Asia Cup 2025: ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ! ಇಲ್ಲಿದೆ ಹೊಸ ಟೈಮ್ ಟೇಬಲ್
2025ರ ಏಷ್ಯಾ ಕಪ್ ಸೆಪ್ಟೆಂಬರ್ 9 ರಂದು ಯುಎಇಯಲ್ಲಿ ಶುರುವಾಗಲಿದೆ. ಫೈನಲ್ ಪಂದ್ಯ ಸೆಪ್ಟೆಂಬರ್ 28 ರಂದು ದುಬೈನಲ್ಲಿ ನಡೆಯಲಿದೆ. ಈ ಟೂರ್ನಿಯ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಿದೆ.

2025 ಏಷ್ಯಾ ಕಪ್ ಯಾವಾಗ ಶುರು?
2025ರ ಏಷ್ಯಾಕಪ್ ಸೆಪ್ಟೆಂಬರ್ 9 ರಂದು ಯುಎಇಯಲ್ಲಿ ಶುರುವಾಗಲಿದೆ. ಒಟ್ಟು 19 ಪಂದ್ಯಗಳು ನಡೆಯಲಿದ್ದು, ಫೈನಲ್ ಸೆಪ್ಟೆಂಬರ್ 28 ರಂದು ದುಬೈನಲ್ಲಿ ನಡೆಯಲಿದೆ. ಟೀಂ ಇಂಡಿಯಾ ಟ್ರೋಫಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ.
ಯಾವ 8 ತಂಡಗಳು ಭಾಗವಹಿಸುತ್ತಿವೆ?
ಈ ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಳ್ಳುತ್ತಿದ್ದು, 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪು 'ಎ' ನಲ್ಲಿ ಭಾರತ, ಪಾಕಿಸ್ತಾನ, ಯುಎಇ ಮತ್ತು ಒಮಾನ್. ಗುಂಪು 'ಬಿ' ನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಮತ್ತು ಹಾಂಕಾಂಗ್.
ಪಂದ್ಯದ ಸಮಯ ಬದಲಾವಣೆ!
ಯುಎಇಯಲ್ಲಿ ಸೆಪ್ಟೆಂಬರ್‌ನಲ್ಲಿ ತಾಪಮಾನ 40 ಡಿಗ್ರಿ ತಲುಪುವ ನಿರೀಕ್ಷೆಯಿದೆ. ಹೀಗಾಗಿ ಪಂದ್ಯಗಳ ಸಮಯವನ್ನು ಸಂಜೆ 6.30ಕ್ಕೆ (ಭಾರತೀಯ ಕಾಲಮಾನ ರಾತ್ರಿ 8) ಬದಲಾಯಿಸಲಾಗಿದೆ. ಆದರೆ ಸೆಪ್ಟೆಂಬರ್ 15ರಂದು ಯುಎಇ ಮತ್ತು ಒಮಾನ್ ನಡುವಿನ ಪಂದ್ಯ ಮಧ್ಯಾಹ್ನ 4 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 5.30) ಶುರುವಾಗಲಿದೆ.
ಆತಿಥ್ಯ ವಹಿಸುವ ನಗರಗಳು
ದುಬೈ ಮತ್ತು ಅಬುಧಾಬಿ 2025ರ ಏಷ್ಯಾಕಪ್‌ಗೆ ಆತಿಥ್ಯ ವಹಿಸಲಿವೆ. ಹಾಲಿ ಚಾಂಪಿಯನ್ ಭಾರತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಆಡಲಿದೆ.
ಏಷ್ಯಾ ಕಪ್ 2025 ಹೈಲೈಟ್ಸ್
• ಏಷ್ಯಾ ಕಪ್ 2025 ಸೆಪ್ಟೆಂಬರ್ ೯ ರಂದು ಯುಎಇಯಲ್ಲಿ ಶುರು
• 8 ತಂಡಗಳು ಪ್ರಶಸ್ತಿಗಾಗಿ ಸ್ಪರ್ಧೆ
• ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಶುರು
• ಭಾರತದ ಮೊದಲ ಪಂದ್ಯ ಯುಎಇ ವಿರುದ್ಧ ಸೆಪ್ಟೆಂಬರ್ 10 ರಂದು
• ಭಾರತ vs ಪಾಕಿಸ್ತಾನ ಪಂದ್ಯ ಸೆಪ್ಟೆಂಬರ್ 14 ರಂದು ದುಬೈನಲ್ಲಿ
• ಫೈನಲ್ ಪಂದ್ಯ ಸೆಪ್ಟೆಂಬರ್ 28 ರಂದು