ಕೆ ಡ್ರಾಮಾ ಫ್ಯಾನ್ಸ್ ನೀವೇನಾ… ಹಾಗಿದ್ರೆ ಈ ರೋಮ್ಯಾಂಟಿಕ್ ಸಿನಿಮಾ ಮಿಸ್ ಮಾಡ್ಬೇಡಿ
ನೀವು ಹಾರ್ಟ್ ಟಚಿಂಗ್ ಕಥೆಗಳು, ಆಕರ್ಷಕ ಪಾತ್ರಗಳು ಮತ್ತು ಮೋಡಿಮಾಡುವ ಸುಂದರವಾದ ಕ್ಷಣಗಳನ್ನು ಎಂಜಾಯ್ ಮಾಡುವಂತಹ ಮೂಡ್ ನಲ್ಲಿದ್ದೀರಾ? ಅದರಲ್ಲೂ ನೀವು ಕೆ ಡ್ರಾಮ ಪ್ರಿಯರಾಗಿದ್ರೆ, ನೆಟ್‌ಫ್ಲಿಕ್ಸ್‌ನಲ್ಲಿ ನೀವು ಮಿಸ್ ಮಾಡದೇ ಈ ಸಿನಿಮಾಗಳನ್ನು ನೋಡಿ.

ಕೊರಿಯನ್ ಡ್ರಾಮ
ನೀವು ಕೂಡ ಕೊರಿಯನ್ ಡ್ರಾಮಾ ಪ್ರಿಯರೇ? ಯಾವ ಒಳ್ಳೆ ಸಿನಿಮಾಗಳು ಓಟಿಟಿಯಲ್ಲಿವೆ ಎಂದು ಹುಡುಕುತ್ತಿದ್ದೀರಾ? ಹಾಗಿದ್ರೆ ನೀವು ಖಂಡಿತವಾಗಿಯೂ ಈ ಸಿನಿಮಾಗಳನ್ನು ನೆಟ್ ಫ್ಲಿಕ್ಸ್ ನಲ್ಲಿ ನೋಡಬಹುದು. ಇವು ಸುಂದರವಾದ ರೊಮ್ಯಂಟಿಕ್ ಸಿನಿಮಾಗಳು.
ಕ್ವೀನ್ ಆಫ್ ಟಿಯರ್ಸ್
ಡಿವೋರ್ಸ್ ಪಡೆಯುವ ಹಂತದಲ್ಲಿರುವ ಜೋಡಿಗಳು, ತಮ್ಮ ಚಾಲೆಂಜಸ್ ನಡುವೆ ಮತ್ತೆ ಪ್ರೀತಿಯನ್ನು ಕಂಡುಕೊಳ್ಳುತ್ತಾರೆ. ಇದೊಂದು ಇಮೋಷನಲ್ ರೋಲರ್ ಕೋಸ್ಟರ್ ಆಗಿದ್ದು, ರೋಮ್ಯಾಂಟಿಕ್ ಸಿನಿಮಾ ಇಷ್ಟಪಡುವವರಿಗೆ ಇದು ಖಂಡಿತವಾಗಿಯೂ ಇಷ್ಟವಾಗುತ್ತೆ.
ಕ್ರಾಶ್ ಲ್ಯಾಂಡಿಂಗ್ ಆನ್ ಯು
ದಕ್ಷಿಣ ಕೊರಿಯಾದ ಉತ್ತರಾಧಿಕಾರಣಿ, ತಪ್ಪಿ ಉತ್ತರ ಕೊರಿಯಾದಲ್ಲಿ ಲ್ಯಾಂಡ್ ಆಗುತ್ತಾಳೆ. ಅಲ್ಲಿ ಆಕೆಗೆ ಸೈನಿಕನ ಮೇಲೆ ಪ್ರೀತಿಯಾಗುತ್ತದೆ. ಇವರಿಬ್ಬರ ರೊಮ್ಯಾನ್ಸ್ ಹಲವು ಸಿನಿರಸಿಕರ ಮನ ಸೆಳೆದಿದೆ.
ಟ್ವೆಂಟಿ ಫೈವ್-ಟ್ವೆಂಟಿ ವನ್
ಇದು 90ರ ದಶಕದ ಕಥೆಯನ್ನು ಹೇಳುವ ಸಿನಿಮಾ. ಪ್ರಕ್ಷುಬ್ಧ ಪರಿಸ್ಥಿತಿಯ ಸಮಯದಲ್ಲಿ ಫೆನ್ಸರ್ ಹಾಗೂ ರಿಪೋರ್ಟರ್ ಇಬ್ಬರ ನಡುವೆ ಉಂಟಾಗುವ ಪ್ರೀತಿ ಹಾಗೂ ಗುರಿಗಳನ್ನು ಮುಟ್ಟುವ ತವಕವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಹೋಮ್ ಟೌನ್ ಚಾ-ಚಾ-ಚಾ
ಸಿಯೋಲ್ ನ ಡೆಂಟಿಸ್ಟ್, ಸಮುದ್ರ ತೀರದ ಗ್ರಾಮಕ್ಕೆ ಶಿಫ್ಟ್ ಆಗುತ್ತಾರೆ. ಅಲ್ಲಿ ಆಕೆ ಒಬ್ಬ ಹುಡುಗನನ್ನು ಭೇಟಿಯಾಗುತ್ತಾಳೆ. ಇವರಿಬ್ಬರ ಪ್ರೀತಿ, ಇಮೋಷನಲ್ ಹಾಗೂ ಕಾಮಿಡಿ ಜರ್ನಿ ಸಖತ್ತಾಗಿದೆ.
ಬ್ಯುಸಿನೆಸ್ ಪ್ರಪೋಸಲ್
ಈ ಸಿನಿಮಾದಲ್ಲಿ ನಾಯಕಿ ಒಂದು ಬ್ಲೈಂಡ್ ಡೇಟ್ ಗೆ ಹೋಗುತ್ತಾಳೆ, ಹುಡುಗನ ಬಳಿ, ತಾನು ಹುಡುಗಿಯ ಗೆಳತಿ ಎನ್ನುತ್ತಾಳೆ. ಆದರೆ ಆಕೆ ಡೇಟ್ ಮಾಡುತ್ತಿರುವ ಹುಡುಗ ಆಕೆಯ ಕಂಪನಿಯ ಸಿ ಇಒ ಆಗಿರುತ್ತಾನೆ. ಇವರಿಬ್ಬರ ನಡುವಿನ ರೊಮ್ಯಾಂಟಿಕ್ ಕಾಮಿಡಿ ಚೆನ್ನಾಗಿದೆ.
ವೆನ್ ಲೈಫ್ ಗೀವ್ಸ್ ಯು ಟ್ಯಾಂಗರೀನ್ಸ್
ಇದೊಂದು ಮುದ್ದಾದ ಲವ್ ಸ್ಟೋರಿಯಾಗಿದ್ದು, ಆರಂಭದಿಂದ ಕೊನೆಯವರೆಗೂ ನಿಮ್ಮನ್ನು ನೋಡಿಸಿಕೊಂಡು ಹೋಗುತ್ತೆ. ಈ ರೊಮ್ಯಾಂಟಿಕ್ ಕಥೆ ನಿಮಗೆ ಖಂಡಿತವಾಗಿಯೂ ಇಷ್ಟವಾಗಬಹುದು.
ಲವ್ ನೆಕ್ಸ್ಟ್ ಡೋರ್
ಬಾಲ್ಯದ ಗೆಳೆಯರು ಮತ್ತೆ ತಮ್ಮ 30ರ ಆಸುಪಾಸಿನಲ್ಲಿ ಭೇಟಿಯಾಗೋದು ಸಿನಿಮಾ ಕಥೆ. ಇವರಿಬ್ಬರ ನಡುವೆ ಕೇವಲ ಗೆಳೆತನ ಉಳಿಯುತ್ತದೆಯೇ? ಅಥವಾ ಲವ್ ಮೂಡುತ್ತದೆಯೇ? ಅನ್ನೋದನ್ನು ಸಿನಿಮಾ ನೋಡಿ ತಿಳ್ಕೊಳಿ.
ಸಮ್ ಥಿಂಗ್ ಇನ್ ದ ರೈನ್
30ರ ಹರೆಯದಲ್ಲಿರುವ ನಾಯಕಿಗೆ, ತನ್ನ ತಮ್ಮನ ಸ್ನೇಹಿತನ ಮೇಲೆ ಲವ್ ಆಗುತ್ತದೆ. ಹಿರಿಯ ಹುಡುಗಿ ಮತ್ತು ಕಿರಿಯ ಹುಡುಗನ ಪ್ರೀತಿಯನ್ನು ಸಮಾಜ ಹೇಗೆ ಕಾಣುತ್ತದೆ, ಆ ಪ್ರೀತಿ, ಇಮೋಷನ್ಸ್ ಎಲ್ಲವೂ ಸುಂದರವಾಗಿದೆ.
ಅವರ್ ಬ್ಲೂಸ್
ಈ ಸೀರೀಸ್ ನಲ್ಲಿ ಹಲವು ಲವ್ ಸ್ಟೋರಿಗಳ ಬಗ್ಗೆ ತಿಳಿಸಲಾಗಿದೆ. ಅದರಲ್ಲೂ ಸಂಬಂಧದಲ್ಲಿ ಯಾವೆಲ್ಲಾ ರೀತಿಯ ತೊಂದರೆಗಳು ಬರುತ್ತವೆ, ಸಮಾಜ ಎಲ್ಲವನ್ನೂ ಯಾವ ರೀತಿ ಕಾಣುತ್ತವೆ ಅನ್ನೋದೆ ಕಥೆ.