- Home
- Sports
- Cricket
- ದೇಶಕ್ಕಾಗಿ ದೊಡ್ಡ ತ್ಯಾಗ ಮಾಡಿದ ಅಭಿಷೇಕ್ ಶರ್ಮಾ! ಆದ್ರೆ ಮೈದಾನಕ್ಕಿಳಿದ ಅಭಿ ಗಳಿಸಿದ ಸ್ಕೋರ್ ಎಷ್ಟು ಗೊತ್ತಾ?
ದೇಶಕ್ಕಾಗಿ ದೊಡ್ಡ ತ್ಯಾಗ ಮಾಡಿದ ಅಭಿಷೇಕ್ ಶರ್ಮಾ! ಆದ್ರೆ ಮೈದಾನಕ್ಕಿಳಿದ ಅಭಿ ಗಳಿಸಿದ ಸ್ಕೋರ್ ಎಷ್ಟು ಗೊತ್ತಾ?
ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ, ತಮ್ಮ ಏಕೈಕ ಸಹೋದರಿಯ ಮದುವೆಗೆ ಗೈರಾಗಿ ಭಾರತ 'ಎ' ತಂಡದ ಪರ ಕಣಕ್ಕಿಳಿದಿದ್ದರು. ಆದರೆ ಎಡಗೈ ಸ್ಪೋಟಕ ಬ್ಯಾಟರ್‌ಗೆ ನಿರಾಸೆ ಎದುರಾಗಿದೆ.

ಭರ್ಜರಿ ಫಾರ್ಮ್‌ನಲ್ಲಿರುವ ಅಭಿ
ಭಾರತ ಟಿ20 ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ, ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದಾರೆ. ದೇಶಕ್ಕಾಗಿ ಅಭಿಷೇಕ್ ಶರ್ಮಾ ತನ್ನ ಜೀವನದ ಅತಿದೊಡ್ಡ ತ್ಯಾಗ ಮಾಡಿದ್ದಾರೆ.
ಸಹೋದಿಯ ಮದುವೆ
ಅಕ್ಟೋಬರ್ 03ರಂದು ಅಭಿಷೇಕ್ ಶರ್ಮಾ ಅವರ ಸಹೋದರಿ ಕೋಮಲ್ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಆದರೆ ಅಕ್ಕನ ಮದುವೆಯಲ್ಲಿ ಅಭಿಷೇಕ್ ಕಾಣಿಸಿಕೊಂಡಿರಲಿಲ್ಲ.
ಭಾರತ 'ಎ' ವಿರುದ್ದ ಕಣಕ್ಕಿಳಿದ ಅಭಿ
ಆಸ್ಟ್ರೇಲಿಯಾ 'ಎ' ಎದುರಿನ ಎರಡನೇ ಏಕದಿನ ಪಂದ್ಯಕ್ಕೆ ಅಭಿಷೇಕ್ ಶರ್ಮಾ ಭಾರತ 'ಎ' ಪರ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಆದರೆ ಅಭಿಷೇಕ್ ಶರ್ಮಾಗೆ ನಿರಾಸೆ ಎದುರಾಗಿದೆ.
ಏಷ್ಯಾಕಪ್‌ನಲ್ಲಿ ಮಿಂಚಿದ್ದ ಅಭಿಷೇಕ್ ಶರ್ಮಾ
ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾಕಪ್ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ, ಸತತ ಮೂರು ಅರ್ಧಶತಕ ಸಹಿತ 314 ರನ್ ಸಿಡಿಸಿದ್ದರು. ಹೀಗಾಗಿ ಅಭಿಷೇಕ್ ಶರ್ಮಾ ಸರಣಿಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
ನಿರಾಸೆ ಅನುಭವಿಸಿದ ಅಭಿಷೇಕ್ ಶರ್ಮಾ
ಹೀಗಾಗಿ ಅಭಿಷೇಕ್ ಶರ್ಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಭಾರತ 'ಎ' ತಂಡದ ಪರ ಕಣಕ್ಕಿಳಿದ ಅಭಿ ತಾವೆದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದ್ದಾರೆ.
ಆಸೀಸ್ ಸರಣಿ ಮೇಲೆ ಕಣ್ಣಿಟ್ಟ ಅಭಿ
ಭಾರತ ತಂಡವು ಈ ತಿಂಗಳಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಆಸೀಸ್ ಎದುರು ಅಕ್ಟೋಬರ್ 19, 23 ಹಾಗೂ 25ರಂದು ಕ್ರಮವಾಗಿ ಪರ್ತ್, ಅಡಿಲೇಡ್ ಹಾಗೂ ಸಿಡ್ನಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಇದೀಗ ಭಾರತ 'ಎ' ಎದುರು ಅದ್ಭುತ ಪ್ರದರ್ಶನ ತೋರಿ, ಮೊದಲ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಅಭಿಷೇಕ್ ಶರ್ಮಾ ಎದುರು ನೋಡುತ್ತಿದ್ದಾರೆ.
ಅಕ್ಕನಿಗೆ ವಿಡಿಯೋ ಕಾಲ್
ಇದಾದ ಬಳಿಕ ಅಭಿಷೇಕ್ ಶರ್ಮಾ ತನ್ನ ಅಕ್ಕನಿಗೆ ವಿಡಿಯೋ ಕಾಲ್ ಮಾಡಿ, ಮದುವೆಗೆ ಶುಭಹಾರೈಸಿದ್ದಾರೆ.