ಆರು ತಿಂಗಳು ಕ್ರಿಕೆಟ್ ಆಡದಿದ್ರೂ ಒನ್‌ಡೇ ರ್‍ಯಾಂಕಿಂಗ್‌ನಲ್ಲಿ ರೋಹಿತ್ ಶರ್ಮಾ ನಂ.2!
ಭಾರತ ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಕಳೆದ ಆರು ತಿಂಗಳಿನಿಂದ ಒನ್‌ಡೇ ಮ್ಯಾಚ್ ಆಡದೇ ಇದ್ದರೂ ಏಕದಿನ ರ್‍ಯಾಂಕಿಂಗ್‌ನಲ್ಲಿ ನಂ.2 ಸ್ಥಾನಕ್ಕೇರಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
14

Image Credit : Getty
ಭಾರತ ಏಕದಿನ ನಾಯಕ ರೋಹಿತ್ ಶರ್ಮಾ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ವೆಸ್ಟ್ ಇಂಡೀಸ್-ಪಾಕಿಸ್ತಾನ ಏಕದಿನ ಸರಣಿ ಮುಗಿದ ನಂತರ ಐಸಿಸಿ ನೂತನ ರ್‍ಯಾಂಕಿಂಗ್ ಬಿಡುಗಡೆ ಮಾಡಿದೆ.
24
Image Credit : ANI
ಬಾಬರ್ ಅಜಂ ಕಳಪೆ ಫಾರ್ಮ್ ನಲ್ಲಿರುವುದರಿಂದ ರೋಹಿತ್ 2ನೇ ಸ್ಥಾನ ಪಡೆದಿದ್ದಾರೆ. ಗಿಲ್ 1ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿದ್ದಾರೆ.
34
Image Credit : Getty
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ರೋಹಿತ್ ಮತ್ತು ವಿರಾಟ್ ತಮ್ಮ ಶ್ರೇಯಾಂಕ ಸುಧಾರಿಸಬಹುದು. ಶ್ರೇಯಸ್ ಅಯ್ಯರ್ 8ನೇ ಸ್ಥಾನದಲ್ಲಿದ್ದಾರೆ. ಏಕದಿನ ತಂಡಗಳ ಶ್ರೇಯಾಂಕದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
44
Image Credit : Getty
ಐಸಿಸಿ ಶ್ರೇಯಾಂಕ ಇತ್ತೀಚಿನ ಪಂದ್ಯಗಳ ಆಧಾರದ ಮೇಲೆ ಕೊಡಲಾಗುತ್ತದೆ. ಬಾಬರ್ ಅಜಮ್ ಕಳಪೆ ಪ್ರದರ್ಶನದಿಂದ ಅವರ ಅಂಕ ಕಡಿಮೆಯಾಗಿದೆ. ರೋಹಿತ್ ಶರ್ಮಾ ಕಳೆದ ಆರು ತಿಂಗಳಿನಿಂದ ಕ್ರಿಕೆಟ್ ಆಡದೇ ಇದ್ರೂ ಅವರ ಅಂಕ ಹಾಗೆಯೇ ಉಳಿದಿದೆ.
Latest Videos