ಮೊಹಮ್ಮದ್ ಶಮಿ ತಮ್ಮ ಮಗಳು ಆರ್ಯಳನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಗೆಳತಿಯ ಮಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಹಸೀನ್ ಜಹಾನ್ ಆರೋಪಿಸಿದ್ದಾರೆ. ಗೆಳತಿ ಮತ್ತು ಅವರ ಮಗಳಿಗೆ ದುಂದು ವೆಚ್ಚ ಮಾಡುವ ಶಮಿ ತಮ್ಮ ಮಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದ್ದಾರೆ.
ಲಖನೌ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಮಾಜಿ ಪತ್ನಿ ಹಸೀನ್ ಜಹಾನ್ ಗಂಭೀರ ಆರೋಪ ಮಾಡಿದ್ದಾರೆ. ಮೊಹಮ್ಮದ್ ಶಮಿ ತಮ್ಮ ಮಗಳು ಆರ್ಯಳನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಗೆಳತಿಯ ಮಗಳಿಗೆ ಮತ್ತು ಕುಟುಂಬಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದು ಹಸೀನ್ ಜಹಾನ್ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ. ಹಸೀನ್ ಜಹಾನ್ ಮತ್ತು ಅವರ ಮಗಳಿಗೆ ತಿಂಗಳಿಗೆ ₹4 ಲಕ್ಷ ಜೀವನಾಂಶ ನೀಡಬೇಕೆಂದು ಇತ್ತೀಚೆಗೆ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿತ್ತು. ಇದರಲ್ಲಿ ₹2.5 ಲಕ್ಷ ಮಗಳ ಶಿಕ್ಷಣ ಮತ್ತು ಖರ್ಚುಗಳಿಗಾಗಿ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ಆದರೆ, ತಮ್ಮ ಮಗಳಿಗೆ ಪ್ರತಿಷ್ಠಿತ ಶಾಲೆಯಲ್ಲಿ ಪ್ರವೇಶ ಸಿಕ್ಕಿದೆ ಎಂದೂ, ಇದನ್ನು ತಡೆಯಲು ಕೆಲವು ಶತ್ರುಗಳು ಪ್ರಯತ್ನಿಸಿದ್ದಾರೆ ಎಂದೂ ಹಸೀನ್ ಜಹಾನ್ ಆರೋಪಿಸಿದ್ದಾರೆ. ತಮ್ಮ ಮಗಳು ಉತ್ತಮ ಶಾಲೆಯಲ್ಲಿ ಓದುವುದು ಶತ್ರುಗಳಿಗೆ ಇಷ್ಟವಿಲ್ಲ. ಆದರೆ ಅಲ್ಲಾಹನ ಅನುಗ್ರಹದಿಂದ ಅವರ ಯೋಜನೆಗಳು ವಿಫಲವಾದವು ಎಂದೂ ಹಸೀನ್ ಜಹಾನ್ ಹೇಳಿದ್ದಾರೆ.
ಗೆಳತಿ ಮತ್ತು ಅವರ ಮಗಳಿಗೆ ದುಂದು ವೆಚ್ಚ ಮಾಡುವ ಶಮಿ ತಮ್ಮ ಮಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಹಸೀನ್ ಜಹಾನ್ ಹೇಳಿದ್ದಾರೆ. ತಮ್ಮ ಮಗಳ ತಂದೆ ಕೋಟ್ಯಾಧಿಪತಿಯಾಗಿದ್ದರೂ, ತಮ್ಮ ಜೀವನದ ಜೊತೆ ಆಟವಾಡುತ್ತಿದ್ದಾರೆ. ಹಲವು ಮಹಿಳೆಯರ ಜೊತೆ ಸಂಬಂಧ ಹೊಂದಿರುವ ಶಮಿ ಹುಡುಗಿಯರ ಚಪಲವಿದೆ ಎಂದು ಹಸೀನ್ ಜಹಾನ್ ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮಗಳನ್ನು ತಿರುಗಿಯೂ ನೋಡದ ಶಮಿ, ಗೆಳತಿ ಮತ್ತು ಅವರ ಮಗಳಿಗೆ ಬಿಸಿನೆಸ್ ಕ್ಲಾಸ್ ಟಿಕೆಟ್ ಕೊಡಿಸಿ ಔದಾರ್ಯ ತೋರುತ್ತಿದ್ದಾರೆ ಎಂದು ಹಸೀನ್ ಜಹಾನ್ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
2014 ರಲ್ಲಿ ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಾನ್ ವಿವಾಹವಾದರು. 2015 ರಲ್ಲಿ ಅವರಿಗೆ ಆರ್ಯ ಎಂಬ ಮಗಳು ಜನಿಸಿದಳು. ನಂತರ ಕೌಟುಂಬಿಕ ಕಲಹಗಳಿಂದಾಗಿ ಇಬ್ಬರೂ ಬೇರ್ಪಟ್ಟ ನಂತರ, ಹಸೀನ್ ಜಹಾನ್ ಹಲವು ಬಾರಿ ಶಮಿ ವಿರುದ್ಧ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ. ಗಾಯದಿಂದಾಗಿ ದೀರ್ಘಕಾಲದಿಂದ ಭಾರತೀಯ ತಂಡದಿಂದ ಹೊರಗುಳಿದಿರುವ ಶಮಿ, ಅಕ್ಟೋಬರ್‌ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತೀಯ ತಂಡಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ.
ಭಾರತೀಯ ವೇಗಿ ಶಮಿ ಭವಿಷ್ಯ ನಿರ್ಧರಿಸಲಿದೆ ದುಲೀಪ್ ಟ್ರೋಫಿ!
ನವದೆಹಲಿ: ಭಾರತದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಕಮ್‌ಬ್ಯಾಕ್ ಭವಿಷ್ಯ ಮುಂಬರುವ ದುಲೀಪ್ ಟ್ರೋಫಿಯಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ. ಪೂರ್ವ ತಂಡದ ಪರ ಆಡಲಿರುವ ಮೊಹಮ್ಮದ್ ಶಮಿ, ಫಿಟ್ನೆಸ್ ಸಾಬೀತುಪಡಿಸಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ಅಕ್ಟೋಬರ್‌ನಲ್ಲಿ ನಡೆಯಲಿರುವ ವೆಸ್ಟ್‌ಇಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಬಹುದು. ಅಲ್ಲದಿದ್ದರೆ 35 ವರ್ಷ ಶಮಿಗೆ ತಂಡದ ಬಾಗಿಲು ಬಂದ್ ಆಗಬಹುದು ಎಂದು ಹೇಳಲಾಗುತ್ತಿದೆ.
2023ರ ಏಕದಿನ ವಿಶ್ವಕಪ್ ವೇಳೆ ಗಾಯಗೊಂಡು ಬಳಿಕ ತಂಡದಿಂದ ಹೊರಬಿದ್ದಿದ್ದ ಶಮಿ, ಕಳೆದ ವರ್ಷ ಬಂಗಾಳ ಪರ ರಣಜಿ ಆಡಿದ್ದರು. ಬಳಿಕ ಈ ವರ್ಷ ಫೆಬ್ರವರಿಯಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಶಮಿ ಮೊನಚಾದ ಬೌಲಿಂಗ್ ದಾಳಿ ನಡೆಸುವ ಮೂಲಕ ಟೀಂ ಇಂಡಿಯಾ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂದಹಾಗೆ ಶಮಿ ಐಸಿಸಿ ಟೂರ್ನಿಯ ಇತಿಹಾಸದಲ್ಲಿ ಭಾರತ ಪರ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿದ್ದಾರೆ.
