- Home
- Sports
- Cricket
- ಭಾರತ-ಇಂಗ್ಲೆಂಡ್ ಒಟ್ಟು ಸೇರಿ ಬಲಿಷ್ಠ ಇಂಗ್ಲೆಂಡ್ ತಂಡ ಆಯ್ಕೆ ಮಾಡಿದ ಸ್ಟುವರ್ಟ್ ಬ್ರಾಡ್! ಗಿಲ್-ಜಡೇಜಾಗಿಲ್ಲ ಸ್ಥಾನ
ಭಾರತ-ಇಂಗ್ಲೆಂಡ್ ಒಟ್ಟು ಸೇರಿ ಬಲಿಷ್ಠ ಇಂಗ್ಲೆಂಡ್ ತಂಡ ಆಯ್ಕೆ ಮಾಡಿದ ಸ್ಟುವರ್ಟ್ ಬ್ರಾಡ್! ಗಿಲ್-ಜಡೇಜಾಗಿಲ್ಲ ಸ್ಥಾನ
ಇಂಗ್ಲೆಂಡ್ ಮಾಜಿ ವೇಗಿ ಸ್ಟುವರ್ಟ್ ಬ್ರಾಡ್ ಇಂಡೋ-ಇಂಗ್ಲೆಂಡ್ ಸರಣಿಯ ನಂತರ ಕಂಬೈನ್ಡ್ XI ಅನ್ನು ಆಯ್ಕೆ ಮಾಡಿದ್ದಾರೆ. ಭಾರತೀಯ ನಾಯಕ ಶುಭಮನ್ ಗಿಲ್ ಮತ್ತು ರವೀಂದ್ರ ಜಡೇಜಾ ಅವರನ್ನು ಹೊರತುಪಡಿಸಿ ತಂಡವನ್ನು ಆಯ್ಕೆ ಮಾಡಿದ್ದಾರೆ. ಬ್ರಾಡ್ ಆಯ್ಕೆ ಹೀಗಿದೆ..

1. ಯಶಸ್ವಿ ಜೈಸ್ವಾಲ್
ಭಾರತೀಯ ಆರಂಭಿಕ ಆಟಗಾರ ಸರಣಿಯಲ್ಲಿ 411 ರನ್ ಗಳಿಸಿದರು. ಇದರಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕಗಳು ಸೇರಿವೆ.
2. ಕೆ ಎಲ್ ರಾಹುಲ್
ರನ್ ಗಳಿಕೆಯಲ್ಲಿ ಮೂರನೇ ಸ್ಥಾನ. ಭಾರತೀಯ ಆರಂಭಿಕ ಆಟಗಾರ ಸರಣಿಯಲ್ಲಿ 532 ರನ್ ಗಳಿಸಿದರು. ಇದರಲ್ಲಿ ಎರಡು ಶತಕಗಳು ಸೇರಿವೆ.
3. ಓಲಿ ಪೋಪ್
ಮೂರನೇ ಸ್ಥಾನದಲ್ಲಿ ಓಲಿ ಪೋಪ್ ಸ್ಥಾನ ಪಡೆದಿದ್ದಾರೆ. ಐದು ಪಂದ್ಯಗಳಿಂದ 306 ರನ್ ಗಳಿಸಿದ್ದಾರೆ.
4. ಜೋ ರೂಟ್
ಶುಭ್‌ಮನ್ ಗಿಲ್ ಬದಲಿಗೆ ನಾಲ್ಕನೇ ಸ್ಥಾನದಲ್ಲಿ ಜೋ ರೂಟ್ ಸ್ಥಾನ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ರೂಟ್‌ಗೆ ಸಿಕ್ಕಿದೆ.
5. ಹ್ಯಾರಿ ಬ್ರೂಕ್
ರೂಟ್ ನಂತರ ಐದನೇ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್ ಕ್ರೀಸ್‌ಗೆ ಬರುತ್ತಾರೆ. ಸರಣಿಯಲ್ಲಿ ಎರಡು ಶತಕಗಳೊಂದಿಗೆ ಬ್ರೂಕ್ ಒಟ್ಟು 481 ರನ್ ಗಳಿಸಿದರು.
6. ಬೆನ್ ಸ್ಟೋಕ್ಸ್
ಬ್ರಾಡ್ ಆಯ್ಕೆ ಮಾಡಿದ ತಂಡದಲ್ಲಿ ಬೆನ್ ಸ್ಟೋಕ್ಸ್ ತಂಡದ ನಾಯಕ ಪಟ್ಟ ಕಟ್ಟಲಾಗಿದೆ. ಸ್ಟೋಕ್ಸ್ ಬ್ಯಾಟಿಂಗ್‌ನಲ್ಲಿ 304 ರನ್ ಬೌಲಿಂಗ್‌ನಲ್ಲಿ 17 ವಿಕೆಟ್ ಪಡೆದಿದ್ದರು.
7. ರಿಷಭ್ ಪಂತ್
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕೇವಲ 4 ಪಂದ್ಯಗಳನ್ನಾಡಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದ್ದರು. ಪಂತ್ 479 ರನ್ ಗಳಿಸಿದ್ದಾರೆ.
8. ವಾಷಿಂಗ್ಟನ್ ಸುಂದರ್
ಬ್ರಾಡ್ ಆಯ್ಕೆಯ ತಂಡದ ಏಕೈಕ ಸ್ಪಿನ್ನರ್ ಆಗಿ ಭಾರತೀಯ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಸ್ಥಾನ ಪಡೆದಿದ್ದಾರೆ. ಏಳು ವಿಕೆಟ್ ಪಡೆದ ಆಟಗಾರ 284 ರನ್ ಗಳಿಸಿದ್ದಾರೆ.
9. ಜೋಫ್ರಾ ಆರ್ಚರ್
ಬ್ರಾಡ್ ತಂಡದಲ್ಲಿ ಕೇವಲ ಒಬ್ಬ ಇಂಗ್ಲಿಷ್ ವೇಗದ ಬೌಲರ್ ಅನ್ನು ಸೇರಿಸಿದ್ದಾರೆ. ಎರಡು ಟೆಸ್ಟ್‌ಗಳಿಂದ ಆರ್ಚರ್ 9 ವಿಕೆಟ್ ಪಡೆದಿದ್ದಾರೆ.
10. ಮೊಹಮ್ಮದ್ ಸಿರಾಜ್
ವಿಕೆಟ್ ಪಡೆಯುವಲ್ಲಿ ಮೊದಲ ಸ್ಥಾನದಲ್ಲಿರುವ ಮೊಹಮ್ಮದ್ ಸಿರಾಜ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತೀಯ ವೇಗದ ಬೌಲರ್ 23 ವಿಕೆಟ್ ಪಡೆದಿದ್ದಾರೆ.
11. ಜಸ್ಪ್ರೀತ್ ಬುಮ್ರಾ
ಕೇವಲ ಮೂರು ಟೆಸ್ಟ್ ಪಂದ್ಯಗಳನ್ನು ಆಡಿರುವ ಬುಮ್ರಾ ಕೂಡ ತಂಡಕ್ಕೆ ಬಂದಿದ್ದಾರೆ. ಬುಮ್ರಾ 14 ವಿಕೆಟ್ ಪಡೆದಿದ್ದಾರೆ.