MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Education
  • ಮೂಳೆ ಮುರಿದರೂ ವೀಲ್‌ಚೇರ್, ಆಕ್ಸಿಜನ್ ಸಪೋರ್ಟ್‌ನಿಂದ UPSC ಬರೆದ ದಿಟ್ಟೆ ಈಕೆ

ಮೂಳೆ ಮುರಿದರೂ ವೀಲ್‌ಚೇರ್, ಆಕ್ಸಿಜನ್ ಸಪೋರ್ಟ್‌ನಿಂದ UPSC ಬರೆದ ದಿಟ್ಟೆ ಈಕೆ

UPSC Success Story: "ಪ್ರತಿಯೊಬ್ಬರೂ ಕನಸು ಕಾಣುತ್ತಾರೆ, ಆದರೆ ದೃಢನಿಶ್ಚಯ ಮತ್ತು ಉತ್ಸಾಹ ಹೊಂದಿರುವವರು ಮಾತ್ರ ಅವುಗಳನ್ನು ನನಸಾಗಿಸಬಹುದು" ಎಂಬುದನ್ನು ತೋರಿಸಿದ ಲತಿಶಾ ಅನ್ಸಾರಿ ಅವರ ಸ್ಟೋರಿ ಏನೆಂದು ನೋಡೋಣ ಬನ್ನಿ.    

2 Min read
Ashwini HR
Published : Sep 30 2025, 07:03 PM IST
Share this Photo Gallery
  • FB
  • TW
  • Linkdin
  • Whatsapp
15
ಧೈರ್ಯಶಾಲಿ ಹುಡುಗಿ
Image Credit : Getty

ಧೈರ್ಯಶಾಲಿ ಹುಡುಗಿ

ಯುಪಿಎಸ್‌ಸಿ ಪರೀಕ್ಷೆಯು ದೇಶದಲ್ಲಿ ಮಾತ್ರವಲ್ಲದೆ, ವಿಶ್ವದಲ್ಲೇ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಇದಕ್ಕೆ ಹಾಜರಾಗುತ್ತಾರೆ. ಆದರೆ ಯಾರಾದರೂ ವೀಲ್‌ಚೇರ್‌ನಲ್ಲಿ ಅಥವಾ ಆಕ್ಸಿಜನ್ ಸಪೋರ್ಟ್‌ನಲ್ಲಿ ಕುಳಿತು ಈ ಪರೀಕ್ಷೆಯನ್ನು ತೆಗೆದುಕೊಳ್ಳಬಹುದೆಂದು ನೀವು ಎಂದಾದರೂ ಊಹಿಸಿದ್ದೀರಾ?. ಏಕೆಂದರೆ ಲತಿಶಾ ಅನ್ಸಾರಿ ಮಾಡಿದ್ದು ಅದನ್ನೇ. ಕೇರಳದ ಈ ಧೈರ್ಯಶಾಲಿ ಹುಡುಗಿ ತನ್ನ ಕನಸುಗಳನ್ನು ಬೆನ್ನಟ್ಟಿದ್ದಲ್ಲದೆ, ಪ್ರತಿಯೊಂದು ಸವಾಲನ್ನೂ ಜಯಿಸಿ, "ಪ್ರತಿಯೊಬ್ಬರೂ ಕನಸು ಕಾಣುತ್ತಾರೆ, ಆದರೆ ದೃಢನಿಶ್ಚಯ ಮತ್ತು ಉತ್ಸಾಹ ಹೊಂದಿರುವವರು ಮಾತ್ರ ಅವುಗಳನ್ನು ನನಸಾಗಿಸಬಹುದು" ಎಂಬುದನ್ನು ತೋರಿಸಿದರು. ಹಾಗಾದರೆ ಲತಿಶಾ ಅನ್ಸಾರಿ ಅವರ ಸ್ಟೋರಿ ಏನೆಂದು ನೋಡೋಣ ಬನ್ನಿ.

25
ಯಾರು ಈ ಲತಿಷಾ ಅನ್ಸಾರಿ?
Image Credit : socialmedia

ಯಾರು ಈ ಲತಿಷಾ ಅನ್ಸಾರಿ?

ಲತಿಷಾ ಅನ್ಸಾರಿ ಮೂಲತಃ ಕೇರಳದವರು. 2019 ರಲ್ಲಿ ಯುಪಿಎಸ್‌ಸಿ ಪ್ರಿಲಿಮ್ಸ್ ಸಮಯದಲ್ಲಿ ಅವರ ಹೆಸರು ಸುದ್ದಿಯಲ್ಲಿತ್ತು. ಆದರೆ ಅವರ ಕಥೆ ನೀವಂದುಕೊಂಡಷ್ಟು ಸುಲಭವಾಗಿ ಇರಲಿಲ್ಲ. ಸಾವಿರಕ್ಕೂ ಹೆಚ್ಚು ಮೂಳೆ ಮುರಿತಗಳಿಂದ ಬಳಲುತ್ತಿದ್ದ ಇವರು ವೀಲ್‌ಚೇರ್ ಮತ್ತು ಆಕ್ಸಿಜನ್ ಬೆಂಬಲದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಸಾಕಷ್ಟು ಸವಾಲಿನದ್ದಾಗಿತ್ತು. ಸಂಕಲ್ಪ ಬಲವಾಗಿದ್ದರೆ ದೈಹಿಕ ಮಿತಿಗಳು ಸಹ ತಡೆಗೋಡೆಯಾಗಲು ಸಾಧ್ಯವಿಲ್ಲ ಎಂದು ಅವರ ಧೈರ್ಯ ಮತ್ತು ದೃಢಸಂಕಲ್ಪ ತೋರಿಸುತ್ತದೆ.

Related Articles

Related image1
ಅರ್ಚನಾ ತಿವಾರಿ ಮಿಸ್ಸಿಂಗ್ ಕೇಸ್ ಭೇದಿಸಿದ ಐಪಿಎಸ್ ರಾಹುಲ್ ಲೋಧಾ ಯಾರು ಗೊತ್ತೇ?
Related image2
ಅವಮಾನಿಸಿದವರಿಗೆ ಬ್ಯಾಂಕ್ ಬ್ಯಾಲೆನ್ಸ್‌ನಿಂದಲೇ ಪ್ರತ್ಯುತ್ತರ, ವೈರಲ್ ಆಯ್ತು ಯುವಕನ ಸಕ್ಸಸ್ ಸ್ಟೋರಿ
35
ಹುಟ್ಟಿನಿಂದಲೇ ಹೋರಾಟಗಾರ್ತಿ
Image Credit : socialmedia

ಹುಟ್ಟಿನಿಂದಲೇ ಹೋರಾಟಗಾರ್ತಿ

ಲತಿಷಾ ಟೈಪ್ 2 ಆಸ್ಟಿಯೋಜೆನೆಸಿಸ್ ಇಂಪರ್ಫೆಕ್ಟಾ (ಮೂಳೆ ದೌರ್ಬಲ್ಯ) ದಿಂದ ಜನಿಸಿದರು. 2018 ರಿಂದ, ಶ್ವಾಸಕೋಶದ ಅಧಿಕ ರಕ್ತದೊತ್ತಡವು (Pulmonary hypertension) ಅವಳ ಉಸಿರಾಟದ ಮೇಲೂ ಪರಿಣಾಮ ಬೀರಿತು. ಯಾವುದೇ ಸಾಮಾನ್ಯ ವ್ಯಕ್ತಿ ಅಂತಹ ಸಂದರ್ಭಗಳಲ್ಲಿ ಸುಮ್ಮನಿರುತ್ತಿದ್ದರು ಅಲ್ಲವೇ. ಆದರೆ ಲತಿಷಾ ಹಾಗೇ ಮಾಡಲಿಲ್ಲ. ಆಕೆಯ ಪೋಷಕರು ಅವಳನ್ನು ಪ್ರತಿ ಹಂತದಲ್ಲೂ ಸಪೋರ್ಟ್ ಮಾಡಿದರು. ಅಷ್ಟೇ ಅಲ್ಲ, ಅಧ್ಯಯನಕ್ಕೆ ಸಹಾಯ ಮಾಡಿದರು. ಇದೇ ಬೆಂಬಲ ಅವಳಿಗೆ ಧೈರ್ಯ ತುಂಬುವಲ್ಲಿ ದೊಡ್ಡ ಶಕ್ತಿಯಾಯಿತು.

45
ಪ್ರವೇಶ ನಿರಾಕರಿಸಿದ ಶಾಲೆಗಳು
Image Credit : Socialmedia

ಪ್ರವೇಶ ನಿರಾಕರಿಸಿದ ಶಾಲೆಗಳು

ಲತೀಶಾಳ ಜೀವನ ಎಲ್ಲರಂದುಕೊಂಡಂತೆ ಸುಲಭವಾಗಿರಲಿಲ್ಲ. ಶಾಲೆಗೆ ಸೇರುವುದಕ್ಕೂ ಕೂಡ ಬಹಳ ಕಷ್ಟಪಟ್ಟಳು. ಅವಳ ದೈಹಿಕ ಸ್ಥಿತಿ ಗಮನಿಸಿದ ಅನೇಕ ಶಾಲೆಗಳು ಪ್ರವೇಶ ಕೊಡಲು ನಿರಾಕರಿಸಿದವು. ಆದರೂ ಲತೀಶಾ ಬಿಡಬೇಕಲ್ಲ. ಕೊನೆಗೂ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದರು. ಯುಪಿಎಸ್‌ಸಿ ಪ್ರಿಲಿಮ್ಸ್ ನಂತರ ಲತೀಶಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಪರೀಕ್ಷಾ ಕೇಂದ್ರದಲ್ಲಿ ಉಚಿತ ಪೋರ್ಟಬಲ್ ಆಮ್ಲಜನಕ ಸಾಂದ್ರೀಕರಣ ವ್ಯವಸ್ಥೆಯನ್ನು ಮಾಡುವಲ್ಲಿ ಕೊಟ್ಟಾಯಂ ಜಿಲ್ಲಾಧಿಕಾರಿ ಪ್ರಮುಖ ಪಾತ್ರ ವಹಿಸಿದರು.

55
ಚಿಕ್ಕ ವಯಸ್ಸಿನಲ್ಲಿಯೇ ನಿಧನ
Image Credit : Getty

ಚಿಕ್ಕ ವಯಸ್ಸಿನಲ್ಲಿಯೇ ನಿಧನ

ಲತಿಷಾ ಅವರ ಚಿಕಿತ್ಸೆಗೆ ತಿಂಗಳಿಗೆ ಸುಮಾರು ₹25,000 ವೆಚ್ಚವಾಯಿತು. ಆದರೆ ಅವರ ಅಲ್ಪಾವಧಿಯ ಜೀವಿತಾವಧಿಯಲ್ಲಿ ದೊಡ್ಡ ಕನಸುಗಳನ್ನು ಕಂಡು ನನಸಾಗಿಸಲು ಶ್ರಮಿಸಿದರು. ಜೂನ್ 16, 2021 ರಂದು ಕೇವಲ 27 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಕಥೆ ಎಲ್ಲರಿಗೂ ಒಂದು ಸ್ಫೂರ್ತಿಯಾಯ್ತು. ದೈಹಿಕ ಅಂಗವೈಕಲ್ಯವು ದೌರ್ಬಲ್ಯವಲ್ಲ. ಬದಲಿಗೆ ಧೈರ್ಯ ಮತ್ತು ಚೈತನ್ಯದ ಪರೀಕ್ಷೆ ಎಂಬುದನ್ನ ಲತಿಷಾ ಅನ್ಸಾರಿ ತೋರಿಸಿದರು.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಯುಪಿಎಸ್ಸಿ
ಯಶಸ್ಸಿನ ಕಥೆ
ಶಿಕ್ಷಣ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved