ಭೂಮಿಕಾಗೆ ಸಹಾಯ ಮಾಡೋದಕ್ಕೆ ಹೋಗಿ ಶಾಕುಂತಲ ಸೇಡಿಗೆ ಬಲಿಯಾಗ್ತಾನ ಗೌತಮ್ ಆಪ್ತಮಿತ್ರ?!
ಅಮೃತಧಾರೆ ಧಾರವಾಹಿಯಲ್ಲಿ ಭೂಮಿಯ ಪತ್ತೆದಾರಿಕೆಗೆ ನೆರವಾಗಿದ್ದ ಗೌತಮ್ ಆಪ್ತಮಿತ್ರ ಆನಂದ್, ಇದೀಗ ಶಾಕುಂತಲ ಹೆಣೆಗೆ ಬಲೆಗೆ ಬಿದ್ದಿದ್ದಾನೆ. ಮುಂದೇನಾಗುತ್ತೆ?

ಅಮೃತಧಾರೆ ಧಾರಾವಾಹಿ (Amruthadhare serial) ಪ್ರತಿ ಹಂತದಲ್ಲೂ ಟ್ವಿಸ್ಟ್ ಮತ್ತು ಟರ್ನ್ ನೀಡೋದನ್ನ ಮರೆಯೋದಿಲ್ಲ. ಹಾಗಾಗಿಯೇ ಸೀರಿಯಲ್ ತುಂಬಾನೆ ಸರಾಗವಾಗಿ ವೀಕ್ಷಕರ ಮನಸ್ಸನ್ನು ಗೆಲ್ಲುತ್ತಾ ಸಾಗುತ್ತದೆ. ಆದರೆ ಈ ಬಾರಿಯ ಟ್ವಿಸ್ಟ್ ನಲ್ಲಿ ಬರ ಸಿಡಿಲು ಬಡೆಯುವ ಸಾಧ್ಯತೆ ಇದೆ.
ಧಾರಾವಾಹಿಯಲ್ಲಿ ಸದ್ಯಕ್ಕೆ ನಡೆಯುವ ಕಥೆ ಏನಂದ್ರೆ, ಗೌತಮ್, ಭೂಮಿಕಾ ಹಾಗೂ ಆನಂದ್, ಅಪರ್ಣ ಆಫೀಸ್ ಕೆಲಸಕ್ಕಾಗಿ ಕನಕದುರ್ಗಕ್ಕೆ ಹೊರಟಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಇದು ಅಧಿಕೃತ ಕೆಲಸ ಅಲ್ವೇ ಅಲ್ಲ, ಪಂಕಜಾ ಹಿನ್ನೆಲೆ ಪತ್ತೆ ಹಚ್ಚೋದಕ್ಕಾಗಿ ಭೂಮಿಕಾ ಮತ್ತು ಆನಂದ್ ಮಾಡಿರುವ ಪ್ಲ್ಯಾನ್ ಇದಾಗಿದೆ.
ಶಾಕುಂತಲ ಹೆಸರೇ ಪಂಕಜಾ ಆನ್ನೋದು ಗೊತ್ತಾಗಿ ಭೂಮಿಕಾ ಮತ್ತು ಆನಂದ್, ಆಕೆಯ ಹಿನ್ನೆಲೆಯನ್ನು ತಿಳಿಯೋದಕ್ಕೆ, ಆಕೆ ಯಾಕೆ ಮನೆಗೆ ಬಂದು ಸೇರಿಕೊಂಡಳು ಅನ್ನೋದನ್ನು ತಿಳಿದುಕೊಳ್ಳೋಕೆ ಕನಕದುರ್ಗಕ್ಕೆ ಹೋಗಿದ್ದಾರೆ, ಅಲ್ಲಿ ಊರೆಲ್ಲಾ ಪಂಕಜಾ ಪರಿಚಯ ಕೇಳಿಕೊಂಡು ತಿರುಗಾಡುತ್ತಿದ್ದಾರೆ.
ಪಂಕಜಾ ಹೆಸರು ಹುಡುಕಿಕೊಂಡು ಹೊರಟ ಆನಂದ್ ಗೆ ನಂಜಮ್ಮನ ಕುಡುಕ ಗಂಡ ಸಿಕ್ಕಿ, ಅವನಿಂದ ಎಲ್ಲಾ ವಿಷಯಗಳನ್ನು ಬಾಯಿ ಬಿಡಿಸ್ತಾನೆ ಆನಂದ್. ಇನ್ನೊಂದು ಕಡೆ ಈ ವಿಷಯ ತಿಳಿದ ನಂಜಮ್ಮ, ಕೂಡಲೇ ಶಾಕುಂತಲಾಗೆ ಫೋನ್ ಮಾಡಿ, ಪಂಕಜಾ ಹುಡುಕಿಕೊಂಡು ಯಾರೋ ಬಂದಿರೋದಾಗಿ ಹೇಳುತ್ತಾರೆ.
ಕೊನೆಗೆ ಶಾಕುಂತಲಾಗೆ ಅಲ್ಲಿ ಬಂದಿರೋದು, ಆನಂದ್ ಅನ್ನೋದು ಗೊತ್ತಾಗುತ್ತೆ, ಇನ್ನೇನು ತನ್ನ ಕಥೆ ಗೌತಮ್ ಗೆ ಗೊತ್ತಾಗುತ್ತೆ ಎನ್ನುವ ಭಯದಿಂದ ಆಕೆ ರೌಡಿಗಳಿಗೆ ಸುಪಾರಿ ಕೊಟ್ಟು ಆನಂದ್ ಕಥೆ ಮುಗಿಸೋ ಪ್ಲ್ಯಾನ್ ಮಾಡಿದ್ದಾಳೆ, ರೌಡಿಗಳನ್ನು ಕಳುಹಿಸಿದ್ದು ಆಗಿದೆ.
ಒಂದು ಕಡೆ ಶಾಕುಂತಲಾ ಹಳೆಯ ಎಲ್ಲಾ ಕಥೆ ತಿಳಿದುಕೊಂಡ ಆನಂದ್, ಅದನ್ನು ಭೂಮಿಕಾಗೆ ತಿಳಿಸಲು ಹೊರಟಿರುವ ವೇಳೆಗೆ ರೌಡಿಗಳು ಆತನನ್ನು ಸುತ್ತುವರೆದಿದ್ದಾರೆ. ಇನ್ನೊಂದು ಕಡೆ, ಇಲ್ಲೇನು ಕೆಲಸ ಇಲ್ಲ ಇವತ್ತೆ ಇಲ್ಲಿಂದ ಬೆಂಗಳೂರಿಗೆ ಹೊರಡಬೇಕೆಂದು ಗೌತಮ್ ದಿವಾನ್ (Goutham Diwan) ಹೇಳಿದ್ದಾನೆ.
ಇದೀಗ ಸದ್ಯದ ಅನಾವರಣ ಆಗುತ್ತ ಅಥವಾ ದುಷ್ಟರಿಗೆ ಗೆಲುವಾಗುತ್ತಾ, ಗೌತಮ್ ದಿವಾನ್ ತನ್ನ ಆಪ್ತಮಿತ್ರನನ್ನು ರೌಡಿಗಳ ಕೈಯಿಂದ ಉಳಿಸುತ್ತಾನೆಯೇ? ಅನ್ನೋದನ್ನು ಕಾದು ನೋಡಬೇಕು. ಆಪ್ತಮಿತ್ರನನ್ನು ಡುಮ್ಮ ಸರ್ ಬಚಾವ್ ಮಾಡ್ತಾರೆ ಎನ್ನುವ ನಂಬಿಕೆ ವೀಕ್ಷಕರಿಗಿದೆ, ಆದರೆ ಅದು ನಿಜವಾಗುತ್ತೋ ಗೊತ್ತಿಲ್ಲ.
ಮತ್ತೊಂದು ವಿಷ್ಯ ಏನಂದ್ರೆ, ಈಗಾಗಲೇ ಗೌತಮ್ ಮತ್ತು ಡಾರ್ಲಿಂಗ್ ಅಪರ್ಣ ಆನಂದ್ ಸಾವಿನ ಬಗ್ಗೆ ಮಾತನಾಡಿದ್ದಾರೆ. ಅವರಿಬ್ಬರ ನಡುವೆ ಜಗಳದಲ್ಲೆ ಪ್ರೀತಿ ಇದೆ ಅನ್ನೋದನ್ನು ಹೇಳಿದ್ದಾರೆ. ಇದು ಕೂಡ ಆನಂದ್ ಸಾವಿನ ಸೂಚನೆ ಇರಬಹುದು. ಅಥವಾ ತಮಿಳು ಸೀರಿಯಲ್ ಗಾಗಿ ಈ ಪಾತ್ರವನ್ನು ಆನಂದ್ ಮುಗಿಸುತ್ತಿದ್ದಾರಾ ಅದಕ್ಕಾಗಿ ಸಾವಿನ ಕಥೆ ಬರ್ತಿರುವ ಸಾಧ್ಯತೆ ಕೂಡ ಇದೆ. ಏನೇ ಆದರೂ ಎಪಿಸೋಡ್ ಗಳನ್ನು ನೋಡಿದ್ರೆ ಮಾತ್ರ ಅಸಲಿ ಕಥೆ ಗೊತ್ತಾಗುತ್ತೆ. ಅಂದ ಹಾಗೇ ನಿಮಗೆ ಏನು ಅನಿಸುತ್ತೇ? ಡುಮ್ಮ ಸರ್ ಆಪ್ತಮಿತ್ರನನ್ನು ರಕ್ಷಿಸುತ್ತಾನಾ?