- Home
- Entertainment
- Cine World
- ಭಾರಿ ಮೆಚ್ಚುಗೆ ನಡುವೆ ರಿಷಬ್ ಶೆಟ್ಟಿಗೆ ಎದುರಾದ ಆತಂಕ, ಕಾಂತಾರ 1 ವೀಕ್ಷಕರಲ್ಲಿ ಕೈಜೋಡಿಸಿ ಮನವಿ
ಭಾರಿ ಮೆಚ್ಚುಗೆ ನಡುವೆ ರಿಷಬ್ ಶೆಟ್ಟಿಗೆ ಎದುರಾದ ಆತಂಕ, ಕಾಂತಾರ 1 ವೀಕ್ಷಕರಲ್ಲಿ ಕೈಜೋಡಿಸಿ ಮನವಿ
ಭಾರಿ ಮೆಚ್ಚುಗೆ ನಡುವೆ ರಿಷಬ್ ಶೆಟ್ಟಿಗೆ ಎದುರಾದ ಆತಂಕ, ಕಾಂತಾರ 1 ವೀಕ್ಷಕರಲ್ಲಿ ಕೈಜೋಡಿಸಿ ಮನವಿ ಮಾಡಿದ್ದಾರೆ. ರಿಷಬ್ ಶೆಟ್ಟಿ ದಿಢೀರ್ ವೀಕ್ಷಕರಲ್ಲಿ ಈ ರೀತಿ ಮನವಿ ಮಾಡಲು ಕಾರಣವೇನು? ದೇಶವೇ ಮೆಚ್ಚುವಂತೆ ಸಿನಿಮಾ ನೀಡಿದ ಕಲಾವಿದನ ಮನವಿ ಏನು?

ಭಾರಿ ಮೆಚ್ಚುಗೆ ನಡುವೆ ರಿಷಬ್ ಶೆಟ್ಟಿಗೆ ಎದುರಾದ ಆತಂಕ
ಭಾರಿ ಮೆಚ್ಚುಗೆ ನಡುವೆ ರಿಷಬ್ ಶೆಟ್ಟಿಗೆ ಎದುರಾದ ಆತಂಕ
ಕಾಂತಾರ ಚಾಪ್ಟರ್ 1 ಸಿನಿಮಾ ದೇಶ ವಿದೇಶಗಳಲ್ಲಿ ಭರ್ಜರಿ ಯಶಸ್ಸಿನೊಂದಿಗೆ ಮುನ್ನಗ್ಗುತ್ತಿದೆ. ಸಿನಿಮಾ ಅಭಿಮಾನಿಗಳು, ಸಿನಿಮಾ ಕಲಾವಿದಕರು, ಗಣ್ಯರು ಕಾಂತಾರ ಚಾಪ್ಟರ್ 1 ಸಿನಿಮಾಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದ್ಭುತ ದೃಶ್ಯ ಕಾವ್ಯ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ಧನ್ಯವಾದ ಹೇಳುತ್ತಿದ್ದಾರೆ. ಕಾಂತಾರ ಸಿನಿಮಾ ತಂಡಕ್ಕೆ ಮೆಚ್ಚುಗೆಯ ಸುರಿಮಳೆ ಸಿಗುತ್ತಿದೆ. ಇದರ ನಡುವೆ ರಿಷಬ್ ಶೆಟ್ಟಿ ಪ್ರೇಕ್ಷಕರಲ್ಲಿ ಮನವಿ ಮಾಡಿದ್ದಾರೆ.
ಪ್ರೇಕ್ಷಕರಲ್ಲಿ ಮನವಿ ಮಾಡಿದ ರಿಷಬ್ ಶೆಟ್ಟಿ
ಪ್ರೇಕ್ಷಕರಲ್ಲಿ ಮನವಿ ಮಾಡಿದ ರಿಷಬ್ ಶೆಟ್ಟಿ
ಕಾಂತಾರ ಚಾಪ್ಟರ್ 1 ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಇದರ ನಡುವೆ ಸಿನಿ ಪ್ರೇಕ್ಷಕರಲ್ಲಿ ರಿಷಬ್ ಶೆಟ್ಟಿ ಮನವಿ ಮಾಡಿದ್ದಾರೆ. ಸಿನಿಮಾ ವೀಕ್ಷಣೆ ವೇಳೆ ಮೊಬೈಲ್ ಮೂಲಕ ದೃಶ್ಯ ಚಿತ್ರೀಕರಿಸದಂತೆ ಮನವಿ ಮಾಡಿದ್ದಾರೆ. ಪೈರಸಿ ಮೂಲಕ ಸಿನಿಮಾದ ಕನಸು ಪೋಲಾಗಲು ಅವಕಾಶ ಮಾಡಿಕೊಡಬೇಡಿ ಎಂದು ರಿಷಬ್ ಶೆಟ್ಟಿ ಮನವಿ ಮಾಡಿದ್ದಾರೆ.
ಆತ್ಮೀಯ ಕಾಂತಾರ ಕುಟುಂಬ ಮತ್ತು ಸಿನಿಮಾಭಿಮಾನಿಗಳೇ,
ಆತ್ಮೀಯ ಕಾಂತಾರ ಕುಟುಂಬ ಮತ್ತು ಸಿನಿಮಾಭಿಮಾನಿಗಳೇ,
'ಕಾಂತಾರ' ಕೇವಲ ಒಂದು ಸಿನಿಮಾ ಅಲ್ಲ; ಅದು ನಮ್ಮ ಸಂಸ್ಕೃತಿ, ನಮ್ಮ ನೆಲದ ಕಥೆ. ಆರಂಭದಿಂದಲೂ ಈ ಪಯಣ ನಮ್ಮ ಜೊತೆ ನಿಮ್ಮದೂ ಕೂಡ. ನಿಮ್ಮ ಅಪಾರ ಪ್ರೀತಿ, ಬೆಂಬಲವೇ ಈ ಚಿತ್ರವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ದಿದೆ. ಆ ಋಣ ಯಾವಾಗಲೂ ನಮ್ಮ ಮೇಲಿರುತ್ತದೆ. ಈಗ ನಮ್ಮದೊಂದು ವಿನಂತಿ : ಈ ಚಿತ್ರದಲ್ಲಿ ತೆರೆಯ ಮುಂದೆ, ತೆರೆಯ ಹಿಂದೆ ಇರುವ ಸಾವಿರಾರು ಜನರ ಕನಸು ಇದೆ. ಪೈರಸಿಯಿಂದ ಈ ಕನಸನ್ನು ಪೋಲಾಗಲು ಬಿಡಬೇಡಿ, ದಯವಿಟ್ಟು ಚಿತ್ರಮಂದಿರಗಳಲ್ಲಿ ಯಾವುದೇ ಚಿತ್ರದ ದೃಶ್ಯವನ್ನು ಚಿತ್ರೀಕರಿಸಬೇಡಿ ಅಥವಾ ಹಂಚಿಕೊಳ್ಳಬೇಡಿ. ಸಣ್ಣ ವಿಡಿಯೋ ತುಣುಕೂ ಸಿನಿಮಾದ ಅಸಲಿ ಮಾಯೆಯನ್ನು ಮಲಿನ ಮಾಡುತ್ತದೆ. ಈ ಸಂಭ್ರಮ ದೊಡ್ಡ ಪರದೆಯಲ್ಲಿಯೇ ಇರಲಿ. ಈ ಅದ್ಭುತ ಪ್ರಯಾಣವನ್ನು ಒಟ್ಟಾಗಿ ಕಾಪಾಡೋಣ. ಕಾಂತಾರ'ದ ಅನುಭವ ಎಂದೆಂದಿಗೂ ಚಿತ್ರಮಂದಿರಕ್ಕೆ ಮೀಸಲಾಗಲಿ ಎಂದು ಮನವಿ ಮಾಡಿದ್ದಾರೆ.
ಕಾಂತಾರ 1 ಸಿನಿಮಾದ ವಿಡಿಯೋ ತುಣುಕು ವೈರಲ್
ಕಾಂತಾರ 1 ಸಿನಿಮಾದ ವಿಡಿಯೋ ತುಣುಕು ವೈರಲ್
ಕಾಂತಾರ ಚಾಪ್ಟರ್ 1 ಸಿನಿಮಾ ವೀಕ್ಷಿಸುವ ಕೆಲ ಅಭಿಮಾನಿಗಳು ಕೆಲ ದೃಶ್ಯಗಳನ್ನು ಮೊಬೈಲ್ ಮೂಲಕ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದಾರೆ. ಸಣ್ಣ ಸಣ್ಣ ವಿಡಿಯೋ ತುಣುಕುಗಳನ್ನು ಸೋಶಿಯಲ್ ಮೀಡಿಯಾ ಮೂಲಕ, ವ್ಯಾಟ್ಸಾಪ್ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಸಿನಿಮಾ ವೈಭವಕ್ಕೆ ಧಕ್ಕೆಯಾಗಲಿದೆ. ಪೈರಸಿ ಸಿನಿಮಾದ ಗೆಲುವನ್ನು ಕಸಿದುಕೊಳ್ಳಲಿದೆ ಎಂದು ರಿಷಬ್ ಶೆಟ್ಟಿ ಎಚ್ಚರಿಸಿದ್ದಾರೆ.
ಕಾಂತಾರಾ ಸಿನಿಮಾ ತಂಡಕ್ಕೆ ಆತಂಕ
ಕಾಂತಾರಾ ಸಿನಿಮಾ ತಂಡಕ್ಕೆ ಆತಂಕ
ಸೋಶಿಯಲ್ ಮೀಡಿಯಾದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ ಪ್ರಮುಖ ದೃಶ್ಯಗಳು ಸಿಗುವಂತೆ ಆಗಿದೆ. ಇದರಿಂದ ಪ್ರೇಕ್ಷಕರು ಸಿನಿಮಾ ಥೇಯೇಟರ್‌ಗೆ ಬಂದು ಅನುಭವಿಸುವ ಸಾಧ್ಯತೆಗಳು ಕಡಿಮೆಯಾಗಲಿದೆ. ಇದು ಕಾಂತಾರ ಸಿನಿಮಾಗೆ ಹೊಡೆತ ಬೀಳಲಿದೆ ಅನ್ನೋ ಆತಂಕ ಸಿನಿಮಾ ತಂಡಕ್ಕೆ ಎದುರಾಗಿದೆ.
ಎರಡೇ ದಿನದಲ್ಲಿ 100 ಕೋಟಿ ಕ್ಲಬ್
ಎರಡೇ ದಿನದಲ್ಲಿ 100 ಕೋಟಿ ಕ್ಲಬ್
ಕೇವಲ ಎರಡೇ ದಿನದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ 100 ಕೋಟಿ ಕ್ಲಬ್ ಸೇರಿಕೊಂಡಿದೆ. ಅಕ್ಟೋಬರ್ 2ರಂದ ಕಾಂತಾರ ಸಿನಿಮಾ ಬಿಡುಗಡೆಯಾಗಿತ್ತು. ಅಕ್ಟೋಬರ್ 3ರ ಅಂತ್ಯಕ್ಕೆ 130 ಕೋಟಿ ರೂಪಾಯಿಗೂ ಅಧಿಕ ಮೊತ್ತ ಸಂಗ್ರಹ ಮಾಡಿತ್ತು. ಮೊದಲ ವಾರದಲ್ಲೇ ಸಿನಿಮಾ ಎಲ್ಲಾ ದಾಖಲೆ ಬರೆಯುವ ಸಾಧ್ಯತೆಗಳು ಗೋಚರಿಸುತ್ತಿದೆ.