- Home
- Entertainment
- Cine World
- Coolie Movie: ರಜನಿಕಾಂತ್ ಸಿನಿಮಾದಲ್ಲಿ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಕೈಹಿಡಿದ ChatGpt; ಹೇಗೆ?
Coolie Movie: ರಜನಿಕಾಂತ್ ಸಿನಿಮಾದಲ್ಲಿ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಕೈಹಿಡಿದ ChatGpt; ಹೇಗೆ?
ಇಂದು ಎಲ್ಲರೂ ಚಾಟ್‌ಜಿಪಿಟಿ ಬಳಸುವವರೇ. ಹಾಗೆಯೇ ʼಕೂಲಿʼ ಸಿನಿಮಾದ ಹಾಡಿನ ಸಂಯೋಜನೆ ಮಾಡಲು ಅನಿರುದ್ಧ ರವಿಚಂದರ್ ಕೂಡ ಚಾಟ್‌ಜಿಪಿಟಿ ಬಳಕೆ ಮಾಡಿದ್ದಾರೆ.

ಸೂಪರ್‌ಸ್ಟಾರ್ ರಜನೀಕಾಂತ್ ಅಭಿನಯದ ‘ಕೂಲಿʼ ಸಿನಿಮಾ ನೋಡಲು ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಈ ಚಿತ್ರದ ಹಾಡುಗಳು ಈಗಾಗಲೇ ವೈರಲ್ ಆಗಿವೆ. ಈಗ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ʼಕೂಲಿʼ ಸಿನಿಮಾದ ಸಂಗೀತ ಸಂಯೋಜನೆಯ ಸಂದರ್ಭದಲ್ಲಿ ಚಾಟ್ ಜಿಪಿಟಿ ಬಳಸಿಕೊಂಡ ಬಗೆ ತಿಳಿಸಿದ್ದಾರೆ.
ಸನ್ ಪಿಕ್ಚರ್ಸ್‌ಗೆ ನೀಡಿದ ಇತ್ತೀಚಿನ ಸಂದರ್ಶನವೊಂದರಲ್ಲಿ, ಅನಿರುದ್ಧ್ ಅವರು, ಚಾಟ್‌ಜಿಪಿಟಿಯಿಂದ ಸ್ಫೂರ್ತಿ ಪಡೆದ ಬಗ್ಗೆ ಹೇಳಿದ್ದಾರೆ. "ಎರಡು ದಿನಗಳ ಹಿಂದೆ, ನನಗೆ ಹಾಡಿನ ಕೆಲಸದಲ್ಲಿ ಸಮಸ್ಯೆ ಆಗ್ತಿತ್ತು, ಆಗ ನಾನು ಚಾಟ್‌ಜಿಪಿಟಿಯನ್ನು ಒಪನ್ ಮಾಡಿ, ಮಾಹಿತಿಯನ್ನು ಪಡೆದೆ. ನಾನು AIಗೆ, 'ಇದು ಹಾಡು. ಕೊನೆಯ ಎರಡು ಸಾಲುಗಳನ್ನು ರಚಿಸುವಾಗ ನಾನು ಸಿಕ್ಕಿಹಾಕಿಕೊಂಡಿದ್ದೇನೆ. ಏನು ಮಾಡಲಿ?' ಅಂತ ಕೇಳಿದೆ. ನಾನು ಪ್ರಾಮಾಣಿಕವಾಗಿ ಈ ಮಾತು ಹೇಳುತ್ತಿದ್ದೇನೆ" ಎಂದರು.
"ನನಗೆ ಮಾಹಿತಿ ಕಲೆಹಾಕಲು ಚಾಟ್‌ಜಿಪಿಟಿ ಮೊದಲ ಪ್ರೀಮಿಯಂಗೆ ಸಬ್‌ಸ್ಕ್ರಬ್ ಆಗಿದ್ದೇನೆ. ಪ್ರಾಂಪ್ಟ್‌ನೊಂದಿಗೆ, AI ನನಗೆ ಹತ್ತು ಸಾಲುಗಳನ್ನು ನೀಡಿತು. ಅದರಿಂದ ಒಂದು ಸಾಲನ್ನು ನೋಡಿದಾಗ, ಒಂದು ಐಡಿಯಾ ಹೊಳೆಯಿತು, ಇದರಿಂದ ನಾನು ಉಳಿದ ಹಾಡನ್ನು ಕಂಪ್ಲೀಟ್ ಮಾಡಿದೆ. ಎಲ್ಲ ಸಂಗೀತ ಸಂಯೋಜನೆಕಾರರಿಗೂ ಒಂದಿಲ್ಲೊಂದು ಸಮಸ್ಯೆ ಬರುವುದು. ಆದರೆ ಚಾಟ್‌ಜಿಪಿಟಿಯಿಂದ ಈ ಸಮಸ್ಯೆ ಬಗೆಹರಿದಿದೆ. ಸಮಸ್ಯೆ ಬಗ್ಗೆ ತೀವ್ರವಾಗಿ ಯೋಚಿಸುವ ಬದಲು, ಅದನ್ನು ಬಿಡುವುದು ಒಳ್ಳೆಯದು ಎಂದು ಭಾವಿಸುವೆ" ಎಂದಿದ್ದಾರೆ.
ಅನಿರುದ್ಧ ಅವರು, Chikitu Vibe ಹಾಡಿನ ಬಗ್ಗೆ ಮಾತನಾಡುತ್ತಾ, ಟಿ. ರಾಜೇಂದರ್ ಸರ್ ಅವರ ಬೀಟ್‌ಗಳ ಟ್ಯೂನ್ ಮಾಡಿದ ವರ್ಶನ್ ಜೊತೆಯಲ್ಲಿ ನನ್ನ ಕೆಲಸ ಆರಂಭಿಸಿದೆ. ಆದರೆ, ಸೌಬಿನ್ ಶಾಹಿರ್ ಅವರು ಪೂಜಾ ಹೆಗ್ಡೆ ಜೊತೆಗೆ ಮೋನಿಕಾಗಾಗಿ ಡ್ಯಾನ್ಸ್ ಮಾಡಲಿದ್ದಾರೆ ಎಂದು ಗೊತ್ತಾದಾಗ ʼಚಂದ್ರಮುಖಿʼ ಸಿನಿಮಾದ ʼರಾ ರಾʼ ರೀತಿಯ ಹಾಸ್ಯ ಟ್ರ್ಯಾಕ್‌ಗಳನ್ನು ಅಲ್ಲಿ ಸೇರ್ಪಡೆ ಮಾಡಿದ್ದಾರೆ.
ಲೋಕೇಶ್ ಕನಗರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ಉಪೇಂದ್ರ, ನಾಗಾರ್ಜುನ ಅಕ್ಕಿನೇನಿ, ಆಮಿರ್ ಖಾನ್, ಸೌಬಿನ್ ಶಾಹಿರ್, ಶ್ರುತಿ ಹಾಸನ್, ಸತ್ಯರಾಜ್ ನಟಿಸುತ್ತಿದ್ದಾರೆ. ಇದರ ಜೊತೆಗೆ ಆಮಿರ್ ಖಾನ್, ಪೂಜಾ ಹೆಗ್ಡೆ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ʼಕೂಲಿʼ ಸಿನಿಮಾವು ಆಗಸ್ಟ್ 14 ರಂದು ರಿಲೀಸ್ ಆಗಲಿದೆ. ಅದೇ ಟೈಮ್‌ಗೆ ಹೃತಿಕ್ ರೋಷನ್, ಜ್ಯೂನಿಯರ್ ಎನ್‌ಟಿಆರ್, ಕಿಯಾರಾ ಅಡ್ವಾಣಿ ಅವರ ʼವಾರ್ 2ʼ ಸಿನಿಮಾದೊಂದಿಗೆ ಠಕ್ಕರ್ ಕೊಡಲಿದೆ.