- Home
- Sports
- Cricket
- ಏಷ್ಯಾಕಪ್‌ಗೆ ಮಾಸ್ಟರ್ ಪ್ಲಾನ್: KCL ಟೂರ್ನಿಯಲ್ಲಿ ಹೊಸ ರೋಲ್ಸ್‌ನಲ್ಲಿ ಕಾಣಿಸಿಕೊಂಡ ಸಂಜು ಸ್ಯಾಮ್ಸನ್!
ಏಷ್ಯಾಕಪ್‌ಗೆ ಮಾಸ್ಟರ್ ಪ್ಲಾನ್: KCL ಟೂರ್ನಿಯಲ್ಲಿ ಹೊಸ ರೋಲ್ಸ್‌ನಲ್ಲಿ ಕಾಣಿಸಿಕೊಂಡ ಸಂಜು ಸ್ಯಾಮ್ಸನ್!
ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಕೊಚ್ಚಿ ಬ್ಲೂ ಟೈಗರ್ಸ್ ಪರ ಸಂಜು ಸ್ಯಾಮ್ಸನ್ ಆರನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಆಲಪ್ಪುಜಾ ರಿಪ್ಪಲ್ಸ್ ವಿರುದ್ಧ ನಿರಾಸೆ ಮೂಡಿಸಿದರು. 22 ಎಸೆತಗಳಲ್ಲಿ 13 ರನ್. ಏಷ್ಯಾಕಪ್ ಸಮೀಪಿಸುತ್ತಿರುವಾಗ ಸಂಜುವಿನ ಬ್ಯಾಟಿಂಗ್ ಸ್ಥಾನ ಚರ್ಚೆಯಲ್ಲಿದೆ.
17

ಏಷ್ಯಾಕಪ್ ತಂಡದ ವಿಕೆಟ್ ಕೀಪರ್ ಸಂಜು ನಿರೀಕ್ಷಿತ ಪ್ರದರ್ಶನ ನೀಡಲು ಪದೇ ಪದೇ ಎಡವುತ್ತಿದ್ದಾರೆ.
27
ತ್ರಿವೇಂಡ್ರಂ ರಾಯಲ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಸಂಜುಗೆ ಬ್ಯಾಟ್ ಮಾಡಲು ಅವಕಾಶ ಸಿಗಲಿಲ್ಲ.
37
ಹೀಗಾಗಿ ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಸಂಜು ಮಧ್ಯಮ ಕ್ರಮಾಂಕದಲ್ಲಿ ಫಿನಿಷರ್ ಆಗಿ ಆಡ್ತಿದ್ದಾರೆ.
47
ಏಷ್ಯಾಕಪ್‌ನಲ್ಲಿ ಶುಭ್‌ಮನ್ ಗಿಲ್, ಅಭಿಷೇಕ್ ಶರ್ಮಾ ಓಪನರ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಆಡುವ ಸಾಧ್ಯತೆ.
57
ಹೀಗಾಗಿ ಐದನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್ ಕಣಕ್ಕಿಳಿದು ಮ್ಯಾಚ್ ಫಿನಿಶರ್ ಅಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಕೇರಳ ಕ್ರಿಕೆಟ್ ಲೀಗ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದಾರೆ
67
ಕೆಸಿಎಲ್‌ನಲ್ಲಿ ಫಿನಿಷರ್ ಆಗಿ ಆಡಿದರೆ ಏಷ್ಯಾಕಪ್‌ನಲ್ಲೂ ಆತ್ಮವಿಶ್ವಾಸದಿಂದ ಆಡಬಹುದು ಎನ್ನುವುದು ಕೇರಳ ಕ್ರಿಕೆಟಿಗನ ಲೆಕ್ಕಾಚಾರವಾಗಿದೆ.
77
ಯುವ ಆಟಗಾರರಿಗೆ ಅವಕಾಶ ನೀಡಲು ಸಂಜು ಮಧ್ಯಮ ಕ್ರಮಾಂಕಕ್ಕೆ ಬಂದ್ರು ಎಂಬ ಮಾತು ಕೂಡಾ ಕೇಳಿ ಬರುತ್ತಿದೆ.
Latest Videos