ಗಂಭೀರ್‌ಗೆ ಶಾಕ್ ಕೊಡಲು ಮುಂದಾದ ಬಿಸಿಸಿಐ! ಇಲ್ಲಿದೆ ಹೊಸ ಅಪ್‌ಡೇಟ್ಸ್
2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಮಾರ್ಗದರ್ಶಕರಾಗಿ ಧೋನಿಯವರನ್ನು ನೇಮಿಸಲು ಬಿಸಿಸಿಐ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಇದು ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್‌ಗೆ ಮೂಗುದಾರ ಹಾಕುವ ತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ 'ತಲಾ' ಎಂದು ಕರೆಯಲ್ಪಡುವ ಮಹೇಂದ್ರ ಸಿಂಗ್ ಧೋನಿ, ತಮ್ಮ ಅಚಲ ನಾಯಕತ್ವ ಮತ್ತು ಶಾಂತ ಸ್ವಭಾವದಿಂದಾಗಿ ವಿಶ್ವದಾದ್ಯಂತ ಖ್ಯಾತಿ ಪಡೆದಿದ್ದಾರೆ. 2007 ರಲ್ಲಿ ಭಾರತವನ್ನು ಮೊದಲ ಟಿ20 ವಿಶ್ವಕಪ್ ಗೆಲ್ಲಲು ಕಾರಣರಾದ ಧೋನಿ, 2011 ರ ಏಕದಿನ ವಿಶ್ವಕಪ್ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಭಾರತವನ್ನು ವಿಶ್ವ ವೇದಿಕೆಯಲ್ಲಿ ಮತ್ತೆ ತಿರುಗಿ ನೋಡುವಂತೆ ಮಾಡಿದರು.
ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರೂ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುವ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ.
2026ರ ಟಿ20 ವಿಶ್ವಕಪ್ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ವಿಶ್ವಕಪ್‌ಗಾಗಿ ಧೋನಿಯವರನ್ನು ಭಾರತ ತಂಡದ ಮಾರ್ಗದರ್ಶಕರನ್ನಾಗಿ ನೇಮಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ವರದಿಯಾಗಿದೆ.
ಯುವ ತಂಡವನ್ನು ಮುನ್ನಡೆಸಲು ಧೋನಿಯವರ ಕಾರ್ಯತಂತ್ರ, ಒತ್ತಡದ ಪರಿಸ್ಥಿತಿಯಲ್ಲಿ ನಿಯಂತ್ರಣ ಮತ್ತು ದೊಡ್ಡ ಪಂದ್ಯಗಳ ಅನುಭವ ಸಹಾಯ ಮಾಡುತ್ತದೆ ಎಂದು ಬಿಸಿಸಿಐ ನಂಬಿದೆ. ಇದಕ್ಕಾಗಿ ಧೋನಿಯವರ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಧೋನಿ ತಂಡದ ಒಳಗೆ ಸಲಹೆಗಳನ್ನು ನೀಡಿ, ಆಟಗಾರರ ಮನೋಸ್ಥೈರ್ಯವನ್ನು ಹೆಚ್ಚಿಸಿದರು. ಆದಾಗ್ಯೂ, ಆ ಸರಣಿಯಲ್ಲಿ ಭಾರತ ತಂಡ ಕಳಪೆ ಪ್ರದರ್ಶನ ನೀಡಿ ಗುಂಪು ಹಂತದಿಂದಲೇ ಹೊರಬಿತ್ತು. ಪಾಕಿಸ್ತಾನದ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲು ಕೂಡ ಧೋನಿಗೆ ಕಹಿ ಅನುಭವವಾಗಿತ್ತು. ಆದರೆ ಅವರ ಸಲಹೆಗಳನ್ನು ಭಾರತೀಯ ಆಟಗಾರರು ಶ್ಲಾಘಿಸಿದ್ದರು.
ಧೋನಿ ಬಿಸಿಸಿಐಯ ಕೋರಿಕೆಯನ್ನು ಒಪ್ಪಿಕೊಂಡರೂ, ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅದನ್ನು ಒಪ್ಪಿಕೊಳ್ಳುತ್ತಾರಾ ಎಂಬುದು ತಿಳಿದಿಲ್ಲ.
ಏಕೆಂದರೆ ಅವರ ಹಿಂದಿನ ಸಂಬಂಧವು ಕೆಲವು ವಿವಾದಗಳಿಂದ ಕೂಡಿದೆ. 2011 ರ ವಿಶ್ವಕಪ್ ಫೈನಲ್‌ನಲ್ಲಿ, ಗಂಭೀರ್-ಧೋನಿ ಜೋಡಿ ಗೆಲುವಿಗೆ ಕಾರಣವಾದರೂ, ಕೆಲವು ನಿರ್ಧಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು.
ಟೀಂ ಇಂಡಿಯಾದಲ್ಲಿ ಹೆಡ್ ಕೋಚ್ ಆಗಿ ಯಾವುದೇ ಅಡೆತಡೆಗಳಿಲ್ಲದೇ ಮುನ್ನುತ್ತಿರುವ ಗಂಭೀರ್‌ಗೆ ಬ್ರೇಕ್ ಹಾಕಲು ಧೋನಿಯನ್ನು ಕರೆತರುವ ಪ್ರಯತ್ನ ಬಿಸಿಸಿಐ ಮಾಡುತ್ತಿದೆ ಎನ್ನುವ ವಿಶ್ಲೇಷಣೆ ಕೂಡಾ ನಡೆಯುತ್ತಿದೆ