- Home
- Sports
- Cricket
- 2011ವಿಶ್ವಕಪ್ ಫೈನಲ್‌ನಲ್ಲಿ ಧೋನಿ 3ನೇ ಕ್ರಮಾಂಕಕ್ಕೆ ಪ್ರಮೋಷನ್: ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಸಚಿನ್
2011ವಿಶ್ವಕಪ್ ಫೈನಲ್‌ನಲ್ಲಿ ಧೋನಿ 3ನೇ ಕ್ರಮಾಂಕಕ್ಕೆ ಪ್ರಮೋಷನ್: ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಸಚಿನ್
2011ರ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಬ್ಯಾಟಿಂಗ್ ಆರ್ಡರ್‌ನಲ್ಲಿ ಬದಲಾವಣೆಗಳಾಗಿತ್ತು. ಯುವರಾಜ್‌ಗಿಂತ ಮೊದಲು ಧೋನಿ ಬ್ಯಾಟಿಂಗ್‌ಗೆ ಬಂದಿದ್ರು. ಹೀಗೆ ಯಾಕೆ ಮಾಡಬೇಕಾಯ್ತು ಅಂತ ಆಗಿನ ಟೀಂ ಮೆಂಬರ್ ಸಚಿನ್ ತೆಂಡೂಲ್ಕರ್ ರಿವೀಲ್ ಮಾಡಿದ್ದಾರೆ.

ಮನಬಿಚ್ಚಿ ಮಾತನಾಡಿದ ಸಚಿನ್
ಸಚಿನ್ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಡೆದ ಆಸಕ್ತಿಕರ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ. 'ರೆಡಿಟ್'ನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತಮ್ಮ ಕೆಲವು ಅವಿಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
1. ನೈರೋಬಿಯಲ್ಲಿ ಮೆಕ್‌ಗ್ರಾತ್ ವಿರುದ್ಧ ಹೋರಾಟ
2000ದಲ್ಲಿ ನೈರೋಬಿಯಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ಗ್ಲೆನ್ ಮೆಕ್‌ಗ್ರಾತ್‌ರನ್ನು ಎದುರಿಸಿದ್ದನ್ನು ಸಚಿನ್ ನೆನಪಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಸಚಿನ್ 37 ಎಸೆತಗಳಲ್ಲಿ 38 ರನ್ ಗಳಿಸಿದ್ದರು.
2. ಮಾಜಿ ಅಂಪೈರ್ ಸ್ಟೀವ್ ಬಕ್ನರ್ ಬಗ್ಗೆ ಸಚಿನ್ ಜೋಕ್
3. ಡಿಆರ್‌ಎಸ್‌ನಲ್ಲಿ ಅಂಪೈರ್ ಕಾಲ್ ತೆಗೆದುಹಾಕಬೇಕು
ಡಿಆರ್‌ಎಸ್ ನಿಯಮಗಳಲ್ಲಿ ಅಂಪೈರ್ ಕಾಲ್ ಅನ್ನು ತೆಗೆದುಹಾಕಬೇಕು ಎಂದು ಸಚಿನ್ ಹೇಳಿದ್ದಾರೆ. ಡಿಆರ್‌ಎಸ್ ತೆಗೆದುಕೊಂಡ ನಂತರ ಫಲಿತಾಂಶವು ಸಂಪೂರ್ಣವಾಗಿ ತಂತ್ರಜ್ಞಾನ ಆಧಾರಿತವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
4. 2011 ವಿಶ್ವಕಪ್ ಫೈನಲ್‌ನಲ್ಲಿ ಧೋನಿ ಪ್ರಮೋಷನ್
2011ರ ವಿಶ್ವಕಪ್ ಫೈನಲ್‌ನಲ್ಲಿ ಧೋನಿಯನ್ನು ಯುವರಾಜ್‌ಗಿಂತ ಮೊದಲು ಬ್ಯಾಟಿಂಗ್‌ಗೆ ಕಳುಹಿಸಲು ಎರಡು ಕಾರಣಗಳಿವೆ ಎಂದು ಸಚಿನ್ ಹೇಳಿದ್ದಾರೆ. ಎಡ-ಬಲ ಸಂಯೋಜನೆಯಿಂದ ಸ್ಪಿನ್ನರ್‌ಗಳಿಗೆ ತೊಂದರೆಯಾಗುತ್ತಿತ್ತು. ಇದೇ ಕಾರಣಕ್ಕೆ ಧೋನಿ ಕಣಕ್ಕಿಳಿಸಲಾಯಿತು ಎಂದಿದ್ದಾರೆ. ಯಾಕೆಂದರೆ ಕ್ರೀಸ್‌ನಲ್ಲಿ ಗೌತಮ್ ಗಂಭೀರ್ ಬ್ಯಾಟ್ ಮಾಡುತ್ತಿದ್ದರು.
ಆಗ ಲಂಕಾ ಪರ ಮುತ್ತಯ್ಯ ಮುರುಳೀಧರನ್ ಬೌಲಿಂಗ್ ಮಾಡುತ್ತಿದ್ದರು.
5. ಜೋ ರೂಟ್ ಬಗ್ಗೆ ಸಚಿನ್ ಮೊದಲೇ ಹೇಳಿದ್ದರಂತೆ!
2012ರಲ್ಲಿ ಭಾರತ ಪ್ರವಾಸದಲ್ಲಿ ಜೋ ರೂಟ್ ಪಾದಾರ್ಪಣೆ ಮಾಡಿದಾಗ, ಅವರು ಭವಿಷ್ಯದಲ್ಲಿ ಇಂಗ್ಲೆಂಡ್ ನಾಯಕರಾಗುತ್ತಾರೆ ಎಂದು ತಮ್ಮ ತಂಡದ ಸದಸ್ಯರಿಗೆ ಹೇಳಿದ್ದಾಗಿ ಸಚಿನ್ ನೆನಪಿಸಿಕೊಂಡಿದ್ದಾರೆ.