ಏಷ್ಯಾಕಪ್ ಫಾರ್ಮ್ಯಾಟ್ ಪದೇ ಪದೇ ಬದಲಾಗುತ್ತಿರೋದ್ಯಾಕೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
1984 ರಿಂದ ಆರಂಭವಾದ ಏಷ್ಯಾಕಪ್ 2016ರಿಂದ ಫಾರ್ಮ್ಯಾಟ್ ಬದಲಾಯಿಸುತ್ತಿದೆ. ಒಮ್ಮೆ ಏಕದಿನ, ಮತ್ತೊಮ್ಮೆ ಟಿ20 ಆಗಿ ಯಾಕೆ ನಡೆಸ್ತಿದ್ದಾರೆ ಅಂತ ನಿಮಗೂ ಅನಿಸಿರಬಹುದು. ನಾವಿಂದು ಈ ಬಗ್ಗೆ ಕಂಪ್ಲೀಟ್ ಮಾಹಿತಿ ನೀಡುತ್ತೇವೆ ನೋಡಿ.

1984 ರಲ್ಲಿ ಶುರುವಾದ ಏಷ್ಯಾಕಪ್
ಏಷ್ಯಾಕಪ್ ಕ್ರಿಕೆಟ್ ಲೋಕದ ಮುಖ್ಯ ಟೂರ್ನಿಗಳಲ್ಲಿ ಒಂದು. ಏಷ್ಯಾ ದೇಶಗಳ ತಂಡಗಳು ಮಾತ್ರ ಇಲ್ಲಿ ಆಡುತ್ತವೆ. ಭಾರತ, ಬಾಂಗ್ಲಾ, ಶ್ರೀಲಂಕಾ, ಅಫ್ಘಾನ್, ಯುಎಇ, ಹಾಂಕಾಂಗ್ ತಂಡಗಳು ಭಾಗವಹಿಸುತ್ತವೆ.
2016 ರಲ್ಲಿ ಏಷ್ಯಾಕಪ್‌ನಲ್ಲಿ ದೊಡ್ಡ ಬದಲಾವಣೆ
2016ರಲ್ಲಿ ಏಷ್ಯಾಕಪ್ ಫಾರ್ಮ್ಯಾಟ್ ನಲ್ಲಿ ದೊಡ್ಡ ಬದಲಾವಣೆ ಆಯ್ತು. ಮೊದಲ ಬಾರಿಗೆ ಟಿ20 ಫಾರ್ಮ್ಯಾಟ್ ನಲ್ಲಿ ಏಷ್ಯಾಕಪ್ ಟೂರ್ನಿಯು ನಡೆಯಿತು. ಅಲ್ಲಿಯವರೆಗೆ ಏಷ್ಯಾಕಪ್ ಟೂರ್ನಿಯು 50 ಓವರ್ ಗಳ ಏಕದಿನ ಮಾತ್ರ ಆಡ್ತಿದ್ರು.
ಐಸಿಸಿ ನಿರ್ಧಾರದಿಂದ ಫಾರ್ಮ್ಯಾಟ್ ಬದಲಾವಣೆ
2015 ರಲ್ಲಿ ಐಸಿಸಿ ತನ್ನ ನಿಯಮಗಳನ್ನು ಬದಲಾಯಿಸಿತು. ಇದರ ಪರಿಣಾಮ ಏಷ್ಯಾಕಪ್ ಮೇಲೂ ಆಯ್ತು.
ಏಕದಿನ, ಟಿ20 ಬದಲಾವಣೆಗಳು
2016 ರಲ್ಲಿ ಮೊದಲ ಬಾರಿಗೆ ಟಿ20 ಫಾರ್ಮ್ಯಾಟ್ ನಲ್ಲಿ ಏಷ್ಯಾಕಪ್ ನಡೆಯಿತು. ಯಾಕಂದ್ರೆ ಆ ವರ್ಷ ಭಾರತದಲ್ಲಿ ಟಿ20 ವಿಶ್ವಕಪ್ ಇತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಏಷ್ಯಾಕಪ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ಆಯೋಜಿಸಲಾಯಿತು.
2015 ರಲ್ಲಿ ಮೂರನೇ ಬಾರಿ ಟಿ20 ಫಾರ್ಮ್ಯಾಟ್
2025ರ ಏಷ್ಯಾಕಪ್ ಮೂರನೇ ಬಾರಿಗೆ ಟಿ20 ಫಾರ್ಮ್ಯಾಟ್ ನಲ್ಲಿ ನಡೆಯಲಿದೆ. 2016, 2022 ರಲ್ಲೂ ಟಿ20 ಫಾರ್ಮ್ಯಾಟ್ ನಲ್ಲಿ ಏಷ್ಯಾಕಪ್ ಟೂರ್ನಿ ನಡೆದಿತ್ತು.
2023ರಲ್ಲಿ ಏಕದಿನ ಫಾರ್ಮ್ಯಾಟ್‌ನಲ್ಲಿ ಏಷ್ಯಾಕಪ್
ಇನ್ನು ಕಳೆದ ಬಾರಿ ಅಂದರೆ 2023ರಲ್ಲಿ ಆಯೋಜನೆಗೊಂಡಿದ್ದ ಏಷ್ಯಾಕಪ್ ಟೂರ್ನಿಯು ಏಕದಿನ ಮಾದರಿಯಲ್ಲಿ ನಡೆದಿತ್ತು. ಆಗ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಅಂದಹಾಗೆ ಭಾರತ 16 ಏಷ್ಯಾಕಪ್ ಟೂರ್ನಿಯ ಪೈಕಿ 8 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.