ಕೊನೆಗೂ ಬಯಲಾಯ್ತು ರೋಹಿತ್ ಶರ್ಮಾ ಡಯಟ್ ಪ್ಲಾನ್! ಹಿಟ್‌ಮ್ಯಾನ್ 20 ಕೆ.ಜಿ ತೂಕ ಇಳಿಸಿದ್ದು ಹೇಗೆ?
ಬೆಂಗಳೂರು: ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಇದೀಗ ತೂಕ ಇಳಿಸಿಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಬಿಸಿಸಿಐನ ಫಿಟ್ನೆಸ್ ಟೆಸ್ಟ್ ಪಾಸ್ ಮಾಡುವ ಮೂಲಕ ತಾವು ಮೈದಾನಕ್ಕಿಳಿಯಲು ರೆಡಿ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ.

ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಭಾರತದ ತಾರಾ ಕ್ರಿಕೆಟಿಗರಾದ ಶುಭ್‌ಮನ್ ಗಿಲ್, ರೋಹಿತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಜಿತೇಶ್ ಶರ್ಮಾ ಸೇರಿದಂತೆ ಹಲವು ಕ್ರಿಕೆಟಿಗರು ಫಿಟ್ನೆಸ್ ಪರೀಕ್ಷೆ ಪಾಸ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪೈಕಿ ಹೆಚ್ಚು ಗಮನ ಸೆಳೆದ ಆಟಗಾರ ಎಂದರೆ ಅದು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ರೋಹಿತ್ ಶರ್ಮಾ, ಇದೀಗ ತಾವು ಮುಂಬರುವ ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ತಾವು ಫಿಟ್ ಆಗಿರುವುದಾಗಿ ಸಾಬೀತಪಡಿಸಿದ್ದಾರೆ.
ರೋಹಿತ್ ಶರ್ಮಾ ಅವರ ಫಿಟ್ನೆಸ್ ಸೀಕ್ರೇಟ್ ಬಯಲಾಗಿದೆ. ಹಿಟ್‌ಮ್ಯಾನ್ ತಮ್ಮ ಬಾಯಿ ರುಚಿಗೆ ಬ್ರೇಕ್ ಹಾಕಿದ್ದಾರೆ. ತಮ್ಮಿಷ್ಟದ ವರಾನ್ ಬಾತ್, ಬಟರ್ ಚಿಕನ್, ಫಿಶ್ ಹಾಗೂ ಬಿರ್ಯಾನಿ ತಿನ್ನುವ ಪ್ರಮಾಣವನ್ನು ಕಮ್ಮಿ ಮಾಡುವ ಮೂಲಕ ತಮ್ಮ ಫಿಟ್ನೆಸ್‌ಗೆ ಹೆಚ್ಚು ಗಮನ ನೀಡಿದ್ದಾರೆ.
ರೋಹಿತ್ ಶರ್ಮಾ ತೂಕ ಕಳೆದುಕೊಳ್ಳುವುದರ ಜತೆಗೆ ಮಾಂಸಖಂಡವನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಪನೀರ್, ದಾಲ್ ಸೇವಿಸುವುದನ್ನು ತನ್ನ ಡಯಟ್ ಪ್ಲಾನ್‌ನಲ್ಲಿ ಅಳವಡಿಸಿಕೊಂಡಿದ್ದಾರೆ.
ರೋಹಿತ್ ಶರ್ಮಾ ಪ್ರತಿ ಕೆಲವು ಗಂಟೆಗಳಿಗೊಮ್ಮೆ ಸ್ವಲ್ಪ ಸ್ವಲ್ಪವೇ ಆದರೇ ಪೋಷಕಾಂಶಯುಕ್ತ ಆಹಾರವನ್ನು ದಿನದಲ್ಲಿ ನಿಯಮಿತವಾಗಿ 6-7 ಬಾರಿ ಸೇವಿಸುವ ಮೂಲಕ ಫಿಟ್ನೆಸ್ ಕಡೆ ಗಮನ ನೀಡಿದರು.
ರೋಹಿತ್ ಶರ್ಮಾ ಪ್ರತಿದಿನ ಬೆಳಗ್ಗೆ ಏಳು ಗಂಟೆಗೆ ಹಸಿ ಬಾದಾಮಿ,ಸಲಾಡ್ ಹಾಗೂ ಫ್ರೆಶ್ ಜೂಸ್ ಸೇವಿಸುತ್ತಿದ್ದರು. ಜಂಕ್ ಫುಡ್ ತಿನ್ನುವುದನ್ನು ತ್ಯಜಿಸಿ ಎಳನೀರು, ಮೊಸರು, ಡ್ರೈ ಫ್ರೂಟ್ಸ್ ಸೇವಿಸುತ್ತಿದ್ದರು.
ಇದರ ಜತೆಗೆ ಅಭಿಷೇಕ್ ನಾಯರ್ ಜತೆಗೂಡಿ ಕಠಿಣ ಫಿಟ್ನೆಸ್ ಪ್ರಾಕ್ಟೀಸ್ ಮಾಡಿದ ರೋಹಿತ್ ಶರ್ಮಾ, ಕೇವಲ ಮೂರು ತಿಂಗಳಿನೊಳಗಾಗಿ 20 ಕೆಜಿ ತೂಕ ಇಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.