೊಸೆಸ್​ ಬಗ್ಗೆ ಕೇಳಿದ್ದಾರೆ. ಆದರೆ ಆ ಬಗ್ಗೆ ತಮಗೆ ಸರಿಯಾಗಿ ಏನೂ ಗೊತ್ತಿಲ್ಲ. ಅದೂ ಇದೂ ಇರುತ್ತೆ. ಆಮೇಲೆ 3-4 ಮೀಟಿಂಗ್​ ಇರುತ್ತದೆ. ನನಗೆ ಒಂದೇ ಮೀಟಿಂಗ್​ ಇತ್ತು. ಅದಕ್ಕೆ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಸಂತುಗೆ ಕೇಳಿದ್ರೆ ಸರಿಯಾಗಿ ಗೊತ್ತಾಗತ್ತೆ ಎಂದಿದ್ದಾರೆ.

58
ಪೇಮೆಂಟ್​ ಕಾರಣ
Image Credit : our own

ಪೇಮೆಂಟ್​ ಕಾರಣ

ಕೆಲವು ಮೀಟಿಂಗ್​ ಆದ ಬಳಿಕವೂ ಕ್ಯಾನ್ಸಲ್​ ಆಗತ್ತಲ್ಲ, ಯಾಕೆ ಎಂದು ಪ್ರಶ್ನಿಸಿದಾಗ, ಅದಕ್ಕೆ ಏನೇನೋ ಕಾರಣಗಳು ಇರುತ್ತವೆ, ಪೇಮೆಂಟ್​ ಕೂಡ ಕಾರಣ ಆಗಬಹುದು ಎಂದಿದ್ದಾರೆ.

68
ಹೇಳಿಮಾಡಿಸಿದ ಜೋಡಿ
Image Credit : social

ಹೇಳಿಮಾಡಿಸಿದ ಜೋಡಿ

ಅಷ್ಟಕ್ಕೂ ಇವರ ಜೋಡಿ ಹೇಳಿಮಾಡಿಸಿದ್ದು ಎಂದೇ ಫೇಮಸ್ಸು. ಈ ಹಿಂದೆ ಸಂದರ್ಶನವೊಂದರಲ್ಲಿ ತುಕಾಲಿ ಸಂತೋಷ್​ ಅವರು ಪತ್ನಿ ಬಗ್ಗೆ ಮಾತನಾಡುತ್ತಾ, ಇಎಂಐ ತೀರಿಸಲು ಬಿಗ್​ಬಾಸ್​ಗೆ ಹೋಗಿದ್ಲು, ಆದರೆ ಐದೇ ವಾರಕ್ಕೆ ವಾಪಸ್​ ಬಂದಳು. ಮುಂದೆ ಸಮಸ್ಯೆ ಇದದ್ದೇ ಅಲ್ವಾ ಎಂದರು ಸಂತೋಷ್​​.

78
ಸಜೆಷನ್​ ತೆಗೆದುಕೊಂಡಿರಲಿಲ್ಲ
Image Credit : social media

ಸಜೆಷನ್​ ತೆಗೆದುಕೊಂಡಿರಲಿಲ್ಲ

ಇದೇ ವೇಳೆ ತಾವು ಬಿಗ್​ಬಾಸ್​ ಒಳಗೆ ಹೋಗುವಾಗ ಸಂತೋಷ್​ (Tukali Santosh) ಅವರ ಸಜೆಷನ್​ ತೆಗೆದುಕೊಂಡಿರಲಿಲ್ಲ. ಅದೇ ಮಾಡಿದ ತಪ್ಪು ಎನ್ನಿಸತ್ತೆ. ಅವರ ಹಾಗೆ ನಾನು ಆಗುವುದು ಬೇಡ, ನನ್ನ ಸ್ಟೈಲ್​ನಲ್ಲಿಯೇ ನಾನು ಇರೋಣ ಅಂದುಕೊಂಡೆ. ಸಂತು ಕೂಡ ಹಾಗೇ ಹೇಳಿದ್ರು. ಆದ್ರೆ ಸಜೆಷನ್​ ತಗೋಬಿಕಿತ್ತೇನೋ ಎಂದರು.

88
 ಬೇರೆಯವರಿಗೆ ಗೌರವ ಕೊಡಬೇಕು
Image Credit : youtube

ಬೇರೆಯವರಿಗೆ ಗೌರವ ಕೊಡಬೇಕು

ಇದೇ ವೇಳೆ, ಬಿಗ್​ಬಾಸ್​ನಿಂದ ಬೇರೆಯವರಿಗೆ ಗೌರವ ಕೊಡಬೇಕು, ಮಾತಿನ ಮೇಲೆ ನಿಗಾ ಇಡಬೇಕು ಎನ್ನುವುದನ್ನು ಕಲಿತೆ. ಯೋಚನೆ ಮಾಡಿ ಮಾತನಾಡಬೇಕು ಎನ್ನುವುದನ್ನು ಬಿಗ್​ಬಾಸ್​ ಕಲಿಸಿತು ಎಂದರು.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ
ಸಂಬಂಧಗಳು
ರಿಯಾಲಿಟಿ ಶೋ
ಕಲರ್ಸ್ ಕನ್ನಡ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved