ವಿಜಯ್ ದೇವರಕೊಂಡ ಜೊತೆ ರೊಮ್ಯಾಂಟಿಕ್ ಫೋಟೊ ಹಂಚಿಕೊಂಡ ರಶ್ಮಿಕಾ… ಮದುವೆಗೆ ರೆಡೀನಾ?
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ದೇವರಕೊಂಡ ಜೊತೆಗಿನ ರೊಮ್ಯಾಂಟಿಕ್ ಫೋಟೊಗಳನ್ನು ಶೇರ್ ಮಾಡಿದ್ದು, ಜೊತೆಗೆ ನೋಟ್ ಕೂಡ ಬರೆದಿದ್ದಾರೆ. ಏನು ಸಂಬಂಧ ಕನ್ಫರ್ಮ್ ಮಾಡ್ಕೊಂಡ್ರ?

ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳು, ತೆಲುಗುಮ್ ಹಿಂದಿ ಎನ್ನುವಂತೆ ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ವಿಜಯ್ ದೇವರಕೊಂಡ ಜೊತೆಗಿನ ರೊಮ್ಯಾಂಟಿಕ್ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ರಶ್ಮಿಕಾ ಮಂದಣ್ಣ ಇಂದು ವಿಶೇಷ ಫೋಟೊಗಳನ್ನು ಶೇರ್ ಮಾಡುವ ಮೂಲಕ ತಮಗೆ ತೆಲುಗು ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ಗೀತಾ ಗೋವಿಂದಂ ಸಿನಿಮಾ 7 ವರ್ಷ ಪೂರೈಸಿರುವುದನ್ನು ಸಂಭ್ರಮಿಸಿದ್ದಾರೆ. ಆದರೆ ಆರಂಭದಲ್ಲಿ ವಿಜಯ್ ಹಾಗೂ ರಶ್ಮಿಕಾ ಫೋಟೊಗಳನ್ನು ನೋಡಿ ಜನ ಸಂಬಂಧ ಕನ್ಫರ್ಮ್ ಮಾಡಿದ್ರೇನೋ ಎಂದು ಹೇಳುತ್ತಿದ್ದಾರೆ.
ಗೀತಾ ಗೋವಿಂದಂ ಸಿನಿಮಾಕ್ಕೆ 7 ವರ್ಷಗಳು ತುಂಬಿದ್ದು, ಈ ಹಿನ್ನೆಲೆಯಲ್ಲಿ ಹಳೆಯ ಫೋಟೊಗಳನ್ನು ಶೇರ್ ಮಾಡಿರುವ ರಶ್ಮಿಕಾ ಮಂದಣ್ಣ, ಅದರ ಜೊತೆಗೆ ಸುಂದರವಾದ ಟಿಪ್ಪಣಿ ಬರೆದಿದ್ದಾರೆ. 7 ವರ್ಷಗಳ ಹಿಂದಿನ ಈ ಎಲ್ಲಾ ಚಿತ್ರಗಳು ನನ್ನ ಬಳಿ ಇನ್ನೂ ಇವೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ.. ಗೀತ ಗೋವಿಂದಂ ಯಾವಾಗಲೂ ಅತ್ಯಂತ ವಿಶೇಷ ಚಿತ್ರವಾಗಿರುತ್ತದೆ.
ಈ ಚಿತ್ರ ನಿರ್ಮಾಣದಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ನಾನು ನೆನಪಿಸಿಕೊಳ್ಳುತ್ತಿದ್ದೆ ಮತ್ತು ನಾವೆಲ್ಲರೂ ಭೇಟಿಯಾಗಿ ಬಹಳ ಸಮಯವಾಗಿದೆ.. ಆದರೆ ಅವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ..ಈ ಗಾಗಲೇ 7 ವರ್ಷಗಳಾಗಿವೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಗೀತ ಗೋವಿಂದಂ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ಈ ಫೋಟೊಗಳನ್ನು ನೋಡಿದ ಅಭಿಮಾನಿಗಳು ಒಂದು ಸಲ ಫೋಟೊ ನೋಡಿ ಇಬ್ಬರು ತಮ್ಮ ಸಂಬಂಧ ಕನ್ಫರ್ಮ್ ಮಾಡಿದ್ರು ಅಂದುಕೊಂಡೆ ಎಂದರೆ, ಇನ್ನೂ ಕೆಲವರು ಇಬ್ಬರು ಮದುವೆಯಾಗಲಿದ್ದಾರೆಯೇ ಎಂದು ಅಂದುಕೊಂಡೆ ಆದರೆ ಇದು ಬೇರೆಯೇ ವಿಷಯ ಎಂದು ಹೇಳಿದ್ದಾರೆ.
ಗೀತಾ ಗೋವಿಂದಂ ಸಿನಿಮಾ ಸಂಬಂಧದ ಕುರಿತಾದ ಸುಂದರವಾದ ಪ್ರೇಮಕಥೆಯನ್ನು ಹೇಳುವ ಸಿನಿಮಾ ಆಗಿದೆ. ಇಬ್ಬರ ಕೆಮೆಸ್ಟ್ರಿ ಸೂಪರ್ ಆಗಿ ವರ್ಕ್ ಔಟ್ ಆಗಿತ್ತು. ಹಾಗಾಗಿ ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಆ ಸಿನಿಮಾ ಬಳಿಕ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ರೂಮರ್ಸ್ ಕೇಳಿ ಬಂದಿತ್ತು.
ವಿಜಯ್ ದೇವರಕೊಂಡ ಇತ್ತೀಚೆಗೆ ಕಿಂಗ್ ಡಮ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಹೇಳಿಕೊಳ್ಳುವಂತಹ ಹಿಟ್ ಆಗಿಲ್ಲ. ಮುಂದೆ ರಶ್ಮಿಕಾ ಜೊತೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಅದು ಯಾವ ಸಿನಿಮಾ, ಯಾವಾಗ ರಿಲೀಸ್ ಆಗುತ್ತೆ ಅನ್ನೋದೆ ಮಾತ್ರ ಗೊತ್ತಿಲ್ಲ.
ರಶ್ಮಿಕಾ ಮಂದಣ್ಣ ಕೊನೆಯದಾಗಿ ಕುಬೇರ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇನ್ನು ದ ಗರ್ಲ್ ಫ್ರೆಂಡ್, ಥಮಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಮತ್ತೊಂದಿಷ್ಟು ಸಿನಿಮಾಗಳಿಗೂ ಬಣ್ಣ ಹಚ್ಚಲಿದ್ದಾರೆ ರಶ್ಮಿಕಾ ಮಂದಣ್ಣ.