- Home
- Entertainment
- Cine World
- ಸೌಂದರ್ಯಾ ಜೊತೆಗೆ ನಾನೂ ಸಾಯಬೇಕಿತ್ತು, ಆದ್ರೆ ಅದೊಂದು ಕಾರಣಕ್ಕೆ ಬಚಾವಾದೆ; ನಟಿ ಮೀನಾ ಭಾವುಕ!
ಸೌಂದರ್ಯಾ ಜೊತೆಗೆ ನಾನೂ ಸಾಯಬೇಕಿತ್ತು, ಆದ್ರೆ ಅದೊಂದು ಕಾರಣಕ್ಕೆ ಬಚಾವಾದೆ; ನಟಿ ಮೀನಾ ಭಾವುಕ!
ದಕ್ಷಿಣ ಭಾರತದ ಹಿರಿಯ ನಟಿ ಮೀನಾ, ಸೌಂದರ್ಯ ಸಾವನ್ನು ನೆನೆದು ಭಾವುಕರಾದರು. ನಟಿ ಸೌಂದರ್ಯಾ ಜೊತೆಗೆ ನಾನೂ ಕೂಡ ಚುನಾವಣಾ ಪ್ರಚಾರಕ್ಕೆ ಹೋಗಬೇಕಿತ್ತು. ಆದ್ರೆ, ಈ ಒಂದು ಕಾರಣಕ್ಕೆ ನಾನು ಹೆಲಿಕಾಪ್ಟರ್ ಹೋಗುವುದರಿಂದ ತಪ್ಪಿಸಿಕೊಂಡಿದ್ದು, ಜೀವ ಉಳಿಯಿತು ಎಂದರು.

ಚಿತ್ರರಂಗದಲ್ಲಿ ಸೌಂದರ್ಯ ವೃತ್ತಿಜೀವನ ಎಷ್ಟು ದುರಂತವಾಗಿ ಕೊನೆಗೊಂಡಿತು ಅಂತ ಗೊತ್ತೇ ಇದೆ. 2004 ರಲ್ಲಿ ಸೌಂದರ್ಯ ಹೆಲಿಕಾಪ್ಟರ್ ಅಪಘಾತದಲ್ಲಿ ಅಸುನೀಗಿದರು. ಕೇವಲ 32 ವರ್ಷದ ಚಿಕ್ಕ ವಯಸ್ಸಿನಲ್ಲೇ ಸೌಂದರ್ಯ ಸಾವನ್ನಪ್ಪಿದ್ದು ಚಿತ್ರರಂಗ ಆ ದುಃಖವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗಲೂ ಸಿನಿಮಾ ಪ್ರಮುಖರು ಸೌಂದರ್ಯಳನ್ನು ನೆನಪಿಸಿಕೊಂಡು ಭಾವುಕರಾಗ್ತಾರೆ. ಅಂಥದ್ದೇ ಒಂದು ಭಾವುಕ ಘಟನೆ ಇತ್ತೀಚೆಗೆ ನಡೆದಿದೆ.
ಹಿರಿಯ ನಟಿ ಮೀನಾ, ಸೌಂದರ್ಯಗಿಂತ ಮೊದಲು ಇಂಡಸ್ಟ್ರಿಗೆ ಕಾಲಿಟ್ಟವರು. ಮೀನಾ ಮೊದಲು ಬಾಲನಟಿಯಾಗಿ ಮಿಂಚಿದ್ದರು. ಆ ನಂತರ ಸೌಂದರ್ಯ ಮೀನಾ ಇಬ್ಬರೂ ನಾಯಕಿಯರಾಗಿ ಸ್ಪರ್ಧಿಸಿದರು.
ಜಗಪತಿ ಬಾಬು ನಡೆಸಿಕೊಡುತ್ತಿರುವ ಜಯಮ್ಮು ನಿಶ್ಚಯಮ್ಮುರಾ ಟಾಕ್ ಶೋಗೆ ಮೀನಾ ಅತಿಥಿಯಾಗಿ ಬಂದಿದ್ದರು. ಮೀನಾ, ಜಗಪತಿ ಬಾಬು ಜೊತೆಯಾಗಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಸಂದರ್ಭದಲ್ಲಿ ಮೀನಾ ತಮ್ಮ ವೃತ್ತಿಜೀವನ, ಕುಟುಂಬದ ಬಗ್ಗೆ ಹಲವು ವಿಷಯಗಳನ್ನು ಹೇಳಿಕೊಂಡರು.
ಜಗಪತಿ ಬಾಬು ಒಂದು ಫೋಟೋ ತೋರಿಸಿ.. ಈ ಫೋಟೋ ನೋಡ್ತಿದ್ರೆ ನಿಮಗೆ ಏನು ನೆನಪಾಗುತ್ತೆ ಅಂತ ಕೇಳಿದರು. ಆ ಫೋಟೋದಲ್ಲಿ ಪೊಲೀಸ್ ಗೆಟಪ್‌ನಲ್ಲಿರುವ ಸೌಂದರ್ಯ ಜೊತೆ ಮೀನಾ ಇದ್ದಾರೆ. ಆ ಫೋಟೋ ನೋಡ್ತಿದ್ದಂತೆ ಮೀನಾ ಭಾವುಕರಾದರು.
ಸೌಂದರ್ಯ ಸಾವಿನ ಬಗ್ಗೆ ಮೀನಾ ಮಾತನಾಡುತ್ತಾ ಭಾವುಕರಾದರು. ನಮ್ಮ ನಡುವೆ ಸ್ಪರ್ಧೆ ತುಂಬಾ ಆರೋಗ್ಯಕರವಾಗಿತ್ತು. ಸೌಂದರ್ಯ ತುಂಬಾ ಅದ್ಭುತ ವ್ಯಕ್ತಿ. ನನ್ನ ಒಳ್ಳೆಯ ಗೆಳತಿ. ಸೌಂದರ್ಯ ನಾನು ತುಂಬಾ ಆಪ್ತರಾಗಿದ್ದೆವು.
ಆದರೆ, ಅವರ ಸಾವಿನ ಸುದ್ದಿ ಕೇಳಿ ನನಗೆ ಬೆವರಿಳಿಯಿತು. ಆ ಶಾಕ್‌ನಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಿಜಕ್ಕೂ ಆ ದಿನ ಕ್ಯಾಂಪೇನಿಂಗ್‌ಗೆ ಸೌಂದರ್ಯ ಜೊತೆ ನಾನೂ ಹೋಗಬೇಕಿತ್ತು. ಕ್ಯಾಂಪೇನಿಂಗ್‌ಗೆ ನನ್ನನ್ನೂ ಕರೆದಿದ್ದರು.
ಆದರೆ, ನನಗೆ ರಾಜಕೀಯ, ಚುನಾವಣಾ ಪ್ರಚಾರ ಇದೆಲ್ಲ ಇಷ್ಟವಿರಲಿಲ್ಲ. ಹೀಗಾಗಿ ಶೂಟಿಂಗ್ ಇದೆ ಅಂತ ತಪ್ಪಿಸಿಕೊಂಡೆ. ಆದರೆ ಆ ಘಟನೆ ನಡೆಯಿತು ಅಂತ ಗೊತ್ತಾದಾಗ ಓ ಮೈ ಗಾಡ್.. ನಾನೂ ಹೋಗಬೇಕಿದ್ದ ಕ್ಯಾಂಪೇನಿಂಗ್ ಅದು ಅಂತ ಮೀನಾ ನೆನಪಿಸಿಕೊಂಡರು.
ಸೌಂದರ್ಯ, ಮೀನಾ, ಜಗಪತಿ ಬಾಬು ಒಟ್ಟಾಗಿ ಚಿಲಕಪಚ್ಚ ಕಾಪುರಂ ಅನ್ನೋ ಚಿತ್ರದಲ್ಲಿ ನಟಿಸಿದ್ದಾರೆ. ಈ ಶೋನಲ್ಲಿ ಮೀನಾ ಇನ್ನೂ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಗಂಡನ ಸಾವು.. ಎರಡನೇ ಮದುವೆಯ ಬಗ್ಗೆ ಬಂದ ವದಂತಿಗಳ ಬಗ್ಗೆಯೂ ಮೀನಾ ಪ್ರತಿಕ್ರಿಯಿಸಿದ್ದಾರೆ.