2025ರಲ್ಲಿ ಗೆದ್ದ 10 ಬ್ಲಾಕ್‌ಬಾಸ್ಟರ್ ಸೂಪರ್ ಹಿಟ್ ಸಿನಿಮಾಗಳ ಕಲೆಕ್ಷನ್ ಮಾಹಿತಿ
10 ಬ್ಲಾಕ್‌ಬಾಸ್ಟರ್ ಸೂಪರ್ ಹಿಟ್ ಸಿನಿಮಾ: ಅತಿ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ. ಬಾಲಿವುಡ್, ಸ್ಯಾಂಡಲ್‌ವುಡ್, ಟಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗಗಳ ಯಾವ ಚಿತ್ರಗಳು ಕಡಿಮೆ ಬಜೆಟ್‌ನಲ್ಲಿ ನೂರಾರು ಕೋಟಿ ಗಳಿಸಿವೆ ಎಂಬುದರ ಸಂಪೂರ್ಣ ಮಾಹಿತಿ ನೀಡಲಾಗಿದೆ.

ನೂರಾರು ಕೋಟಿ ರೂಪಾಯಿ ಕಲೆಕ್ಷನ್
2025ರ ವರ್ಷದ 9 ತಿಂಗಳು ಮುಕ್ತಾಯವಾಗಲಿವೆ. ಈಗಾಗಲೇ ನೂರಾರು ಸಿನಿಮಾಗಳು ಬಿಡುಗಡೆಯಾಗಿದ್ದು, ಕೆಲವು ಸೂಪರ್ ಹಿಟ್ ಆದರೆ ಬಹುತೇಕ ಫ್ಲಾಪ್ ಪಟ್ಟಿಗೆ ಸೇರಿವೆ. ಕೆಲವು ಬಿಗ್ ಬಜೆಟ್ ಸಿನಿಮಾಗಳು ಸಾಕಷ್ಟು ನಿರೀಕ್ಷೆ ಮೂಡಿಸಿ ಸೋತರೆ, ಬೆರಣಿಕೆ ಸಿನಿಮಾಗಳು ಸದ್ದು ಗದ್ದಲವಿಲ್ಲದೇ ಬಿಡುಗಡೆಯಾಗೂ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿವೆ. ಕಳೆದ 9 ತಿಂಗಳಲ್ಲಿ ಚಲಚಿತ್ರೋದ್ಯಮದಲ್ಲಿ ಸಂಚಲನ ಮೂಡಿಸಿದ ಭಾರತದ 10 ಚಿತ್ರಗಳು ಮಾಹಿತಿ ಇಲ್ಲಿದೆ. ಈ ವರ್ಷದ 9 ತಿಂಗಳಲ್ಲಿ ಅತ್ಯಧಿಕ ಕಲೆಕ್ಷನ್ ಮಾಡಿರುವ ಪ್ರಮುಖ 10 ಸಿನಿಮಾಗಳು ಯಾವವು ಎಂದು ನೋಡೋಣ ಬನ್ನಿ.
ಬಾಲಿವುಡ್: ಛಾವಾ ಮತ್ತು ಸೈಯಾರಾ
ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಛಾವಾ 130 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಈ ಸಿನಿಮಾ ಭಾರತದಲ್ಲಿ 601.54 ಕೋಟಿ ರೂ ಮತ್ತು ವಿಶ್ವದಾದ್ಯಂತ 807.91 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಇನ್ನು 2ನೇ ಸ್ಥಾನದಲ್ಲಿ ಅನೀತಾ ಪಡ್ಡಾ ಮತ್ತು ಅಹಾನ್ ಪಾಂಡೆ ನಟನೆಯ ಸೈಯರಾ ಸಿನಿಮಾ ಪ್ರೇಕ್ಷಕರ ಮೆಚ್ಚಗೆ ಪಡೆದುಕೊಂಡಿತ್ತು. 45 ಕೋಟಿ ಬಜೆಟ್ ಹೊಂದಿದ್ದ ಸೈಯರಾ ಭಾರತದಲ್ಲಿ 329.2 ಕೋಟಿ ಮತ್ತು ಪ್ರಪಂಚದಾದ್ಯಂತ 569.75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಮಾಲಿವುಡ್: ಥುಂಡರಮ್ ಮತ್ತು ಲೋಕಾ ಚಾಪ್ಟರ್ 1
ಮಲಯಾಳಂನ ಥುಡರಮ್ ಭಾರತದಲ್ಲಿ 121.2 ಕೋಟಿ ಮತ್ತು ವಿಶ್ವದಾದ್ಯಂತ 234.5 ಕೋಟಿ ರೂಪಾಯಿ ಸಂಪಾದಿಸಿದೆ. ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಈ ಸಿನಿಮಾ ಕೇವಲ 28 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು.
ಕಲ್ಯಾಣಿ ಪ್ರಿಯದರ್ಶನ ಅವರ ಲೋಕಾ ಚಾಪ್ಟರ್ 1 ಸಿನಿಮಾದ ಬಜೆಟ್ 30 ಕೋಟಿ ರೂಪಾಯಿ ಆಗಿತ್ತು. ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಬಿಡುಗಡೆಯಾದ ಲೋಕಾ ಚಾಪ್ಟರ್ 1 ವಿಶ್ವದಾದ್ಯಂತ 240 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ಟಾಲಿವುಡ್: ಮ್ಯಾಡ್ ಸ್ಕ್ವೇರ್ ಮತ್ತು ಸಂಕ್ರಾಂತಿ ವಸ್ತುನಮ್
ತೆಲಗು ಸಿನಿಮಾ ಈ ವರ್ಷ ಆರಂಭದಿಂದಲೇ ಸದ್ದು ಮಾಡಿತು. ಸಂಕ್ರಾಂತಿ ವಸ್ತುನಮ್ ಸಿನಿಮಾ ಭಾರತದಲ್ಲಿ 186.7 ಕೋಟಿ ಮತ್ತು ವಿಶ್ವದಾದ್ಯಂತ 255.2 ಕೋಟಿ ರೂ ಕಲೆಕ್ಷನ್ ಮಾಡಿದೆ. ಈ ಸಿನಿಮಾದ ಬಜೆಟ್ 50 ಕೋಟಿ ರೂಪಾಯಿ ಆಗಿತ್ತು.
ಇನ್ನು ಮ್ಯಾಡ್ ಸ್ಕ್ವೇರ್ ಟಾಲಿವುಡ್ ಅಂಗಳದ ಬ್ಲಾಕ್‌ಬಸ್ಟರ್ ಸಿನಿಮಾ ಆಗಿದೆ. ಭಾರತದಲ್ಲಿ 50.12 ಕೋಟಿ ಮತ್ತು ವಿಶ್ವದಾದ್ಯಂತ 72 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಕಾಲಿವುಡ್: ದಿ ಟೂರಿಸ್ಟ್ ಫ್ಯಾಮಿಲಿ ಮತ್ತು ಡ್ರ್ಯಾಗನ್
ಈ ವರ್ಷದ ತಮಿಳು ಸಿನಿಮಾದ ಮೊದಲ ಸೂಪರ್ ಹಿಟ್ ಸಿನಿಮಾ ಡ್ರ್ಯಾಗನ್. ಈ ಚಿತ್ರ ಭಾರತದಲ್ಲಿ 101.34 ಕೋಟಿ ಮತ್ತು ವಿಶ್ವದಾದ್ಯಂತ 150.52 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಡ್ರ್ಯಾಗನ್ ಬಜೆಟ್ 36 ಕೋಟಿ ರೂಪಾಯಿ ಆಗಿತ್ತು.
ತಮಿಳಿನ ಮತ್ತೊಂದು ಸೂಪರ್ ಹಿಟ್ ಸಿನಿಮಾ ಟೂರಿಸ್ಟ್ ಫ್ಯಾಮಿಲಿ. ಭಾರತದಲ್ಲಿ 60.75 ಕೋಟಿ ಕಲೆಕ್ಷನ್ ಮಾಡಿದ್ರೆ ವಿಶ್ವದಾದ್ಯಂತ 86.25 ಕೋಟಿ ರೂಪಾಯಿ ಸಂಪಾದಿಸಿದೆ. ಆದ್ರೆ ಈ ಸಿನಿಮಾದ ಬಜೆಟ್ ಕೇವಲ 7 ಕೋಟಿ ರೂಪಾಯಿ ಆಗಿತ್ತು.
ಇದನ್ನೂ ಓದಿ: ನಿದ್ರೆ, ಭಯ ಮತ್ತು ಬದುಕಿನ ಪಾಠ ಹೇಳುತ್ತೆ ಈ ಸಿನಿಮಾ.. ನಿದ್ರಾದೇವಿ ನೆಕ್ಸ್ಟ್ ಡೋರ್‌ನಲ್ಲಿ ಏನಿದೆ?
ಸ್ಯಾಂಡಲ್‌ವುಡ್: ಸು ಫ್ರಂ ಸೋ ಮತ್ತು ಮಹಾವತಾರ ನರಸಿಂಹ
ಜೆಪಿ ತುಮಿನಾಡ್ ನಟಿಸಿ ನಿರ್ದೇಶಿಸಿದ ಸು ಫ್ರಂ ಸೋ ಹಾರರ್ -ಕಾಮಿಡಿ ಮಿಶ್ರಿತ ಸಿನಿಮಾ 3 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಭಾರತದಲ್ಲಿ 90.68 ಕೋಟಿ ಮತ್ತು ವಿಶ್ವದಾದ್ಯಂತ 121 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
40 ಕೋಟಿ ರೂಪಾಯಿ ಬಜೆಟ್‌ನ ಮಹಾವತಾರ ನರಸಿಂಹ ಭಾರತದಲ್ಲಿ 249.2 ಕೋಟಿ ಮತ್ತು ವಿಶ್ವದಾದ್ಯಂತ 324.9 ಕೋಟಿ ರೂಪಾಯಿ ಹಣವನ್ನು ಜೇಬು ತುಂಬಿಸಿಕೊಂಡಿದೆ.