ವಿರುಷ್ಕಾ ದಂಪತಿ ಹೋಟೆಲ್‌ನಿಂದ ಕಿಕೌಟ್! ಆ ಅವಮಾನಕಾರಿ ಘಟನೆ ಬಿಚ್ಚಿಟ್ಟ ಮಹಿಳಾ ಕ್ರಿಕೆಟರ್
ನವದೆಹಲಿ: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾಗೆ ಹೋಟೆಲ್ ಸಿಬ್ಬಂದಿ ಅವಮಾನ ಮಾಡಿರುವ ಆಘಾತಕಾರಿ ಘಟನೆಯನ್ನು ಭಾರತದ ಮಹಿಳಾ ಕ್ರಿಕೆಟರ್ ಜೆಮಿಮಾ ರೋಡ್ರಿಗಸ್ ಬಿಚ್ಚಿಟ್ಟಿದ್ದಾರೆ.

ಅಚ್ಚರಿ ಮಾಹಿತಿ ಬಿಚ್ಚಿಟ್ಟ ರೋಡ್ರಿಗಸ್
ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ನಟಿ ಅನುಷ್ಕಾ ಶರ್ಮಾರನ್ನು ನ್ಯೂಜಿಲೆಂಡ್‌ನ ಕೆಫೆಯೊಂದರಿಂದ ಅಲ್ಲಿನ ಸಿಬ್ಬಂದಿ ಹೊರ ಕಳುಹಿಸಿದ್ದರು ಎನ್ನುವ ಅಚ್ಚರಿ ವಿಚಾರವೊಂದನ್ನು ಭಾರತದ ತಾರಾ ಕ್ರಿಕೆಟ್ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಬಹಿರಂಗಪಡಿಸಿದ್ದಾರೆ.
ತಮಾಷೆಯ ಕ್ಷಣಗಳ ಮೆಲುಕು
ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಜೆಮಿಮಾ, ಕೊಹ್ಲಿ ದಂಪತಿ ಜತೆಗೆ ಕಳೆದ ತಮಾಷೆ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.
ಕೆಫೆಯಲ್ಲಿ ಗಂಟೆಗಳ ಕಾಲ ಮಾತುಕತೆ
ಭಾರತ ಮಹಿಳಾ ಮತ್ತು ಪುರುಷ ತಂಡ ತಂಗಿದ್ದ ಹೋಟೆಲ್‌ನ ಕೆಫೆಯಲ್ಲಿ ಸ್ಮೃತಿ ಮಂಧನಾ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೊತೆ ಹಲವು ಗಂಟೆಗಳ ಕಾಲ ಕುಳಿತು ಮಾತನಾಡಿದ್ದೆವು.
ಜೆಮಿಯಾ ಕೊಂಡಾಡಿದ ಕೊಹ್ಲಿ
ಕೊಹ್ಲಿ ನಮ್ಮನ್ನು ಉದ್ದೇಶಿಸಿ, ನೀವು ಹಾಗೂ ಸ್ಮೃತಿ ಭಾರತ ಮಹಿಳಾ ಕ್ರಿಕೆಟ್ ತಂಡದ ದಿಕ್ಕನ್ನೇ ಬದಲಿಸಿದ್ದೀರ. ಆ ಬದಲಾವಣೆಯನ್ನು ನಾನು ಗಮನಿಸಿದ್ದೇನೆ ಎಂದು ಅವರು ನಮ್ಮನ್ನು ಹುರಿದುಂಬಿಸಿದರು ಎಂದು ರೋಡ್ರಿಗಸ್ ಹೇಳಿದ್ದಾರೆ.
ಮನಬಿಚ್ಚಿ ಮಾತುಕತೆ
ಕ್ರಿಕೆಟ್ ಮಾತ್ರವಲ್ಲದೇ ಕ್ರಿಕೆಟ್‌ನಾಚೆಗಿನ ಹಲವು ವಿಚಾರಗಳನ್ನು ನಾವು ಮನಬಿಚ್ಚಿ ಮಾತನಾಡುತ್ತಿದ್ದೆವು. ನಮ್ಮ ಮಾತುಕತೆ ಮುಗಿಯುವಂತೆಯೇ ಕಾಣುತ್ತಿರಲಿಲ್ಲ. ಅಷ್ಟರಮಟ್ಟಿಗೆ ನಾವೆಲ್ಲಾ ಮಾತಾಡುತ್ತಿದ್ದೆವು ಎಂದು ರೋಡ್ರಿಗಸ್ ಹೇಳಿದ್ದಾರೆ.
ವಿರುಷ್ಕಾ ದಂಪತಿಗೆ ಅವಮಾನ
ಸುಮಾರು 4 ಗಂಟೆಗೂ ಹೆಚ್ಚಿನ ಕಾಲ ಮಾತುಕತೆ ನಡೆದಿತ್ತು. ಆಗ ಕೆಫೆ ಸಿಬ್ಬಂದಿ ನಮ್ಮನ್ನು ಹೊರ ಹೋಗುವಂತೆ ಕಳುಹಿಸಿದ್ದರು ಎಂದು ಜೆಮಿಮಾ ರೋಡ್ರಿಗಸ್ ಹೇಳಿದ್ದಾರೆ.
ಬಿಡುವಿನ ಕ್ಷಣ ಎಂಜಾಯ್ ಮಾಡ್ತಿರೋ ವಿರುಷ್ಕಾ
ಸದ್ಯ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ವಿರಾಟ್ ಕೊಹ್ಲಿ, ತಮ್ಮ ಬಿಡುವಿನ ಸಮಯವನ್ನು ಪತ್ನಿ ಅನುಷ್ಕಾ ಹಾಗೂ ಮಕ್ಕಳ ಜತೆ ಲಂಡನ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.