ಏಷ್ಯಾಕಪ್ 2025: ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ ಪಾಕ್ ತಂಡದಿಂದ ಹೊರಬಿದ್ದಿದ್ದೇಕೆ?
2025ರ ಏಷ್ಯಾಕಪ್ಗೆ ಪಾಕಿಸ್ತಾನ ತಂಡ ಪ್ರಕಟವಾಗಿದೆ. ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ರನ್ನು ತಂಡದಿಂದ ಕೈಬಿಡಲಾಗಿದೆ. ಅವರನ್ನು ಕೈಬಿಟ್ಟಿದ್ದೇಕೆ? ನೋಡೋಣ ಬನ್ನಿ

ಭಾರತ, ಶ್ರೀಲಂಕಾ, ಪಾಕಿಸ್ತಾನ ಸೇರಿ 8 ತಂಡಗಳು ಆಡಲಿರುವ ಏಷ್ಯಾಕಪ್ ಮುಂದಿನ ತಿಂಗಳು 9ರಂದು ಯುಎಇಯಲ್ಲಿ ಆರಂಭವಾಗಲಿದೆ. ಟಿ20 ಮಾದರಿಯಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10ರಂದು ಯುಎಇ ವಿರುದ್ಧ ಆಡಲಿದೆ. ಬಳಿಕ ಸೆ.14ರಂದು ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದೆ.
ಏಷ್ಯಾಕಪ್ಗೆ ಪಾಕಿಸ್ತಾನ ತಂಡ ಪ್ರಕಟವಾಗಿದ್ದು, ಬಾಬರ್ ಅಜಂ ಮತ್ತು ಮೊಹಮ್ಮದ್ ರಿಜ್ವಾನ್ರನ್ನು ತಂಡದಿಂದ ಕೈಬಿಡಲಾಗಿದೆ. ಸಲ್ಮಾನ್ ಅಲಿ ಆಘಾ ನೇತೃತ್ವದ 17 ಸದಸ್ಯರ ತಂಡದಲ್ಲಿ ಮೊಹಮ್ಮದ್ ಹ್ಯಾರಿಸ್ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಶಾಹೀನ್ ಅಫ್ರಿದಿ ಮತ್ತು ಫಖರ್ ಜಮಾನ್ ತಂಡದಲ್ಲಿದ್ದಾರೆ.
ರಿಜ್ವಾನ್ ಮತ್ತು ಬಾಬರ್ ಅಜಂ ಇತ್ತೀಚೆಗೆ ಉತ್ತಮ ಫಾರ್ಮ್ನಲ್ಲಿಲ್ಲ. ಟಿ20 ಕ್ರಿಕೆಟ್ನಲ್ಲಿ ಕಳಪೆ ಸ್ಟ್ರೈಕ್ ರೇಟ್ನಿಂದಾಗಿ ಇಬ್ಬರನ್ನೂ ತಂಡದಿಂದ ಕೈಬಿಡಲಾಗಿದೆ ಎಂದು ಪಾಕಿಸ್ತಾನ ಆಯ್ಕೆಗಾರರು ತಿಳಿಸಿದ್ದಾರೆ. 2024ರ ಡಿಸೆಂಬರ್ನಲ್ಲಿ ಬಾಬರ್ ಕೊನೆಯದಾಗಿ ಪಾಕ್ ಪರ ಟಿ20 ಪಂದ್ಯ ಆಡಿದ್ದರು.
ಸೆ.9ರಂದು ಆರಂಭವಾಗುವ ಏಷ್ಯಾಕಪ್‌ನಲ್ಲಿ ಭಾರತ, ಯುಎಇ ಮತ್ತು ಓಮನ್ ಜೊತೆ ಪಾಕಿಸ್ತಾನ ಒಂದೇ ಗುಂಪಿನಲ್ಲಿದೆ. ಸೆ12ರಂದು ಓಮನ್ ವಿರುದ್ಧ ಪಾಕಿಸ್ತಾನ ಮೊದಲ ಪಂದ್ಯ ಆಡಲಿದೆ. ಸೆ.14ರಂದು ಭಾರತದ ವಿರುದ್ಧ ಪಂದ್ಯವಿದೆ. ಸೆ.17ರಂದು ಯುಎಇ ವಿರುದ್ಧ ಪಾಕಿಸ್ತಾನದ ಕೊನೆಯ ಲೀಗ್ ಪಂದ್ಯ ನಡೆಯಲಿದೆ.
2013ರ ಏಕದಿನ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಸೂಪರ್ 4 ಹಂತ ತಲುಪಿದ್ದರೂ, ಫೈನಲ್ಗೆ ಅರ್ಹತೆ ಪಡೆಯಲಿಲ್ಲ. 2022ರ ಟಿ20 ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ರನ್ನರ್ ಅಪ್ ಆಗಿತ್ತು.