- Home
- Sports
- Cricket
- ಚೆನ್ನೈ ಸೂಪರ್ ಕಿಂಗ್ಸ್ ಮೇಲೆ ಗಂಭೀರ ಆರೋಪ ಮಾಡಿದ ರವಿಚಂದ್ರನ್ ಅಶ್ವಿನ್! ಮತ್ತೆ ಮೋಸ ಮಾಡಿತಾ ಸಿಎಸ್‌ಕೆ?
ಚೆನ್ನೈ ಸೂಪರ್ ಕಿಂಗ್ಸ್ ಮೇಲೆ ಗಂಭೀರ ಆರೋಪ ಮಾಡಿದ ರವಿಚಂದ್ರನ್ ಅಶ್ವಿನ್! ಮತ್ತೆ ಮೋಸ ಮಾಡಿತಾ ಸಿಎಸ್‌ಕೆ?
ಚೆನ್ನೈ: 18ನೇ ಆವತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಮಾಡಿದ ಒಂದು ಟ್ಯಾಕ್ಟಿಕ್ಸ್ ಕುರಿತಂತೆ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗಂಭೀರ ಆರೋಪ ಮಾಡಿದ್ದಾರೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

5 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಮೊದಲ ತಂಡವಾಗಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿತ್ತು. ಇದರ ಜತೆಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ತನ್ನ ಅಭಿಯಾನ ಮುಗಿಸಿತ್ತು.
ಇನ್ನು ಮ್ಯಾಚ್ ಫಿಕ್ಸಿಂಗ್ ಸಂಬಂಧವಾಗಿ ಎರಡು ವರ್ಷಗಳ ಕಾಲ ಐಪಿಎಲ್‌ನಿಂದ ನಿಷೇಧಕ್ಕೆ ಗುರಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್, ಇದೀಗ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಮೋಸದಾಟವಾಡಿತಾ ಎನ್ನುವ ಅನುಮಾನ ಶುರುವಾಗಿದೆ. ಇದಕ್ಕೆ ಕಾರಣವಾಗಿದ್ದು ರವಿಚಂದ್ರನ್ ಅಶ್ವಿನ್ ಅವರ ಒಂದು ಹೇಳಿಕೆ
ದಕ್ಷಿಣ ಆಫ್ರಿಕಾ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್‌ರನ್ನು ಬದಲಿ ಆಟಗಾರನಾಗಿ ಖರೀದಿಸಲು ಸಿಎಸ್‌ಕೆ ನಿಗದಿಗಿಂತ ಹೆಚ್ಚು ಹಣ ನೀಡಿದೆ ಎಂಬ ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ ಗಂಭೀರ ಹೇಳಿಕೆ ನೀಡಿದ್ದರು.
ಕಳೆದ ಐಪಿಎಲ್‌ನಲ್ಲಿ ಗುರ್ಜಪ್‌ನೀತ್ ಸಿಂಗ್ ಗಾಯಗೊಂಡು ಹೊರಬಿದ್ದಿದ್ದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ₹2.2 ಕೋಟಿ ನೀಡಿ ಡೆವಾಲ್ಡ್ ಬ್ರೆವಿಸ್‌ರನ್ನು ಖರೀದಿಸಿತ್ತು.
ಈ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಅಶ್ವಿನ್, ‘ಬ್ರೆವಿಸ್‌ರನ್ನು ಸೇರಿಸಿಕೊಳ್ಳಲು ಕೆಲ ತಂಡಗಳು ಪ್ರಯತ್ನಿಸುತ್ತಿದ್ದವು. ಹೀಗಾಗಿ ಅವರು ಮೂಲಬೆಲೆಗೆ ತಂಡಕ್ಕೆ ಬರಲು ಒಪ್ಪುವುದಿಲ್ಲ. ಅವರ ಏಜೆಂಟ್ ಜೊತೆ ಮಾತನಾಡಿ, ಹೆಚ್ಚಿನ ಮೊತ್ತಕ್ಕೆ ಡೀಲ್ ಮಾಡಬೇಕಾಗುತ್ತದೆ. ಸಿಎಸ್‌ಕೆ ಕೂಡಾ ಅದೇ ರೀತಿ ಮಾಡಿ ಬ್ರೆವಿಸ್‌ರನ್ನು ತಂಡಕ್ಕೆ ಸೇರಿಸಿಕೊಂಡಿದೆ’ ಎಂದಿದ್ದರು.
ರವಿಚಂದ್ರನ್ ಅಶ್ವಿನ್ ಅವರ ಈ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನವನ್ನೇ ಮೂಡಿಸಿತ್ತು.
ಐಪಿಎಲ್ ನಿಯಮ ಪ್ರಕಾರ, ಬದಲಿ ಆಟಗಾರನಿಗೆ ಮೂಲ ಆಟಗಾರನಿಗಿಂತ ಹೆಚ್ಚಿನ ಹಣ ಕೊಡುವಂತಿಲ್ಲ. ಇದೀಗ ಅಶ್ವಿನ್ ಅವರ ಮಾತು ಗಮನಿಸಿದ್ರೆ ಸಿಎಸ್‌ಕೆ ಮತ್ತೆ ಮೋಸ ಮಾಡಿತಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಇದೀಗ ರವಿಚಂದ್ರನ್ ಅಶ್ವಿನ್ ಅವರ ಹೇಳಿಕೆಯನ್ನು ಫ್ರಾಂಚೈಸಿಯು ಅಲ್ಲಗಳೆದಿದೆ. ಬ್ರೆವಿಸ್‌ರನ್ನು ನಿಯಮ ಪ್ರಕಾರವೇ ಖರೀದಿಸಲಾಗಿದೆ, ಹೆಚ್ಚುವರಿಯಾಗಿ ಯಾವುದೇ ಹಣ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

