- Home
- Entertainment
- Cine World
- ಮತ್ತೊಮ್ಮೆ ಅಮ್ಮ ಆಗ್ತಿರೋ Malaika Arora: 58 ವರ್ಷದ ಅರ್ಬಾಜ್ ಖಾನ್ಗೆ ಒಂದೆರಡು ದಿನದಲ್ಲಿ ಮಗು!
ಮತ್ತೊಮ್ಮೆ ಅಮ್ಮ ಆಗ್ತಿರೋ Malaika Arora: 58 ವರ್ಷದ ಅರ್ಬಾಜ್ ಖಾನ್ಗೆ ಒಂದೆರಡು ದಿನದಲ್ಲಿ ಮಗು!
58 ವರ್ಷದ ನಟ ಅರ್ಬಾಜ್ ಖಾನ್ ಮತ್ತು ಅವರ ಪತ್ನಿ ಶುರಾ ಖಾನ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಡಿಸೆಂಬರ್ 2023 ರಲ್ಲಿ ವಿವಾಹವಾದ ಈ ಜೋಡಿ ಶೀಘ್ರದಲ್ಲೇ ಪೋಷಕರಾಗಲಿದ್ದು, ವಯಸ್ಸಿನ ಅಂತರ ಮತ್ತು ಮಲೈಕಾ ಅರೋರಾ ಅವರ ಮಗ ಅರ್ಹಾನ್ ಜೊತೆಗಿನ ಕೌಟುಂಬಿಕ ಲೆಕ್ಕಾಚಾರ ಶುರುವಾಗಿದೆ.

ಇನ್ನೊಂದೆರಡು ದಿನದಲ್ಲಿ ಮತ್ತೊಂದು ಮಗು
ನಟ ಸಲ್ಮಾನ್ ಖಾನ್ ಸಹೋದರ, ನಟಿ ಮಲೈಕಾ ಶರಾವತ್ ಮಾಜಿ ಪತಿ, ರೂಪದರ್ಶಿ ಜಾರ್ಜಿಯಾ ಆಂಡ್ರಿಯಾನಿ ಮಾಜಿ ಲಿವ್ ಇನ್ ಪಾರ್ಟನರ್ ಅರ್ಬಾಜ್ ಖಾನ್ ಈಗ 58ನೇ ವಯಸ್ಸಿನಲ್ಲಿ ಮತ್ತೊಮ್ಮೆ ಅಪ್ಪ ಆಗುತ್ತಿದ್ದಾರೆ. ಇಂದೋ-ನಾಳೆಯ ಒಳಗೆ ಅವರಿಗೆ ಮಗು ಜನನ ಆಗಲಿದೆ. ಅವರ ಪತ್ನಿ ಶುರಾ ಖಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾನೂನು ಬದ್ಧವಾಗಿ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ದಂಪತಿ ಅಲ್ಲದಿದ್ದರೂ, ಸಂಬಂಧದಲ್ಲಿ ನೋಡಿದರೆ ಮಲೈಕಾ ಅರೋರಾ (Malaika Arora) ಮತ್ತೊಮ್ಮೆ ಅಮ್ಮ ಆಗಲಿದ್ದಾರೆ.
ಎರಡು ವರ್ಷಗಳ ಹಿಂದೆ ಮದುವೆ
ಅರ್ಬಾಜ್ ಖಾನ್ ಮತ್ತು ಶುರಾ ಖಾನ್ 2023ರ ಡಿಸೆಂಬರ್ನಲ್ಲಿ ಮದುವೆಯಾಗಿದ್ದರು. 56ನೇ ವಯಸ್ಸಿನಲ್ಲಿ ತಮಗಿಂತ 22 ವರ್ಷ ಚಿಕ್ಕವಳಾದ 33 ವರ್ಷದ ಶುರಾ ಖಾನ್ (Sshura Khan ) ಅವರ ಕೈಹಿಡಿದಿದ್ದಾರೆ ಮಲೈಕಾ ಮಾಜಿ ಪತಿ. ಅದೇ ಇನ್ನೊಂದೆಡೆ ಮಲೈಕಾ ಹಲವಾರು ವರ್ಷ ಅರ್ಜುನ್ ಕಪೂರ್ ಜೊತೆ ಲಿವ್ ಇನ್ನಲ್ಲಿ ಇದ್ದು, ಈಗ ಅವರನ್ನೂ ತ್ಯಜಿಸಿದ್ದಾರೆ.
ಮೊದಲ ಮಗನಿಗೆ 22 ವರ್ಷ
ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ದಾಂಪತ್ಯದಿಂದ ಹುಟ್ಟಿರೋ ಅರ್ಹಾನ್ ಖಾನ್ಗೆ ಈಗ 22 ವರ್ಷ. ಹಾಗೆ ನೋಡಿದರೆ ಅರ್ಬಾಜ್ ಖಾನ್ಗೆ ಈಗ ಹುಟ್ಟಲಿರೋ ಮಗು ಮತ್ತು ಆ ಮಗುವಿನ ಅಣ್ಣನಿಗೆ 22 ವರ್ಷ ವಯಸ್ಸಿನ ಅಂತರವಾಗುತ್ತದೆ. ಅಷ್ಟೇ ಅಲ್ಲದೇ, ಶುರಾ ಖಾನ್ಗೆ ಅರ್ಹಾನ್ ಅಮ್ಮ ಆಗಬೇಕು. ಇದನ್ನೀಗ ಲೆಕ್ಕಾಚಾರ ಹಾಕಲಾಗುತ್ತಿದ್ದು, ಅಮ್ಮ- ಮಗನಿಗೆ 13 ವರ್ಷ ವ್ಯತ್ಯಾಸವಿದೆ.
ಶುರಾ ಖಾನ್ಗೆ 10 ವರ್ಷದ ಮಗಳು
ಶುರಾ ಖಾನ್ ಅವರಿಗೆ ಈಗಾಗಲೇ ಹಿಂದಿನ ಮದುವೆಯಿಂದ 10 ವರ್ಷದ ಮಗಳಿದ್ದಾಳೆ. ದುಡ್ಡಿದ್ದರೆ ಎಲ್ಲವೂ ಸಾಧ್ಯ ಎಂದು ಹಲವರು ಹೇಳಿದರೆ, ಬಾಲಿವುಡ್ ಮಾತ್ರವಲ್ಲ ಇಲ್ಲಿ ಕೆಲವು ಕಡೆಗಳಲ್ಲಿ ಇಂಥ ದೃಶ್ಯಗಳು ಸಾಮಾನ್ಯವಾಗಿವೆ. ಅಜ್ಜಂದಿರ ಅಪ್ರಾಪ್ತೆಯರನ್ನು ಮದುವೆಯಾಗುವುದು ನಡೆದೇ ಇದೆ. ಅಂಥ ಸಂದರ್ಭದಲ್ಲಿ ಇದೇನೂ ದೊಡ್ಡ ವಿಷಯವಲ್ಲ ಎನ್ನುತ್ತಿದ್ದಾರೆ.
ಪಾಪರಾಜಿಗಳಿಂದ ತಪ್ಪಿಸಿಕೊಳ್ತಿದ್ದ ಶುರಾ ಖಾನ್
ಅಷ್ಟಕ್ಕೂ, ಇಂದಿಗೂ ವಯಸ್ಸಿನ ಅಂತರದ ಕಾರಣದಿಂದ ಟ್ರೋಲ್ ಎದುರಿಸುತ್ತಲೇ ಇದೆ ಈ ಜೋಡಿ. ಇವರ ವಯಸ್ಸಿನ ಅಂತರ ನೋಡಿ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಜೋಡಿ ಸಕತ್ ಟ್ರೋಲ್ ಕೂಡ ಆಗುತ್ತಿದೆ. ಮದುವೆ ಮನೆಗೆ ಬರುವಾಗಿನಿಂದಲೂ ಹಲವು ವಿಡಿಯೋಗಳಲ್ಲಿ ಶುರಾ ಖಾನ್ ಪಾಪರಾಜಿಗಳ ಕ್ಯಾಮೆರಾ ಎದುರು ನೇರವಾಗಿ ಮುಖಕೊಡದೇ ಮುಖ ಮುಚ್ಚಿಕೊಳ್ಳುತ್ತಲೇ ಇರುತ್ತಾರೆ.
ಅರ್ಬಾಜ್-ಶುರಾ ಭೇಟಿಯಾಗಿದ್ದು ಹೇಗೆ?
ಶುರಾ ಖಾನ್ ಮೇಕಪ್ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ಶುರಾ ಖಾನ್ ಮತ್ತು ಅರ್ಬಾಜ್ ಖಾನ್ (Arbaaz Khan) ಅವರು ಪಾಟ್ನಾ ಶುಕ್ಲಾ ಸೆಟ್‌ನಲ್ಲಿ ಭೇಟಿಯಾದರು. ಅಲ್ಲಿಂದ ಇವರ ನಡುವೆ ಪ್ರೀತಿ ಅರಳಿದೆ ಎನ್ನಲಾಗಿದೆ. ಶುರಾ ಖಾನ್ ಅವರು, ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಥದಾನಿ ಅವರ ಮೇಕಪ್ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ.