- Home
- Entertainment
- Cine World
- ಅಂದು 300ರೂ ವೇತನ ಪಡೆಯುತ್ತಿದ್ದ ಫರಾ ಖಾನ್ ಚೆಫ್…ಈಗ 3 ಅಂತಸ್ತಿನ ಮನೆಯ ಒಡೆಯ, ಗಳಿಕೆ ಲಕ್ಷಾಂತರ!
ಅಂದು 300ರೂ ವೇತನ ಪಡೆಯುತ್ತಿದ್ದ ಫರಾ ಖಾನ್ ಚೆಫ್…ಈಗ 3 ಅಂತಸ್ತಿನ ಮನೆಯ ಒಡೆಯ, ಗಳಿಕೆ ಲಕ್ಷಾಂತರ!
ಫರಾ ಖಾನ್ ಅವರ ಕುಕ್ ದಿಲೀಪ್, ಮುಂಬೈಗೆ ತೆರಳುವ ಮೊದಲು ದೆಹಲಿಯಲ್ಲಿ ಕೇವಲ 300 ರೂಪಾಯಿ ವೇತನದ ಕೆಲಸ ಮಾಡುತ್ತಿದ್ದರು, ಇಂದು ಲಕ್ಷ ಹಣ ಗಳಿಸುವ ದಿಲೀಪ್ ಮೂರು ಮಹಡಿಯ ಮನೆ, ಕಾರು ಎಲ್ಲಾ ಹೊಂದಿತ್ತಾರೆ. ಇಲ್ಲಿದೆ ದಿಲೀಪ್ ಸಕ್ಸರ್ ಸ್ಟೋರಿ.

ಫರಾ ಖಾನ್ ಕುಕ್ ದಿಲೀಪ್
ಬಾಲಿವುಡ್ ನೃತ್ಯ ಸಂಯೋಜಕಿ/ನಿರ್ದೇಶಕಿ ಫರಾ ಖಾನ್ (director Farah Khan) ಪ್ರಸ್ತುತ ಯೂಟ್ಯೂಬ್ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಅವರ ವ್ಲಾಗ್‌ಗಳು ಅನೇಕರಿಗೆ ಇಷ್ಟವಾಗುತ್ತವೆ. ಪ್ರತಿ ಹೊಸ ವೀಡಿಯೊದಲ್ಲಿ, ಅವರು ಹೊಸ ಅತಿಥಿಯ ಮನೆಗೆ ಭೇಟಿ ನೀಡುತ್ತಾರೆ. ಎಲ್ಲಾ ವಿಡೀಯೋದಲ್ಲಿ, ಅವರ ಕುಕ್ ದಿಲೀಪ್ ಯಾವಾಗಲೂ ಅವರೊಂದಿಗೆ ಇರುತ್ತಾರೆ. ಅಭಿಮಾನಿಗಳು ದಿಲೀಪ್ ಅವರ ಅನ್ ಫಿಲ್ಟರ್ಡ್ ಕಾಮಿಡಿ ಇಷ್ಟಪಡುತ್ತಾರೆ. ಇದೀಗ ದಿಲೀಪ್ ವೇತನದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ.
ಯೂಟ್ಯೂಬ್ ಮೂಲಕ ಸೆಲೆಬ್ರಿಟಿಯಾದ ಫರಾ ಖಾನ್ ಕುಕ್
ಫರಾ ಖಾನ್ ಕುಕ್ ದಿಲೀಪ್ (Cook Dilip) ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಎಲ್ಲರೂ ದಿಲೀಪ್ ಅವರನ್ನು ಭೇಟಿಯಾಗಲು ಉತ್ಸುಕರಾಗಿದ್ದಾರೆ. ಅನೇಕ ಬಾಲಿವುಡ್ ತಾರೆಯರು ಸಹ ತಮ್ಮ ವ್ಲಾಗ್‌ಗಳಲ್ಲಿ ದಿಲೀಪ್ ಮೇಲೆ ಪ್ರೀತಿ ಸುರಿಮಳೆ ಸುರಿಸಿದ್ದಾರೆ. ಇದೀಗ ಹೆಚ್ಚಿನ ಜನರಲ್ಲಿ ದಿಲೀಪ್ ಸ್ಯಾಲರಿ ಎಷ್ಟಿರಬಹುದು ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಫರಾ ಖಾನ್ ಉತ್ತರಿಸಿದ್ದಾರೆ.
ದಿಲೀಪ್ ಮೊದಲ ಸಂಪಾದನೆ ಎಷ್ಟು ಗೊತ್ತಾ?
ಇತ್ತೀಚೆಗೆ, ಫರಾಹ್ "ಶಾರ್ಕ್ ಟ್ಯಾಂಕ್" ಖ್ಯಾತಿಯ ಅಶ್ನೀರ್ ಗ್ರೋವರ್ ಅವರ ಮನೆಗೆ ಭೇಟಿ ನೀಡಿದ್ದರು. ಅಶ್ನೀರ್ ಜೊತೆ ಕುಕ್ ಮಾಡಿ, ಫ್ಯಾಮಿಲಿ ಜೊತೆ ಫರಾ ಎಂಜಾಯ್ ಮಾಡಿದ್ದರು. ಈ ಸಂದರ್ಭದಲ್ಲಿ, ದಿಲೀಪ್ ತಾನು ಮುಂಬೈಗೆ ಕೆಲಸಕ್ಕೆ ಹೋಗುವ ಮುನ್ನ ದೆಹಲಿಯಲ್ಲಿ ಕೆಲಸ ಮಾಡಿದ್ದೆ, .ದೆಹಲಿಗೆ ಬಂದಾಗ ಕೇವಲ 300 ರೂಪಾಯಿಗಳಿಗೆ ಕೆಲಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಸಣ್ಣ ರೆಸ್ಟೋರೆಂಟ್’ನಲ್ಲಿ ಕೆಲಸ ಆರಂಭ
ಆರಂಭದಲ್ಲಿ ಸಣ್ಣ ಪುಟ್ಟ ರೆಸ್ಟೋರೆಂಟ್ ಗಳಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ ತುಂಬಾನೆ ಕಷ್ಟದ ದಿನಗಳನ್ನು ಎದುರಿಸುತ್ತಿದ್ದುದಂತೂ ನಿಜಾ. ಎಲ್ಲವನ್ನು ತನ್ನ ಕುಟುಂಬಕ್ಕಾಗಿ ಸಹಿಸಿಕೊಂಡಿದ್ದರು ದಿಲೀಪ್. ನಂತರ ಮುಂಬೈನಲ್ಲೂ ಕೆಲವು ಕಡೆ ಕೆಲಸ ಮಾಡುತ್ತಿದ್ದ ದಿಲೀಪ್ ಹತ್ತು ವರ್ಷಗಳ ಹಿಂದೆ ಫರಾ ಖಾನ್ ಬಳಿ ಕುಕ್ ಆಗಿ ಕೆಲಸಕ್ಕೆ ಸೇರಿಸಿದ್ದರು.
ಈಗೆಷ್ಟು ಸಂಪಾದನೆ ಮಾಡುತ್ತಿದ್ದಾರೆ ದಿಲೀಪ್
ಯೂಟ್ಯೂಬ್ (Youtube Vlog) ನಿಂದ ಜನಪ್ರಿಯತೆ ಗಳಿಸಿದ, ದಿಲೀಪ್ ಇಂದು ಎಷ್ಟು ಸಂಪಾದಿಸುತ್ತಾನೆ? ದಿಲೀಪ್ ಮುಂಬೈಗೆ ಕೆಲಸಕ್ಕೆ ಬಂದಾಗ, ಅವರ ಸಂಬಳ 20,000 ರೂಪಾಯಿಗಳಿಂದ ಪ್ರಾರಂಭವಾಯಿತು. ಆದರೆ ಇಂದು ಅವರು ಎಷ್ಟು ಸಂಪಾದಿಸುತ್ತಾರೆ ಎಂದು ಯಾರೂ ಕೇಳದಿರುವುದು ಉತ್ತಮ ಎಂದು ಹೇಳಿದ್ದಾರೆ. ಮಾಹಿತಿಯ ಪ್ರಕಾರ ದಿಲೀಪ್ ಸದ್ಯ ತಿಂಗಳಿಗೆ ಸುಮಾರು 1 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಅಂದರೆ ಹಲವು ಸೆಲೆಬ್ರಿಟಿಗಳಿಗಿಂತ ಹೆಚ್ಚಿನ ಸಂಪಾದನೆ ಮಾಡುತ್ತಾರೆ ದಿಲೀಪ್.
ಬಿಹಾರದಲ್ಲಿ ಮೂರು ಅಂತಸ್ತಿನ ಮನೆ
ಫರಾ ಖಾನ್ ಅವರ ಕುಕ್ ದಿಲೀಪ್ ಮೂಲತಃ ಬಿಹಾರದವರು. ಅವರು ಬಿಹಾರದಲ್ಲಿ ತಮ್ಮ ಕುಟುಂಬಕ್ಕಾಗಿ ಮೂರು ಮಳಿಗೆಯ ಮನೆ ನಿರ್ಮಾಣ ಮಾಡಿದ್ದಾರೆ. ಇದರ ಜೊತೆ ತೋಟದ ಜಾಗವನ್ನು, ದನಕರುಗಳನ್ನು ಖರೀದಿಸಿದ್ದಾರೆ. ಮಾವಿನ ಮರಗಳ ತೋಪು ಕೂಡ ಇದೆ. ದಿಲೀಪ್ ಮಕ್ಕಳ ವಿದ್ಯಾಭ್ಯಾಸಕ್ಕೆ ಫರಾ ಖಾನ್ ನೆರವು ನೀಡಿದ್ದು, ಸದ್ಯ ದಿಲೀಪ್ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

