ಈ ನಾಲ್ಕು ತಂಡಗಳು ಅಧಿಕೃತವಾಗಿ ಸೂಪರ್-4 ಹಂತಕ್ಕೆ ಲಗ್ಗೆ! ಭಾರತದ ಮ್ಯಾಚ್ ಯಾವಾಗೆಲ್ಲಾ ಇದೆ?
ಬೆಂಗಳೂರು: 17ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಒಂದು ಪಂದ್ಯ ಬಾಕಿ ಇರುವಂತೆಯೇ ಸೂಪರ್ 4 ಹಂತದಲ್ಲಿ ಪಾಲ್ಗೊಳ್ಳುವ ಏಷ್ಯಾದ 4 ತಂಡಗಳು ಯಾವುವು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಇದೀಗ ಯಾವೆಲ್ಲಾ ತಂಡಗಳು ಏಷ್ಯಾಕಪ್ ಟೂರ್ನಿಗೆ ಅರ್ಹತೆ ಪಡೆದಿವೆ ನೋಡೋಣ ಬನ್ನಿ.

ಏಷ್ಯಾಕಪ್ 2025
2025ನೇ ಸಾಲಿನ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಎಂಟು ತಂಡಗಳ ಪೈಕಿ ಇದೀಗ ನಾಲ್ಕು ತಂಡಗಳು ಸೂಪರ್ 4 ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದ್ದು, ಇನ್ನುಳಿದ 4 ತಂಡಗಳು ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿವೆ.
'ಎ' ಗುಂಪಿನಿಂದ ಭಾರತ-ಪಾಕ್ ಅರ್ಹತೆ
'ಎ' ಗುಂಪಿನಿಂದ ನಿರೀಕ್ಷೆಯಂತೆಯೇ ಹಾಲಿ ಚಾಂಪಿಯನ್ ಭಾರತ ಮತ್ತು ಬದ್ದ ಎದುರಾಳಿ ಪಾಕಿಸ್ತಾನ ತಂಡಗಳು ಕ್ರಮವಾಗಿ ಮೊದಲೆರಡು ಸ್ಥಾನ ಪಡೆದು ಸೂಪರ್ 4 ಹಂತ ಪ್ರವೇಶಿಸಿವೆ.
'ಬಿ' ಗುಂಪಿನಿಂದ ಶ್ರೀಲಂಕಾ-ಬಾಂಗ್ಲಾದೇಶ ಅರ್ಹತೆ
'ಎ' ಗುಂಪಿನಿಂದ ನಿರೀಕ್ಷೆಯಂತೆಯೇ ಹಾಲಿ ಚಾಂಪಿಯನ್ ಭಾರತ ಮತ್ತು ಬದ್ದ ಎದುರಾಳಿ ಪಾಕಿಸ್ತಾನ ತಂಡಗಳು ಕ್ರಮವಾಗಿ ಮೊದಲೆರಡು ಸ್ಥಾನ ಪಡೆದು ಸೂಪರ್ 4 ಹಂತ ಪ್ರವೇಶಿಸಿವೆ.
ಭಾರತ 'ಎ' ಗುಂಪಿನ ಅಗ್ರಸ್ಥಾನಿ
ಭಾರತ ತಂಡವು ಇಂದು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಓಮಾನ್ ತಂಡವನ್ನು ಎದುರಿಸಲಿದೆ. ಇದಕ್ಕೂ ಮೊದಲೇ ಸತತ ಎರಡು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನಿಯಾಗಿಯೇ ಸೂಪರ್ 4 ಹಂತವನ್ನು ಪ್ರವೇಶಿಸಿದೆ.
ಭಾರತದ ಸೂಪರ್-4 ವೇಳಾಪಟ್ಟಿ
ಇದೀಗ ಭಾರತ ತಂಡವು ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಸೆಪ್ಟೆಂಬರ್ 21ರ ಭಾನುವಾರ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಭಾರತೀಯ ಕಾಲಮಾನ ಸಂಜೆ 8 ಗಂಟೆಗೆ ಆರಂಭವಾಗಲಿದೆ.
ಭಾರತ-ಬಾಂಗ್ಲಾದೇಶ ಫೈಟ್: ಇಂಡೋ-ಪಾಕ್ ಕದನ
ಇನ್ನು ಇದಾದ ಬಳಿಕ ಟೀಂ ಇಂಡಿಯಾ, ಸೆಪ್ಟೆಂಬರ್ 24ರಂದು ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಈ ಪಂದ್ಯ ಸಂಜೆ 8 ಗಂಟೆಗೆ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ.
ಭಾರತ-ಶ್ರೀಲಂಕಾ ಮುಖಾಮುಖಿ
ಭಾರತ ಪಾಲಿನ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಸೆಪ್ಟೆಂಬರ್ 26ರಂದು ನಿಗದಿಯಾಗಿದೆ. ಈ ಪಂದ್ಯವು ಸಂಜೆ 8 ಗಂಟೆಗೆ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ.