NIRF ಪಟ್ಟಿ ಪ್ರಕಟ ದೇಶದಲ್ಲಿ ಮತ್ತೆ ಬೆಂಗಳೂರು ನಂಬರ್ ಒನ್!
NIRF ಇಂಡಿಯಾ ಶ್ರೇಯಾಂಕಗಳು 2025 ಬಿಡುಗಡೆಯಾಗಿದ್ದು, ಐಐಟಿ ಮದ್ರಾಸ್ ಮತ್ತೊಮ್ಮೆ ಅಗ್ರಸ್ಥಾನದಲ್ಲಿದೆ. ಈ ಶ್ರೇಯಾಂಕಗಳು ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ನಿರ್ಣಯಿಸುತ್ತವೆ. ಭಾರತದ ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು NIRF ಇಂಡಿಯಾ ಶ್ರೇಯಾಂಕಗಳು 2025 ಅನ್ನು ಬಿಡುಗಡೆ ಮಾಡಿದ್ದಾರೆ. ದೇಶಾದ್ಯಂತ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು ಹಾಗೂ ವಿಶೇಷ ಶಿಕ್ಷಣ ಕೇಂದ್ರಗಳನ್ನು ಪಟ್ಟಿ ಮಾಡುವ ಈ ಶ್ರೇಯಾಂಕಗಳು, ಭಾರತದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಮಾನದಂಡವಾಗಿ ಕಾರ್ಯನಿರ್ವಹಿಸುತ್ತವೆ. ಐಐಟಿ ಮದ್ರಾಸ್ – ಸತತ ಏಳನೇ ವರ್ಷ ಒಟ್ಟಾರೆ ಶ್ರೇಯಾಂಕದಲ್ಲಿ ದೇಶದ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಐಐಎಸ್ಸಿ ಬೆಂಗಳೂರು – ಭಾರತದ ಅತ್ಯುತ್ತಮ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU), ನವದೆಹಲಿ – ವಿಶ್ವವಿದ್ಯಾಲಯ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿ ತನ್ನ ಸ್ಥಾನ ಉಳಿಸಿಕೊಂಡಿದೆ.
NIRF ಶ್ರೇಯಾಂಕಗಳ ಮಹತ್ವ
ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನ (NIRF) ಅಡಿಯಲ್ಲಿ ಪ್ರತಿ ವರ್ಷ ಪ್ರಕಟವಾಗುವ ಈ ಶ್ರೇಯಾಂಕಗಳು, ಶಿಕ್ಷಣ ಸಂಸ್ಥೆಗಳ ಬೋಧನೆ, ಸಂಶೋಧನೆ, ನವೀನತೆ ಹಾಗೂ ಒಟ್ಟಾರೆ ಶೈಕ್ಷಣಿಕ ಸಾಧನೆಯನ್ನು ಮೌಲ್ಯಮಾಪನ ಮಾಡುತ್ತವೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಶೈಕ್ಷಣಿಕ ಪಾಲುದಾರರು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಮಾರ್ಗದರ್ಶನವಾಗುತ್ತದೆ. 2025ನೇ ಆವೃತ್ತಿ NIRF ಶ್ರೇಯಾಂಕಗಳ 10ನೇ ಬಿಡುಗಡೆ ಆಗಿದ್ದು, ಒಟ್ಟಾರೆ ಹಾಗೂ ವಿಷಯಾಧಾರಿತವಾಗಿ ಒಟ್ಟು 17 ವಿಭಾಗಗಳಲ್ಲಿ ಮೌಲ್ಯಮಾಪನ ಮಾಡಿದೆ. ಇದರಲ್ಲಿ ಒಟ್ಟಾರೆ, ವಿಶ್ವವಿದ್ಯಾಲಯಗಳು, ಕಾಲೇಜುಗಳು, ಸಂಶೋಧನಾ ಸಂಸ್ಥೆಗಳು, ನಾವೀನ್ಯತೆ, ರಾಜ್ಯ ಸಾರ್ವಜನಿಕ ವಿಶ್ವವಿದ್ಯಾಲಯಗಳು, ಮುಕ್ತ ವಿಶ್ವವಿದ್ಯಾಲಯಗಳು, ಕೌಶಲ್ಯ ವಿಶ್ವವಿದ್ಯಾಲಯಗಳು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು (SDGs) ಸೇರಿದಂತೆ 9 ಪ್ರಮುಖ ವಿಭಾಗಗಳಿವೆ. ಜೊತೆಗೆ ಎಂಜಿನಿಯರಿಂಗ್, ನಿರ್ವಹಣೆ, ಔಷಧಶಾಸ್ತ್ರ, ವೈದ್ಯಕೀಯ, ದಂತ ವೈದ್ಯಕೀಯ, ಕಾನೂನು, ವಾಸ್ತುಶಿಲ್ಪ–ಯೋಜನೆ ಹಾಗೂ ಕೃಷಿ ಮತ್ತು ಸಂಬಂಧಿತ ವಿಜ್ಞಾನಗಳು ಸೇರಿದಂತೆ 8 ವಿಷಯಾಧಾರಿತ ವಿಭಾಗಗಳನ್ನೂ ಒಳಗೊಂಡಿದೆ.
2025 ರ ಒಟ್ಟಾರೆ ಉನ್ನತ 10 ಸಂಸ್ಥೆಗಳು
- ಐಐಟಿ ಮದ್ರಾಸ್
- ಐಐಎಸ್ಸಿ, ಬೆಂಗಳೂರು
- ಐಐಟಿ ಬಾಂಬೆ
- ಐಐಟಿ ದೆಹಲಿ
- ಐಐಟಿ ಕಾನ್ಪುರ
- ಐಐಟಿ ಖರಗ್‌ಪುರ
- ಐಐಟಿ ರೂರ್ಕಿ
- ಏಮ್ಸ್, ದೆಹಲಿ
- ಜೆಎನ್‌ಯು, ನವದೆಹಲಿ
- ಬಿಎಚ್‌ಯು, ವಾರಣಾಸಿ
2025 ರ ಉನ್ನತ ವಿಶ್ವವಿದ್ಯಾಲಯಗಳು
- ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು
- ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU), ನವದೆಹಲಿ
- ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್
- ಜಾಮಿಯಾ ಮಿಲಿಯಾ ಇಸ್ಲಾಮಿಯಾ, ನವದೆಹಲಿ
- ದೆಹಲಿ ವಿಶ್ವವಿದ್ಯಾಲಯ, ನವದೆಹಲಿ
- ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU), ವಾರಣಾಸಿ
- ಬಿಟ್ಸ್, ಪಿಲಾನಿ
- ಅಮೃತ ವಿಶ್ವ ವಿದ್ಯಾಪೀಠಂ, ಕೊಯಮತ್ತೂರು
- ಜಾದವ್‌ಪುರ ವಿಶ್ವವಿದ್ಯಾಲಯ, ಕೋಲ್ಕತ್ತಾ
- ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯ, ಅಲಿಘಡ್
2025 ರ ಉನ್ನತ ಕಾಲೇಜುಗಳು
- ಹಿಂದೂ ಕಾಲೇಜು, ದೆಹಲಿ
- ಮಿರಾಂಡಾ ಹೌಸ್, ದೆಹಲಿ
- ಹನ್ಸ್ ರಾಜ್ ಕಾಲೇಜು, ದೆಹಲಿ
- ಕಿರೋರಿ ಮಾಲ್ ಕಾಲೇಜು, ದೆಹಲಿ
- ಸೇಂಟ್ ಸ್ಟೀಫನ್ಸ್ ಕಾಲೇಜು, ದೆಹಲಿ
- ರಾಮಕೃಷ್ಣ ಮಿಷನ್ ವಿವೇಕಾನಂದ ಶತಮಾನೋತ್ಸವ ಕಾಲೇಜು, ಕೋಲ್ಕತ್ತಾ
- ಆತ್ಮ ರಾಮ್ ಸನಾತನ ಧರ್ಮ ಕಾಲೇಜು, ನವದೆಹಲಿ
- ಸೇಂಟ್ ಕ್ಸೇವಿಯರ್ಸ್ ಕಾಲೇಜು, ಕೋಲ್ಕತ್ತಾ
- ಪಿಎಸ್‌ಜಿಆರ್ ಕೃಷ್ಣಮ್ಮಾಳ್ ಮಹಿಳಾ ಕಾಲೇಜು, ಕೊಯಮತ್ತೂರು
- ಪಿಎಸ್‌ಜಿ ಕಲಾ ಮತ್ತು ವಿಜ್ಞಾನ ಕಾಲೇಜು, ಕೊಯಮತ್ತೂರು
2025 ರ ಉನ್ನತ ಎಂಜಿನಿಯರಿಂಗ್ ವಿಶ್ವವಿದ್ಯಾಲಯಗಳು
- ಭಾರತೀಯ ವಿಜ್ಞಾನ ಸಂಸ್ಥೆ (IISc), ಬೆಂಗಳೂರು
- ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU), ನವದೆಹಲಿ
- ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ್
- ಜಾಮಿಯಾ ಮಿಲಿಯಾ ಇಸ್ಲಾಮಿಯಾ, ನವದೆಹಲಿ
- ದೆಹಲಿ ವಿಶ್ವವಿದ್ಯಾಲಯ, ನವದೆಹಲಿ
- ಬಿಎಚ್‌ಯು, ವಾರಣಾಸಿ
- ಬಿಟ್ಸ್, ಪಿಲಾನಿ
- ಅಮೃತ ವಿಶ್ವ ವಿದ್ಯಾಪೀಠಂ, ಕೊಯಮತ್ತೂರು
- ಜಾದವ್‌ಪುರ ವಿಶ್ವವಿದ್ಯಾಲಯ, ಕೋಲ್ಕತ್ತಾ
- ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯ, ಅಲಿಘಡ್
2025 ರ ಉನ್ನತ ವೈದ್ಯಕೀಯ ಸಂಸ್ಥೆಗಳು
- ಏಮ್ಸ್, ದೆಹಲಿ
- ಪಿಜಿಐಎಂಇಆರ್, ಚಂಡೀಗಢ
- ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು (CMC), ವೆಲ್ಲೂರು
- ಜಿಪ್ಮರ್, ಪುದುಚೇರಿ
- ಎಸ್‌ಜಿಪಿಐಎಂಎಸ್, ಲಕ್ನೋ
2025 ರ ಉನ್ನತ ದಂತ ವೈದ್ಯಕೀಯ ಕಾಲೇಜುಗಳು
- ಏಮ್ಸ್, ದೆಹಲಿ
- ಸವಿತಾ ವೈದ್ಯಕೀಯ ಮತ್ತು ತಾಂತ್ರಿಕ ವಿಜ್ಞಾನ ಸಂಸ್ಥೆ, ಚೆನ್ನೈ
- ಮೌಲಾನಾ ಆಜಾದ್ ದಂತ ವಿಜ್ಞಾನ ಸಂಸ್ಥೆ, ದೆಹಲಿ
- ಡಾ. ಡಿ.ವೈ. ಪಾಟೀಲ್ ವಿದ್ಯಾಪೀಠ, ಪುಣೆ
- ಮಣಿಪಾಲ್ ದಂತ ವಿಜ್ಞಾನ ಕಾಲೇಜು, ಮಣಿಪಾಲ್
2025 ರ ಉನ್ನತ ಕಾನೂನು ಸಂಸ್ಥೆಗಳು
- ರಾಷ್ಟ್ರೀಯ ಕಾನೂನು ಶಾಲೆ ಭಾರತ ವಿಶ್ವವಿದ್ಯಾಲಯ (NLSIU), ಬೆಂಗಳೂರು
- ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (NLU), ದೆಹಲಿ
- ನಲ್ಸಾರ್ ವಿಶ್ವವಿದ್ಯಾಲಯ, ಹೈದರಾಬಾದ್
- ಪಶ್ಚಿಮ ಬಂಗಾಳ ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವವಿದ್ಯಾಲಯ, ಕೋಲ್ಕತ್ತಾ
- ಗುಜರಾತ್ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಗಾಂಧಿನಗರ
NIRF ಇಂಡಿಯಾ ಶ್ರೇಯಾಂಕಗಳು 2025, ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ, ಸಂಶೋಧನೆ, ಬೋಧನೆ ಮತ್ತು ನವೀನತೆಗಳ ಅಳತೆಗೋಲು ಆಗಿವೆ. ಇದು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವುದಲ್ಲದೆ, ವಿಶ್ವಮಟ್ಟದಲ್ಲಿ ಭಾರತೀಯ ಸಂಸ್ಥೆಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.