- Home
- Sports
- Cricket
- ಆರೆಂಜ್ ಕ್ಯಾಪ್ ಗೆದ್ದ ಬೆನ್ನಲ್ಲೇ ಈ ಕಾರಣಕ್ಕಾಗಿ ಕೆಕೆಆರ್‌ಗೆ ಗುಡ್‌ಬೈ ಹೇಳಲು ರೆಡಿಯಾಗಿದ್ದ ರಾಬಿನ್ ಉತ್ತಪ್ಪ!
ಆರೆಂಜ್ ಕ್ಯಾಪ್ ಗೆದ್ದ ಬೆನ್ನಲ್ಲೇ ಈ ಕಾರಣಕ್ಕಾಗಿ ಕೆಕೆಆರ್‌ಗೆ ಗುಡ್‌ಬೈ ಹೇಳಲು ರೆಡಿಯಾಗಿದ್ದ ರಾಬಿನ್ ಉತ್ತಪ್ಪ!
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ, ಕನ್ನಡಿಗ ರಾಬಿನ್ ಉತ್ತಪ್ಪ, 2014 ಐಪಿಎಲ್ ಟೂರ್ನಿಯಲ್ಲಿ ಅರೆಂಜ್ ಕ್ಯಾಪ್ ಗೆದ್ದ ಬೆನ್ನಲ್ಲೇ ಕೋಲ್ಕತಾ ನೈಟ್ ರೈಡರ್ಸ್ ತಂಡ ತೊರೆಯಲು ಮುಂದಾಗಿದ್ದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಯಾಕೆ ಹೀಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

ಹೆಚ್ಚಿನ ಹಣಗಳಿಸುವ ಉದ್ದೇಶದಿಂದ 2014ರ ಐಪಿಎಲ್ ಬಳಿಕ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ತೊರೆಯಬೇಕು ಅಂದುಕೊಂಡಿದ್ದೆ' ಎಂದು ಮಾಜಿ ಕ್ರಿಕೆಟಿಗ, ಕರ್ನಾಟಕದ ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಯೂಟ್ಯೂಬ್ ಸಂವಾದವೊಂದಲ್ಲಿ ಮಾತನಾಡಿರುವ ಅವರು, '2014ರಲ್ಲಿ ಕೆಕೆಆರ್ ಐಪಿಎಲ್ ಟ್ರೋಫಿ ಗೆದ್ದಿತ್ತು. ಆ ಆವೃತ್ತಿಯಲ್ಲಿ ನನಗೆ ಆರೆಂಜ್ ಕ್ಯಾಪ್ ಲಭಿಸಿತ್ತು.
ಹೀಗಾಗಿ ನಾನು ತಂಡವನ್ನು ತೊರೆದು, ಮರಳಿ ಹರಾಜಿಗೆ ಬಂದು ಹೆಚ್ಚು ಹಣ ಗಳಿಸುವ ಉದ್ದೇಶ ಹೊಂದಿದ್ದೆ. ಅದಕ್ಕಾಗಿ ಕೆಕೆಆರ್ ಆಡ ಳಿತದ ಜೊತೆಗೂ ಸಹ ಮಾತುಕತೆ ನಡೆಸಿದ್ದೆ ಎಂದು ಹೇಳಿದ್ದಾರೆ.
ನಾನು ಹೆಚ್ಚೆಂದರೆ 35-36 ವರ್ಷ ಆಡಬಹುದು. ಆಗ ನನಗೆ 29 ವರ್ಷ ವಯಸ್ಸಾಗಿತ್ತು. ಹೀಗಾಗಿ ಎಷ್ಟು ಸಾಧ್ಯವೋ ಅಷ್ಟು ಐಪಿಎಲ್‌ನಲ್ಲಿ ಗಳಿಸಿಕೊಳ್ಳಬೇಕು ಅಂತ ಹರಾಜಿಗೆ ಹೋಗಲು ತೀರ್ಮಾನಿಸಿದ್ದೆ ಎಂದು ಉತ್ತಪ್ಪ ಹೇಳಿದ್ದಾರೆ.
ಆದರೆ 2014ರ ಆವೃತ್ತಿಗೂ ಮುನ್ನ ನನ್ನನ್ನು ಕೆಕೆಆರ್ ಕ ಕೋಟಿ ನೀಡಿ ಒಪ್ಪಂದ ಮಾಡಿಕೊಂಡಿತ್ತು. ಹೀಗಾಗಿ ನನಗೆ ತಂಡ ತೊರೆಯಲು ಆಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.
2019ರ ಐಪಿಎಲ್‌ವರೆಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ಉತ್ತಪ್ಪ, ಆ ಬಳಿಕ 3 ಕೋಟಿ ರುಪಾಯಿಗೆ ರಾಜಸ್ಥಾನ ರಾಯಲ್ಸ್ ಪಾಲಾಗಿದ್ದರು. ಇದಾದ ಬಳಿಕ ತಮ್ಮ ಕೊನೆಯ ಎರಡು ಐಪಿಎಲ್ ಸೀಸನ್ ಸಿಎಸ್‌ಕೆ ತಂಡದ ಪರ ಕಾಣಿಸಿಕೊಂಡಿದ್ದರು.
ಕನ್ನಡಿಗ ರಾಬಿನ್ ಉತ್ತಪ್ಪ 2014ರಲ್ಲಿ 660 ರನ್ ಗಳಿಸಿ, ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಐಪಿಎಲ್‌ನಲ್ಲಿ 15 ವರ್ಷದಲ್ಲಿ ಆರ್‌ಸಿಬಿ, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತಾ ನೈಟ್ ರೈಡರ್ಸ್, ಪುಣೆ ವಾರಿಯರ್ಸ್ ಇಂಡಿಯಾ ಸೇರಿದಂತೆ ಒಟ್ಟು 6 ತಂಡಗಳ ಪರ ಆಡಿದ್ದಾರೆ.