- Home
- Entertainment
- Cine World
- ರಜನಿ ಕೂಲಿ ಸಿನಿಮಾದಲ್ಲಿ ಮಲಯಾಳಂ ನಟನ ಸದ್ದು: ಸೌಬಿನ್ ಮೋನಿಕಾ ಡ್ಯಾನ್ಸ್, ನಟನೆಗೆ ಪ್ರೇಕ್ಷಕರು ಫಿದಾ!
ರಜನಿ ಕೂಲಿ ಸಿನಿಮಾದಲ್ಲಿ ಮಲಯಾಳಂ ನಟನ ಸದ್ದು: ಸೌಬಿನ್ ಮೋನಿಕಾ ಡ್ಯಾನ್ಸ್, ನಟನೆಗೆ ಪ್ರೇಕ್ಷಕರು ಫಿದಾ!
ಕೂಲಿ ಸಿನಿಮಾದಲ್ಲಿ ಸೌಬಿನ್ ಮಿಂಚು: ರಜನಿಕಾಂತ್ ನಟಿಸಿರೋ ಕೂಲಿ ಸಿನಿಮಾದಲ್ಲಿ ಮಲಯಾಳಂ ನಟ ಸೌಬಿನ್ ಶಾಹಿರ್ ತಮ್ಮ ನಟನೆ ಮತ್ತು ಡ್ಯಾನ್ಸ್ ಮೂಲಕ ತಮಿಳು ಪ್ರೇಕ್ಷಕರ ಮನಗೆದ್ದಿದ್ದಾರೆ.

ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ರಜನಿಕಾಂತ್ ಮೊದಲ ಬಾರಿಗೆ ನಟಿಸಿರೋ ಸಿನೆಮಾ ಕೂಲಿ. ಆಕ್ಷನ್ ಥ್ರಿಲ್ಲರ್ ಜಾನರ್ ನಲ್ಲಿ ಬಂದಿರೋ ಈ ಚಿತ್ರ ಆಗಸ್ಟ್ 14 ರಂದು ತೆರೆಕಂಡಿದೆ. ತಮಿಳುನಾಡಿನಲ್ಲಿ ಬೆಳಿಗ್ಗೆ 9 ಗಂಟೆಗೆ ಸ್ಪೆಷಲ್ ಶೋ ಇತ್ತು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಜನಿಗಾಗಿಯೇ ಮಾಡಿದ ಸಿನೆಮಾ ಇದಾಗಿದ್ದು, ಒನ್ ಮ್ಯಾನ್ ಆರ್ಮಿಯಾಗಿ ರಜನಿ ಮಿಂಚಿದ್ದಾರೆ. ಆದ್ರೆ, ವಿಲನ್ ಪಾತ್ರಕ್ಕೆ ನಾಗಾರ್ಜುನ ಸೂಕ್ತ ಅನಿಸಿಲ್ಲ. ವಿಲನ್ ಪಾತ್ರಕ್ಕೆ ಇನ್ನೂ ಪವರ್ ಇರಬೇಕಿತ್ತು. ಇಲ್ಲ ಅಂದ್ರೆ, ತಮ್ಮ ಪಾತ್ರಕ್ಕಿಂತ ಚೆನ್ನಾಗಿ ನಟಿಸಿ, ಪ್ರೇಕ್ಷಕರ ಮನಗೆದ್ದ ಸೌಬಿನ್ ಗೆ ವಿಲನ್ ಪಾತ್ರ ಕೊಡಬಹುದಿತ್ತು.
ಸೌಬಿನ್ ಶಾಹಿರ್ ಬರುವ ಪ್ರತಿ ದೃಶ್ಯವೂ ಪ್ರೇಕ್ಷಕರಿಗೆ ಹಬ್ಬ. ಜೈಲರ್ ನಲ್ಲಿ ವಿಜಯ್ ಗೆ ವಿಲನ್ ಆಗಿ ಮಲಯಾಳಂ ನಟ ವಿನಾಯಕನ್ ಹೇಗೆ ಸೂಕ್ತವಾಗಿದ್ರೋ, ಹಾಗೆಯೇ ಕೂಲಿ ಚಿತ್ರದಲ್ಲಿ ರಜನಿಗೆ ಸೌಬಿನ್ ವಿಲನ್ ಆಗಿ ಸೂಕ್ತವಾಗಿದ್ದರು. ಅಷ್ಟರ ಮಟ್ಟಿಗೆ ಈ ಚಿತ್ರದಲ್ಲಿ ತಮ್ಮ ನಟನೆಯನ್ನು ಪ್ರದರ್ಶಿಸಿದ್ದಾರೆ. ಮೋನಿಕಾ ಹಾಡಿನಲ್ಲಿ ಪೂಜಾ ಹೆಗ್ಡೆಗಿಂತ ಸೌಬಿನ್ ಡ್ಯಾನ್ಸ್ ಹೆಚ್ಚು ಸದ್ದು ಮಾಡ್ತಿದೆ. ಇತ್ತೀಚೆಗೆ ಸೌಬಿನ್ ನಟನೆಗೆ ತಮಿಳು ಪ್ರೇಕ್ಷಕರು ಫಿದಾ ಆಗಿದ್ದಾರೆ. ಮೊದಲು ಮಂಜುಮೇಲ್ ಬಾಯ್ಸ್ ಚಿತ್ರದಲ್ಲೂ ಸೌಬಿನ್ ತಮ್ಮ ನಟನೆಯಿಂದ ಮಿಂಚಿದ್ದರು. ಹೀರೋ, ಪೋಷಕ ಪಾತ್ರ, ಅತಿಥಿ ಪಾತ್ರ ಹೀಗೆ ಎಲ್ಲದರಲ್ಲೂ ಎಚ್ಚರಿಕೆಯಿಂದ ಆಯ್ಕೆ ಮಾಡುವ ಲೋಕೇಶ್, ವಿಲನ್ ಪಾತ್ರಕ್ಕೆ ಇನ್ನೂ ಹೆಚ್ಚು ಶ್ರಮ ಹಾಕಿದ್ರೆ ಚಿತ್ರಕ್ಕೆ ಇನ್ನಷ್ಟು ಪವರ್ ಸಿಗುತ್ತಿತ್ತು.
ಪೋರ್ಟ್ ಮಾಫಿಯಾ ಡಾನ್ ಆಗಿ ನಟಿಸಿರೋ ನಾಗಾರ್ಜುನ, ಪೋರ್ಟ್ ನಲ್ಲಿ ಅಕ್ರಮ ವ್ಯವಹಾರ ಮಾಡ್ತಾ ಇರ್ತಾರೆ. ಅವರ ಜೊತೆ ಸೌಬಿನ್ ಕೆಲಸ ಮಾಡ್ತಾ ಇರ್ತಾರೆ. ಈ ಅಕ್ರಮದ ಬಗ್ಗೆ ಪೊಲೀಸರು ರಹಸ್ಯ ಕಾರ್ಯಾಚರಣೆ ಮಾಡ್ತಾ ಇರ್ತಾರೆ. ಇಂಥವರನ್ನ ಹುಡುಕಿ ಕೊಲ್ಲೋದು ದಯಾಳನ್ ಪಾತ್ರದ ಸೌಬಿನ್ ಕೆಲಸ. ರಜನಿ ಫ್ರೆಂಡ್ ರಾಜಶೇಖರ್ ನ ದಯಾಳ್ ಕೊಲ್ತಾನೆ. ರಾಜಶೇಖರ್ ದೇಹ ನೋಡಲು ರಜನಿ ಬರ್ತಾರೆ. ಆದ್ರೆ, ರಾಜಶೇಖರ್ ಮಗಳು ಪ್ರೀತಿ ರಜನಿಯನ್ನ ತಡೆಯುತ್ತಾಳೆ. ಮಾಫಿಯಾದಿಂದ ರಾಜಶೇಖರ್ ಸಾವು, ಪ್ರೀತಿ ಮತ್ತು ಆಕೆಯ ತಂಗಿಗೆ ಅಪಾಯ ಇರೋದನ್ನ ತಿಳಿದ ರಜನಿ, ಅವರನ್ನ ರಕ್ಷಿಸಲು ಮುಂದಾಗ್ತಾರೆ. ತಮ್ಮ ಫ್ರೆಂಡ್ ಫ್ಯಾಮಿಲಿಗಾಗಿ ಏನು ಬೇಕಾದ್ರೂ ಮಾಡಲು ರೆಡಿ ಆಗ್ತಾರೆ. ಇತ್ತ ಸೈಮನ್ ಅಕ್ರಮ ವ್ಯವಹಾರ, ದಯಾಳ್ ಕೊಲೆಗಳು ಮುಂದುವರಿಯುತ್ತೆ. ಸೈಮನ್ ಕಂಪನಿಯಲ್ಲಿ ಕೆಲಸ ಮಾಡುವವರೂ ಸಾಯ್ತಾರೆ. ಕೊನೆಗೆ ಸೈಮನ್ ಆಟಕ್ಕೆ ರಜನಿ ಬ್ರೇಕ್ ಹಾಕ್ತಾರಾ ಇಲ್ವಾ ಅನ್ನೋದೇ ಕೂಲಿ ಕಥೆ.
ಇಂಥ ಕಥೆಗಳು ತಮಿಳು ಸಿನೆಮಾದಲ್ಲಿ ಬಂದಿದ್ರೂ, ಕೂಲಿ ಚಿತ್ರವನ್ನು ವಿಭಿನ್ನವಾಗಿ ದೊಡ್ಡ ತಾರಾಗಣದೊಂದಿಗೆ ಲೋಕೇಶ್ ಮಾಡಿದ್ದಾರೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಲನ್ ಮತ್ತು ಎಮೋಷನಲ್ ದೃಶ್ಯಗಳಿಗೆ ಇನ್ನೂ ಹೆಚ್ಚು ಶ್ರಮ ಹಾಕಬಹುದಿತ್ತು. ಆಕ್ಷನ್ ಥ್ರಿಲ್ಲರ್ ಆಗಿರೋದ್ರಿಂದ ಆಕ್ಷನ್ ಗೆ ಯಾವ ಕೊರತೆಯೂ ಇಲ್ಲ. ಆದ್ರೆ, ಸೆಂಟಿಮೆಂಟ್ ವಿಚಾರದಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಬಹುದಿತ್ತು. ತಮಿಳು ಪ್ರೇಕ್ಷಕರಿಗೆ ಆಕ್ಷನ್ ಜೊತೆಗೆ ಸೆಂಟಿಮೆಂಟ್ ಕೂಡ ಇಷ್ಟ. ಗೆಲುವಿನ ಓಟದಲ್ಲಿರುವ ಲೋಕೇಶ್, ರಜನಿ ಇಮೇಜ್ ನೋಡಿ ಸ್ವಲ್ಪ ದಾರಿ ತಪ್ಪಿದ್ದಾರೆ ಅನ್ನಿಸುತ್ತೆ.