ಅಂಪೈರ್ ಕೈಗಳಲ್ಲಿ ಕತ್ತರಿ ಯಾಕಿರುತ್ತೆ? ಕ್ರಿಕೆಟ್ ಮೈದಾನದ ಅಚ್ಚರಿಯ ರಹಸ್ಯ
why do cricket umpires carry scissors: ಕ್ರಿಕೆಟ್ ಪಂದ್ಯದ ವೇಳೆ ಅಂಪೈರ್‌ಗಳು ತಮ್ಮ ಬಳಿ ಕತ್ತರಿ ಇಟ್ಟುಕೊಳ್ಳುವ ಹಿಂದಿನ ಕಾರಣವನ್ನು ಈ ಲೇಖನ ವಿವರಿಸುತ್ತದೆ. ಕ್ರಿಕೆಟ್ ಮೈದಾನದ ಅಚ್ಚರಿಯ ರಹಸ್ಯ ಇಲ್ಲಿದೆ

ಆಕರ್ಷಕ ಆಟವೇ ಕ್ರಿಕೆಟ್
ಜಗತ್ತಿನ ಪ್ರಮುಖ ಆಕರ್ಷಕ ಆಟಗಳಲ್ಲಿ ಕ್ರಿಕೆಟ್ ಒಂದಾಗಿದೆ. ಕ್ರಿಕೆಟ್ ಪಂದ್ಯಗಳು ಆರಂಭವಾದ್ರೆ ಜಗತ್ತು ಕೆಲಸಗಳನ್ನು ಬಿಟ್ಟು ಮ್ಯಾಚ್ ನೋಡುತ್ತಾರೆ. ತಮ್ಮ ದೇಶದ ಪಂದ್ಯ ಆಲ್ಲ, ಬೇರಾವ ದೇಶಗಳ ನಡುವೆ ಮ್ಯಾಚ್ ಇದ್ರು ಕ್ರಿಕೆಟ್ ಪ್ರೇಮಿಗಳು ವೀಕ್ಷಿಸುತ್ತಾರೆ. (ಸಾಂದರ್ಭಿಕ ಚಿತ್ರ)
ಅಂಪೈರ್ ಕೈಯಲ್ಲಿ ಯಾಕಿರುತ್ತೆ ಕತ್ತರಿ?
ಕ್ರಿಕೆಟ್ ಪಂದ್ಯ ತೀರ್ಪು ನೀಡಲು ಮೈದಾನದಲ್ಲಿ ಇಬ್ಬರು ಅಂಪೈರ್‌ಗಳು ಇರುತ್ತಾರೆ. ಇಬ್ಬರಿಂದಲೂ ನಿರ್ಣಯ ನೀಡಲು ಸಾಧ್ಯವಾಗದಿದ್ದಾಗ ಮೂರನೇ ಅಂಪೈರ್ ಮೊರೆ ಹೋಗಲಾಗುತ್ತದೆ. ಇಂದಿನ ತಂತ್ರಜ್ಞಾನ ಸಹಾಯದಿಂದ ಎಲ್ಲಾ ಆಯಾಮದಲ್ಲಿಯೂ ಪರಿಶೀಲಿಸಿ ನಿರ್ಣಯ ನೀಡಲಾಗುತ್ತದೆ. ಅಂಪೈರ್‌ಗಳು ಪಂದ್ಯದ ವೇಳೆ ಕತ್ತರಿ ತೆಗೆದುಕೊಂಡು ಹೋಗುತ್ತಾರೆ. ಅಂಪೈರ್ ಕೈಗಳಲ್ಲಿ ಕತ್ತರಿ ನೋಡಿ ಬಹುತೇಕರು ಆಶ್ಚರ್ಯಗೊಂಡಿರುತ್ತಾರೆ. (ಸಾಂದರ್ಭಿಕ ಚಿತ್ರ)
ಕತ್ತರಿ ರಹಸ್ಯ?
ಬೌಲರ್‌ಗಳು ಬೌಲಿಂಗ್ ಮಾಡುವಾಗ ಚೆಂಡಿನ ಹೊಲಿಗೆ (ದಾರ) ಕೆಲವೊಮ್ಮೆ ಸಡಿಲಗೊಂಡಿರುತ್ತದೆ. ಇದರಿಂದ ಚೆಂಡಿನ ದಾರ ಹೊರ ಬಂದಿರುವ ಸಾಧ್ಯತೆಗಳಿರುತ್ತವೆ. ಈ ದಾರವನ್ನು ಹಾಗೆ ಬಿಟ್ಟರೆ ಚೆಂಡು ಸ್ವಿಂಗ್ ಆಗುತ್ತದೆ. ಇದು ಬೌಲರ್‌ಗೆ ಲಾಭವಾಗಿ, ಬ್ಯಾಟ್ಸ್‌ಮನ್‌ಗಳಿಗೆ ಅನಾನೂಕೂಲತೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. (ಸಾಂದರ್ಭಿಕ ಚಿತ್ರ)
ಚೆಂಡಿನಿಂದ ಹೊರ ಬಂದಿರುತ್ತೆ ದಾರ
ಚೆಂಡಿನಿಂದ ಹೊರ ಬಂದ ದಾರ ಆಟದ ಸ್ಥಗಿತಕ್ಕೆ ಕಾರಣವಾಗಬಹುದು. ಇದು ನಿಯಮಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆ ಅಂಪೈರ್‌ಗಳು ತಮ್ಮ ಬಳಿಯಲ್ಲಿ ಕತ್ತರಿಯೊಂದನ್ನು ಇರಿಸಿಕೊಳ್ಳುತ್ತಾರೆ. ಈ ಕತ್ತರಿಯಿಂದ ಚೆಂಡಿನಿಂದ ಚಾಚಿಕೊಂಡಿರುವ ದಾರವನ್ನು ಕತ್ತರಿಸುತ್ತಾರೆ. (ಸಾಂದರ್ಭಿಕ ಚಿತ್ರ)
ಇದನ್ನೂ ಓದಿ: ಭಾರತ-ಪಾಕ್ ಪಂದ್ಯ: ಭಾರತದ ಮೇಲೆ ಆಯ್ತು, ಈಗ ಅಂಪೈರ್ ಮೇಲೆ ದೂರು ಕೊಟ್ಟ ಪಾಕಿಸ್ತಾನ!
ನ್ಯಾಯ ಮತ್ತು ನಿಖರವಾದ ಆಟ
ಈ ಮೂಲಕ ಅಂಪೈರ್‌ಗಳು ನ್ಯಾಯಯುತ ಮತ್ತು ನಿಖರವಾದ ಆಟ ಖಚಿತಪಡಿಸುತ್ತಾರೆ. ಆಟದ ಮಧ್ಯೆಯೂ ಅಂಪೈರ್‌ಗಳು ಬಳಕೆಯಾಗುತ್ತಿರುವ ಚೆಂಡನ್ನು ಪರಿಶೀಲನೆ ನಡೆಸುತ್ತಿರುತ್ತಾರೆ. ನ್ಯಾಯಯುತವಾದ ಆಟಕ್ಕಾಗಿ ಅಂಪೈರ್‌ಗಳು ತಮ್ಮ ಬಳಿ ಕತ್ತರಿಯನ್ನು ಇರಿಸಿಕೊಳ್ಳುತ್ತಾರೆ. (ಸಾಂದರ್ಭಿಕ ಚಿತ್ರ)
ಇದನ್ನೂ ಓದಿ: ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಸಿಕ್ಸರ್ ಸಿಡಿಸಿದ್ದು ಯಾರು? ಇಲ್ಲಿಯವರೆಗೂ ಯಾರಿಗೂ ಆ ರೆಕಾರ್ಡ್ ಬ್ರೇಕ್ ಮಾಡೋಕಾಗಿಲ್ಲ!